ನನ್ನ ಗುಣ ನಿರ್ಧಾರ ಮಾಡೋದಕ್ಕೆ ನೀನ್ಯಾರು ಎಂದು ಪ್ರಶ್ನಿಸಿದ ಮಾನಸಾ; ಉಗ್ರಂ ಮಂಜು, ತ್ರಿವಿಕ್ರಂ ನಡುವೆ ಮತ್ತೆ ಜಗಳ
ಕನ್ನಡ ಸುದ್ದಿ  /  ಮನರಂಜನೆ  /  ನನ್ನ ಗುಣ ನಿರ್ಧಾರ ಮಾಡೋದಕ್ಕೆ ನೀನ್ಯಾರು ಎಂದು ಪ್ರಶ್ನಿಸಿದ ಮಾನಸಾ; ಉಗ್ರಂ ಮಂಜು, ತ್ರಿವಿಕ್ರಂ ನಡುವೆ ಮತ್ತೆ ಜಗಳ

ನನ್ನ ಗುಣ ನಿರ್ಧಾರ ಮಾಡೋದಕ್ಕೆ ನೀನ್ಯಾರು ಎಂದು ಪ್ರಶ್ನಿಸಿದ ಮಾನಸಾ; ಉಗ್ರಂ ಮಂಜು, ತ್ರಿವಿಕ್ರಂ ನಡುವೆ ಮತ್ತೆ ಜಗಳ

ಬಿಗ್ ಬಾಸ್‌ ಸ್ಪರ್ಧೆಯಲ್ಲಿ ಯಾವಾಗಲೂ ಎಲಿಮಿನೇಷನ್ ಆರಂಭ ಆದರೆ ಸಾಕು ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದಿಲ್ಲ. ಅದರಲ್ಲೂ ಕ್ಯಾಪ್ಟನ್ ಆದವರು ನೇರವಾಗಿ ನಾಮಿನೇಟ್ ಮಾಡುವ ಅವಕಾಶ ಹೊಂದಿರುತ್ತಾರೆ. ಅದು ಅವರಿಗೆ ವರದಾನ ಎನ್ನುವುದಕ್ಕಿಂತ ಹೆಚ್ಚು ಕಂಟಕವೇ ಆಗಿರುತ್ತದೆ.

ಮಾನಸಾ ಹಾಗೂ ಉಗ್ರಂ ಮಂಜು ಈಗ ನೇರವಾಗಿ ಎಲಿಮಿನೇಟ್ ಆಗಿದ್ದಾರೆ
ಮಾನಸಾ ಹಾಗೂ ಉಗ್ರಂ ಮಂಜು ಈಗ ನೇರವಾಗಿ ಎಲಿಮಿನೇಟ್ ಆಗಿದ್ದಾರೆ

ನಾಮಿನೇಷನ್ ಆರಂಭವಾದ ನಂತರದಲ್ಲಿ ಅನುಷಾ, ಮಾನಸಾ ಅವರನ್ನು ನಾಮಿನೇಟ್ ಮಾಡುತ್ತಾರೆ. ಆದರೆ ನಾಮಿನೇಟ್ ಮಾಡುವಾಗ ಕೊಟ್ಟ ಕಾರಣ ಮಾನಸಾ ಅವರಿಗೆ ಸಮಂಜಸ ಎನಿಸುವುದಿಲ್ಲ. ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶ ಸಿಗುತ್ತದೆ, ಆಗ ಐಶ್ವರ್ಯ ಅವರು ಮಾನಸಾ ಅವರು ಇಮ್ಯೆಚ್ಯೂರ್ ಎಂದು ಹೇಳಿ ಅವರನ್ನು ನಾಮಿನೇಟ್ ಮಾಡಿರುತ್ತಾರೆ. ಈ ಸಂಗತಿ ತಿಳಿದ ನಂತರ ಮಾನಸಾ ತುಂಬಾ ಕೋಪ ಮಾಡಿಕೊಂಡು ಕೂಗಾಡುತ್ತಾರೆ. ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡೋ ಹಾಗೇ ಇಲ್ಲ “ನನ್ನ ಗುಣ ಡಿಸೈಡ್‌ ಮಾಡೋಕೆ ನೀನ್ಯಾವಳು?” ಎಂದು ಪ್ರಶ್ನೆ ಮಾಡುತ್ತಾರೆ. ನೀವ್ಯಾಳು, ಗೀವಳು ಇಂತವೆಲ್ಲ ನನ್ನ ಹತ್ರ ಬೇಡ ಎನ್ನುತ್ತಾ ಐಶ್ವರ್ಯ ಅಲ್ಲಿಂದ ಹೊರ ನಡೆಯುತ್ತಾರೆ.

ಇದೇ ರೀತಿ ನೇರ ಎಲಿಮಿನೇಷನ್ ವಿಚಾರವಾಗಿ ಉಗ್ರಂ ಮಂಜು ಹಾಗೂ ತ್ರಿವಿಕ್ರಂ ನಡುವೆ ಕೂಡ ಜಗಳ ಆರಂಭವಾಗುತ್ತದೆ. ಅದೇನೆಂದರೆ ಉಗ್ರಂ ಮಂಜು ಅವರು ಇತ್ತೀಚೆಗೆ ಎಲ್ಲೋ ಸೈಡ್ ಆಗ್ತಾ ಇದ್ದಾರೆ ಎಂದು ತ್ರಿವಿಕ್ರಂ ಕಾರಣ ನೀಡುತ್ತಾರೆ. ಯಾಕೆ ಸೈಡಾಗ್ತಾ ಇದ್ದಾರೆ ಎಂದು ಹೇಳಿದ್ದೆಂದರೆ ಅವರು ಎಲ್ಲರ ಜೊತೆ ಸೇರಿ ಮಾತಾಡುವುದಿಲ್ಲ. ಒಂದು ಗುಂಪಿಗೆ ಸೀಮಿತ ಆಗಿದ್ಧಾರೆ ಎಂದು ಅವರು ಕಾರಣ ನೀಡುತ್ತಾರೆ. ಆ ಕಾರಣ ಕೊಟ್ಟಿರುವುದು ಉಗ್ರಂ ಮಂಜು ಅವರಿಗೆ ಒಪ್ಪಿಗೆ ಇರುವುದಿಲ್ಲ. ಆ ಕಾರಣ ಕೊಟ್ಟು ನಾಮಿನೇಟ್ ಮಾಡುವ ಹಾಗಿಲ್ಲ ಎಂದು ಹೇಳುತ್ತಾರೆ.

ನಾನು ಯಾರ ಜೊತೆ ಕೂತು ಮಾತನಾಡಬೇಕು ಅನ್ನೋದು ಬಿಗ್‌ ಬಾಸ್ ರೂಲ್ಸ್‌ನಲ್ಲಿ ಇಲ್ಲ ಎಂದು ಹೇಳುತ್ತಾರೆ ಮಂಜು ಅವರು. ಅದಾದ ನಂತರ ನೀವು ಈ ಬಾರಿ ಮನರಂಜನೆಯನ್ನೂ ಕೂಡ ಮಾಡಿಲ್ಲ ಎಂಬ ಕಾರಣ ನೀಡುತ್ತಾರೆ. ಆಗ ಮತ್ತೆ ಉಗ್ರಂ ಮಂಜು ಅವರು ಆ ಕಾರಣ ಕೂಡ ನೀವು ಕೊಡುವ ಹಾಗಿಲ್ಲ. ಇಲ್ಲಿ ಎಲ್ಲರನ್ನೂ ರಂಜಿಸಿಕೊಂಡೆ ಇರಬೇಕು ಎಂದು ಬಿಗ್‌ ಬಾಸ್‌ ಯಾವಾಗಲೂ ಹೇಳಿಲ್ಲ ಎಂದು ಪ್ರತಿವಾದ ಮಾಡುತ್ತಾರೆ. ಹೀಗೆ ಮಾತಿಗೆ ಮಾತು ಬೆಳೆಯುತ್ತಾ ಹೋಗುತ್ತದೆ.

"ನೀವು ಹುಲಿಯಂತೆ ಮೊದಲಿದ್ದು ಈಗ ಬದಲಾದರೆ ನಾವೇನು ಮಾಡಕಾಗಲ್ಲ" ಎಂದು ಹೇಳುತ್ತಾರೆ ತ್ರಿವಿಕ್ರಂ. ಅದಕ್ಕೆ “ನಾನು ಈಗ ಏನಾಗಿದಿನಿ ಎಂದು ಮತ್ತೆ ಪ್ರಶ್ನೆ ಮಾಡುತ್ತಾರೆ. ಅದ್ಕೆ ನಾನ್ ಹೇಳಿದ್ದು ನಿಮ್ಮ ಹತ್ರಾನೆ ಬರ್ಬೇಕು, ಬಕೆಟ್‌ ಹಿಡಿಬೇಕು (ಸನ್ನೆ) ಹಿಡ್ಕೊಬೇಕು” ಎಂದು ಉಗ್ರಂ ಮಂಜು ಹೇಳುತ್ತಾರೆ. ಅದಕ್ಕೆ ತ್ರಿವಿಕ್ರಂ ಹಿಡಿರಿ ಎಂದು ರಿಪ್ಲೈ ಮಾಡುತ್ತಾರೆ. ಈ ರೀತಿಯಾಗಿ ವಾದ, ಪ್ರತಿವಾದಗಳು ನಡೆಯುತ್ತದೆ. ಒಟ್ಟಿನಲ್ಲಿ ಮನೆಯ ನೆಮ್ಮದಿ ಸಂಪೂರ್ಣವಾಗಿ ಹಾಳಾಗುತ್ತಿದೆ. ಸ್ಪರ್ಧಿಗಳಲ್ಲೂ ತಾನು ಗೆಲ್ಲಬೇಕು ಎಂಬ ಮನೋಭಾವನೆ ಹೆಚ್ಚಾಗುತ್ತಾ ಇದೆ.