ಪಂಜಾಬಿ ಗಾಯಕ ದಿಲ್ಜಿತ್‌ ದೋಸಾಂಜ್‌ಗೆ ಬೆಂಗಳೂರಿನಲ್ಲಿ ಕನ್ನಡ ಕಲಿಸಿದ ದೀಪಿಕಾ ಪಡುಕೋಣೆ; ವಿಡಿಯೋ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಪಂಜಾಬಿ ಗಾಯಕ ದಿಲ್ಜಿತ್‌ ದೋಸಾಂಜ್‌ಗೆ ಬೆಂಗಳೂರಿನಲ್ಲಿ ಕನ್ನಡ ಕಲಿಸಿದ ದೀಪಿಕಾ ಪಡುಕೋಣೆ; ವಿಡಿಯೋ ನೋಡಿ

ಪಂಜಾಬಿ ಗಾಯಕ ದಿಲ್ಜಿತ್‌ ದೋಸಾಂಜ್‌ಗೆ ಬೆಂಗಳೂರಿನಲ್ಲಿ ಕನ್ನಡ ಕಲಿಸಿದ ದೀಪಿಕಾ ಪಡುಕೋಣೆ; ವಿಡಿಯೋ ನೋಡಿ

Deepika Padukone: ಬೆಂಗಳೂರಿನಲ್ಲಿ ನಡೆದ ದಿಲ್ಜೀತ್‌ ದೋಸಾಂಜ್‌ ಅವರ ಮ್ಯೂಸಿಕ್‌ ಕಾನ್ಸರ್ಟ್‌ನಲ್ಲಿ ದೀಪಿಕಾ ಪಡುಕೋಣೆ, ಪ್ರಮುಖ ಆಕರ್ಷಣೆಯಾಗಿದ್ದರು. ಮಗು ಜನಿಸಿದ ಬಳಿಕ ಮೊದಲ ಸಲ ವೇದಿಕೆ ಏರಿದ ದೀಪಿಕಾ, ಪಂಜಾಬಿ ಗಾಯಕನಿಗೆ ಕನ್ನಡದ ಪಾಠವನ್ನೂ ಮಾಡಿದ್ದಾರೆ.

ಬೆಂಗಳೂರಿನ ಕಾನ್ಸರ್ಟ್‌ನಲ್ಲಿ ದೀಪಿಕಾ ಪಡುಕೋಣೆ
ಬೆಂಗಳೂರಿನ ಕಾನ್ಸರ್ಟ್‌ನಲ್ಲಿ ದೀಪಿಕಾ ಪಡುಕೋಣೆ

Deepika Padukone: ಬಾಲಿವುಡ್‌ನ ಟಾಪ್‌ ನಟಿ ಸ್ಥಾನದಲ್ಲಿರುವ ದೀಪಿಕಾ ಪಡುಕೋಣೆ ಸದ್ಯ ಮಗುವಿನ ಆರೈಕೆಯಲ್ಲಿದ್ದಾರೆ. ಮಗಳು ದುವಾ ಜತೆಗೆ ತಾಯ್ತನದ ಖುಷಿಯನ್ನು ಕಳೆಯುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಕೆಲಸಗಳಿಂದ ಕೆಲ ಕಾಲ ದೂರ ಉಳಿದಿರುವ ದೀಪಿಕಾ, ದುವಾಳಿಗಾಗಿಯೇ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ. ಈ ನಡುವೆ ಮಗಳ ಆಗಮನ ಬಳಿಕ ಮೊದಲ ಸಲ ವೇದಿಕೆ ಕಾರ್ಯಕ್ರಮದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಅದೂ ತವರು ಮನೆ ಬೆಂಗಳೂರಿನಲ್ಲಿ.

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ನಡೆದ ಗಾಯಕ ದಿಲ್ಜಿತ್ ದೋಸಾಂಜ್ ಅವರ ಲೈವ್‌ ಮ್ಯೂಸಿಕ್‌ ಕಾನ್ಸರ್ಟ್‌ನಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿ ನೆರೆದಿದ್ದವರನ್ನು ಆಕರ್ಷಿಸಿದರು. ಮಗಳು ದುವಾ ಪಡುಕೋಣೆ ಸಿಂಗ್ ಜನಿಸಿದ ಬಳಿಕ ಮೊದಲ ಸಲ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಕಲರ್‌ಫುಲ್‌ ಮ್ಯೂಸಿಕ್‌ ಕಾನ್ಸರ್ಟ್‌ನ ಬಗೆಬಗೆ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿಯೂ ಹರಿದಾಡುತ್ತಿವೆ.

ದಿಲ್ಜೀತ್‌ಗೆ ಕನ್ನಡ ಕಲಿಸಿದ ದೀಪಿಕಾ

ದೀಪಿಕಾ ಪಡುಕೋಣೆ ಮೂಲತಃ ಬೆಂಗಳೂರಿನವರು. ಕನ್ನಡವನ್ನು ಚೆನ್ನಾಗಿಯೇ ಮಾತನಾಡುತ್ತಾರೆ. ಹೀಗಿರುವಾಗ ಮನೆಯಂಗಳದಲ್ಲಿಯೇ ನಡೆದ ಈ ಮ್ಯೂಸಿಕ್‌ ಕಾನ್ಸರ್ಟ್‌ನಲ್ಲಿ ಕನ್ನಡ ಮೊಳಗದಿದ್ದರೆ ಹೇಗೆ ಅಲ್ಲವೇ? ಅದರಂತೆ, ಪಂಜಾಬಿ ಗಾಯಕ ದಿಲ್ಜಿತ್‌ಗೆ ಕನ್ನಡದ ಒಂದು ಸಾಲನ್ನು ಹೇಳಿಕೊಟ್ಟಿದ್ದಾರೆ. ಅಷ್ಟಕ್ಕೂ ಕನ್ನಡದಲ್ಲಿ ದೀಪಿಕಾ ಹೇಳಿದ್ದೇನೆಂದರೆ, “ನಾನು ನಿನ್ನನ್ನು ಪ್ರೀತಿಸ್ತೀನಿ” ಎಂಬುದನ್ನು ಕನ್ನಡದಲ್ಲಿ ದಿಲ್ಜಿತ್‌ಗೆ ಹೇಳಿದ್ದಾರೆ. ದೀಪಿಕಾ ಹಾಗೇ ಹೇಳುತ್ತಿದ್ದಂತೆ, ನೆರೆದಿದ್ದ ಜನತೆ ಸಹ ದೀಪಿಕಾ ಕನ್ನಡಕ್ಕೆ ಶಿಳ್ಳೆ ಚಪ್ಪಾಳೆ ತಟ್ಟಿದ್ದಾರೆ.

ಗಾಯಕ ದಿಲ್ಜೀತ್‌ಗೆ ಕನ್ನಡ ಕಲಿಸಿದ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿಯೂ ವೈರಲ್‌ ಆಗಿದೆ. ಜತೆಗೆ ದಿಲ್ಜಿತ್‌ ಜತೆ ಸೇರಿ ಹಾಡುಗಳಿಗೆ ಧ್ವನಿಗೂಡಿಸಿದ್ದಾರೆ. ನಿಂತಲ್ಲೇ ಹೆಜ್ಜೆಹಾಕಿದ್ದಾರೆ. ಈ ಲೈವ್‌ ಕಾನ್ಸರ್ಟ್‌ನ ಬಿಡಿ ಬಿಡಿ ವಿಡಿಯೋಗಳೀಗ ಜಾಲತಾಣದಲ್ಲಿ ನೋಡುಗರ ಗಮನ ಸೆಳೆಯುತ್ತಿವೆ. ಬಹುದಿನಗಳ ಬಳಿಕ ದೀಪಿಕಾ ಅವರನ್ನು ನೋಡಿದ ಖುಷಿಯಲ್ಲಿದ್ದಾರೆ ಬೆಂಗಳೂರಿಗರು.

ಮುಂದುವರಿದ ದೀಪಿಕಾ ಯಶಸ್ಸು

ದೀಪಿಕಾ ಪಡುಕೋಣೆ ಕೈಯಲ್ಲಿ ಸದ್ಯ ಬೇರಾವ ಸಿನಿಮಾಗಳಿಲ್ಲ. ಈ ವರ್ಷ ಅವರ ಮೂರು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಆ ಪೈಕಿ ಮೊದಲಿಗೆ ಬಂದ ಫೈಟರ್‌ ಸಹ ಮೆಚ್ಚುಗೆ ಪಡೆದರೆ, ಪ್ರಭಾಸ್‌ ಜತೆಗಿನ ಕಲ್ಕಿ ಚಿತ್ರವೂ ಹಿಟ್‌ ಪಟ್ಟ ಪಡೆದುಕೊಂಡಿತು. ಅದಾದ ಮೇಲೆ ಕಳೆದ ತಿಂಗಳಷ್ಟೇ ಸಿಂಗಮ್‌ ಅಗೈನ್‌ ಸಿನಿಮಾ ಬಿಡುಗಡೆ ಆಗಿತ್ತು.

ಸಿಂಗಮ್‌ ಅಗೇನ್‌ ಚಿತ್ರದಲ್ಲಿ ಮೋಡಿ

ಇತ್ತೀಚೆಗಷ್ಟೇ ರೋಹಿತ್ ಶೆಟ್ಟಿ ನಿರ್ದೇಶನದ ಕಾಪ್ ಡ್ರಾಮಾ ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಶಕ್ತಿ ಶೆಟ್ಟಿ ಅನ್ನೋ ಲೇಡಿ ಸಿಂಗಂ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿಮಾ ಈವರೆಗೂ 230 ಕೋಟಿ ಗಳಿಕೆ ಕಂಡಿದೆ. ಚಿತ್ರದಲ್ಲಿ ರಣವೀರ್ ಸಿಂಗ್, ಕರೀನಾ ಕಪೂರ್, ಅರ್ಜುನ್ ಕಪೂರ್, ಅಜಯ್ ದೇವಗನ್, ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದಾರೆ.

Whats_app_banner