BBK 10: ಕಿಚ್ಚನ ವಾರದ ಪಂಚಾಯ್ತಿ ಮೇಲೆ ನಮಗೆ ನಂಬಿಕೆನೇ ಇಲ್ಲ! ನೋಡುಗ ನೀಡಿದ ಕಾರಣಗಳು ಹೀಗಿವೆ
“ಈ ಸಲದ ಬಿಗ್‌ಬಾಸ್‌ನಲ್ಲಿ ಬರೀ ಬೈಗುಳ ಕೇಳುವುದೇ ಆಗಿದೆ. ಸ್ಪರ್ಧಿಗಳ ಮಾತಿಗೆ ಕಡಿವಾಣ ಹಾಕುವ ಕೆಲಸವನ್ನು ಸುದೀಪ್ ಮಾಡುತ್ತಿಲ್ಲ. ಹಾಗಾಗಿ ವಾರದ ಕಿಚ್ಚನ ಪಂಚಾಯ್ತಿ ಮೇಲೆ ನಮಗೆ ನಂಬಿಕೆ ಇಲ್ಲ” ಎಂದು ನೋಡುಗ ತಮ್ಮ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾ ಪುಟಕ್ಕಿಳಿಸಿದ್ದಾನೆ. ಹೀಗಿದೆ ಅಸಲಿ ಕಾರಣ.
Bigg Boss Kannada10: ಈ ಸಲದ ಬಿಗ್‌ಬಾಸ್ ಕನ್ನಡ ಸೀಸನ್ 10 ಮನರಂಜನೆಗಿಂತ ಜಗಳ, ಕಿತ್ತಾಟಕ್ಕೇ ಹೆಚ್ಚು ಚರ್ಚೆಯಲ್ಲಿದೆ. ಒಬ್ಬರಿಗೊಂದು, ಮತ್ತೊಬ್ಬರಿಗೊಂದು ನ್ಯಾಯ ಎಂಬಂತೆ ತೋರಿಸಲಾಗುತ್ತಿದೆ ಎಂದು ವೀಕ್ಷಕರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಅವರ ವರ್ತನೆಗೆ ನೋಡುಗ ಬೇಸರಗೊಂಡಿದ್ದಾನೆ. ಮತ್ತೊಂದು ಕಡೆ ಹೆಣ್ಣು ಮಕ್ಕಳ ಮೇಲೆ ಅವರ ದರ್ಪ ಮಿತಿ ಮೀರುತ್ತಿದೆ ಎಂದೂ ಕಾಮೆಂಟ್‌ಗಳ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾನೆ.
ಹೀಗಿರುವಾಗಲೇ ನಾಲ್ಕನೇ ವಾರ ಬಂದೇ ಬಿಟ್ಟಿದೆ. ಕಿಚ್ಚನ ಪಂಚಾಯ್ತಿಗೆ ವೇದಿಕೆ ಸಿದ್ಧವಾಗಿದೆ. ಕಳೆದೊಂದು ವಾರದಿಂದ ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಬಿಗ್‌ಬಾಸ್ ಪ್ರೋಮೋಗಳಿಗೆ ನೋಡುಗರು ರಾಶಿ ರಾಶಿ ಕಾಮೆಂಟ್ ಮೂಲಕ ಕಂಪ್ಲೇಟ್ ಮಾಡುತ್ತಿದ್ದಾರೆ. ಇದೀಗ ವಾರದ ಕತೆ ಕಿಚ್ಚನ ಜತೆ ಪ್ರೋಮೋಕ್ಕೂ ದೂರುಗಳ ಸುರಿಮಳೆಯೇ ಹರಿದು ಬಂದಿದೆ. ಈ ಹಿಂದಿನ ಬಿಗ್‌ಬಾಸ್ ಸೀಸನ್‌ಗಳೇ ಎಷ್ಟೋ ವಾಸಿ ಎಂದೂ ಹೇಳುತ್ತಿದ್ದಾರೆ.
ನೋಡುಗ ನೀಡಿದ ಕಾರಣಗಳು ಹೀಗಿವೆ..
- ಮೂರು ವಾರಗಳು ಕಳೆದರೂ, ವಿನಯ್ ವರ್ತನೆ ಬಗ್ಗೆ ಸುದೀಪ್ ಈ ವರೆಗೂ ತುಟಿ ಬಿಚ್ಚಿಲ್ಲ.
- ಎಲ್ಲರಿಗೂ ಎಲ್ಲ ರೀತಿಯಲ್ಲಿ ಕಿಚ್ಚ ಬುದ್ಧಿ ಮಾತು ಸಿಕ್ಕರೂ, ವಿನಯ್‌ಗೆ ಮಾತ್ರ ಸುದೀಪ್ ಅವರಿಂದ ಯಾವುದೇ ಎಚ್ಚರಿಕೆ ಸಂದಾಯವಾಗಿಲ್ಲ
-ಹೆಣ್ಣು ಮಕ್ಕಳ ಮೇಲೆ ಮೊದಲ ವಾರದಿಂದಲೇ ದರ್ಪ ತೋರುತ್ತಿದ್ದರೂ, ಅವರನ್ನು ಪ್ರಶ್ನಿಸುವವರಿಲ್ಲ
ವಾರದ ಪಂಚಾಯ್ತಿ ಮೇಲೆ ನೋಡುಗನಿಗಿಲ್ಲ ನಂಬಿಕೆ
- ವಾರದ ಕತೆ ಕಿಚ್ಚನ ಜೊತೆ ಮೇಲೆ ಸಂಪೂರ್ಣ ನಂಬಿಕೆ ಕಳೆದು ಹೋಗಿದೆ ಹೆಣ್ಣು ಮಕ್ಕಳಿಗೆ ಗೌರವ ಕೊಡದ ಮತ್ತೆ ಪ್ರತಾಪ್ ಕಾರ್ತಿಕ್ ಬಗ್ಗೆ ಆ ವಿನಯ್ ಮಾತಡಿರುವ ಬಗ್ಗೆ ಈವತ್ತು ಸುದೀಪ್ ಅವರು ದಯವಿಟ್ಟು ಪ್ರಶ್ನೆ ಮಾಡಲೇಬೇಕು ಇಲ್ಲ ಅಂದ್ರೆ ಇದು ಫೇಕ್ ಶೋ ನೀವು ವಿನಯ್ ನ ವಿನ್ ಮಾಡಬೇಕು ಅಂತ ಫೀಕ್ಸಿಂಗ್ ಆಗಿದೆ ಅನ್ನೋದು ಫ್ರೊವ್ ಆಗುತ್ತೆ
- ಕಿಚ್ಚ ಸುದೀಪ್ ಅವರು ಇವತ್ತು ಏನಾದ್ರು ವಿನಯಗೆ ಕ್ಲಾಸ್ ತಗೋಳಿಲ್ಲ ಅಂದ್ರೆ ಬಿಗ್ ಬಾಸ್ ಶೋ ಡಬ್ಬಾ ಶೋ ಆಗೋದು ಅಂತ್ತು ಪಕ್ಕಾ
- ಅವಮಾನವೇ ಮೊದಲು ಸನ್ಮಾನ ಕೊನೆಗೆ ಸಂಗೀತಾ "ಗೆದ್ದೇ ಗೆಲ್ಲುವೇ ಒಂದು ದಿನ, ಗೆಲ್ಲಲೇಬೇಕು ಒಳ್ಳೆತನ" ಈ ವಾರ ಆದರೂ 35 ಕಂಪನಿ ಓನರ್ ಗೆ ಒಂದು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಿ
- ಈ ವಾರ ನಿಮ್ಮ ಪಂಚಾಯ್ತಿಯಲ್ಲಿ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸ್ತೀರ. ಒಂದು ಡಜನ್ ಬಳೆಗೆ 30-35 ರೂಪಾಯಿ ಇದೆ. ಅಷ್ಟು ದುಡ್ಡು ಕೊಟ್ಟು ಅದನ್ನ ಕೈಗೆ ಹಾಕೊಳ್ಳೋ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡೋಕ್ಕೆ ಆಗುತ್ತೆ. ಇದೇ ಬಳೆ ತೊಟ್ಟಿ ಸುಧಾ ಮೂರ್ತಿ ಅವ್ರು ದೇಶಕ್ಕೆ ಎಂತ ಕೊಡುಗೆ ಕೊಟ್ಟಿದ್ದಾರೆ. ಇದೆ ಬಳೆ ಹಾಕಿಕೊಂಡು ಲತಾ ಮಂಗೇಶ್ಕರ್ ಎಂತ ಸಾಧನೆ ಮಾಡಿದ್ದಾರೆ. ನಿರ್ಮಲ ಸೀತಾರಾಮನ್ ದೇಶದ ರಕ್ಷಣಾ ಸಚಿವೆ ಆಗಿದ್ರು. ಕಲರ್ಸ್ ಕನ್ನಡದ ಹಿನ್ನೆಲೆಯಲ್ಲಿ ಕೆಲಸ ಮಾಡೋ ಚಿತ್ರ ಕೂಡ ಬಳೆ ಹಾಕೊಳ್ಳೋವ್ರೆ.
- ಸುದೀಪ್ ಸರ್ ಇವತ್ತು ಸರಿಯಾಗಿ ವಿನಯ್ ಅವರಿಗೆ ಕ್ಲಾಸ್ ತೆಗೆಯದೆ ಇದ್ದರೆ ಈ ಸಲ ಬಿಗ್ ಬಾಸ್ ವಿನಯ್ ಗೆಲ್ಲುತ್ತಾರೆ (ಅವರನ್ನು ಗೆಲ್ಲಿಸುತ್ತಾರೆ ಈ ಚಮಚ ಗಿರಾಕಿಗಳು)
- ಮನೆಯ ಮೂಲ ನಿಯಮ ಉಲ್ಲಂಘನೆ ಆಗಿದೆ ಒಂದು ಸಾರಿ ಅಲ್ಲ ಪದೇ ಪದೇ ಕಳಪೆ ವೋಟಿಂಗ್ ಚರ್ಚೆ ಆಗಿದೆ , ಮತ್ತೆ ನಿನ್ನೆ ನಾಮಿನೇಟ್ ಮಾಡೋಕೆ ಫಿಕ್ಸ್ ಮಾಡಿಕೊಂಡು ಗುಂಪುಗಾರಿಕೆ ಮಾಡೋದು ಯಪ್ಪಾ ಈ ತರ ರೂಲ್ ಬ್ರೇಕ್ ಯಾವ ಸೀಸನ್ ಅಲ್ಲೂ ಆಗಿಲ್ಲ …
- ವಿನಯ್ ನ ಒಂದು ವಾರ ಎರಡು ವಾರ ಬಿಟ್ಟರು ಅಂತ ಈ ವಾರ ಬಿಡೋಕೆ ಸಾಧ್ಯ ಇಲ್ಲ ಕೊಬ್ಬಿದ ಕೋಣಕ್ಕೆ ಈ ವಾರ ತಕ್ಕ ಶಾಸ್ತಿ ಖಂಡಿತ ಇದಕ್ಕೆ ನಿಮ್ಮ ಅಭಿಪ್ರಾಯ
- ಸುದೀಪ್ ಸರ್ ಪ್ರತಾಪ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ವಿನಯ್ ಗೆ ಕ್ಲಾಸ್ ತೆಗೆದು ಕೊಳ್ಳದಿದ್ದರೆ ಜನರಿಗೆ ನಿರಾಸೆ ಆಗುತ್ತದೆ.