Kannada News  /  Entertainment  /  Bollywood Actor Ashish Vidyarthi S First Wife Rajoshi Barua Shares Posts After Actor S Second Wedding Mnk
ಜೀವನದ ಒಗಟಿನಲ್ಲಿ ಸಿಲುಕಿಕೊಳ್ಳಬೇಡ, ಇದೇ ಜೀವನ: ಆಶಿಶ್‌ ವಿದ್ಯಾರ್ಥಿ ಎರಡನೇ ಮದುವೆ ಬಗ್ಗೆ ಮೊದಲ ಪತ್ನಿ ಪ್ರತಿಕ್ರಿಯೆ
ಜೀವನದ ಒಗಟಿನಲ್ಲಿ ಸಿಲುಕಿಕೊಳ್ಳಬೇಡ, ಇದೇ ಜೀವನ: ಆಶಿಶ್‌ ವಿದ್ಯಾರ್ಥಿ ಎರಡನೇ ಮದುವೆ ಬಗ್ಗೆ ಮೊದಲ ಪತ್ನಿ ಪ್ರತಿಕ್ರಿಯೆ

Ashish Vidyarthi: ಜೀವನದ ಒಗಟಿನಲ್ಲಿ ಸಿಲುಕಿಕೊಳ್ಳಬೇಡ, ಇದೇ ಜೀವನ: ಆಶಿಶ್‌ ವಿದ್ಯಾರ್ಥಿ ಎರಡನೇ ಮದುವೆ ಬಗ್ಗೆ ಮೊದಲ ಪತ್ನಿ ಪ್ರತಿಕ್ರಿಯೆ

26 May 2023, 12:06 ISTHT Kannada Desk
26 May 2023, 12:06 IST

ಪತಿ ಆಶಿಶ್‌ ವಿದ್ಯಾರ್ಥಿಯ ಈ ಎರಡನೇ ಮದುವೆ ವಿಚಾರ ತಿಳಿಯುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ಒಂದಷ್ಟು ಬರಹಗಳನ್ನು ಪೋಸ್ಟ್‌ ಮಾಡಿದ್ದಾರೆ ಮೊದಲ ಪತ್ನಿ ರಾಜೋಶಿ.

Ashish Vidyarthi: ಬಹುಭಾಷಾ ನಟ ಆಶಿಶ್‌ ವಿದ್ಯಾರ್ಥಿ (Ashish Vidyarthi) ಸದ್ಯ ಎರಡನೇ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. 60ರ ಇಳಿವಯಸ್ಸಿನಲ್ಲಿ 50ರ ಪ್ರಾಯದ ಫ್ಯಾಷನ್‌ ಉದ್ಯಮಿ ರೂಪಾಲಿ ಬರುವಾ (Rupali Barua) ಅವರನ್ನು ವಿವಾಹವಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದ ಆಶಿಶ್‌, ನನ್ನ ಜೀವನದ ಈ ಹಂತದಲ್ಲಿ ರೂಪಾಲಿಯನ್ನು ಮದುವೆ ಆಗಿರುವುದು ಒಂದು ಅಸಾಧಾರಣ ಭಾವ ಎಂದಿದ್ದರು.

ಮದುವೆಯ ಬಳಿಕ ಪ್ರತಿಕ್ರಿಯಿಸಿದ್ದ ಆಶಿಶ್ ವಿದ್ಯಾರ್ಥಿ, "ನನ್ನ ಜೀವನದ ಈ ಹಂತದಲ್ಲಿ, ರೂಪಾಲಿ ಅವರನ್ನು ಮದುವೆಯಾಗುವುದು ಒಂದು ಅಸಾಮಾನ್ಯ ಭಾವನೆ. ರೂಪಾಲಿ ಭೇಟಿ ಹೇಗಾಯಿತು ಎಂಬುದನ್ನು ಬೇರೆ ಸಮಯದಲ್ಲಿ ಹಂಚಿಕೊಳ್ಳುತ್ತೇನೆ. ನಾವು ಸ್ವಲ್ಪ ಸಮಯದ ಹಿಂದಷ್ಟೇ ಪರಿಚಯವಾಗಿದ್ದು, ಈ ಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ನಮ್ಮ ಈ ಮದುವೆ ಸಂಭ್ರಮವೂ ಅಷ್ಟೇ ಸರಳವಾಗಿ ನೆರವೇರಿಸಿಕೊಳ್ಳಬೇಕೆಂದು ಬಯಸಿದ್ದೇವೆ" ಎಂದಿದ್ದರು.

ಮೊದಲ ಪತ್ನಿ ರಾಜೋಶಿ ಪ್ರತಿಕ್ರಿಯೆ

ಪತಿ ಆಶಿಶ್‌ ವಿದ್ಯಾರ್ಥಿಯ ಈ ಎರಡನೇ ಮದುವೆ ವಿಚಾರ ತಿಳಿಯುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ಒಂದಷ್ಟು ಬರಹಗಳನ್ನು ಪೋಸ್ಟ್‌ ಮಾಡಿದ್ದಾರೆ ಮೊದಲ ಪತ್ನಿ ರಾಜೋಶಿ. ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿರುವ, ತಮಗಾದ ನೋವನ್ನು ಅಕ್ಷರಕ್ಕಿಳಿಸಿದ್ದಾರೆ. "ಓವರ್‌ ಥಿಂಕಿಂಗ್ ಮತ್ತು ಅನುಮಾನ ಇದೀಗ ನಿಮ್ಮ ಮನಸ್ಸಿನಿಂದ ಹೊರಬರಲಿ. ಗೊಂದಲ ಅಳಿಸಿ ಸ್ಪಷ್ಟತೆ ಮೂಡಲಿ. ಶಾಂತತೆಯು ನಿಮ್ಮ ಜೀವನವನ್ನು ತುಂಬಲಿ. ನೀವು ತುಂಬ ಬಲಶಾಲಿಯಾಗಿದ್ದೀರಿ. ಇದೀಗ ನಿಮ್ಮ ಆಶೀರ್ವಾದವನ್ನು ಸ್ವೀಕರಿಸುವ ಸಮಯ ಬಂದಿದೆ. ನೀವು ಅದಕ್ಕೆ ಅರ್ಹರು" ಎಂದಿದ್ದಾರೆ ರಾಜೋಶಿ.

ಇದರ ಜತೆಗೆ ರಾಜೋಶಿ ತಮ್ಮ ಇನ್‌ಸ್ಟಾಗ್ರಾಮ್ ವಾಲ್‌ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ‘ಜೀವನದ ಒಗಟಿನಲ್ಲಿ ಸಿಲುಕಿಕೊಳ್ಳಬೇಡಿ, ಇದೇ ಜೀವನ’ ಎಂದು ಅದಕ್ಕೆ ಕ್ಯಾಪ್ಶನ್‌ ನೀಡಿದ್ದಾರೆ.

ರಾಜೋಶಿ  ಬರುವಾ ಪೋಸ್ಟ್‌
ರಾಜೋಶಿ ಬರುವಾ ಪೋಸ್ಟ್‌

ಯಾರು ಈ ರೂಪಾಲಿ?

60ರ ಹರೆಯದಲ್ಲಿ ಭಾರತದ ಖ್ಯಾತ ಖಳನಟ ಆಶಿಶ್ ವಿದ್ಯಾರ್ಥಿ ಕೋಲ್ಕತ್ತಾ ಕ್ಲಬ್‌ನಲ್ಲಿ ಫ್ಯಾಷನ್​ ಇಂಡಸ್ಟ್ರಿಯ ಉದ್ಯಮಿ ರೂಪಾಲಿ ಬರುವಾ ಅವರೊಂದಿಗೆ ರಿಜಿಸ್ಟರ್​ ಮ್ಯಾರೇಜ್​ ಆಗಿದ್ದಾರೆ. ರೂಪಾಲಿ ಅಸ್ಸಾಂನ ಗುವಾಹಟಿ ಮೂಲದವರಾಗಿದ್ದು, ಉದ್ಯಮಿಯಾಗಿದ್ದಾರೆ. ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ದುಬಾರಿ ಫ್ಯಾಷನ್ ಶಾಪ್​ ಇಟ್ಟುಕೊಂಡಿದ್ದಾರೆ.