
Bigg Boss Kannada 11 Live: ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ; ಭವ್ಯಾ ಗೌಡ ಎಲಿಮಿನೇಟ್
Bigg boss kannada season 11 grand finale Live Updates: ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಜನವರಿ 25 ಸಂಜೆ 6 ಗಂಟೆಗೆ ಆರಂಭವಾಗಿದೆ. ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಪೈ, ಉಗ್ರಂ ಮಂಜು, ರಜತ್, ಭವ್ಯಾ ಗೌಡ- ಇವರಲ್ಲಿ ಯಾರಿಗೆ ಬಿಗ್‌ಬಾಸ್ ಗೆಲುವಿನ ಕಿರೀಟ ದೊರಕಲಿದೆ? ಲೈವ್ ಅಪ್‌ಡೇಟ್ ನೋಡಿ.
Sat, 25 Jan 202505:09 PM IST
ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಭವ್ಯಾ ಗೌಡ
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಭವ್ಯಾ ಗೌಡ ಫಿನಾಲೆಗೆ ಇನ್ನೊಂದೇ ದಿನ ಇರುವಾಗ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇನ್ನು ಕೇವಲ ಐದು ಸ್ಪರ್ಧಿಗಳು ಮಾತ್ರ ಬಾಕಿ ಉಳಿದುಕೊಂಡಿದ್ದಾರೆ. ಫಿನಾಲೆ ಹತ್ತಿರ ಇದ್ದು ಇಲ್ಲಿಂದ ಹೊರ ಬೀಳುವುದು ಸುಲಭದ ಮಾತಲ್ಲ ಎನ್ನುತ್ತಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಅವರನ್ನು ಕಳಿಸಿಕೊಟ್ಟಿದ್ದಾರೆ.ತ್ರಿವಿಕ್ರಂ ಹಾಗೂ ನನ್ನ ನಡುವಿನ ಸಂಬಂಧದ ಬಗ್ಗೆ ಯಾರು ಏನೇ ಅಂದ್ರೂ ನಾವು ಇನ್ನು ಮುಂದೂ ಹೀಗೆ ಇರ್ತೀವಿ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.
Sat, 25 Jan 202503:05 PM IST
ತ್ರಿವಿಕ್ರಂಗಾಗಿ ಡಾನ್ಸ್ ಮಾಡಿದ ರಂಜಿತ್
ತ್ರಿವಿಕ್ರಂ ಪರವಾಗಿ ಹಲವು ವಾರಗಳ ಹಿಂದೇ ಮನೆಯಿಂದ ಹೊರಬಿದ್ದ ರಂಜಿತ್ ಡಾನ್ಸ್ ಮಾಡಿದ್ದಾರೆ. ಭವ್ಯಾ ಗೌಡ ಅವರ ಸಹೋದರಿಯರು ಡಾನ್ಸ್ ಮಾಡಿದ್ದಾರೆ. ವಿಷೇಶ ಎಂದರೆ ಉಗ್ರಂ ಮಂಜು ಅವರ ತಂದೆ ನೃತ್ಯ ಮಾಡಿದ್ದಾರೆ. ಇನ್ನು ರಜತ್ ಫ್ಯಾಮಿಲಿಯ ಎಲ್ಲರೂ ವೇದಿಯಕ ಮೇಲೆ ಕಾಣಿಸಿಕೊಂಡಿದ್ದಾರೆ
Sat, 25 Jan 202502:59 PM IST
ಬಿಗ್ ಬಾಸ್ ವೇದಿಕೆಯಲ್ಲಿ ಕುಟುಂಬಗಳ ಕಲರವ
ಬಿಗ್ ಬಾಸ್ ವೇದಿಕೆಯಲ್ಲಿ ಈಗುಳಿದ ಸ್ಪರ್ಧಿಗಳ ಕುಟುಂಬದ ಸದಸ್ಯರು ಬಂದು ನೃತ್ಯ ಮಾಡಿ ರಂಜಿಸಿದ್ದಾರೆ. ಸ್ಪರ್ಧಿಗಳನ್ನು ತಮ್ಮ ಮನೆಯವರ ಪ್ರಯತ್ನ ನೋಡಿ ಸಂಭ್ರಮಿಸಿದ್ದಾರೆ.
Sat, 25 Jan 202502:10 PM IST
ಇಲ್ಲಿದೆ ವೋಟಿಂಗ್ ವಿವರ
ಅತಿ ಹೆಚ್ಚು ವೋಟ್ ಪಡೆದು ವಿನ್ ಆಗಲಿರುವ ಸ್ಪರ್ಧಿ ಯಾರು ಎಂದು ಅಧೀಕೃತವಾಗಿ ತಿಳಿಸದಿದ್ದರೂ ಆ ಸ್ಪರ್ಧಿಗೆ ಎಷ್ಟು ಮತ ಬಂದಿದೆ ಎಂದು ತಿಳಿಸಿದ್ದಾರೆ.
52389318 - ವಿಜೇತರಿಗೆ ಬಂದ ಮತ
6448853 - ಈಗ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬರಲಿರುವ ಸ್ಪರ್ಧಿಗೆ ಬಂದ ಮತ
Sat, 25 Jan 202501:59 PM IST
ಯಾರು ಕಪ್ ಗೆಲ್ಲಬೇಕು? ಮಾಜಿ ಸ್ಪರ್ಧಿಗಳು ಹೇಳಿದ್ದು ಹೀಗೆ
ಬಿಗ್ ಬಾಸ್ ಮನೆಯಲ್ಲಿ ಉಳಿದ ಆರು ಸ್ಪರ್ಧಿಗಳಲ್ಲಿ ಯಾರು ಗೆಲ್ಲಬೇಕು? ಈ ಪ್ರಶ್ನೆಯನ್ನು ಕಿಚ್ಚ ಸುದೀಪ್, ಈ ಸೀಸನ್‌ನ ಮಾಜಿ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಆಗ ಎಲ್ಲರಿಂದ ಅಚ್ಚರಿಯ ಉತ್ತರಗಳು ಬಂದಿವೆ. ತ್ರಿವಿಕ್ರಂ ಗೆಲ್ಲಬೇಕು ಎಂದು ಐವರು ತಮ್ಮ ಮನದಾಸೆ ಹೇಳಿದರೆ, ಇನ್ನೂ ಐದು ವೋಟ್‌ಗಳು ಹನುಮಂತುಗೆ ಸಿಕ್ಕಿವೆ. ಮೋಕ್ಷಿತಾ ಗೆಲ್ಲಲೇಬಾರದು ಎಂದು ಏಳು ವೋಟ್ ಬಂದಿವೆ. ಇನ್ನೇನು ಸೀಸನ್ 11ರ ವಿನ್ನರ್ ಯಾರು ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
Sat, 25 Jan 202501:07 PM IST
ಬಿಗ್ ಬಾಸ್ ಮನೆಯಲ್ಲಿ ನಿವೇದಿತಾ ಗೌಡ!
ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಗ್ಯಾಪ್‌ನಲ್ಲಿಯೇ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ ನಿವೇದಿತಾ ಗೌಡ. ಈ ಹಿಂದೆ ಕಲರ್ಸ್ ಕನ್ನಡದ ಬಿಗ್ ಬಾಸ್ ಸೇರಿ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದ ನಿವೇದಿತಾ ಗೌಡ, ಇನ್ನೇನು ಮುಂದಿನ ವಾರದಿಂದ ಶುರುವಾಗುವ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವಾರ ಎಲಿಮಿನೇಟ್ ಆಗಿದ್ದ ಧನರಾಜ್ ಸಹ ಈ ಶೋನ ಭಾಗವಾಗಿದ್ದಾರೆ.
Sat, 25 Jan 202512:30 PM IST
ಜಗಮಗಿಸೋ ವೇದಿಕೆಯಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಆರಂಭ
ಕನ್ನಡ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಸರಿಯಾಗಿ ಆರು ಗಂಟೆಗೆ ಆರಂಭವಾಗಿದೆ. ಕಲರ್ಸ್ ಕನ್ನಡ ಟಿವಿ ಚಾನೆಲ್ ಮತ್ತು ಜಿಯೋ ಸಿನಿಮಾದಲ್ಲಿ ಜನರು ಈ ರಿಯಾಲಿಟಿ ಶೋ ನೋಡುತ್ತಿದ್ದಾರೆ. ಗ್ರ್ಯಾಂಡ್ ಫಿನಾಲೆಯ ತಾಜಾ ಮಾಹಿತಿಗಾಗಿ ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Sat, 25 Jan 202511:41 AM IST
ಫಿನಾಲೆಯ ಮೊದಲ ದಿನದ ಲುಕ್ ಹೇಗಿದೆ ನೋಡಿ
Sat, 25 Jan 202510:57 AM IST
ಈ ಬಾರಿ ಬಿಗ್‌ಬಾಸ್ ವಿನ್ನರ್ ಕಿರೀಟ ಯಾರಿಗೆ?
ಕಿಚ್ಚ ಸುದೀಪ್ ನಿರೂಪಕರಾಗಿರುವ ಕನ್ನಡದ ದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್‌ಬಾಸ್ ಕನ್ನಡ ಸೀಸನ್ 11 ಅಂತಿಮ ಘಟ್ಟದಲ್ಲಿದೆ. ಶನಿವಾರ ಮತ್ತು ಭಾನುವಾರದ ಬಿಗ್‌ಬಾಸ್ ಶೋನಲ್ಲಿ ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಪೈ, ಉಗ್ರಂ ಮಂಜು, ರಜತ್, ಭವ್ಯಾ ಗೌಡರ ನಡುವೆ ಯಾರಿಗೆ ಬಿಗ್‌ಬಾಸ್ ಕಿರೀಟ ದೊರಕಲಿದೆ ಎಂಬ ಪ್ರಶ್ನೆಗೆ ಉತ್ತರ ದೊರಕಲಿದೆ. ಕನ್ನಡ ಬಿಗ್‌ಬಾಸ್ ವಿನ್ನರ್ ಯಾರು? ಯಾರು ರನ್ನರ್ ಅಪ್ ಆಗಲಿದ್ದಾರೆ? ಯಾರು ಸೆಕೆಂಡ್ ರನ್ನರ್ ಅಪ್ ಆಗಲಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ದೊಡ್ಮನೆ ಆಟ ಮಗಿಸುವ ಸ್ಪರ್ಧಿಗಳು ಯಾರು? ನಾಳೆ ಸುದೀಪ್ ಕೈ ಹಿಡಿದುಕೊಳ್ಳಲಿರುವ ಎರಡು ಸ್ಪರ್ಧಿಗಳು ಯಾರು? ಅಂತಿಮವಾಗಿ ಯಾರಿಗೆ ವಿಜಯಮಾಲೆ ದೊರಕಲಿದೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಈ ಗ್ರ್ಯಾಂಡ್ ಫಿನಾಲೆಯಲ್ಲಿ ಉತ್ತರ ದೊರಕಲಿದೆ. ಇದರೊಂದಿಗೆ ಡ್ಯಾನ್ಸ್‌ಗಳು, ಕಿಚ್ಚನ ಕಿವಿಮಾತುಗಳು, ಹಳೆಯ ಬಿಗ್‌ಬಾಸ್ ಕನ್ನಡ ಸ್ಪರ್ಧಿಗಳ ನೆನಪುಗಳಿಗೆ ಈ ಗ್ರ್ಯಾಂಡ್ ಫಿನಾಲೆ ವೇದಿಕೆ ಸಾಕ್ಷಿಯಾಗಲಿದೆ.
Sat, 25 Jan 202510:50 AM IST
ಮತ್ತೊಂದು ಮೈಲಿಗಲ್ಲು, ಮುರಿಯಲಾಗದ ದಾಖಲೆ; ಇದು ಬಿಗ್ ಬಾಸ್ ಕನ್ನಡ 11 ಗ್ರಾಂಡ್ ಫಿನಾಲೆ
Sat, 25 Jan 202510:45 AM IST
ಈ ಹಿಂದಿನ ಹತ್ತು ಸೀಸನ್‌ಗಳಲ್ಲಿ ಗೆದ್ದವರು, ರನ್ನರ್ ಅಪ್ ಯಾರು?
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕನ್ನಡದ 11ನೇ ಸೀಸನ್‌ನಲ್ಲಿ ಯಾರು ಗೆಲುವು ಪಡೆಯಲಿದ್ದಾರೆ? ಯಾರು ರನ್ನರ್ ಅಪ್ ಆಗಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯದಲ್ಲಿಯೇ ಉತ್ತರ ದೊರಕಲಿದೆ. ಇದೇ ಸಮಯದಲ್ಲಿ ಈ ಹಿಂದಿನ ಹತ್ತು ಸೀಸನ್‌ಗಳಲ್ಲಿ ಯಾರೆಲ್ಲ ಗೆಲುವು ಪಡೆದಿದ್ದರು? ಯಾರು ರನ್ನರ್ ಅಪ್ ಆಗಿದ್ದರು ಎಂಬ ಪಟ್ಟಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.
Sat, 25 Jan 202510:39 AM IST
Bigg Boss Kannada 11 grand finale: ಫಿನಾಲೆ ಎಷ್ಟು ಗಂಟೆಗೆ ಆರಂಭ?
ಶನಿವಾರ ಜನವರಿ 25ರಂದು ಸಂಜೆ 6 ಗಂಟೆಗೆ ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಆರಂಭವಾಗಲಿದೆ. ಕಲರ್ಸ್ ಕನ್ನಡ ಟಿವಿ ಚಾನೆಲ್ ಮತ್ತು ಜಿಯೋ ಸಿನಿಮಾದಲ್ಲಿ ಗ್ರ್ಯಾಂಡ್ ಫಿನಾಲೆ ನೇರ ಪ್ರಸಾರವಾಗಲಿದೆ. ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಪೈ, ಉಗ್ರಂ ಮಂಜು, ರಜತ್, ಭವ್ಯಾ ಗೌಡ ಸದ್ಯ ದೊಡ್ಮನೆಯೊಳಗೆ ಇರಲಿದ್ದಾರೆ. ವರ್ಣರಂಜಿತ ಕಾರ್ಯಕ್ರಮಗಳ ಬಳಿಕ ಸುದೀಪ್ ಒಬ್ಬರೊಬ್ಬರನ್ನ ಮನೆಯಿಂದ ಹೊರಗೆ ತರಲಿದ್ದಾರೆ. ಇಂದು ದೊಡ್ಮನೆಯಿಂದ ಯಾರು ಹೊರಬರಲಿದ್ದಾರೆ ಎನ್ನುವ ಕುತೂಹಲ ಸದ್ಯ ವೀಕ್ಷಕರಲ್ಲಿ ಇದೆ.
