ಬಿಗ್‌ ಬಾಸ್ ಕನ್ನಡ ವಿಜೇತರ ಪಟ್ಟಿ: ಬಿಗ್‌ ಬಾಸ್ 1 ರಿಂದ 10 ರವರೆಗಿನ ಎಲ್ಲ ಆವೃತ್ತಿಗಳ ವಿಜೇತರ ಸಮಗ್ರ ಪಟ್ಟಿ, ಹಿಂದಿನ ಸಂಚಿಕೆಗಳ ವಿವರ ಇಲ್ಲಿ ಲಭ್ಯ.
Hindustan kannada News

ಬಿಗ್‌ ಬಾಸ್ ಕನ್ನಡ 11 ಸೀಸನ್ ವಿಜೇತರ ಪಟ್ಟಿ

ಬಿಗ್ ಬಾಸ್ ಕನ್ನಡ ಸೀಸನ್ 11

ಬಿಗ್ ಬಾಸ್ ಕನ್ನಡ 2013 ರಲ್ಲಿ ಆರಂಭವಾಯಿತು. ಕನ್ನಡದ ಜನಪ್ರಿಯ ಚಿತ್ರನಟ ಸುದೀಪ್ ಆರಂಭದಿಂದಲೂ ಕನ್ನಡದ ಹೋಸ್ಟ್‌ ಆಗಿ ಕಾರ್ಯನಿರ್ವಹಿಸಿದರು.

ಬಿಗ್‌ಬಾಸ್‌ನ ಮೊದಲ ಆವೃತ್ತಿಯಲ್ಲಿ ಅಂದರೆ 2013 ರಲ್ಲಿ ವಿಜಯ ರಾಘವೇಂದ್ರ, 2ನೇ ಆವೃತ್ತಿಯಲ್ಲಿ ಅಕುಲ್ ಬಾಲಾಜಿ, 3ನೇ ಆವೃತ್ತಿಯಲ್ಲಿ ಶ್ರುತಿ, 3ನೇ ಆವೃತ್ತಿಯಲ್ಲಿ ಪ್ರಥಮ್, 5ನೇ ಆವೃತ್ತಿಯಲ್ಲಿ ಚಂದನ್ ಶೆಟ್ಟಿ, 6ನೇ ಆವೃತ್ತಿಯಲ್ಲಿ ಶಶಿ ಕುಮಾರ್, 7ನೇ ಆವೃತ್ತಿಯಲ್ಲಿ ಶೈನ್ ಶೆಟ್ಟಿ, 8ನೇ ಆವೃತ್ತಿಯಲ್ಲಿ ಮಂಜು ಪಾವಗಡ, 9ನೇ ಆವೃತ್ತಿಯಲ್ಲಿ ರೂಪೇಶ್ ಶೆಟ್ಟಿ, 10ನೇ ಆವೃತ್ತಿಯಲ್ಲಿ ಕಾರ್ತಿಕ್ ಮಹೇಶ್ ವಿಜೇತರಾಗಿದ್ದರು.

ಬಿಗ್‌ ಬಾಸ್‌ನಲ್ಲಿ ಪಾಲ್ಗೊಂಡು ವಿಜೇತರಾದ ಹಲವರು ನಂತರದ ದಿನದಳಲ್ಲಿ ದೊಡ್ಡ ಸೆಲಬ್ರಿಟಿಗಳಾದರು. ಹತ್ತಾರು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಬಿಗ್‌ ಬಾಸ್‌ನ ಪ್ರತಿ ಸೀಸನ್‌ನಲ್ಲೂ ಒಂದಲ್ಲ ಒಂದು ವಿವಾದ, ಡ್ರಾಮಾ, ಪ್ರಣಯದ ವಿಚಾರಗಳು ಪ್ರಸ್ತಾಪವಾಗುತ್ತಲೇ ಇರುತ್ತವೆ. ಬಿಗ್‌ ಬಾಸ್ ಇಂದಿಗೂ ಜನರ ಗಮನ ಸೆಳೆಯುವ ಮಹತ್ವದ ರಿಯಾಲಿಟಿ ಶೋ ಆಗಿಯೇ ಉಳಿದಿದೆ.

ಬಿಗ್‌ ಬಾಸ್ ಕನ್ನಡ ವಿಜೇತರ ಪಟ್ಟಿ: ಬಿಗ್‌ ಬಾಸ್ 1 ರಿಂದ 10 ರವರೆಗಿನ ಎಲ್ಲ ಆವೃತ್ತಿಗಳ ವಿಜೇತರ ಸಮಗ್ರ ಪಟ್ಟಿ, ಹಿಂದಿನ ಸಂಚಿಕೆಗಳ ವಿವರ ಇಲ್ಲಿ ಲಭ್ಯ.

ಬಿಗ್‌ ಬಾಸ್‌ ಕನ್ನಡ ವಿಜೇತರ ಸಂಪೂರ್ಣ ಪಟ್ಟಿ, ಅವರ ವೈಯಕ್ತಿಕ ಬದುಕು, ಯಾರು ಯಾವಾಗ ಗೆದ್ದಿದ್ದರು ಎನ್ನುವ ವಿವರ ಇಲ್ಲಿ ಸಿಗುತ್ತದೆ.

ಹಿಂದಿನ ಬಿಗ್‌ ಬಾಸ್ ವಿಜೇತರು

  • ಹೆಸರು
  • ವೃತ್ತಿ / ವಿವರ
  • ಸೀಸನ್ ಮತ್ತು ವರ್ಷ
  • ಹೋಸ್ಟ್
  • ಕಾರ್ತಿಕ್‌ ಮಹೇಶ್‌

    ಕಾರ್ತಿಕ್‌ ಮಹೇಶ್‌
  • ಮೈಸೂರಿನ ಕಾರ್ತಿಕ್‌ ಮಹೇಶ್‌ ಬಿಬಿಕೆ 10ರಲ್ಲಿ ಗೆಲುವು ಪಡೆದಿದ್ದರು. ಖುಷಿ, ಅಕ್ಕ, ದೇವಯಾನಿ, ಮಹಾಕಾಳಿ, ರಾಜಿ, ಪುಟ್ಟಕ್ಕನ ಮಕ್ಕಳು ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಡೊಳ್ಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಿಗ್‌ಬಾಸ್‌ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

  • Season 10, 2023
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
  • ರೂಪೇಶ್‌ ಶೆಟ್ಟಿ

    ರೂಪೇಶ್‌ ಶೆಟ್ಟಿ
  • ರೂಪೇಶ್‌ ಶೆಟ್ಟಿ ಗೆಲುವು ಪಡೆದಿದ್ದರು. ಈ ಸೀಸನ್‌ನಲ್ಲಿ ಒಟಿಟಿ ಮೂಲಕವೂ ಕನ್ನಡ ಬಿಗ್‌ಬಾಸ್‌ ಫೇಮಸ್‌ ಆಗಿತ್ತು. ರಾಕೇಶ್‌ ಅಡಿಗ ಅವರು ರನ್ನರ್‌ ಅಪ್‌ ಆಗಿದ್ದರು. ರೂಪೇಶ್‌ ಶೆಟ್ಟಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸರ್ಕಸ್‌, ಮಂಕು ಭಾಯ್‌ ಫಾಕ್ಸಿ ರಾಣಿ, ವಿಐಪಿ ಲಾಸ್ಟ್‌ ಬೆಂಚ್‌, ಗೋವಿಂದ ಗೋವಿಂದ, ಗಮ್ಜಾಲ್‌, ಗಿರ್ಗಿಟ್‌, ಅಮ್ಮೆರ್‌ ಪೊಲೀಸಾ? ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • Season 9, 2022
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
  • ಮಂಜು ಪಾವಗಡ

    ಮಂಜು ಪಾವಗಡ
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 8 ರಲ್ಲಿ ಮಂಜು ಪಾವಗಡ ಅವರಿಗೆ ಗೆಲುವಿನ ಕಿರೀಟ ದೊರಕಿತ್ತು. ಅರವಿಂದ್‌ ಕೆಪಿ ಅವರು ರನ್ನರ್‌ ಅಪ್‌ ಆಗಿದ್ದರು. ಮಂಜು ಪಾವಗಡ ಹಾಸ್ಯನಟರಾಗಿ ಜನಪ್ರಿಯತೆ ಗಳಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ಪಡೆದಿದ್ದಾರೆ.

  • Season 8, 2021
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
  • ಶೈನ್‌ ಶೆಟ್ಟಿ

    ಶೈನ್‌ ಶೆಟ್ಟಿ
  • ಬಿಗ್‌ಬಾಸ್‌ 7ರಲ್ಲಿ 50 ಲಕ್ಷ ಬಹುಮಾನ ಮೊತ್ತ ಪಡೆದು ಗೆಲುವು ಪಡೆದವರು ಶೈನ್‌ ಶೆಟ್ಟಿ. ಈ ಸೀಸನ್‌ನಲ್ಲಿ ಕುರಿ ಪ್ರತಾಪ್‌ ಅವರು ರನ್ನರ್‌ ಆಪ್‌ ಆಗಿ ಹೊರಹೊಮ್ಮಿದ್ದರು. ಶೈನ್‌ ಶೆಟ್ಟಿ ಬ್ಯಾಚುಲರ್‌ ಪಾರ್ಟಿ, ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ, ಮಾಫಿಯಾ, ಕಾಂತಾರ, ಜೇಮ್ಸ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • Season 7, 2019
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
  • ಶಶಿ ಕುಮಾರ್‌

    ಶಶಿ ಕುಮಾರ್‌
  • ಬಿಗ್‌ಬಾಸ್‌ ಸೀಸನ್‌ 6ನಲ್ಲಿ ಶಶಿ ಕುಮಾರ್‌ ವಿನ್‌ ಆಗಿದ್ದಾರೆ. ನವೀನ್‌ ಸಜ್ಜು ರನ್ನರ್‌ ಅಪ್‌ ಆಗಿದ್ದರು. ಈ ಸೀಸನ್‌ನಲ್ಲಿ ಶಶಿ ಕುಮಾರ್‌ ಯುವ ಕೃಷಿಕನಾಗಿ ಗಮನ ಸೆಳೆದಿದ್ದರು. ಇವರು ಬಿಗ್‌ಬಾಸ್‌ ಬಳಿಕ ಮೆಹಬೂಬಾ ಎಂಬ ಸಿನಿಮಾವನ್ನೂ ಮಾಡಿದ್ದಾರೆ.

  • Season 6, 2018
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
  • ಚಂದನ್‌ ಶೆಟ್ಟಿ

    ಚಂದನ್‌ ಶೆಟ್ಟಿ
  • ಚಂದನ್‌ ಶೆಟ್ಟಿ ಗೆಲುವು ಪಡೆದರು. ರಾಪರ್‌ ಚಂದನ್‌ ಶೆಟ್ಟಿ ತನ್ನ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ದಿವಾಕರ್‌ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು. ಚಂದನ್‌ ಶೆಟ್ಟಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್‌ಬಾಸ್‌ ಗೊಂಬೆ ನಿವೇದಿತಾ ಗೌಡರನ್ನು ವಿವಾಹವಾಗಿದ್ದರು. ಇತ್ತೀಚೆಗೆ ಇವರಿಬ್ಬರು ಡಿವೋರ್ಸ್‌ ಪಡೆದಿದ್ದಾರೆ. ಚಂದನ್‌ ಶೆಟ್ಟಿ ರಾಪ್‌ ಹಾಡುಗಳಿಗೆ ಈಗ ಕನ್ನಡ ಚಿತ್ರರಂಗದಲ್ಲಿ ಉತ್ತಮ ಬೇಡಿಕೆಯಿದೆ.

  • Season 5, 2017
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
  • ಪ್ರಥಮ್‌

    ಪ್ರಥಮ್‌
  • ಬಿಗ್‌ಬಾಸ್‌ 4 ಕನ್ನಡ ಸೀಸನ್‌ನಲ್ಲಿ ಒಳ್ಳೆ ಹುಡುಗ ಪ್ರಥಮ್‌ ಗೆಲುವು ಪಡೆದರು. ಬಿಗ್‌ಬಾಸ್‌ ಕನ್ನಡ ನೋಡಿರುವವರು ಈ ಸೀಸನ್‌ ಮರೆಯಲು ಸಾಧ್ಯವೇ ಇಲ್ಲ. ತನ್ನ ಭಿನ್ನ ಆಟದ ಮೂಲಕ ನೋಡುಗರಿಗೆ ಒಳ್ಳೆಯ ಮನರಂಜನೆ ನೀಡಿದ್ದರು. ಪ್ರಥಮ್‌ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಈ ಆಟದಲ್ಲಿ ಕಿರಿಕ್‌ ಕೀರ್ತಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು.

  • Season 4, 2016
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
  • ಶ್ರುತಿ

    ಶ್ರುತಿ
  • ಕನ್ನಡ ಬಿಗ್‌ಬಾಸ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗೆಲುವು ಪಡೆದ ಮಹಿಳಾ ಸ್ಪರ್ಧಿ ಎಂಬ ಖ್ಯಾತಿಗೆ ಶ್ರುತಿ ಪಾತ್ರರಾದರು. ಚಂದನ್‌ ಕುಮಾರ್‌ ರನ್ನರ್‌ ಅಪ್‌ ಆಗಿದ್ರು. ಶ್ರುತಿ ಕನ್ನಡದ ಹಿರಿಯ ನಟಿ. ಇತ್ತೀಚಿನ ಕೃಷ್ಣಂ ಪ್ರಣಯ ಸಖಿಯಿಂದ ಕಾಟೇರ, ತತ್ಸಮ ತದ್ಭವ, ಭಜರಂಗಿ, ರತ್ನನ್‌ ಪ್ರಪಂಚ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • Season 3, 2015
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
  • ಅಕುಲ್ ಬಾಲಾಜಿ

    ಅಕುಲ್ ಬಾಲಾಜಿ
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 2ನಲ್ಲಿ ಅಕುಲ್‌ ಬಾಲಾಜಿ ವಿನ್ನರ್‌, ಸೃಜನ್‌ ಲೋಕೇಶ್‌ ರನ್ನರ್‌ ಅಪ್‌ ಆಗಿದ್ದರು. ಅಕುಲ್‌ ಬಾಲಾಜಿ ಕನ್ನಡ ಕಿರುತೆರೆಯಲ್ಲಿ ನಿರೂಪಕರಾಗಿ ಜನಪ್ರಿಯತೆ ಪಡೆದಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  • Season 2, 2014
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
  • ವಿಜಯ ರಾಘವೇಂದ್ರ

    ವಿಜಯ ರಾಘವೇಂದ್ರ
  • ಕನ್ನಡ ಬಿಗ್‌ಬಾಸ್‌ನಲ್ಲಿ ಮೊದಲ ಬಾರಿಗೆ 50 ಲಕ್ಷ ರೂಪಾಯಿ ಗೆದ್ದ ಖ್ಯಾತಿ ವಿಜಯ ರಾಘವೇಂದ್ರ ಅವರು. ಇವರಿಗೆ ಪ್ರಬಲ ಪೈಪೋಟಿ ನೀಡಿ ರನ್ನರ್‌ ಅಪ್‌ ಆಗಿ ಅರುಣ್‌ ಸಾಗರ್‌ ಹೊರಹೊಮ್ಮಿದ್ದರು. ವಿಜಯ ರಾಘವೇಂದ್ರ ಕನ್ನಡದ ಜನಪ್ರಿಯ ನಟ. ಇತ್ತೀಚೆಗೆ ಇವರು ನಟಿಸಿರುವ ಕೇಸ್‌ ಆಫ್‌ ಕೊಂಡಾಣ, ಜೀನಿಯಸ್‌ ಮುತ್ತಾ, ಗ್ರೇಗೇಮ್ಸ್‌ ಮುಂತಾದ ಸಿನಿಮಾಗಳು ರಿಲೀಸ್‌ ಆಗಿವೆ.

  • Season 1, 2013
  • ಕಿಚ್ಚ ಸುದೀಪ್‌
  • ಮತ್ತಷ್ಟು ಓದಿ
ಎಲ್ಲವನ್ನೂ ನೋಡಿ

ಬಿಗ್ ಬಾಸ್‌ ಬಗ್ಗೆ ಮತ್ತಷ್ಟು