Bold OTT: ಫಸ್ಟ್‌ನೈಟ್‌ ಸಿಡಿ ಕಳೆದುಕೊಂಡ ದಂಪತಿ, ಓಟಿಟಿಯಲ್ಲಿ ತೃಪ್ತಿ ದಿಮ್ರಿ ಬೋಲ್ಡ್‌ ಸಿನಿಮಾ- ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ರಸಾರ
ಕನ್ನಡ ಸುದ್ದಿ  /  ಮನರಂಜನೆ  /  Bold Ott: ಫಸ್ಟ್‌ನೈಟ್‌ ಸಿಡಿ ಕಳೆದುಕೊಂಡ ದಂಪತಿ, ಓಟಿಟಿಯಲ್ಲಿ ತೃಪ್ತಿ ದಿಮ್ರಿ ಬೋಲ್ಡ್‌ ಸಿನಿಮಾ- ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ರಸಾರ

Bold OTT: ಫಸ್ಟ್‌ನೈಟ್‌ ಸಿಡಿ ಕಳೆದುಕೊಂಡ ದಂಪತಿ, ಓಟಿಟಿಯಲ್ಲಿ ತೃಪ್ತಿ ದಿಮ್ರಿ ಬೋಲ್ಡ್‌ ಸಿನಿಮಾ- ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ರಸಾರ

Bold OTT: ಹೊಸದಾಗಿ ಮದುವೆಯಾದ ದಂಪತಿ ತಮ್ಮ ಮೊದಲ ರಾತ್ರಿಯ ಕ್ಷಣಗಳನ್ನು ವಿಡಿಯೋ ರೆಕಾರ್ಡ್‌ ಮಾಡುತ್ತಾರೆ. ಆ ಸಿಡಿ ಮಿಸ್‌ ಆಗುತ್ತದೆ. ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸಿರುವ ಬೋಲ್ಡ್ ಚಿತ್ರ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಒಟಿಟಿಗೆ ಆಗಮಿಸಲಿದೆ. ಇದು ಡಿಸೆಂಬರ್ 6 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಸಿನಿಮಾದ ಓಟಿಟಿ ಬಿಡುಗಡೆ ವಿವರ
ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಸಿನಿಮಾದ ಓಟಿಟಿ ಬಿಡುಗಡೆ ವಿವರ

Bold OTT: ತ್ರಿಪ್ತಿ ದಿಮ್ರಿ ನಾಯಕಿಯಾಗಿ ನಟಿಸಿರುವ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಓಟಿಟಿಯತ್ತ ಮುಖ ಮಾಡಿದೆ. ಈ ಸಿನಿಮಾ ಮುಂದಿನ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಬಾಲಿವುಡ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ನಾಯಕನಾಗಿ ನಟಿಸಿದ್ದಾರೆ. ರಾಜ್ ಸ್ಯಾಂಡಿಲ್ಯ ನಿರ್ದೇಶಿಸಿದ ಸಿನಿಮಾದಲ್ಲಿ ಹೊಸದಾಗಿ ಮದುವೆಯಾದ ದಂಪತಿ ತಮ್ಮ ಫಸ್ಟ್‌ ನೈಸ್‌ ಸಿಡಿ ಕಳೆದುಕೊಂಡು ಪರಿಪಾಟಲು ಅನುಭವಿಸುವ ಕಥೆಯಿದೆ.

ಹೇಗಿದೆ ವಿಕ್ಕಿ ವಿದ್ಯಾ ಕಾ ವೋ ವಾಲಾ ವೀಡಿಯೊ?

ಅಕ್ಟೋಬರ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಬಾಲಿವುಡ್ ಚಿತ್ರವು ಚಿತ್ರಮಂದಿರಗಳಲ್ಲಿ ಸಾಧಾರಣ ಯಶಸ್ಸು ಕಂಡಿದೆ. ಸುಮಾರು 60 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 50 ಕೋಟಿ ಕಲೆಕ್ಷನ್ ಮಾಡಿದೆ. ಆದರೆ, ಒಟಿಟಿ ಮತ್ತು ಸ್ಯಾಟಲೈಟ್ ರೈಟ್ಸ್‌ ಮೂಲಕ ನಿರ್ಮಾಪಕರು ಭಾರಿ ಲಾಭ ಗಳಿಸಿದ್ದಾರೆ.

ಡಿಸೆಂಬರ್ 6 ರಿಂದ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌

ನೆಟ್‌ಫ್ಲಿಕ್ಸ್ ಓಟಿಟಿಯು ವಿಕ್ಕಿ ವಿದ್ಯಾ ಕಾ ವೋ ವಾಲಾ ವೀಡಿಯೊದ ಪ್ರಸಾರ ಹಕ್ಕುಗಳನ್ನು ಸುಮಾರು ಇಪ್ಪತ್ತೈದು ಕೋಟಿ ರೂಪಾಯಿಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಈ ಬೋಲ್ಡ್ ಸಿನಿಮಾ ಡಿಸೆಂಬರ್ 6 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ ಎಂದು ಹೇಳಲಾಗಿದೆ. ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಸಿನಿಮಾ ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ಮಲ್ಲಿಕಾ ಶೆರಾವತ್ ನಟಿಸಿದ ಸಿನಿಮಾ

ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರದಲ್ಲಿ ಮಲ್ಲಿಕಾ ಶೆರಾವತ್, ವಿಜಯ್ ರಾಜ್ ಮತ್ತು ಮಸ್ತ್ ಅಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸುಮಾರು ಎರಡು ವರ್ಷಗಳ ಗ್ಯಾಪ್ ನಂತರ ಮಲ್ಲಿಕಾ ಶೆರಾವತ್ ಈ ಬೋಲ್ಡ್ ಸಿನಿಮಾ ಮೂಲಕ ಮತ್ತೆ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಫಸ್ಟ್ ನೈಟ್ ಸಿಡಿ ಮಿಸ್ ಮಾಡಿಕೊಂಡ ದಂಪತಿ

ವಿಕ್ಕಿ (ರಾಜ್‌ಕುಮಾರ್ ರಾವ್) ಮತ್ತು ವಿದ್ಯಾ (ತೃಪ್ತಿ ದಿಮ್ರಿ) ಹೊಸದಾಗಿ ಮದುವೆಯಾಗಿದ್ದಾರೆ. ನೆನಪಿಗೆ ಇರಲಿ ಎಂದು ತಮ್ಮ ಫಸ್ಟ್ ನೈಟ್ ರೆಕಾರ್ಡ್ ಮಾಡಿ ಸಿಡಿಯಲ್ಲಿ ಇಡುತ್ತಾರೆ. ವಿಕ್ಕಿ ಮತ್ತು ವಿದ್ಯಾ ಮನೆಯಲ್ಲಿ ಇಲ್ಲದ ವೇಳೆ ಸಿಡಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ವಿಕ್ಕಿ ಮತ್ತು ವಿದ್ಯಾ ಆ ಸೀಡಿಯನ್ನು ವಾಪಸ್ ಪಡೆದಿದ್ದು ಹೇಗೆ? ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಬಹುದು.

ಹಾರರ್ ಕಾಮಿಡಿ ಸಿನಿಮಾ

ವಿಕ್ಕಿ ವಿದ್ಯಾ ಕಾ ವೋ ವಾಲಾ ವೀಡಿಯೊದ ನಂತರ ತೃಪ್ತಿ ಡಿಮ್ರಿ ಇತ್ತೀಚೆಗೆ ಭೂಲ್ ಭುಲೈಯಾ 3 ಚಿತ್ರದಲ್ಲಿ ಕಾಣಿಸಿಕೊಂಡರು. ಹಾರರ್ ಕಾಮಿಡಿ ಕಥೆ ಇರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಏಳು ದಿನಗಳಲ್ಲಿ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಕಾರ್ತಿಕ್ ಆರ್ಯನ್ ಅಭಿನಯದ ಈ ಚಿತ್ರದಲ್ಲಿ ಹಿರಿಯ ನಾಯಕಿಯರಾದ ಮಾಧುರಿ ದೀಕ್ಷಿತ್ ಮತ್ತು ವಿದ್ಯಾ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ತೃಪ್ತಿ ದಿಮ್ರಿ ಧಡಕ್ 2 ಜೊತೆಗೆ ಮೂರು ಬಾಲಿವುಡ್ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Whats_app_banner