Bigg Boss Season 11: ಸ್ವರ್ಗವಾಸಿಗಳಿಗೆ ನರಕ ತೋರಿಸಿದ ಬಿಗ್‌ಬಾಸ್; ಮಾಡಿದ ಅಡುಗೆಗೂ ಬಿತ್ತು ಕನ್ನ
Bigg Boss: ಬಿಗ್‌ಬಾಸ್ ಮನೆಯಲ್ಲಿ ಒಂದಲ್ಲ ಒಂದು ಕುತೂಹಲಕಾರಿ ಸಂಗತಿಗಳು ನಡೆಯುತ್ತಲೇ ಇರುತ್ತದೆ. ಅದರಂತೆ ಈ ಬಾರಿ ಬಿಗ್‌ಬಾಸ್ ಸ್ವರ್ಗ ನಿವಾಸಿಗಳಿಗೂ ನರಕ ತೋರಿಸಿದ್ದಾರೆ. ಇನ್ನು ನರಕದಲ್ಲಿರುವ ಕೆಲವರಿಗೆ ಇದು ಖುಷಿ ತಂದಂತಿದೆ. ಈ ರೀತಿ ಆಗಿದ್ಯಾಕೆ ನೋಡಿ.
ಬಿಗ್‌ಬಾಸ್ ಸೀಸನ್ 11ರ ಆಟ ಆರಂಭವಾದಾಗಿನಿಂದಲೂ ಸ್ವರ್ಗ ಹಾಗೂ ನರಕ ಎಂದು 2 ಭಾಗ ಮಾಡಿ ಆಟ ಆಡಿಸಲಾಗುತ್ತಿದೆ. ಆ ಪ್ರಕಾರ ಸ್ವರ್ಗದ ಜನರಿಗೆ ಎಲ್ಲ ಸೌಕರ್ಯಗಳೂ ಸಿಗುತ್ತಿತ್ತು. ಆದರೆ ಈಗ ಸ್ವರ್ಗದಲ್ಲಿ ಇರುವವರೂ ಪರದಾಡುವಂತೆ ಆಗಿದೆ. ಕಷ್ಟಪಟ್ಟು ಮಾಡಿದ ಅಡುಗೆಯೂ ಈಗ ಅವರಿಗೆ ಸಿಗದಂತಾಗಿದೆ. ಮೊದಲು ಎಲ್ಲರೂ ಸಂತೋಷದಲ್ಲೇ ಇರುತ್ತಾರೆ. ನಂತರ ಬಿಗ್‌ಬಾಸ್ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ನರಕದವರಿಗೆ ನಗು
ಅಡುಗೆ ಮಾಡಿ, ಊಟ ರೆಡಿ ಮಾಡಿ ಎಲ್ಲರೂ ಬಂದು ಕುಳಿತಿರುತ್ತಾರೆ. ಆಗ ಬಿಗ್ ಬಾಸ್ ಎಲ್ಲರನ್ನೂ ಉದ್ದೇಶಿಸಿ ಮೊದಲು ಸ್ವರ್ಗವಾಸಿಗಳೇ ಎಂದು ಸಂಬೋಧಿಸಿ “ಅಡುಗೆ ಮನೆಯ ಗ್ಯಾಸ್ ಕಡಿತ ಮಾಡಲಾಗಿದೆ. ಎಲ್ಲಾ ಸಾಮಗ್ರಿಗಳನ್ನು ಒಳಗಡೆ ತಂದಿಡಬೇಕು” ಎಂದು ಹೇಳುತ್ತಾರೆ. ಆಗ ಎಲ್ಲರ ಮುಖದಲ್ಲಿ ಗಾಬರಿ ಎದ್ದುಕಾಣುತ್ತದೆ. ಆದರೆ ನರಕವಾಸಿಗಳ ಮುಖದಲ್ಲಿ ಮಾತ್ರ ನಗು ಇರುತ್ತದೆ. ಕೆಲವರು ಹೀಗೆ ಆಗಬೇಕಿತ್ತು ಎಂದು ಮನಸ್ಸಿನಲ್ಲಿ ಆಲೋಚಿಸಿದರೆ, ಇನ್ನು ಕೆಲವರು ಹೊರಗಿನಿಂದ ಅದನ್ನು ತೋರ್ಪಡಿಸಿಕೊಳ್ಳುತ್ತಾರೆ.
ಇನ್ನು ಮಾಡಿದ ಅಡುಗೆಯನ್ನು ಸಹ ತಂದಿಡಬೇಕಾ? ಎಂದು ಕೆಲವರು ಗಾಬರಿಯಾಗುತ್ತಾರೆ. “ಏನೂ ತಿನ್ನುವ ಹಾಗಿಲ್ಲ, ಎಲ್ಲವನ್ನು ಒಳಗಡೆ ತೆಗೆದುಕೊಂಡು ಬನ್ನಿ” ಎಂದು ಧನರಾಜ್ ಹೇಳುತ್ತಾರೆ. ಆಗ ಪ್ರತಿಯೊಬ್ಬರೂ ಒಂದೊಂದು ಸಾಮಾಗ್ರಿಗಳನ್ನು ಎತ್ತಿಕೊಂಡು ಹೋಗಿ ಸ್ಟೋರ್‌ರೂಮ್ ಒಳಗಡೆ ಇಡುತ್ತಾರೆ. ಇಡುವಾಗ ಎಲ್ಲರೂ ತುಂಬಾ ಬೇಸರದಿಂದ “ಯಾಕೆ ಬಿಗ್ ಬಾಸ್ ಈ ರೀತಿ ಮಾಡಿದ್ರಿ? ನಾವು ಏನು ತಪ್ಪು ಮಾಡಿದ್ದೇವೆ ಅಂತನಾದ್ರೂ ಹೇಳಿ, ತಿದ್ದಿಕೊಳ್ಳೋಣ” ಎಂದು ಹೇಳುತ್ತಾ ಬೇಸರ ಮಾಡಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಕೆಲವು ಸ್ಪರ್ಧಿಗಳು ಹತ್ತಿರವಾಗುತ್ತಿದ್ದರೆ, ಇನ್ನೂ ಕೆಲವರು ಹಾವು ಮುಂಗುಸಿಯಂತೆ ಕಿತ್ತಾಡಲು ಶುರು ಮಾಡಿದ್ದಾರೆ. ಇನ್ನು ಮಾನಸ ಅವರು ನಾವಷ್ಟೇ ಕಷ್ಟಪಡಬೇಕಾ? ನಿಮಗೂ ಕಷ್ಟ ಆಗಲಿ ಎಂದು ಚಿಕ್ಕದಾಗಿ ಹೇಳಿದ್ದಾರೆ.
ಸ್ವರ್ಗದಲ್ಲಿರುವವರು ಕಿತ್ತಾಡುತ್ತಾ ಇದ್ದರೆ, ನರಕದಲ್ಲಿರುವವರು ನಲಿದಾಡುತ್ತಿದ್ದಾರೆ. ಈ ಬಗ್ಗೆ ಹಲವಾರು ಜನ ಕಾಮೆಂಟ್ ಮಾಡಿದ್ದಾರೆ. “ಇದೇನು ಆಟ ಬಿಗ್‌ಬಾಸ್” ಎಲ್ಲಾ ಉಲ್ಟಾ ಪಲ್ಟಾ ಎಂದಿದ್ದಾರೆ.
ವಿಭಾಗ