ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಟಾಸ್ಕ್; ಶಿಶಿರ್, ಉಗ್ರಂ ಮಂಜು ನಡುವೆ ಫುಲ್ ಫೈಟ್, ಸುಸ್ತಾಗಿ ಸೈಡಿಗೆ ನಿಂತ ಕ್ಯಾಪ್ಟನ್ ಹನುಮಂತ
Bigg Boss Kannada: ಬಿಗ್ ಬಾಸ್ ಸೀಸನ್ 11ರ ಸ್ಪರ್ಧೆಯಲ್ಲಿ ಈ ವಾರದ ಕ್ಯಾಪ್ಟನ್ ಯಾರಾಗುತ್ತಾರೆ ಎಂದು ಪರೀಕ್ಷಿಸಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ನಲ್ಲಿ ಆಟದ ಹೊರತಾಗಿಯೂ ಕೆಲವು ಅನವಶ್ಯಕ ಮಾತು ಹಾಗೂ ಜಗಳಗಳು ಶಿಶಿರ್, ಉಗ್ರಂ ನಡುವೆ ನಡೆದಿದೆ.
ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ಆಟದ ಕಾವು ಹೆಚ್ಚುತ್ತಿದೆ. ಸ್ಪರ್ಧಿಗಳ ನಡುವೆ ಹಣಾಹಣಿ ಆರಂಭವಾಗಿದೆ. ಇದೀಗ ಈ ವಾರದ ಕ್ಯಾಪ್ಟನ್ ಯಾರಾಗ್ತಾರೆ ಎಂದು ನೋಡಲು ಟಾಸ್ಕ್ ಆರಂಭಿಸಲಾಗಿದೆ. ಈ ಟಾಸ್ಕ್ನಲ್ಲಿ ಆಟ ಆಡುವ ಸಂದರ್ಭದಲ್ಲಿ ಇನ್ನೊಬ್ಬರು ಕ್ಯಾಪ್ಟನ್ ಆಗದಂತೆ ತಡೆಯಲು ಪ್ರಯತ್ನ ಮಾಡಬಹುದು ಎಂದು ಸೂಚಿಸಿರುತ್ತಾರೆ. ಆ ಕಾರಣ ಸ್ಪರ್ಧಿಗಳು ಆಟ ಆಡುತ್ತಿರುವ ಇನ್ನೊಬ್ಬ ಸ್ಪರ್ಧಿಯನ್ನು ತಡೆಯುವ ಪ್ರಯತ್ನ ಮಾಡಿದ್ಧಾರೆ. ಪ್ರತಿಯೊಬ್ಬರು ಇದೇ ರೀತಿಯಾಗಿ ಆಟ ಆಡಿದ್ಧಾರೆ. ಆದರೆ ಶಿಶಿರ್ ಮತ್ತು ಉಗ್ರಂ ಮಂಜು ನಡುವೆ ಬಿಗ್ ಫೈಟ್ ನಡೆದಿದೆ. ಶಿಶಿರ್ ಆಟ ಆಡುತ್ತಿರುವ ಸಂದರ್ಭದಲ್ಲಿ ಉಗ್ರಂ ಮಂಜು ನೋವು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಹೊಡೆದಾಟವೊಂದೇ ಬಾಕಿ
ಉಗ್ರಂ ಮಂಜು ಕೂಡ ಶಿಶಿರ್ ಆಟವನ್ನು ಹಾಳು ಮಾಡಬೇಕು ಎಂದೇ ಪ್ರಯತ್ನ ಮಾಡಿದ್ದರು. ಈ ರೀತಿ ಮಾಡಲು ಬಿಗ್ ಬಾಸ್ ಅನುಮತಿ ಕೂಡ ಇತ್ತು. ಆದರೆ ಆಟಕ್ಕೆ ತೊಂದರೆ ಉಂಟು ಮಾಡುವಾಗ ಸ್ಪರ್ಧಿಗಳಿಗೆ ನೋವಾಗಬಾರದಿತ್ತು. ಉಗ್ರಂ ಮಂಜು ನೋವಾಗುವಂತೆ ನೆಲವರೆಸುವ ಸ್ಟಿಕ್ ಬಳಸಿಕೊಂಡು ನೋವುಂಟು ಮಾಡಿದ್ದಾರೆ ಎಂದು ಶಿಶಿರ್ ಹೇಳುತ್ತಿದ್ದಾರೆ. ಅವರ ಕೈಗೆ ಗಾಯವಾಗಿದೆ. ಇನ್ನು ಇದಾದ ನಂತರ ಶಿಬಶಿರ್ ಕೋಪ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಬೈದುಕೊಂಡಿದ್ದಾರೆ.
ಮಾತಿನ ಚಕಮಕಿಯಾಗಿದೆ. ಇದೇ ಸಂದರ್ಭದಲ್ಲಿ ಮನೆ ಮಂದಿ ಅವರಿಬ್ಬರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಇಬ್ಬರೂ ಸುಮ್ಮನಾಗಿಲ್ಲ. ಬದಲಾಗಿ ಇನ್ನೂ ಹೆಚ್ಚು ಗಲಾಟೆ ಮಾಡುತ್ತಾರೆ. ಶಿಶಿರ್ ತಮ್ಮ ವಸ್ತ್ರ ಬದಲಿಸಿಕೊಂಡು ಬರುವಾಗ ಉಗ್ರಂ ಮಂಜು ತನಗೆ ಏನು ಮಾಡಿದ್ದಾರೆ ಎಂಬುದನ್ನು ಚೈತ್ರಾ ಕುಂದಾಪುರ್ ಅವರ ಹತ್ತಿರ ಹೇಳಿಕೊಂಡಿದ್ದಾರೆ. ಈಗ ಅವರ ಆಟ ಆರಂಭವಾಗಲಿ ನಾನೂ ಅವರಂತೆ ಆಡಿ ತೋರಿಸುವೆ ಎಂದು ಹೇಳಿದ್ದಾರೆ.
ಅದಾದ ನಂತರದಲ್ಲಿ ಉಗ್ರಂ ಮಂಜು ಆಟದ ಸರದಿ ಬರುತ್ತದೆ. ಆಗ ಶಿಶಿರ್ ಹೋಗಿ ತಲೆದಿಂಬನ್ನು ತೆಗೆದುಕೊಂಡು ಅವರ ಕಾಲಿಗೆ ಬಲವಾಗಿ ಹೊಡೆಯುತ್ತಾನೆ. ಆ ಹೊಡೆತಕ್ಕೆ ಉಗ್ರಂ ಮಂಜು ನೆಲಕ್ಕೆ ಮಂಡಿಯೂರಿ ಬಿದ್ದಿದ್ದಾರೆ. ಈ ನಡುವೆ “ಬಂದ್ಬಿಟ್ಟಾ ಇಲ್ಲಿ ಕಣ್ಣಗುಡ್ಡೆ ಬಿಟ್ಕೊಂಡು ನೋಡೋಕೆ” ಎಂದು ಉಗ್ರಂ ಮಂಜು ಜಗಳ ಮಾಡುತ್ತಾರೆ. ಶಿಶಿರ್ ಅವರಿಗೆ ಬಂದ ಕೋಪಕ್ಕೆ ಅಲ್ಲೇ ಪಕ್ಕದಲ್ಲಿದ್ದ ನೀರಿನ ಬಕೆಟ್ ಬಿಸಾಡುತ್ತಾರೆ.
ಇನ್ನು ಇವರಿಬ್ಬರ ಜಗಳ ನೋಡಿ ಮನೆ ಮಂದಿಗೆ ಭಯವಾಗಿದೆ. ಯಾಕೆ ಇವರು ಈ ರೀತಿ ಫೈಟ್ ಮಾಡುತ್ತಿದ್ದಾರೆ ಎಂದು ಎಲ್ಲರೂ ಸುಮ್ಮನೆ ನೋಡುತ್ತಾ ನಿಂತಿದ್ದಾರೆ. ಇಬ್ಬರಿಗೂ ಪೆಟ್ಟಾದಾಗ ಎಲ್ಲರೂ ಬೇಸರ ಮಾಡಿಕೊಂಡಿದ್ದಾರೆ.