ಬಿಗ್ ಬಾಸ್ ಕನ್ನಡ 11: ಎಂಟರ್ಟೇನ್ಮೇಂಟ್, ಡ್ರಾಮಾ, ಕಾಂಟ್ರವರ್ಸಿ
ಕಲರ್ಸ್ ಕನ್ನಡ ಚಾನೆಲ್ನಲ್ಲಿ 'ಬಿಗ್ ಬಾಸ್ ಕನ್ನಡ ಸೀಸನ್ 11' ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಅಂದ್ರೆ ಸಖತ್ ಎಂಟರ್ಟೇನ್ಮೆಂಟ್. ಒಂದಿಷ್ಟು ಡ್ರಾಮಾ, ಹಲವು ಕಾಂಟ್ರವರ್ಸಿ ಮತ್ತು ಅನಿರೀಕ್ಷಿತ ತಿರುವುಗಳಿಗೆ ಬಿಗ್ ಬಾಸ್ ಹೆಸರುವಾಸಿ. ಇದು ಕನ್ನಡದ ಜನಪ್ರಿಯ ರಿಲಾಟಿಟಿ ಶೋ.
ಹೊರಗಿನ ಪ್ರಪಂಚವನ್ನು ಲೆಕ್ಕಿಸದೆ ರಹಸ್ಯ ಮನೆಯಲ್ಲಿ ಉಳಿಯಲು ಸಿದ್ಧವಾಗಿರುವ ಹೊಸ ಸ್ಪರ್ಧಿಗಳೊಂದಿಗೆ ಬಿಗ್ ಬಾಸ್ ಆರಂಭವಾಗಲಿದೆ. ಸ್ಯಾಂಡಲ್ವುಡ್ ತಾರೆ ಕಿಚ್ಚ ಸುದೀಪ್ ನಡೆಸಿಕೊಡುವ ಈ ಶೋ ಹಲವು ಸವಾಲುಗಳು, ಭಾವನಾತ್ಮಕ ರೋಲರ್ ಕೋಸ್ಟರ್ಗಳು ಮತ್ತು ಮನಸ್ಸಿನೊಂದಿಗೆ ಆಡುವ ಗೇಮ್ಪ್ಲೇ ಮೂಲಕ ವೀಕ್ಷಕರನ್ನು ಆಕರ್ಷಿಸುತ್ತದೆ.
ಬಿಗ್ ಬಾಸ್ಗೆ ಸಾಮಾನ್ಯವಾಗಿ ಸಿನಿಮಾ, ಟಿವಿ, ಸೋಷಿಯಲ್ ಮೀಡಿಯಾ ಸೇರಿದಂತೆ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಕರೆತರಲಾಗುತ್ತದೆ. ಸ್ಪರ್ಧಿಗಳಿಗೆ ಹಲವು ರೀತಿಯ ಟಾಸ್ಕ್ಗಳನ್ನು ಕೊಡಲಾಗುತ್ತದೆ. ಈ ಟಾಸ್ಕ್ಗಳು ಸ್ಪರ್ಧಿಗಳ ತಾಳ್ಮೆ, ಟೀಮ್ ವರ್ಕ್, ಹೊಂದಾಣಿಕೆಯನ್ನು ಸವಾಲಿಗೆ ಒಡ್ಡುತ್ತದೆ. ದೊಡ್ಮನೆಯೆಂದೇ ಹೆಸರುವಾಸಿಯಾದ ಬಿಗ್ ಬಾಸ್ ಮನೆಯೊಳಗೆ ಇವರು ಏನೆಲ್ಲಾ ಮಾಡುತ್ತಾರೆ ಎನ್ನುವುದನ್ನು ವಿಶ್ವದ ಹಲವು ದೇಶಗಳ ವೀಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.
ಬಿಗ್ ಬಾಸ್ ಕನ್ನಡ 11 ಹೇಗಿರಲಿದೆ?
ಈ ಬಾರಿಯ ಬಿಗ್ ಬಾಸ್ನ ಪ್ರೋಮೋ ಪ್ರಕಟವಾಗಿದೆ. ಈ ಸೀಸನ್ಗೆ ಕೆಲ ಪರಿಚಿತ ಮುಖಗಳು ಮತ್ತು ಕೆಲ ಹೊಸ ಮುಖಗಳನ್ನು ಆಯ್ಕೆ ಮಾಡಲಾಗಿದೆ. ಅಭಿಮಾನಿಗಳು ಇಷ್ಟಪಡುವ ಜನರು, ಹೊಸ ಸವಾಲುಗಳು ಈ ಬಾರಿ ಇರಲಿದೆ. ಮನಸ್ಸು ಗೆಲ್ಲುವ, ಮಣಿಸುವ ತಂತ್ರಗಳ ಹಲವು ಆಟಗಳಿಂದ ಹಿಡಿದು ಭಾವನಾತ್ಮಕ ಕೆಲಸಗಳವರೆಗೆ ಈ ಬಾರಿಯ ಬಿಗ್ ಬಾಸ್ ಸೀಸನ್ ಎಲ್ಲವನ್ನೂ ಒಳಗೊಂಡಿದೆ.
ಕಿಚ್ಚ ಸುದೀಪ್
ಬಿಗ್ ಬಾಸ್ ಶೋ ನಡೆಸಿಕೊಡುವ ಕಿಚ್ಚ ಸುದೀಪ್ ಕರ್ನಾಟಕದಲ್ಲಿ ದೊಡ್ಡಮಟ್ಟದ ಫ್ಯಾನ್ ಫಾಲೊಯಿಂಗ್ ಇರುವ ನಟ. ಸುದೀಪ್ ಅವರ ಟೈಮಿಂಗ್ ಅಭಿಮಾನಿಗಳಿಗೆ ತುಂಬಾ ಇಷ್ಟ. ಅವರ ನಿರೂಪಣಾ ಶೈಲಿಯು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯು ಸ್ಟಾರ್ ಪವರ್ ಸೇರಿಸುತ್ತದೆ. ಅವರು ಸ್ಪರ್ಧಿಗಳನ್ನು ನಾಟಕೀಯವಾಗಿ ಮಾತನಾಡಿಸುವ ರೀತಿಯು ಕಾರ್ಯಕ್ರಮದ ಡ್ರಾಮಾ ಎಲಿಮೆಂಟ್ ಹೆಚ್ಚಿಸುತ್ತದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳು: ಬಿಗ್ ಬಾಸ್ ಕನ್ನಡ 11 ನೇ ಆವೃತ್ತಿಯ ಸ್ಪರ್ಧಿಗಳು, ಈ ಬಾರಿ ಪಾಲ್ಗೊಳ್ಳಲಿರುವ ಹೊಸ ಮುಖಗಳ ಬಗ್ಗೆ ತಿಳಿಯಿರಿ
ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ಲಭ್ಯ. ದೊಡ್ಮನೆಯಲ್ಲಿ ಸ್ಪರ್ಧೆ ಆರಂಭವಾಗುವ ಮೊದಲೇ ಸ್ಪರ್ಧಿಗಳ ಬಗ್ಗೆ ಹಲವು ಮಾಹಿತಿ ತಿಳಿಯುವ ಕುತೂಹಲ ನಿಮಗೆ ಇರುತ್ತದೆ. ಈ ಸೀಸನ್ನಲ್ಲಿಯೂ ಸೆಲಬ್ರಿಟಿಗಳು, ಹೊಸಮುಖಗಳು, ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿವೆ. ಅವರು ಯಾರು, ಹೇಗೆ ಸ್ಪರ್ಧೆಯಲ್ಲಿ ಪಾಲ್ಗೊಂಡರು, ಕುತೂಹಲಕಾರಿ ತಿರುವುಗಳು ಏನೆಲ್ಲ ಇದ್ದವು ಎನ್ನುವ ವಿವರ ಇಲ್ಲಿ ಲಭ್ಯ.