ಕನ್ನಡ ಸುದ್ದಿ  /  Entertainment  /  Bollywood Actor Ranbir Kapoor To Take Legal Action Against Paparazzi Who Leaked Actress Pictures

Ranbir Kapoor: ಪತ್ನಿ ಆಲಿಯಾಳ ಖಾಸಗಿ ಫೋಟೋ ಕ್ಲಿಕ್‌; ಪಾಪರಾಜಿಗಳ ವಿರುದ್ಧ ರಣಬೀರ್‌ ಕಪೂರ್‌ ಕಾನೂನು ಕ್ರಮ

ಕೆಲವು ದಿನಗಳ ಹಿಂದೆ ಆಲಿಯಾ ಭಟ್ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ಕುಳಿತಿದ್ದ ಚಿತ್ರಗಳನ್ನು ಪಾಪರಾಜಿಗಳು ಲೀಕ್ ಮಾಡಿದ್ದರು. ಆ ಘಟನೆಗೆ ಸಂಬಂಧಿಸಿದಂತೆ ರಣಬೀರ್‌ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಪತ್ನಿ ಆಲಿಯಾಳ ಖಾಸಗಿ ಫೋಟೋ ಕ್ಲಿಕ್‌; ಪಾಪರಾಜಿಗಳ ವಿರುದ್ಧ ರಣಬೀರ್‌ ಕಪೂರ್‌ ಕಾನೂನು ಕ್ರಮ
ಪತ್ನಿ ಆಲಿಯಾಳ ಖಾಸಗಿ ಫೋಟೋ ಕ್ಲಿಕ್‌; ಪಾಪರಾಜಿಗಳ ವಿರುದ್ಧ ರಣಬೀರ್‌ ಕಪೂರ್‌ ಕಾನೂನು ಕ್ರಮ

Ranbir Kapoor: ಆಲಿಯಾ ಭಟ್ ತಾಯಿಯಾದ ಬಳಿಕ ತಮ್ಮ ಬಹುಪಾಲು ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಮಗಳೊಂದಿಗೆ ಲಾಲನೆ ಪಾಲನೆಯಲ್ಲಿಯೇ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಮನೆಯೊಳಗಿನ ಕೆಲವು ಖಾಸಗಿ ಫೋಟೋಗಳು ಇತ್ತೀಚೆಗಷ್ಟೇ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದು, ಕಳವಳಕ್ಕೆ ಕಾರಣವಾಗಿದ್ದವು. ಅನುಮತಿ ಪಡೆಯದೆ, ಕೆಲವು ಛಾಯಾಗ್ರಾಹಕರು ದೂರದಿಂದಲೇ ಆಲಿಯಾ ಅವರ ಫೋಟೋ ಕ್ಲಿಕ್‌ ಮಾಡಿ ಹರಿಬಿಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಣಬೀರ್‌ ಕಪೂರ್‌ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

'ಇದು ನಾಚಿಕೆಗೇಡು'

'ನಾವು ಪಾಪರಾಜಿಗಳನ್ನು (ಫೋಟೋಗ್ರಾಫರ್ಸ್‌) ಗೌರವಿಸುತ್ತೇವೆ. ಪಾಪರಾಜಿ ನಮ್ಮ ಸಂಸ್ಕೃತಿಯ ಭಾಗ ಎಂದು ನಾನು ಭಾವಿಸುತ್ತೇನೆ. ಅದೇ ರೀತಿ ಭಾವಿಸಿದ್ದೇನೆ. ನಾವು ಒಬ್ಬರಿಗೊಬ್ಬರು ಕೆಲಸ ಮಾಡುತ್ತೇವೆ. ಅವರು ನಮ್ಮೊಂದಿಗೆ ಕೆಲಸ ಮಾಡುತ್ತಾರೆ, ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ. ಆದರೆ ಈ ರೀತಿ ಇನ್ನೊಬ್ಬರ ಖಾಸಗಿ ಫೋಟೋಗಳನ್ನು ಗುಟ್ಟಾಗಿ ತೆಗೆಯುವುದು ಒಳ್ಳೆಯ ಕೆಲಸವಲ್ಲ. ನಿಜಕ್ಕೂ ಇದು ನಾಚಿಕೆಗೇಡಿನ ಕೆಲಸ. ಹೀಗೆ ಮಾಡುವುದು ತಪ್ಪು. ಇದು ಇನ್ನೊಮ್ಮೆ ಘಟಿಸಬಾರದು. ಹಾಗಾಗಿ ಘಟನೆಗೆ ಸಂಬಂಧಿಸಿದಂತೆ ನಾನು ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ" ಎಂದಿದ್ದಾರೆ ರಣಬೀರ್.‌

ಇದು ಗೌಪ್ಯತೆಯ ಉಲ್ಲಂಘನೆ...

ಕೆಲವು ದಿನಗಳ ಹಿಂದೆ ಆಲಿಯಾ ಭಟ್ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ಕುಳಿತಿದ್ದ ಚಿತ್ರಗಳನ್ನು ಪಾಪರಾಜಿಗಳು ಲೀಕ್ ಮಾಡಿದ್ದರು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಆಲಿಯಾ ಬೆಂಬಲಕ್ಕೆ ಬಂದಿದ್ದರು. ಇದೀಗ ರಣಬೀರ್ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇದು ಗೌಪ್ಯತೆಯ ಉಲ್ಲಂಘನೆಯಾಗಿದೆ. ನೀವು ನನ್ನ ಮನೆಯೊಳಗೆ ಈ ರೀತಿ ಚಿತ್ರೀಕರಣ ಮಾಡುವುದು ಸರಿಯಲ್ಲ. ಅಲ್ಲಿ ಏನು ಬೇಕಾದರೂ ಆಗಬಹುದು, ಅದು ನನ್ನ ಮನೆಯಾಗಿದೆ" ಎಂದಿದ್ದಾರೆ.

ಆಲಿಯಾ ಗರಂ..ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌..

ಮನೆಯ ಬಾಲ್ಕನಿಯಲ್ಲಿನ ಫೋಟೋಗಳು ವೈರಲ್‌ ಆಗುತ್ತಿದ್ದಂತೆ, ಕೆಂಡಾಮಂಡಲರಾದ ಆಲಿಯಾ, ಅದೇ ಕೋಪದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. "ನೀವು ನನ್ನನ್ನು ತಮಾಷೆ ಮಾಡುತ್ತಿದ್ದೀರಾ ... ಎಂದಿನಂತೆ ನಾನು ನನ್ನ ಮನೆಯ ಲಿವಿಂಗ್ ಏರಿಯಾದಲ್ಲಿದ್ದಾಗ ಯಾರೋ ನನ್ನ ಗಮನಿಸುತ್ತಿದ್ದಾರೆ ಎಂದು ಅನಿಸಿತು. ನಾನು ತಲೆಯೆತ್ತಿ ನೋಡಿದೆ. ನನ್ನ ಮನೆಯ ಪಕ್ಕದ ಕಟ್ಟಡದ ಮೇಲೆ ಇಬ್ಬರು ಕ್ಯಾಮರಾಗಳನ್ನು ಹಿಡಿದಿದ್ದರು. ಹೀಗೆ ಮಾಡುವುದು ಸರಿಯೇ, ಇದನ್ನು ಮಾಡಲು ಯಾರಾದರೂ ಅನುಮತಿ ಪಡೆಯಬಹುದೇ? ಇದು ಖಾಸಗಿತನದ ಉಲ್ಲಂಘನೆಯಲ್ಲವೇ? ನಿಮ್ಮ ಮತ್ತು ನಮ್ಮ ನಡುವೆ ಒಂದು ಗೆರೆ ಇತ್ತು. ಇದೀಗ ನೀವು ಆ ಲೈನ್‌ ದಾಟಿದ್ದೀರಿ" ಎಂದು ಬರೆದುಕೊಂಡಿದ್ದರು ಆಲಿಯಾ.

IPL_Entry_Point