ನನ್ನ ಕೈ ಕರ್ರಗೈತಿ ಎಂದ ಹನುಮಂತನಿಗೆ ಮನಸ್ಸು ಬೆಳ್ಳಗಿದೆ ಬಿಡು ಎಂದ ಅದಿತಿ ಪ್ರಭುದೇವ; ನೀವು ಸೂಪರ್ ಎಂದ ವೀಕ್ಷಕರು
BBK Season 11: ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಗೆದ್ದ ಹನುಮಂತನಿಗೆ ಅದಿತಿ ಪ್ರಭುದೇವ, ಶರಣ್ ಫಲಕ ಹಸ್ತಾಂತರಿಸಿದ್ದಾರೆ. ಈ ಸಮಯದಲ್ಲಿ ಹನುಮಂತನ ಬಗ್ಗೆ ಅದಿತಿ ಆಡಿದ ಮಾತುಗಳು ವೀಕ್ಷಕರ ಮನ ಗೆದ್ದಿದೆ.

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮಗಳು ಜನಿಸಿದ ನಂತರ ಇದು ಅದಿತಿ ಮೊದಲ ಹುಟ್ಟುಹಬ್ಬ. ಪತಿ ಯಶಸ್, ಮಗಳು ನೇಸರ ಹಾಗೂ ಕುಟುಂಬದೊಂದಿಗೆ ಅದಿತಿ ಬರ್ತ್‌ಡೆ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಮಗು ಆದಾಗಿನಿಂದ ಅದಿತಿ, ಸಿನಿಮಾಗಳಿಗಿಂತ ಹೆಚ್ಚಾಗಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಮಗಳು ನೇಸರನ ಆರೈಕೆ ಮಾಡುತ್ತಿದ್ದಾರೆ.
ಛೂ ಮಂತರ್ ಸಿನಿಮಾ ಪ್ರಮೋಷನ್
ಇದರ ಜೊತೆಗೆ ಅದಿತಿ ರಾಜಾ ರಾಣಿ ಸೀಸನ್ 3ರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಶರಣ್ ನಡುವೆ ಅದಿತಿ ನಟಿಸುತ್ತಿರುವ ಛೂ ಮಂತರ್ ಸಿನಿಮಾ ಕಳೆದ ಶುಕ್ರವಾರ ತೆರೆ ಕಂಡಿದೆ. ಚಿತ್ರವನ್ನು ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮಾನಸಾ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿದ್ದು ನವನೀತ್ ಆಕ್ಷನ್ ಕಟ್ ಹೇಳಿದ್ದಾರೆ. ಶರಣ್, ಅದಿತಿ ಪ್ರಭುದೇವ, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಪ್ರಭು ಮುಂಡ್ಕರ್, ರಂಜನಿ ರಾಘವನ್ ಹಾಗೂ ಇನ್ನಿತರರು ನಟಿಸಿರುವ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಈ ನಡುವೆ ಅದಿತಿ ಹಾಗೂ ಶರಣ್ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಅದಿತಿ ಪ್ರಭುದೇವ, ಹನುಮಂತನಿಗೆ ಹೇಳಿದ ಮಾತು ಕೇಳಿ ಸಿನಿಪ್ರಿಯರು, ಕಿರುತೆರೆ ವೀಕ್ಷಕರು ಅದಿತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 11, ಅಂತಿಮ ಹಂತಕ್ಕೆ ಬಂದಿದೆ. ಸದ್ಯಕ್ಕೆ ಮನೆಯಲ್ಲಿ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅದರಲ್ಲಿ ಹನುಮಂತ ಇದರ ಸ್ಪರ್ಧಿಗಳನ್ನು ಹಿಂದಿಕ್ಕಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್, ಕಳೆದ ವಾರ ಟಿಕೆಟ್ ಟು ಫಿನಾಲೆ ಎಂಬ ಟಾಸ್ಕ್ ನೀಡಿದ್ದರು. ಜಾಲದಂತೆ ಹಾಕಿದ್ದ ಹಗ್ಗವನ್ನು ಹತ್ತಿ ಅಲ್ಲಿ ಹಾಕಿರುವ ಕೀಲಿಗಳನ್ನು ತೆಗೆದು ಕೆಳಗೆ ಇಳಿದು ಅಲ್ಲಿರುವ ಪೆಟ್ಟಿಗೆಯನ್ನು ತೆಗೆದು ಅದರಲ್ಲಿರುವ ಬಾವುಟವನ್ನು ತೆಗೆಯಬೇಕು. ಬಾವುಟ ಹಿಡಿದು ಮತ್ತೆ ಹಗ್ಗ ಹತ್ತಿ ಬಾವುಟ ತೆಗೆದು ಬಿಗ್‌ಬಾಸ್ ಎಂದು ಹೇಳಿ ಬಾವುಟದ ಕಡ್ಡಿಯನ್ನು ಕಂಬಿಗೆ ಕೂರಿಸಬೇಕು. ಯಾವ ಸ್ಪರ್ಧಿ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸುತ್ತಾರೋ ಆ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಅವಕಾಶ ನೀಡಲಾಗಿತ್ತು.
ಅದಿತಿ ಮಾತಿಗೆ ವೀಕ್ಷಕರ ಮೆಚ್ಚುಗೆ
ಅದರಂತೆ ಹನುಮಂತ ಇತರ ಸ್ಪರ್ಧಿಗಳಾದ ಭವ್ಯಾಗೌಡ, ರಜತ್ ಹಾಗೂ ತ್ರಿವಿಕ್ರಮ್‌ಗಿಂತ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ್ದರಿಂದ ಅವರಿಗೆ ನೇರವಾಗಿ ಫೈನಲ್‌ಗೆ ಎಂಟ್ರಿ ಕೊಡಲಾಯ್ತು. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಬಿಗ್‌ಬಾಸ್‌ಗೆ ಬಂದಿದ್ದ ಅದಿತಿ ಹಾಗೂ ಶರಣ್ ಹನುಮಂತನಿಗೆ ಅಧಿಕೃತವಾಗಿ ಟಿಕೆಟ್ ಟು ಫಿನಾಲೆ ಫಲಕ ಹಸ್ತಾಂತರಿಸುತ್ತಾರೆ. ಈ ವೇಳೆ ಫೋಟೋಗೆ ಪೋಸ್ ಕೊಡುವಾಗ ಅದಿತಿ ತಮ್ಮ ಒಂದು ಕೈಯಿಂದ ಹಾರ್ಟ್ ಶೇಪ್ ಮಾಡಿ ಹನುಮಂತನಿಗೂ ಕೈ ಜೋಡಿಸುವಂತೆ ಹೇಳುತ್ತಾರೆ. ಆಗ ಹನುಮಂತ ನನ್ನ ಕೈ ಕರ್ರಗೈತಿ ಎನ್ನುತ್ತಾರೆ, ಅದಕ್ಕೆ ಪ್ರತಿಕ್ರಿಯಿಸುವ ಅದಿತಿ ಪ್ರಭುದೇವ, ಮನಸ್ಸು ಬೆಳ್ಳಗಿದೆ ಬಿಡೊ ಎನ್ನುತ್ತಾರೆ. ಅದಿತಿ ಅವರ ಈ ಮಾತು ಕೇಳಿ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಸ್ಟಾರ್ ನಟಿ ಆದರೂ ಎಲ್ಲರೊಂದಿಗೆ ಬೆರೆಯುವ ಗುಣ ಬಹಳ ಇಷ್ಟವಾಯ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಭಾಗ