ಬಿಗ್‌ಬಾಸ್ ಕನ್ನಡ 11: ಭವ್ಯಾಗೌಡ, ಮೋಕ್ಷಿತಾ, ಗೌತಮಿ; ಈ ಬಾರಿ ಮಹಿಳಾ ಸ್ಪರ್ಧಿಗಿದೆಯೇ ಗೆಲ್ಲುವ ಭಾಗ್ಯ,ಮೂವರಲ್ಲಿ ಯಾರಿಗೆ ಸಿಗಬಹುದು ಕಪ್?
BBK Season 11: ಬಿಗ್ ಬಾಸ್ ಸೀಸನ್ 3 ರಲ್ಲಿ ಹಿರಿಯ ನಟಿ ಶ್ರುತಿ ವಿನ್ನರ್ ಆಗಿದ್ದು ಬಿಟ್ಟರೆ ಉಳಿದ ಎಲ್ಲಾ ಸೀಸನ್‌ಗಳಲ್ಲೂ ಪುರುಷ ಸ್ಪರ್ಧಿಗಳೇ ಕಪ್ ಗೆದ್ದಿದ್ದಾರೆ. ಈ ಬಾರಿ ಮನೆಯಲ್ಲಿ ಭವ್ಯಾ ಗೌಡ, ಮೋಕ್ಷಿತಾ ಪೈ, ಗೌತಮಿ ಜಾದವ್ ಉಳಿದುಕೊಂಡಿದ್ದಾರೆ. ಈ ಬಾರಿ ಮಹಿಳಾ ಸ್ಪರ್ಧಿಗೆ ಗೆಲ್ಲುವ ಅವಕಾಶ ಇದೆಯಾ ಕಾದು ನೋಡಬೇಕು.

ಬಿಗ್‌ಬಾಸ್ ಕನ್ನಡ ಸೀಸನ್ 11 ಅಂತಿಮ ಹಂತಕ್ಕೆ ಬಂದಿದೆ. ಸದ್ಯಕ್ಕೆ ಮನೆಯಲ್ಲಿ ಭವ್ಯಾಗೌಡ, ಮೋಕ್ಷಿತಾ ಪೈ, ಗೌತಮಿ ಜಾದವ್ ಮೂವರು ಮಹಿಳಾ ಸ್ಪರ್ಧಿಗಳು, ತ್ರಿವಿಕ್ರಮ್, ಉಗ್ರಂ ಮಂಜು, ಧನರಾಜ್ ಆಚಾರ್, ರಜತ್ ಹಾಗೂ ಹನುಮಂತ ಐವರು ಪುರುಷ ಸ್ಪರ್ಧಿಗಳು ಸೇರಿ ಒಟ್ಟು 8 ಮಂದಿ ಇದ್ದಾರೆ.
ಕಳೆದ ವಾರ ಎಲಿಮಿನೇಟ್ ಆದ ಚೈತ್ರಾ ಕುಂದಾಪುರ
ಕಳೆದ ವಾರ ಚೈತ್ರಾ ಕುಂದಾಪುರ ಎಲಿಮಿನೇಷನ್ ಆಗಿ ಹೊರ ಹೋಗಿದ್ದಾರೆ. ಚೈತ್ರಾ ಕುಂದಾಪುರ ಆರಂಭದಿಂದಲೂ ಭಾರೀ ಸುದ್ದಿಯಲ್ಲಿದ್ದರು. ಫಿನಾಲೆವರೆಗೂ ಬರಬಹುದು ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೆ ಅವರು ಬಿಗ್‌ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಇರುವ 8 ಮಂದಿಯಲ್ಲಿ ಹನುಮಂತ, ಫಿನಾಲೆಗೆ ಆಯ್ಕೆ ಆಗಿದ್ದಾರೆ. ಉಳಿದ 7 ಮಂದಿಯಲ್ಲಿ ಯಾರು ಫಿನಾಲೆಗೆ ಹೋಗುತ್ತಾರೆ? ಯಾರು ಎಲಿಮಿನೇಟ್ ಆಗುತ್ತಾರೆ.ಈ ಬಾರಿ ಯಾರಿಗೆ ಬಿಗ್ ಬಾಸ್ ಕಪ್ ಸಿಗಬಹುದು? 11ನೇ ಸೀಸನ್‌ನಲ್ಲಿ ಮಹಿಳಾ ಸ್ಪರ್ದಿಗಳಿಗೆ ಗೆಲ್ಲುವ ಅವಕಾಶ ಇದೆಯೇ ಎಂಬ ಅನೇಕ ಪ್ರಶ್ನೆಗಳು ವೀಕ್ಷಕರಿಗೆ ಕಾಡುತ್ತಿದೆ.
ಇದುವರೆಗೂ 10 ಬಿಗ್‌ಬಾಸ್ ಸೀಸನ್‌ಗಳು ನಡೆದಿವೆ. ಮೊದಲ ಸೀಸನ್‌ನಲ್ಲಿ ವಿಜಯ ರಾಘವೇಂದ್ರ, 2ನೇ ಸೀಸನ್‌ಲ್ಲಿ ಅಕುಲ್ ಬಾಲಾಜಿ ವಿನ್ನರ್ ಆಗಿದ್ದರು. ಆದರೆ ಅದರಲ್ಲಿ 2015-16 ರಲ್ಲಿ ನಡೆದ ಮೂರನೇ ಸೀಸನ್‌ನಲ್ಲಿ ನಟಿ ಶ್ರುತಿ ಗೆದ್ದಿದ್ದರು. ಅದರ ನಂತರ ಸೀಸನ್‌ಗಳಲ್ಲಿ ಮತ್ತೆ ಯಾವ ಮಹಿಳಾ ಸ್ಪರ್ಧಿಗಳು ಗೆದ್ದಿರಲಿಲ್ಲ. ಕಳೆದ ಸೀಸನ್‌ನಲ್ಲಿ ಕೂಡಾ ಮಹಿಳಾ ಸ್ಪರ್ಧಿಗೆ ಕಪ್ ಸಿಗಬಹುದು ಎನ್ನಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಮಹಿಳಾ ಸ್ಪರ್ಧಿಗಳಿಗೆ ಕಪ್ ಗೆಲ್ಲುವ ಅವಕಾಶ ಕೊಡಬೇಕು ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಬಾರಿ ಗೆಲ್ತಾರಾ ಮಹಿಳಾ ಸ್ಪರ್ಧಿ?
ಈಗ ಉಳಿದಿರುವ ಮೂರು ಮಹಿಳಾ ಸ್ಪರ್ಧಿಗಳಲ್ಲಿ ಭವ್ಯಾಗೌಡ ಮೊದಲಿನಿಂದಲೂ ಉತ್ತಮ ಪ್ರದರ್ಶನ ತೋರಿದ್ದಾರೆ. ಟಿಕೆಟ್ ಟು ಫಿನಾಲೆಯಲ್ಲಿ ಕೂಡಾ ಕಷ್ಟಪಟ್ಟು ಟಾಸ್ಕ್ ಆಡಿದ್ದರು. ಅದರಲ್ಲಿ ಹನುಮಂತ ಗೆದ್ದು ಫಿನಾಲೆಗೆ ಎಂಟ್ರಿ ಆಗಿದ್ದರು. ಆದರೆ ಭವ್ಯಾ ಗೌಡ ಆಡಿದ ಟಾಸ್ಕ್, ವೀಕ್ಷಕರಿಗೆ ಮೆಚ್ಚುಗೆ ಆಗಿತ್ತು. ಭವ್ಯಾ ಹೊರತುಪಡಿಸಿ ಮೋಕ್ಷಿತಾ ಕೂಡಾ ಮೊದಲಿನಿಂದ ಉತ್ತಮ ಪ್ರದರ್ಶನ ತೋರಿದ್ದಾರೆ. ಗೌತಮಿ ಜಾದವ್ ಕೂಡಾ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ಟಾಸ್ಕ್, ಸ್ಪರ್ಧಿಗಳು ಮನೆಯಲ್ಲಿ ನಡೆದುಕೊಂಡ ರೀತಿ, ವೀಕ್ಷಕರ ವೋಟಿಂಗ್ ಆಧಾರದ ಮೇಲೆ ವಿನ್ನರ್ ನಿರ್ಧಾರವಾಗುತ್ತಾರೆ.
ಈ ನಡುವೆ ವಿಕಿಪೀಡಿಯಾದಲ್ಲಿ ಬಿಗ್ ಬಾಸ್ 11ರ ಸ್ಪರ್ಧಿ ಹನುಮಂತ ಎಂದು ಅನೌನ್ಸ್ ಆಗಿರುವುದು ಕೆಲವರಿಗೆ ಬೇಸರವಾದರೆ, ಇನ್ನೂ ಕೆಲವರಿಗೆ ಖುಷಿ ನೀಡಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ವಿಕಿಪೀಡಿಯಾ To be announced ಎಂದು ತಿದ್ದಿದೆ. ಇದನ್ನು ನೋಡಿದರೆ ಈ ಬಾರಿ ಹನುಮಂತ ವಿನ್ನರ್ ಆಗಬಹುದಾ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಯಾವುದಕ್ಕೂ ಬಿಗ್‌ಬಾಸ್ ಫಿನಾಲೆವರೆಗೂ ಕಾದು ನೋಡಬೇಕು.
