ನೀವು ಸಸ್ಪೆನ್ಸ್‌ ಥ್ರಿಲ್ಲರ್ ಪ್ರಿಯರಾ, ನಿಮಗೆ ಮರ್ಡರ್‌ ಮಿಸ್ಟರಿ ಸಿನಿಮಾಗಳೆಂದರೆ ಇಷ್ಟವಾ?‌ ಇಲ್ಲಿವೆ ಕನ್ನಡದ 5 ಸಿನಿಮಾಗಳು
ಕನ್ನಡ ಸುದ್ದಿ  /  ಮನರಂಜನೆ  /  ನೀವು ಸಸ್ಪೆನ್ಸ್‌ ಥ್ರಿಲ್ಲರ್ ಪ್ರಿಯರಾ, ನಿಮಗೆ ಮರ್ಡರ್‌ ಮಿಸ್ಟರಿ ಸಿನಿಮಾಗಳೆಂದರೆ ಇಷ್ಟವಾ?‌ ಇಲ್ಲಿವೆ ಕನ್ನಡದ 5 ಸಿನಿಮಾಗಳು

ನೀವು ಸಸ್ಪೆನ್ಸ್‌ ಥ್ರಿಲ್ಲರ್ ಪ್ರಿಯರಾ, ನಿಮಗೆ ಮರ್ಡರ್‌ ಮಿಸ್ಟರಿ ಸಿನಿಮಾಗಳೆಂದರೆ ಇಷ್ಟವಾ?‌ ಇಲ್ಲಿವೆ ಕನ್ನಡದ 5 ಸಿನಿಮಾಗಳು

ನೀವು ಸಸ್ಪೆನ್ಸ್‌ ಥ್ರಿಲ್ಲರ್ ಪ್ರಿಯರಾ, ನಿಮಗೆ ಮರ್ಡರ್‌ ಮಿಸ್ಟರಿ ಸಿನಿಮಾಗಳೆಂದರೆ ಇಷ್ಟವಾ? ಹಾಗಾದರೆ ಒಟಿಟಿಯಲ್ಲಿನ ಕನ್ನಡದ ಆಯ್ದ ಈ ಐದು ಸಿನಿಮಾಗಳನ್ನು ಮಿಸ್‌ ಮಾಡಲೇಬೇಡಿ. ಆ ಸಿನಿಮಾಗಳು ಯಾವವು, ಅವುಗಳ ವೀಕ್ಷಣೆ ಎಲ್ಲಿ ಎಂಬಿತ್ಯಾದಿ ವಿವರ ಇಲ್ಲಿದೆ.

ನೀವು ಸಸ್ಪೆನ್ಸ್‌ ಥ್ರಿಲ್ಲರ್ ಪ್ರಿಯರಾ, ನಿಮಗೆ ಮರ್ಡರ್‌ ಮಿಸ್ಟರಿ ಸಿನಿಮಾಗಳೆಂದರೆ ಇಷ್ಟವಾ?‌ ಇಲ್ಲಿವೆ ಕನ್ನಡದ 5 ಸಿನಿಮಾಗಳು
ನೀವು ಸಸ್ಪೆನ್ಸ್‌ ಥ್ರಿಲ್ಲರ್ ಪ್ರಿಯರಾ, ನಿಮಗೆ ಮರ್ಡರ್‌ ಮಿಸ್ಟರಿ ಸಿನಿಮಾಗಳೆಂದರೆ ಇಷ್ಟವಾ?‌ ಇಲ್ಲಿವೆ ಕನ್ನಡದ 5 ಸಿನಿಮಾಗಳು

ಒಟಿಟಿಯಲ್ಲಿ ಸಾವಿರಾರು ಸಿನಿಮಾಗಳ ರಾಶಿಯೇ ಇದೆ. ಅವುಗಳಲ್ಲಿ ನಮ್ಮ ಅಭಿರುಚಿಗೆ ತಕ್ಕಂತೆ ವೀಕ್ಷಿಸುವ ಸಿನಿಮಾಗಳನ್ನು ಹುಡುಕುವುದೇ ದೊಡ್ಡ ಕೆಲಸ. ಇದೀಗ ನೀವು ಸ್ಯಾಂಡಲ್‌ವುಡ್‌ನ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಪ್ರಿಯರಾಗಿದ್ದರೆ, ಮರ್ಡರ್‌ ಮಿಸ್ಟರಿ ಸಿನಿಮಾ ವೀಕ್ಷಕರಾಗಿದ್ದರೆ, ಆಯ್ದ ಐದು ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ʻಬೀರ್‌ಬಲ್‌ ಟ್ರಯಾಲಜಿ’

ಕ್ರೈಮ್ ಥ್ರಿಲ್ಲರ್ ಚಿತ್ರ ‘ಬೀರ್‌ಬಲ್‌ ಟ್ರಯಾಲಜಿ’ ಸಿನಿಮಾವನ್ನು ಎಂ.ಜಿ. ಶ್ರೀನಿವಾಸ್ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ರುಕ್ಮಿಣಿ ವಸಂತ್, ವಿನೀತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಾವಿನ ಹಿಂದಿನ ಸತ್ಯ ತಿಳಿಯುವ ಈ ಥ್ರಿಲ್ಲರ್‌ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ವೃತ್ರ

2019ರಲ್ಲಿ ಬಂದ ವೃತ್ತ ಸಿನಿಮಾದಲ್ಲಿ ನಿತ್ಯ ಶ್ರೀ, ಪ್ರಕಾಶ್ ಬೆಳವಾಡಿ, ಸುಧಾರಾಣಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಆರ್. ಗೌತಮ್ ಅಯ್ಯರ್ ನಿರ್ದೇಶನ ಮಾಡಿದ್ದಾರೆ. ಒಂದು ಆತ್ಮಹತ್ಯಾ ಪ್ರಕರಣವನ್ನು ಪೊಲೀಸ್ ಅಧಿಕಾರಿ ಇಂದಿರಾ ರಾವ್ ತನಿಖೆ ಮಾಡುತ್ತಾರೆ. ಮೊದಲು ಅದು ಆತ್ಮಹತ್ಯೆಯೆಂದು ಭಾವಿಸಿದರೂ, ನಂತರ ಅನಿರೀಕ್ಷಿತ ವಿಷಯಗಳು ಬಹಿರಂಗಗೊಳ್ಳುತ್ತವೆ. ಈ ವೃತ್ರ ಸಿನಿಮಾವನ್ನು Amazon Prime Videoದಲ್ಲಿ ನೋಡಬಹುದು.

ಶಿವಾಜಿ ಸುರತ್ಕಲ್‌

ಮಿಸ್ಟರಿ ಥ್ರಿಲ್ಲರ್ ಶಿವಾಜಿ ಸುರತ್ಕಲ್‌ ಸಿನಿಮಾದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಅರೋಹಿ ನಾರಾಯಣ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಒಬ್ಬ ಮಂತ್ರಿಯ ಮಗನ ಮರಣದ ಹಿಂದಿನ ರಹಸ್ಯವನ್ನು ಬಯಲು ಮಾಡಲು ಡಿಟೆಕ್ಟಿವ್ ಶಿವಾಜಿ ಸುರತ್ಕಲ್‌ ಪ್ರಯತ್ನಿಸುವುದರ ಸುತ್ತ ಈ ಚಿತ್ರ ಸಾಗುತ್ತದೆ. ಆಕಾಶ್ ಶ್ರೀವಾತ್ಸವ ನಿರ್ದೇಶನ ಮಾಡಿದ ಈ ಚಿತ್ರ ಸದ್ಯ ಜೀ5 ಒಟಿಟಿಯಲ್ಲಿ ನೋಡಬಹುದು. ಯೂಟ್ಯೂಬ್‌ನಲ್ಲಿಯೂ ಲಭ್ಯವಿದೆ.

ಕೇಸ್ ಆಫ್ ಕೊಂಡಣ

ಕೇಸ್ ಆಫ್ ಕೊಂಡನ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮತ್ತು ನಟಿ ಭಾವನಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಮತ್ತು ಪೊಲೀಸರ ನಡುವೆಯೇ ಈ ಚಿತ್ರದ ಕಥೆ ಸಾಗುತ್ತದೆ. ಅಪರಾಧಿಯನ್ನು ಹಿಡಿಯಲು ಎಸಿಪಿ ಲಕ್ಷ್ಮಿ ಪ್ರಯತ್ನಿಸುತ್ತಿದ್ದರೆ, ಲೋಕಲ್ ಗ್ಯಾಂಗ್‌ಸ್ಟರ್ ಅನ್ನು ಹಿಡಿಯಲು ಎಎಸ್‌ಐ ವಿಲ್ಸನ್ ಪ್ರಯತ್ನಿಸುತ್ತಾನೆ. ಅಂದಹಾಗೆ ಕೇಸ್ ಆಫ್ ಕೊಂಡಣ ಚಿತ್ರಕ್ಕೆ ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಂ ವಿಡಿಯೋ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.

ಕವಲುದಾರಿ

ಕವಾಲುದಾರಿ (2019) ಸಿನಿಮಾಕ್ಕೆ ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಿಷಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಆಗಿ ಕೆಲಸ ಮಾಡುವ ಶ್ಯಾಮ್ (ರಿಷಿ) ಒಂದು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಒಂದು ಅಸ್ಥಿಪಂಜರ ಆತನ ಕಣ್ಣಿಗೆ ಬೀಳುತ್ತದೆ. ಕ್ರೈಮ್ ಪೊಲೀಸರಿಗೆ ತಿಳಿಸಿದರೂ ತನಿಖೆ ಮಾಡುವುದಿಲ್ಲ. ಹೀಗಾಗಿ ಅವನೇ ಆ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಾನೆ. ಅನಿರೀಕ್ಷಿತ ವಿಷಯಗಳು ಬಹಿರಂಗಗೊಳ್ಳುತ್ತವೆ. ಇದರ ಹಿಂದೆ ನಿಗೂಢ ಕಥೆಗಳಿವೆ ಎಂಬುದು ಗೊತ್ತಾಗುತ್ತದೆ. ಕವಲುದಾರಿ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.