Flop Film: ಇದು ಈ ವರ್ಷದ ಅತಿ ದೊಡ್ಡ ಫ್ಲಾಪ್ ಸಿನಿಮಾ; 800 ಕೋಟಿ ನಷ್ಟ ಅನುಭವಿಸಿದ ಚಿತ್ರತಂಡ
ಕನ್ನಡ ಸುದ್ದಿ  /  ಮನರಂಜನೆ  /  Flop Film: ಇದು ಈ ವರ್ಷದ ಅತಿ ದೊಡ್ಡ ಫ್ಲಾಪ್ ಸಿನಿಮಾ; 800 ಕೋಟಿ ನಷ್ಟ ಅನುಭವಿಸಿದ ಚಿತ್ರತಂಡ

Flop Film: ಇದು ಈ ವರ್ಷದ ಅತಿ ದೊಡ್ಡ ಫ್ಲಾಪ್ ಸಿನಿಮಾ; 800 ಕೋಟಿ ನಷ್ಟ ಅನುಭವಿಸಿದ ಚಿತ್ರತಂಡ

2025ರ ಫ್ಲಾಪ್ ಸಿನಿಮಾ ಎಂಬ ಹಣೆಪಟ್ಟಿ ಹೊತ್ತ ಸಿನಿಮಾ ಎಂದರೆ ಅದು 'ಬೆಟರ್ ಮ್ಯಾನ್‌'. ಈ ಸಿನಿಮಾ ನಿರ್ಮಾಣ ಮಾಡಲು ವ್ಯಯಿಸಿದ ಹಣದಲ್ಲಿ ಕಾಲು ಭಾಗವೂ ಹಿಂದಿರುಗಿ ಬಂದಿಲ್ಲ. ಈ ಸಿನಿಮಾ 800 ಕೋಟಿ ನಷ್ಟ ಅನುಭವಿಸಿದೆ.

800 ಕೋಟಿ ಲಾಸ್‌ ಅನುಭವಿಸಿದ ಚಿತ್ರತಂಡ
800 ಕೋಟಿ ಲಾಸ್‌ ಅನುಭವಿಸಿದ ಚಿತ್ರತಂಡ

Flop Film: ಬೆಟರ್ ಮ್ಯಾನ್ ಹೊಸ ವರ್ಷದ ಅತಿದೊಡ್ಡ ಫ್ಲಾಪ್ ಚಲನಚಿತ್ರ ಎಂಬ ಟ್ಯಾಗ್ ಲೈನ್‌ ಪಡೆದುಕೊಂಡಿದೆ. ಮೈಕೆಲ್ ಗ್ರೇಸಿ ನಿರ್ದೇಶನದ ಈ ಚಿತ್ರವನ್ನು 950 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು, ಆದರೆ ಎಷ್ಟು ಹಣ ಹಾಕಿ ಸಿನಿಮಾ ನಿರ್ಮಾಣ ಮಾಡಿದ್ದರೋ ಅದರ ಕಾಲು ಭಾಗವೂ ಹಿಂದಿರುಗಿ ಬರದ ರೀತಿಯಲ್ಲಿ ಸಿನಿಮಾ ಕೈ ಕೊಟ್ಟಿದೆ. ಜನರು ಇಷ್ಟಪಡಬಹುದು ಎಂದು ಬಹಳ ನಿರೀಕ್ಷೆಯಿಂದ ಈ ಸಿನಿಮಾವನ್ನು ಭರವಸೆಯಲ್ಲೇ ನಿರ್ಮಾಣ ಮಾಡಿ ಜನರೆದುರು ತರಲಾಯಿತು, ಆದರೆ ಜನರು ಈ ಸಿನಿಮಾವನ್ನು ಇಷ್ಟಪಡಲಿಲ್ಲ. ಗಲ್ಲಾಪಟೆಟ್ಟಿಗೆಯಲ್ಲಿ ಸುಮಾರು 130 ಕೋಟಿ ಮಾತ್ರ ಸಂಪಾದನೆ ಮಾಡಿತು. 800 ಕೋಟಿ ನಷ್ಟವನ್ನು ಈ ಸಿನಿಮಾ ಅನುಭವಿಸಿತು. ಈ ಚಿತ್ರವು ನಂಬರ್ ಒನ್ ಸಂಗೀತ ಕಲಾವಿದನ ಜೀವನಚರಿತ್ರೆಯಾಗಿದೆ.

ಬೆಟರ್ ಮ್ಯಾನ್ ಯಾಕೆ ಫ್ಲಾಪ್ ಆಯ್ತು?

30 ವರ್ಷಗಳ ಹಿಂದೆ ಒಂದೇ ದಿನದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ ಬ್ರಿಟಿಷ್ ಗಾಯಕ ರಾಬಿ ವಿಲಿಯಮ್ಸ್ ಅವರ ಜೀವನವನ್ನು ಆಧರಿಸಿದ ಚಿತ್ರ ಬೆಟರ್ ಮ್ಯಾನ್. ಅವರ ಎಲ್ಲಾ ಆಲ್ಬಂಗಳು ನಂಬರ್ 1 ಸ್ಥಾನವನ್ನು ಪಡೆದಿವೆ. ಅವರ ಜೀವನವನ್ನೇ ಸಿನಿಮಾ ರೂಪದಲ್ಲಿ ತೋರಿಸಿದ್ದಾರೆ. ಅಂತಹ ಕಲಾವಿದನ ಜೀವನಚರಿತ್ರೆ ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಸ್ಟರ್ ಆಗುತ್ತದೆ ಎಂದು ಭಾವಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಬೆಟರ್ ಮ್ಯಾನ್ ದೊಡ್ಡ ನಷ್ಟವನ್ನೇ ಅನುಭವಿಸಿತು. ಜನವರಿ ಆರಂಭದಲ್ಲಿ ಬಿಡುಗಡೆಯಾದ ಈ ಚಿತ್ರವು 2025ರ ಅತಿ ದೊಡ್‌ ಪ್ಲಾಫ್‌ ಸಿನಿಮಾ ಎಂಬ ಪಟ್ಟ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ರಾಬಿ ವಿಲಿಯಮ್ಸ್ ಪಾತ್ರವನ್ನು ಗ್ರಾಫಿಕ್ಸ್ ನಿಂದ ಮಾಡಿದ ಕೋತಿ ರೂಪದಲ್ಲಿ ಕಾಣಿಸಿದ್ದಾರೆ.

ಈ ಸಿನಿಮಾ ಜನವರಿ 10 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಆದರೆ ಅಂದುಕೊಂಡಷ್ಟು ಹಣ ಗಳಿಸುವಲ್ಲಿ ವಿಫಲವಾಯಿತು. ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದರೂ ಆ ಎಲ್ಲ ನಿರೀಕ್ಷೆ ಹುಸಿಯಾಯಿತು. ಈ ಸಿನಿಮಾ ಆಸ್ಕರ್ಗೆ ನಾಮನಿರ್ದೇಶನಗೊಂಡಿತು. ಅತ್ಯುತ್ತಮ ದೃಶ್ಯಗಳನ್ನೂ ಸಹ ಹೊಂದಿತ್ತು. ಇದು ನಾಲ್ಕು ವಾರಗಳಲ್ಲಿ ಕೇವಲ 1.9 ಮಿಲಿಯನ್ ಗಳಿಸಿತು. ರೆ. 2024 ರ ಕೊನೆಯ ವಾರಾಂತ್ಯದಲ್ಲಿ ಚಲನಚಿತ್ರವು ಕೆಲವು ಕಡೆ ಮಾತ್ರ ಬಿಡುಗಡೆಯಾಗಿತ್ತು.

ಯುಕೆಯಲ್ಲಿ ಜನಪ್ರಿಯನಾಗಿದ್ದ ಗಾಯಕ

ರಾಬಿ ವಿಲಿಯಮ್ಸ್ ಯುಕೆಯಲ್ಲಿ ಬಹಳ ಜನಪ್ರಿಯರಾಗಿದ್ದಾರೆ, ಆದರೆ ಯುಎಸ್‌ನಲ್ಲಿ ಹೆಚ್ಚು ಜನರಿಗೆ ಇವರ ಬಗ್ಗೆ ತಿಳಿದಿಲ್ಲ. ಆ ದೇಶದಲ್ಲಿ ಬೆಟರ್ ಮ್ಯಾನ್ ನ ಕಲೆಕ್ಷನ್ ಎಷ್ಟು ಕೆಟ್ಟದಾಗಿದೆಯೆಂದರೆ, ಯಾರಿಗೂ ತಿಳಿದಿಲ್ಲದ ವ್ಯಕ್ತಿಯ ಬಗ್ಗೆ ಚಲನಚಿತ್ರವನ್ನು ಯಾರು ನೋಡುತ್ತಾರೆ? ಎಂಬ ಮೀಮ್‌ಗಳು ಹುಟ್ಟುಕೊಂಡಿದ್ದವು. ಸಾಕಷ್ಟು ಜನ ಈ ಪೋಸ್ಟ್‌ ಹಾಕಿ ಟ್ರೋಲ್ ಮಾಡಿದ್ದರು. ಗೊತ್ತಿಲ್ಲದ ವ್ಯಕ್ತಿಯ ಸಿನಿಮಾ ನಾವ್ಯಾಕೆ ನೋಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಮುನ್ನ ಪೋಸ್ಟರ್‍‌ ತುಂಬಾ ವೈರಲ್ ಆಗಿತ್ತು. ಆ ಕೋತಿಯ ಮುಖ ನೋಡಿಯೇ ಕೆಲವರು ಕುತೂಹಲ ಹೊಂದಿದ್ದರು. ವಿಲಿಯಮ್ಸ್ ಬಹಳ ಜನಪ್ರಿಯವಾಗಿದ್ದರೂ ಸಿನಿಮಾ ಮಾತ್ರ ಫ್ಲಾಪ್ ಆಯಿತು.

ಕೋತಿಯ ರೋಪದಲ್ಲಿರುವ ವ್ಯಕ್ತಿ ಇಷ್ಟವಾಗಲಿಲ್ಲ

ಈ ಚಿತ್ರವು ಈಗಾಗಲೇ ವಿಶ್ವದಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಓಡುತ್ತಿದ್ದರೂ, ಕಲೆಕ್ಷನ್ ಬಹುತೇಕ ಶೂನ್ಯವಾಗಿದೆ. ರಾಬಿ ವಿಲಿಯಮ್ಸ್ ಪಾತ್ರವನ್ನು ಕೋತಿ ರೂಪದಲ್ಲಿ ಕಾಣಿಸಿರುವುದೇ ಈ ಸಿನಿಮಾದಲ್ಲಿ ನೆಗಟಿವ್ ಆಗಿದೆ. ಇದನ್ನು ಜನರು ಇಷ್ಟಪಟ್ಟಿಲ್ಲ. ಅದೇ ಕಾರಣಕ್ಕೆ ಈ ಸಿನಿಮಾ ಫ್ಲಾಪ್‌ ಆಯ್ತು ಎಂದು ಹೇಳಲಾಗುತ್ತಿದೆ.

Whats_app_banner