ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳಿಗೆ ಆಪ್ತರ ಕರೆ: ತನ್ನ ಪುಟ್ಟ ಕಂದನ ಅಳುವಿನ ಧ್ವನಿ ಕೇಳಿ ಗೊಳೋ ಎಂದು ಅತ್ತ ಧನರಾಜ್‌ ಆಚಾರ್‌
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳಿಗೆ ಆಪ್ತರ ಕರೆ: ತನ್ನ ಪುಟ್ಟ ಕಂದನ ಅಳುವಿನ ಧ್ವನಿ ಕೇಳಿ ಗೊಳೋ ಎಂದು ಅತ್ತ ಧನರಾಜ್‌ ಆಚಾರ್‌

ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳಿಗೆ ಆಪ್ತರ ಕರೆ: ತನ್ನ ಪುಟ್ಟ ಕಂದನ ಅಳುವಿನ ಧ್ವನಿ ಕೇಳಿ ಗೊಳೋ ಎಂದು ಅತ್ತ ಧನರಾಜ್‌ ಆಚಾರ್‌

Bigg Boss: ಧನರಾಜ್‌ ಆಚಾರ್‌ ಅವರಿಗೆ ಮನೆಯಿಂದ ಕರೆ ಬಂದಿದೆ. ಅವರು ಮಾತನಾಡುತ್ತಿದ್ದಂತೆ ತಕ್ಷಣ ಅಳಲು ಆರಂಭಿಸಿದ್ದಾರೆ. ಹಾಗಾದ್ರೆ ಬಿಗ್‌ ಬಾಸ್‌ ಮಾತನಾಡಿಸಿದ್ದು ಯಾರ ಹತ್ತಿರ ಎಂಬ ಪ್ರಶ್ನೆ ಮನೆಯವರಿಗೆ ಮೂಡಿದೆ. ಎಲ್ಲ ಸ್ಪರ್ಧಿಗಳು ಧನರಾಜ್ ಅಳುವುದನ್ನು ನೋಡುತ್ತಾ ನಿಂತಿದ್ದಾರೆ.

 ಕಂದನ ಅಳು ಕೇಳಿ ಕರಗಿದ ಧನರಾಜ್‌ ಆಚಾರ್
ಕಂದನ ಅಳು ಕೇಳಿ ಕರಗಿದ ಧನರಾಜ್‌ ಆಚಾರ್ (ಕಲರ್ಸ್‌ ಕನ್ನಡ)

ಬಿಗ್‌ ಬಾಸ್ ಮನೆಯಲ್ಲಿ ಯಾರೂ ಸರಿಯಾಗಿ ಮಾತು ಕೇಳುತ್ತಿಲ್ಲ ಎಂದು ಬಿಗ್‌ ಬಾಸ್‌ ಮುನಿಸಿಕೊಂಡಿದ್ದಾರೆ. ಆದರೆ ಇದೀಗ ಮತ್ತೊಂದಷ್ಟು ಹೊಸ ಆಟಗಳು ಶುರುವಾಗಿದೆ. ಮೊದಲೆಲ್ಲ ಸ್ಪರ್ಧಿಗಳು ಅಂತಿಮ ಹಂತಕ್ಕೆ ತಲುಪಿದಾಗ ಕರೆ ಬರುತ್ತಿತ್ತು. ಆದರೆ ಈಗ ಹಾಗಲ್ಲ ಕೆಲವೇ ಕೆಲವು ದಿನಗಳಲ್ಲೇ ಬಿಗ್‌ ಬಾಸ್‌ ಸ್ಪರ್ಧಿಗಳ ಮನೆಯಿಂದ ಕಾಲ್ ಮಾಡಿ ಮಾತನಾಡಿಸಿದ್ದಾರೆ. ಈ ಸಂದರ್ಭದಲ್ಲಿ ಧನರಾಜ್ ಆಚಾರ್ ಅವರಿಗೆ ಕಾಲ್ ಬಂದಿದೆ. ಅವರು ಮಾತನಾಡುತ್ತಾ ತುಂಬಾ ಭಾವುಕರಾಗುತ್ತಾರೆ. ಒಳಗಡೆ ಏನಾಗುತ್ತಿದೆ ಎಂದು ಯಾರಿಗೂ ಅರ್ಥ ಆಗುವುದಿಲ್ಲ. ಧನರಾಜ್ ಅಳುವುದೊಂದೇ ಮೊದಲು ಕಾಣುತ್ತದೆ. ಆದರೆ ನಂತರದಲ್ಲಿ ಅರ್ಥ ಆಗುತ್ತದೆ.

ಧನರಾಜ್ ಅವರಿಗೆ ಅವರ ಮನೆಯಿಂದ ಕಾಲ್ ಬಂದಿರುತ್ತದೆ. ಅವರ ಮನೆಯಿಂದ ಯಾರೂ ಮಾತಾಡಿರುವುದಿಲ್ಲ. ಬದಲಾಗಿ ಅವರ ಮಗುವಿನ ಧ್ವನಿಯನ್ನು ಕೇಳಿಸಿರುತ್ತಾರೆ. ಅವರ ಮಗುವಿನ ಧ್ವನಿ ಕೇಳುತ್ತಿದ್ದಂತೆ ಧನರಾಜ್ ಜೋರಾಗಿ ಅಳಲು ಆರಂಭಿಸುತ್ತಾರೆ. ಉಳಿದವರು ಹೊರಗಡೆಯಿಂದ ನೋಡುತ್ತಾರೆ. ಬಿಗ್‌ ಬಾಸ್‌ ಮಾತನ್ನು ಆರಂಭಿಸುವಾಗಲೇ. ಧನರಾಜ್ ನಾನು ನಿಮಗೆ ಒಂದು ಧ್ವನಿ ಕೇಳಿಸುತ್ತೇನೆ ಎಂದು ಹೇಳಿರುತ್ತಾರೆ. ನಂತರ ತಕ್ಷಣದಲ್ಲಿ ಅವರ ಮಗುವಿನ ಅಳುವಿನ ಶಬ್ಧ ಕೇಳಿಸುತ್ತದೆ.

ನನ್ನ ಮಗಳು ನೆನಪಾದಾಗೆಲ್ಲ ನಾನು ಇನ್ನೂ ಚೆನ್ನಾಗಿ ಆಡಬೇಕು ಎಂದು ಅನಿಸುತ್ತದೆ. ಇಷ್ಟು ದಿನ ನನತ್ರ ಚೆನ್ನಾಗಿ ಆಟ ಆಡೋದಕ್ಕೆ ಆಗಿಲ್ಲ. ಇಂದು ಮುಂದಿನ ದಿನಗಳಲ್ಲಾದ್ರೂ ನಾನು ಚೆನ್ನಾಗಿ ಆಟ ಆಡ್ತೀನಿ ಎಂದು ಹೇಳುತ್ತಾರೆ. ಇನ್ನು ಮನೆಯಲ್ಲಿನ ಸ್ಪರ್ಧಿಗಳೂ ಸಹ ಅವರನ್ನು ಅಷ್ಟೊಂದು ಸೀರಿಯಸ್‌ ಆಗಿ ತೆಗೆದುಕೊಂಡಿರಲಿಲ್ಲ. “ಇದನ್ನು ನಾನು ಮೋಟಿವ್ ಆಗಿ ತಗೊತೀನಿ, ಇಲ್ಲಿ ನನಗೆ ಬೆರಳು ತೋರಿಸಿ ನನ್ನ ಪ್ರಶ್ನೆ ಮಾಡುವವರಿಗೆ ನಾನು ಸರಿಯಾದ ರೀತಿಯಲ್ಲಿ ಉತ್ತರ ನೀಡುತ್ತೀನಿ ಬಿಗ್ ಬಾಸ್‌” ಎಂದು ಹೇಳುತ್ತಾರೆ.

ಈ ಹಿಂದೆ ಧನರಾಜ್ ಅವರು ಅಷ್ಟು ಚೆನ್ನಾಗಿ ಆಟ ಆಡುತ್ತಿಲ್ಲ. ಇನ್ನೂ ಅವರಿಗೆ ತನ್ನ ಸ್ಥಾನ ಏನು ಅನ್ನೋದು ಅರ್ಥ ಆಗಿಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಮತ್ತು ಅವರಿಗೆ ಈ ಮನೆಯ ಅತಿಥಿ ಎಂಬ ಬಿರುದನ್ನು ನೀಡಿದ್ದರು. ಆದರೆ ಇನ್ನು ಮುಂದಿನ ದಿನಗಳಲ್ಲಿ ಹೀಗೆ ಆಗೋದಿಲ್ಲ. ನಾನು ಸರಿಯಾದ ರೀತಿಯಲ್ಲಿ ಆಟ ಆಡುತ್ತೇನೆ ಎಂದು ಅವರು ಹೇಳಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಇವರು ಸ್ಟ್ರಾಂಗ್ ಆಗಿ ಆಟ ಆಡ್ತಾರಾ? ಇಲ್ವಾ ಎಂದು ಕಾದು ನೋಡಬೇಕಿದೆ.

ಹೀಗಿತ್ತು ಕಾಮೆಂಟ್ಸ್‌

ಧನಂಜಯ್ ಒಳ್ಳೇ ಮಾತುಗಾರ ಆದ್ರೆ ಬಿಗ್ ಬಾಸ್ ಅಂತವರಿಗೆ ಆಗಿಬರುವುದಿಲ್ಲ ಅದೇನಿದ್ರು ಜಗ್ಗನಂಥವರಿಗೆ ಸರಿ ಎಂದು - ರಾಧಾ ರಾಮಕೃಷ್ಣ ಅವರು ಕಾಮೆಂಟ್ ಮಾಡಿದ್ದಾರೆ.

ಇವ್ರನ್ನ ನೋಡಿದ್ರೆ ಪಾಪ ಅನ್ಸುತ್ತೆ...

ಇವ್ರಿಗೆ ಜಗಳ ಮಾಡ್ಲಿಕ್ ಬರಲ್ಲ ಅವ್ರ್ಗಳ್ ಮಧ್ಯೆ ಹೇಗ್ ಗಟ್ಟಿಯಾಗಿ ನಿಲ್ತಾರೆ ನೋಡ್ಬೇಕು - ಎಂದು ಭವಿ ಕನ್ನಡತಿ ಎಂಬುವವರು ಕಾಮೆಂಟ್ ಮಾಡಿದ್ದಾರೆ.

Whats_app_banner