Sourav Ganguly: ಬೆಳ್ಳಿ ತೆರೆಗೆ ಸೌರವ್ ಗಂಗೂಲಿ ಬಯೋಪಿಕ್; ದಾದಾ ಪಾತ್ರದಲ್ಲಿ ನಟಿಸಲಿದ್ದಾರಂತೆ ಈ ಸ್ಟಾರ್​ ಹೀರೋ?
ಕನ್ನಡ ಸುದ್ದಿ  /  ಮನರಂಜನೆ  /  Sourav Ganguly: ಬೆಳ್ಳಿ ತೆರೆಗೆ ಸೌರವ್ ಗಂಗೂಲಿ ಬಯೋಪಿಕ್; ದಾದಾ ಪಾತ್ರದಲ್ಲಿ ನಟಿಸಲಿದ್ದಾರಂತೆ ಈ ಸ್ಟಾರ್​ ಹೀರೋ?

Sourav Ganguly: ಬೆಳ್ಳಿ ತೆರೆಗೆ ಸೌರವ್ ಗಂಗೂಲಿ ಬಯೋಪಿಕ್; ದಾದಾ ಪಾತ್ರದಲ್ಲಿ ನಟಿಸಲಿದ್ದಾರಂತೆ ಈ ಸ್ಟಾರ್​ ಹೀರೋ?

Sourav Ganguly Biopic: ಸೌರವ್ ಗಂಗೂಲಿ ಅತ್ಯುತ್ತಮ ಆಟಗಾರ ಮಾತ್ರವಲ್ಲ, ಅತ್ಯುತ್ತಮ ನಾಯಕನೂ ಹೌದು. ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಹಣೆಪಟ್ಟಿಯನ್ನು ಅಳಿಸಿದ ಮೊದಲ ಕ್ಯಾಪ್ಟನ್​ ಕೂಡ ಹೌದು. ಅಂತಹ ಆಟಗಾರ ಬಯೋಪಿಕ್ ಬೆಳ್ಳಿ ತೆರೆಗೆ ಬಂದರೆ ಹೇಗಿರುತ್ತದೆ ಎಂದು ಒಮ್ಮೆ ಊಹಿಸಿ ನೋಡಿ. ಅವರ ಪಾತ್ರದಲ್ಲಿ ನಟಿಸೋದು ಯಾರು? ಇಲ್ಲಿದೆ ವಿವರ.

ಬೆಳ್ಳಿ ತೆರೆಗೆ ಸೌರವ್ ಗಂಗೂಲಿ ಬಯೋಪಿಕ್; ದಾದಾ ಪಾತ್ರದಲ್ಲಿ ನಟಿಸಲಿದ್ದಾರಂತೆ ಈ ಸ್ಟಾರ್​ ಹೀರೋ?
ಬೆಳ್ಳಿ ತೆರೆಗೆ ಸೌರವ್ ಗಂಗೂಲಿ ಬಯೋಪಿಕ್; ದಾದಾ ಪಾತ್ರದಲ್ಲಿ ನಟಿಸಲಿದ್ದಾರಂತೆ ಈ ಸ್ಟಾರ್​ ಹೀರೋ?

ಸೌರವ್ ಗಂಗೂಲಿ (Sourav Ganguly) ಟೀಮ್ ಇಂಡಿಯಾದ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಭಾರತೀಯ ಕ್ರಿಕೆಟ್ ತಂಡದ ಬಾಹ್ಯರೇಖೆಗಳನ್ನು ಬದಲಿಸಿದ ಹೆಗ್ಗಳಿಕೆ ಅವರದ್ದು. ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಅವರಂತಹ ಸ್ಟಾರ್ ಆಟಗಾರರನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪರಿಚಯಿಸಿದ್ದೇ ದಾದಾ. ಗಂಗೂಲಿ ನಾಯಕತ್ವದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಭಾರತ ತಂಡ ದೇಶ-ವಿದೇಶಗಳಲ್ಲಿ ಗೆದ್ದು ಬೀಗುತ್ತಿತ್ತು. ಇದರೊಂದಿಗೆ ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಹಣೆಪಟ್ಟಿಯನ್ನು ಅಳಿಸಿದ ಮೊದಲ ಕ್ಯಾಪ್ಟನ್​ ಕೂಡ ಹೌದು. ಭಾರತ ತಂಡದ ಸಾಮರ್ಥ್ಯ ಎಂತಹದ್ದು ಎಂಬುದನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸಿತು ಬಂಗಾಳ ಮಹಾರಾಜನ ಕ್ಯಾಪ್ಟನ್ಸಿ.

ಭಾರತ ಕ್ರಿಕೆಟ್ ತಂಡಕ್ಕೆ ಆಟಗಾರನಾಗಿ ಹಾಗೂ ನಾಯಕನಾಗಿ ಸೇವೆ ಸಲ್ಲಿಸಿದ ಸೌರವ್ ಗಂಗೂಲಿ ಅವರ ಜೀವನ ಚರಿತ್ರೆ ಇದೀಗ ಬೆಳ್ಳಿ ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ಆದರೆ ಗಂಗೂಲಿ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದು ಕುತೂಹಲಕರ ಪ್ರಶ್ನೆಯಾಗಿದೆ. ಪ್ರಸ್ತುತ ವರದಿಗಳ ಪ್ರಕಾರ, ಖ್ಯಾತ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರು ದಾದಾ ಪಾತ್ರವನ್ನು ನಿರ್ವಹಿಸಬಹುದು. ಈ ಪ್ರತಿಭಾವಂತ ನಟ ಇತ್ತೀಚೆಗೆ ಸ್ತ್ರೀ 2ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ 800 ಕೋಟಿಗೂ ಹೆಚ್ಚು ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದಿತ್ತು.

ಗಂಗೂಲಿ ಬಯೋಪಿಕ್​ಗೆ ಡೈರೆಕ್ಟರ್ ಯಾರು?

ಕಳೆದ ವರ್ಷ ಖ್ಯಾತ ಕೈಗಾರಿಕೋದ್ಯಮಿ ಮತ್ತು ಬೊಲ್ಲಂಟ್ ಇಂಡಸ್ಟ್ರೀಸ್ ಸಂಸ್ಥಾಪಕ ಶ್ರೀಕಾಂತ್ ಬೊಳ್ಳ ಅವರ ಜೀವನಾಧಾರಿತ ಶ್ರೀಕಾಂತ್ ಚಿತ್ರದಲ್ಲಿ ರಾಜ್​ಕುಮಾರ್ ರಾವ್ ಅದ್ಭುತವಾಗಿ ನಟಿಸಿದ್ದರು. ಈ ಹಿನ್ನಲೆಯಲ್ಲಿ ಭಾರತ ತಂಡದಲ್ಲಿ ದಾದಾ ಎಂದೇ ಖ್ಯಾತಿ ಪಡೆದಿರುವ ಸೌರವ್ ಗಂಗೂಲಿ ಅವರ ಬಯೋಪಿಕ್​​ನಲ್ಲಿ ಸ್ಟಾರ್ ನಟ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಗಂಗೂಲಿ ಜೀವನಾಧಾರಿತ ಈ ಚಿತ್ರವನ್ನು ಲವ್ ರಂಜನ್ ನಿರ್ಮಿಸಲಿದ್ದಾರೆ ಎನ್ನಲಾಗುತ್ತಿದೆ. ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶಿಸಬಹುದು. 2021 ರಲ್ಲಿ ಗಂಗೂಲಿ ಅವರೇ ಈ ಬಯೋಪಿಕ್ ಅನ್ನು ಘೋಷಿಸಿದ್ದರು.

ಗಂಗೂಲಿ ಪಾತ್ರದಲ್ಲಿ ನಟಿಸಲು ರೇಸ್​ನಲ್ಲಿದ್ದರು ಇಬ್ಬರು

ರಾಜ್‌ಕುಮಾರ್ ರಾವ್ ಅವರಿಗಿಂತ ಮೊದಲು ಗಂಗೂಲಿ ಬಯೋಪಿಕ್ ರೇಸ್‌ನಲ್ಲಿ ನಟಿಸಲು ಇಬ್ಬರು ಬಾಲಿವುಡ್ ಸೂಪರ್‌ಸ್ಟಾರ್‌ಗಳ ಹೆಸರು ಕೇಳಿಬಂದಿತ್ತು. ದಾದಾ ಪಾತ್ರಕ್ಕಾಗಿ ಆಯುಷ್ಮಾನ್ ಖುರಾನಾ ಮತ್ತು ರಣಬೀರ್ ಕಪೂರ್ ಅವರನ್ನು ಸಂಪರ್ಕಿಸಲಾಗಿತ್ತು ಎಂದು ವರದಿಯಾಗಿತ್ತು. ಆಯುಷ್ಮಾನ್ ಸಹ ಈ ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಅವರು ಅಧಿಕೃತವಾಗಿ ನಟಿಸಲು ಅಧಿಕೃತವಾಗಿ ಸಹಿ ಕೂಡ ಹಾಕಿದ್ದರು. ಆದರೆ ಕೆಲವು ಕಾರಣಗಳಿಂದ ಆಯುಷ್ಮಾನ್ ಹಿಂದೆ ಸರಿದರು. ಇದಾದ ನಂತರ ರಣಬೀರ್ ಕಪೂರ್ ಹೆಸರು ತೇಲಿ ಬಂತು.

ಸಿನಿಮಾವೊಂದರ ಪ್ರಚಾರದಲ್ಲಿ ಗಂಗೂಲಿ ಜೊತೆ ಚಾಕೊಲೇಟ್ ಬಾಯ್ ಕಾಣಿಸಿಕೊಂಡಿದ್ದರು. ಹೀಗಾಗಿ, ರಣಬೀರ್ ಅವರು ದಾದಾ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈಗ ಅನಿರೀಕ್ಷಿತವಾಗಿ ರಾಜ್ ಕುಮಾರ್ ರಾವ್ ಹೆಸರು ಮುನ್ನೆಲೆಗೆ ಬಂದಿದೆ. ಬಯೋಪಿಕ್​ಗೆ ಸಂಬಂಧಿಸಿ ಸಿದ್ಧತೆಗಳು ನಡೆಯುತ್ತಿವೆ. ಆದರೆ, ಯಾವಾಗ ಸೆಟ್ಟೇರುತ್ತದೆ, ಯಾರು ನಟಿಸಲಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

Whats_app_banner