Namratha Gowda: ಬಿಗ್‌ಬಾಸ್‌ ನಮ್ರತಾ ಗೌಡ ಬದುಕಿನ 'ಟಾಕ್ಸಿಕ್' ಲವ್‌ ರಿಲೇಷನ್‌ಶಿಪ್‌ ಬಹಿರಂಗ; ಸಾಕಷ್ಟು ಸಫರ್‌ ಆದೆ ಎಂದ ನಟಿ
ಕನ್ನಡ ಸುದ್ದಿ  /  ಮನರಂಜನೆ  /  Namratha Gowda: ಬಿಗ್‌ಬಾಸ್‌ ನಮ್ರತಾ ಗೌಡ ಬದುಕಿನ 'ಟಾಕ್ಸಿಕ್' ಲವ್‌ ರಿಲೇಷನ್‌ಶಿಪ್‌ ಬಹಿರಂಗ; ಸಾಕಷ್ಟು ಸಫರ್‌ ಆದೆ ಎಂದ ನಟಿ

Namratha Gowda: ಬಿಗ್‌ಬಾಸ್‌ ನಮ್ರತಾ ಗೌಡ ಬದುಕಿನ 'ಟಾಕ್ಸಿಕ್' ಲವ್‌ ರಿಲೇಷನ್‌ಶಿಪ್‌ ಬಹಿರಂಗ; ಸಾಕಷ್ಟು ಸಫರ್‌ ಆದೆ ಎಂದ ನಟಿ

Namratha Gowda Love story: ಬಿಗ್‌ಬಾಸ್‌ ಕನ್ನಡ ಮಾಜಿ ಸ್ಪರ್ಧಿ, ಕನ್ನಡ ಸೀರಿಯಲ್‌ ನಟಿ ನಮ್ರತಾ ಗೌಡ ಅವರು ತನ್ನ ಬದುಕಿನಲ್ಲಿ ಕಾಲೇಜು ದಿನಗಳಲ್ಲಿ ನಡೆದ ಲವ್‌ ಟಾಕ್ಸಿಕ್‌ ರಿಲೇಷನ್‌ಶಿಪ್‌ ಕಥೆಯೊಂದನ್ನು ಯೂಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಕಥೆಯನ್ನು ಇವರು ಹೇಳಿದ್ದಾರೆ.

Namratha Gowda: ಬಿಗ್‌ಬಾಸ್‌ ನಮ್ರತಾ ಗೌಡ ಬದುಕಿನ 'ಟಾಕ್ಸಿಕ್' ಲವ್‌ ರಿಲೇಷನ್‌ಶಿಪ್‌ ಬಹಿರಂಗ
Namratha Gowda: ಬಿಗ್‌ಬಾಸ್‌ ನಮ್ರತಾ ಗೌಡ ಬದುಕಿನ 'ಟಾಕ್ಸಿಕ್' ಲವ್‌ ರಿಲೇಷನ್‌ಶಿಪ್‌ ಬಹಿರಂಗ

Namratha Gowda Love story: ಜನಪ್ರಿಯ ಕನ್ನಡ ಯೂಟ್ಯೂಬ್‌ ಚಾನೆಲ್‌ "ರಾಜೇಶ್‌ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಾರಿಗೂ ಹೇಳದ ತನ್ನ ಬದುಕಿನ ಪ್ರೇಮಕಥೆಯನ್ನು ನಟಿ ನಮ್ರತಾ ಗೌಡ ಹೇಳಿದ್ದಾರೆ. ಬಿಗ್‌ಬಾಸ್‌ ಕನ್ನಡ ಮಾಜಿ ಸ್ಪರ್ಧಿ, ಕನ್ನಡ ಸೀರಿಯಲ್‌ ನಟಿ ನಮ್ರತಾ ಗೌಡ ಅವರು ಪಿಯುಸಿಯಲ್ಲಿ ಓದುತ್ತಿರುವಾಗ ನಡೆದ ಕಥೆಯನ್ನು ಅವರು ಹೇಳಿದ್ದಾರೆ. "ನಾನು ಆಗ ಆರ್ಕಿಟೆಕ್ಚರ್‌ ಐದು ವರ್ಷದ ಕೋರ್ಸ್‌ ಮಾಡ್ತಾ ಇದ್ದೆ. ಇದು ಸುಲಭದ ವಿಷಯವಲ್ಲ. ಐದು ವರ್ಷಗಳ ಕಾಲ ಕಷ್ಟಪಟ್ಟೆ. ಅದೇ ಸಮಯದಲ್ಲಿ ಶೂಟಿಂಗ್‌ನಲ್ಲಿಯೂ ಭಾಗವಹಿಸುತ್ತಿದ್ದೆ. ಆಗ ನಾನು ಪುಟ್ಟ ಗೌರಿ ಮದುವೆ, ಚೆಲುವಿ ಮಾಡುತ್ತಿದ್ದೆ. ಆಕಾಶ ದೀಪಂ ಮುಗಿಯುವ ಹಂತದಲ್ಲಿದೆ. ಪುಟ್ಟ ಗೌರಿ ಮದುವೆ ನನ್ನ ಕರಿಯರ್‌ನಲ್ಲಿ ದೊಡ್ಡ ಬ್ರೇಕ್‌. ಬಸ್‌ನಲ್ಲಿ ಎಲ್ಲಾ ಹೋಗುವಾಗ ಮುಖ ಸುತ್ತಿಕೊಂಡು ಹೋಗುತ್ತಿದ್ದೆ. ಎಲ್ಲರೂ ಗುರುತು ಹಿಡಿದು ಹಿಮಾ ಹಿಮಾ ಎನ್ನುತ್ತಿದ್ದರು. ಇದು ನಮಗೆಲ್ಲಾ ತುಂಬಾ ಹೆಸರು ತಂದುಕೊಟ್ಟ ಧಾರಾವಾಹಿ" ಎಂದು ನಮ್ರತಾ ಗೌಡ ಮಾಹಿತಿ ನೀಡಿದ್ದಾರೆ.

ನಟಿ ನಮ್ರತಾ ಗೌಡ ದುರಂತ ಪ್ರೇಮಕಥೆ

"ಕಾಲೇಜು ಲೈಫ್‌ನಲ್ಲಿ ಲವ್‌ ಏನಾದರೂ ಇತ್ತ ಎಂಬ ಪ್ರಶ್ನೆಗೂ ನಮ್ರತಾ ಉತ್ತರಿಸಿದ್ದಾರೆ. "ಇದು ನನ್ನ ಅತ್ಯಂತ ಖಾಸಗಿ ಪ್ರಶ್ನೆ. ಲವ್‌ ಬಗ್ಗೆ ಎಲ್ಲಾ ಮಾತನಾಡೋದು ನನಗೆ ಅನ್‌ಕಂಫರ್ಟೆಬಲ್‌ ಆಗುತ್ತದೆ. ನಾನು ಏನೂ ಮಾಡಿದರೂ ಅಪ್ಪನಿಗೆ ಅಮ್ಮನಿಗೆ ಗೊತ್ತೇ ಇರುತ್ತದೆ. ನಾನು ಓಪನ್‌ ಆಗಿ ಎಲ್ಲಾ ಹೇಳ್ತಿನಿ. ನನ್ನ ಜೀವನದಲ್ಲಿಯೂ ಒಂದು ಲವ್‌ ಆಗಿತ್ತು. ಅದೇ ಫಸ್ಟ್‌ ಮತ್ತು ಅದೇ ಲಾಸ್ಟ್‌. ಆಗ ಟೆನ್ತ್‌ ಮುಗಿದಿತ್ತು. ಪಿಯು ಕಾಲೇಜಿಗೆ ಪ್ರವೇಶಿಸಿದ ಸಮಯವದು. ನಾನು ಹುಡುಗರ ತರಹನೇ ಬೆಳೆದವಳು. ಹುಡುಗರೇ ಫ್ರೆಂಡ್ಸ್‌ ಇರ್ತಾ ಇದ್ರು. ಅಲ್ಲಿಯವರೆಗೂ ಯಾರ ಮೇಲೆ ಕೂಡ ಆ ಫೀಲಿಂಗ್‌ ಬಂದಿರಲಿಲ್ಲ" ಎಂದು ಅವರು ಹೇಳಿದ್ದಾರೆ.

"ಕಾಲೇಜಿಗೆ ಹೋಗಬೇಕಾದರೆ ಲವ್‌ ಮಾಡಬೇಕಾಗಿ ಬಂತು. ನಾನು ಮುಂದೆ ಹೋಗಿ ಮಾಡಿದ ಲವ್‌ ಅಲ್ಲ ಅದು. ತುಂಬಾ ಕಾಡಿಸಿ ಬೇಡಿ ಪಡೆದ ಲವ್‌ ಅದು. ನಾನು ಯಾರನ್ನೂ ಕೂಡ ಅಪ್ರೋಚ್‌ ಮಾಡಲು ಹೋಗಿಲ್ಲ. ಅವನೇ ಕಾಡಿಸ್ತಾ ಇದ್ದ. ನನಗೆ ಇಷ್ಟ ಆಗ್ತಾ ಇರಲಿಲ್ಲ. ಇವನು ಯಾರು ನನ್ನ ಹಿಂದೆ ಬಿದ್ದಿದ್ದಾನೆ ಅಂತ ಹೇಟ್‌ ಮಾಡ್ತಾ ಇದ್ದೆ. ಸುಮಾರು ಮೂರು ತಿಂಗಳ ಕಳೆದ ಬಳಿಕ ನನಗೂ ಫೀಲಿಂಗ್‌ ಬಂತು. ನಾನು ಕೂಡ ಯಸ್‌ ಎಂದೆ. ಈ ಲವ್‌ ಸ್ಟೋರಿ ಆಗ ಕಾಲೇಜಿನಲ್ಲಿ ತುಂಬಾ ಫೇಮಸ್‌ ಆಗಿತ್ತು" ಎಂದು ನಮ್ರತಾ ಹೇಳಿದ್ದಾರೆ.

"ಈ ವಿಷಯವನ್ನು ಹೆತ್ತವರಲ್ಲಿಯೂ ಹೇಳಿದ್ದೆ. ಕಾಲೇಜಿಗೆ ಹೋಗುವಾಗ ಒಬ್ಬ ಕಾಡಿಸ್ತಾನೆ. ಮೆಸಜ್‌ ಮಾಡ್ತಾನೆ ಎಂದು ಹೇಳಿದ್ದೆ. ಅದು ನನ್ನ ಜೀವನದಲ್ಲಿ ಫಸ್ಟ್‌ ಮತ್ತು ಲಾಸ್ಟ್‌ ರಿಲೇಷನ್‌ಶಿಪ್‌. ಆಗ ನನಗೆ ಕಮಿಟ್‌ಮೆಂಟ್‌, ರಿಲೇಷನ್‌ಶಿಪ್‌ ಅಂದರೆ ಏನು ಅಂತ ಗೊತ್ತಿರಲಿಲ್ಲ . ಆ ವ್ಯಕ್ತಿಗೂ ಗೊತ್ತಿತ್ತೋ ಗೊತ್ತಿಲ್ಲ. ಯಾಕೆಂದರೆ ನಾವು ಆಗ ತುಂಬಾ ಯಂಗ್‌ ಇದ್ದೆವು, 15-16 ವರ್ಷ ಪ್ರಾಯ. ಪಿಯುಸಿ ಮುಗಿದ ಬಳಿಕ ನಾನು ನಟನೆಯತ್ತ ಗಮನ ನೀಡಿದೆ. ಆ ಮನುಷ್ಯನಿಗೆ ಗಮನ ಕೊಡಲು ಆಗುತ್ತಿರಲಿಲ್ಲ. ಅವನೂ ಡೈವರ್ಟ್‌ ಆಗ್ತಾ ಇದ್ದ. ನನಗೂ ಕಿರಿಕಿರಿ ಆಗ್ತಾ ಇತ್ತು. ಅದು ತುಂಬಾ ಟಾಕ್ಸಿಕ್‌ ರಿಲೇಷನ್‌ಶಿಪ್‌. ನನಗೆ ಆ ಏಜ್‌ನಲ್ಲಿ ಹೇಗೆ ಹ್ಯಾಂಡಲ್‌ ಮಾಡಬೇಕು, ಅವನಿಗೂ ಹೇಗೆ ಹ್ಯಾಂಡಲ್‌ ಮಾಡಬೇಕು ಎಂದು ಗೊತ್ತಾಗ್ತ ಇರಲಿಲ್ಲ. ನನಗೆ ಭಾವನಾತ್ಮಕವಾಗಿ ನೋವು ತುಂಬಾ ಆಗ್ತಾ ಇತ್ತು. ಮೆಂಟಲಿ ಡ್ರೈನ್‌ ಆಗ್ತಾ ಇದ್ದೆ. ತುಂಬಾ ಅಳ್ತಾ ಇದ್ದೆ. ಅವನೂ ತುಂಬಾ ಸಫರ್‌ ಆಗ್ತಾ ಇದ್ದ. ನಾನೂ ಸಫರ್‌ ಆಗ್ತಿದ್ದೆ. ಕೊನೆಗೆ ಆ ಲವ್‌ನಿಂದ ಹೊರಬಂದೆ" ಎಂದು ತನ್ನ ಕಥೆಯನ್ನು ನಮ್ರತಾ ಗೌಡ ಹೇಳಿದ್ದಾರೆ.

"ಆತ ನಂತರ ಸಿಗಲಿಲ್ಲ. ಆರಂಭದಲ್ಲಿ ನಾನು ಹುಚ್ಚಿಯಂತೆ ಪ್ರೀತಿಸ್ತಾ ಇದ್ದೆ. ಬೇಡ ಅನಿಸ್ತು. ಅಲ್ಲಿಗೆ ಆ ಪ್ರೀತಿ ಮುಗಿಯಿತು. ನಾನು ಇದೇ ಫಸ್ಟ್‌ ಟೈಮ್‌ ಈ ಕಥೆ ಹೇಳ್ತಾ ಇರೋದು. ನನ್ನ ಅಮ್ಮ ನೋಡಿದ್ರೆ ಅಶ್ವರ್ಯ ಪಡಬಹುದು" ಎಂದು ರಾಜೇಶ್‌ ರಿವೀಲ್ಸ್‌ ಚಾನೆಲ್‌ನಲ್ಲಿ ತನ್ನ ಪಿಯುಸಿ ಲವ್‌ ಸ್ಟೋರಿಯನ್ನು ನಮ್ರತಾ ಗೌಡ ಬಿಚ್ಚಿಟ್ಟಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner