Bigg Boss Kannada: ಮಾನಸಾ ಮೇಲೆ ರೊಚ್ಚಿಗೆದ್ದ ವೀಕ್ಷಕರು; ಬಿಗ್‌ ಬಾಸ್‌ ಮನೆಯೊಳಗೇ ಕೈ ಮಾಡಲು ಮುಂದಾದ ಲೇಡಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಮಾನಸಾ ಮೇಲೆ ರೊಚ್ಚಿಗೆದ್ದ ವೀಕ್ಷಕರು; ಬಿಗ್‌ ಬಾಸ್‌ ಮನೆಯೊಳಗೇ ಕೈ ಮಾಡಲು ಮುಂದಾದ ಲೇಡಿ

Bigg Boss Kannada: ಮಾನಸಾ ಮೇಲೆ ರೊಚ್ಚಿಗೆದ್ದ ವೀಕ್ಷಕರು; ಬಿಗ್‌ ಬಾಸ್‌ ಮನೆಯೊಳಗೇ ಕೈ ಮಾಡಲು ಮುಂದಾದ ಲೇಡಿ

Boss Kannada Season 11: ಬಿಗ್‌ ಬಾಸ್‌ ಮನೆಗೆ ಬಂದ ವೀಕ್ಷಕರ ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಮಾನಸಾ ಮೇಲೆ ಕೈ ಮಾಡಲು ಮುಂದಾದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ಬಗ್ಗೆ ಹೆಚ್ಚಿನ ವಿವರವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಬಿಗ್‌ ಬಾಸ್‌ ಮನೆಯೊಳಗೇ ಕೈ ಮಾಡಲು ಮುಂದಾದ ಲೇಡಿ
ಬಿಗ್‌ ಬಾಸ್‌ ಮನೆಯೊಳಗೇ ಕೈ ಮಾಡಲು ಮುಂದಾದ ಲೇಡಿ

ಬಿಗ್‌ ಬಾಸ್ ಮನೆಯೊಳಗಡೆ ಹಿಂದಿನ ವಾರ ವೀಕ್ಷಕರಿಗೆ ಪ್ರವೇಶ ನೀಡಲಾಗಿತ್ತು. ಇದಕ್ಕೆ ಕಾರಣ ಹಿಂದಿನ ವಾರ ಬಿಗ್‌ ಬಾಸ್‌ ಮನೆಯಲ್ಲಿ ರಾಜಕೀಯದ ಟಾಸ್ಕ್‌ ಇತ್ತು ಅದರಲ್ಲಿ ಮನೆಯವರನ್ನು ಎರಡು ಬೇರೆ ಬೇರೆ ಪಕ್ಷಗಳನ್ನಾಗಿ ವಿಂಗಡಿಸಲಾಗಿತ್ತು. ಆ ರೀತಿಯಾಗಿ ಎರಡು ಪಕ್ಷಗಳನ್ನು ಮಾಡಿದಾಗ ಯಾರು ಗೆಲ್ಲುತ್ತಾರೆ ಎಂದು ನೋಡಲು ಮತ್ತು ತಮ್ಮ ಪಕ್ಷದ ಪ್ರಚಾರ ಮಾಡಿ ಜನರ ಮನವೊಲಿಸಲು ಅವಕಾಶ ನೀಡಲಾಗಿತ್ತು. ಮನೆಯೊಳಗಡೆ ವೀಕ್ಷಕರನ್ನು ಕರೆಸಲಾಗಿತ್ತು. ಆದರೆ ಆ ವೀಕ್ಷಕರ ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಮಾನಸಾ ಅವರಿಗೆ ಕೈ ಮಾಡಲು ಮುಂದಾಗಿದ್ದರು.

ಆ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಎಲ್ಲ ಕಾರ್ಯಕ್ರಮ ಮುಗಿದ ನಂತರ ಜನರು ತಮ್ಮ ನೆಚ್ಚಿನ ಸ್ಪರ್ಧಿಗಳ ಜೊತೆಗೆ ಮಾತಾಡುತ್ತಾರೆ. ಅವರನ್ನು ಭೇಟಿಯಾಗಿ ಖುಷಿ ವ್ಯಕ್ತಪಡಿಸುತ್ತಾ ಕೈಕುಲುಕುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ನೀಲಿ ಸೀರೆಯುಟ್ಟ ಮಹಿಳೆಯೊಬ್ಬರು ಮಾನಸಾ ಅವರ ಮೇಲೆ ಕೈ ಮಾಡಲು ಬಂದಿರುವುದು ವಿಡಿಯೋ ತುಣುಕಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.

ಮಾನಸಾ ಅವರು ಅಲ್ಲೇ ಇದ್ದ ಎಲ್ಲ ವೀಕ್ಷಕರನ್ನು ಮಾತಾಡಿಸುತ್ತಾ ಕೈ ಕುಲುಕುತ್ತಾ ಬರುತ್ತಾ ಇರುತ್ತಾರೆ. ಆ ಸಂದರ್ಭದಲ್ಲಿ ಮಹಿಳೆಯೊಬ್ಬರು ಮಾನಸಾ ಕೈ ಹಿಡಿದು ತನ್ನೆಡೆಗೆ ಎಳೆದುಕೊಳ್ಳುತ್ತಾರೆ. ಆ ರೀತಿಯಾಗಿ ಎಳೆದುಕೊಳ್ಳುತ್ತಾ ಇನ್ನೊಂದು ಕೈ ಎತ್ತಿ ಹೊಡೆಯಲು ಮುಂದಾಗುತ್ತಾರೆ. ಆದರೆ ಅದು ಅಷ್ಟಕ್ಕೇ ಕೊನೆಗೊಳ್ಳುತ್ತದೆ. ಅವರ ನಡುವೆ ಹೆಚ್ಚಾಗಿ ಏನೂ ನಡೆದಿಲ್ಲ.

ಇಲ್ಲಿದೆ ನೋಡಿ ವಿಡಿಯೋ ತುಣುಕು
K7 ಪರ್ಸ್‌ಪೆಕ್ಟಿವ್ಸ್‌ ಎಂಬ ಫೇಸ್ಬುಕ್ ಖಾತೆಯಿಂದ ಈ ವಿಡಿಯೋ ವೈರಲ್ ಆಗಿದೆ

ಮಾನಸಾ ಅವರ ಮೇಲೆ ಆಂಟಿ ಎಷ್ಟು ದಿನದಿಂದ ಸಿಟ್ಟು ಇಟ್ಕೊಂಡಿದ್ರೋ ಏನೋ.. ಎಂದು ಬರೆಯಲಾಗಿದೆ. ಸಾಕಷ್ಟು ಜನ ಆ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಟಿ ಆರ್ ಪಿ ಗೋಸ್ಕರ ಏನೆಲ್ಲಾ ಡ್ರಾಮಾ ಮಾಡ್ತೀರಾ ಇದು ಇದಕ್ಕಿಂತ ಮುಂಚೆ ಬೇರೆ ಒಂದು ಕಾರ್ಯಕ್ರಮದಲ್ಲಿ ಒಬ್ಬ ಸೀರಿಯಲ್ ಆಕ್ಟರ್ ಗೆ ಇದೇ ತರ ಆಗಿತ್ತು ಅದನ್ನೇ ಇಲ್ಲಿ ಕಾಫಿ ಪೇಸ್ಟ್ ಮಾಡಿ ತೋರಿಸ್ತಾ ಇದ್ದೀರಾ ಅಂತ ಜನಾನು, ಜನ ಮರಳು ಜಾತ್ರೆ ಮರಳು ಎಂದು ಅಪ್ಪು ಎನ್ನುವವರು ಕಾಮೆಂಟ್ ಮಾಡಿದ್ದಾರೆ.