ಯಶ್‌ ಸಿನಿಮಾದಲ್ಲಿ ಬಾಲಿವುಡ್‌ನ ಅನಿಲ್‌ ಕಪೂರ್!?‌ 41 ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ಪಲ್ಲವಿ ಅನುಪಲ್ಲವಿ ನಟ
ಕನ್ನಡ ಸುದ್ದಿ  /  ಮನರಂಜನೆ  /  ಯಶ್‌ ಸಿನಿಮಾದಲ್ಲಿ ಬಾಲಿವುಡ್‌ನ ಅನಿಲ್‌ ಕಪೂರ್!?‌ 41 ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ಪಲ್ಲವಿ ಅನುಪಲ್ಲವಿ ನಟ

ಯಶ್‌ ಸಿನಿಮಾದಲ್ಲಿ ಬಾಲಿವುಡ್‌ನ ಅನಿಲ್‌ ಕಪೂರ್!?‌ 41 ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ಪಲ್ಲವಿ ಅನುಪಲ್ಲವಿ ನಟ

Anil Kapoor: ‘ಪಲ್ಲವಿ ಅನುಪಲ್ಲವಿ’ ಚಿತ್ರದ ನಂತರ ಅನಿಲ್‍ ಕಪೂರ್ ಬೇರ್ಯಾವುದೇ ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನಗಳು ಆಗಾಗ ಆಗುತ್ತಲೇ ಇತ್ತು. ಆದರೆ, ಅನಿಲ್‍ ಮಾತ್ರ ಕಾರಣಾಂತರಗಳಿಂದ ಕನ್ನಡ ಚಿತ್ರರಂಗದಿಂದ ದೂರವೇ ಇದ್ದರು. ಇದೀಗ ಅವರು ಬಹಳ ವರ್ಷಗಳ ನಂತರ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ.

41 ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ಪಲ್ಲವಿ ಅನುಪಲ್ಲವಿ ನಟ
41 ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ಪಲ್ಲವಿ ಅನುಪಲ್ಲವಿ ನಟ

Yash Toxic Movie: ನಟ ಅನಿಲ್‍ ಕಪೂರ್ ಹಿಂದಿಯಲ್ಲಿ ಜನಪ್ರಿಯವಾಗುವುದಕ್ಕೂ ಮೊದಲು ಕನ್ನಡದಲ್ಲಿ ನಟಿಸಿದ್ದು ಗೊತ್ತೇ ಇದೆ. 1983ರಲ್ಲಿ ಬಿಡುಗಡೆಯಾದ ‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದರು. ಇದೀಗ 41 ವರ್ಷಗಳ ನಂತರ ಅವರು ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

‘ಪಲ್ಲವಿ ಅನುಪಲ್ಲವಿ’ ಚಿತ್ರದ ನಂತರ ಅನಿಲ್‍ ಕಪೂರ್ ಬೇರ್ಯಾವುದೇ ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನಗಳು ಆಗಾಗ ಆಗುತ್ತಲೇ ಇತ್ತು. ಆದರೆ, ಅನಿಲ್‍ ಮಾತ್ರ ಕಾರಣಾಂತರಗಳಿಂದ ಕನ್ನಡ ಚಿತ್ರರಂಗದಿಂದ ದೂರವೇ ಇದ್ದರು. ಇದೀಗ ಅವರು ಬಹಳ ವರ್ಷಗಳ ನಂತರ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ.

4 ದಶಕದ ಬಳಿಕ ಕನ್ನಡಕ್ಕೆ

ಇಷ್ಟಕ್ಕೂ ಅನಿಲ್‍ ಕಪೂರ್ ಯಾವ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಪ್ರಶ್ನೆ ಬರಬಹುದು. ಅನಿಲ್‍ ಇದೀಗ ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರೀಕರಣ ಸ್ಥಳಕ್ಕೆ ಕಿಯಾರಾ ಅಡ್ವಾಣಿ ಜೊತೆಗೆ ಪ್ರಯಾಣ ಮಾಡಿದ್ದಾರೆ. ಚಿತ್ರದಲ್ಲಿ ಅವರು ನಟಿಸುತ್ತಿರುವ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆ ಬರದಿದ್ದರೂ, ಅನಿಲ್‍ ಕಪೂರ್ ಚಿತ್ರೀಕರಣಕ್ಕೆ ಹೋಗುತ್ತಿರುವುದರಿಂದ, ಅವರು ಚಿತ್ರದಲ್ಲಿ ನಟಿಸುತ್ತಿರುವ ಸಾಧ್ಯತೆ ಇದೆ. ಈ ಮೂಲಕ ಅವರು 41 ವರ್ಷಗಳ ನಂತರ ಕನ್ನಡ ಚಿತ್ರವೊಂದರಲ್ಲಿ ನಟಿಸಿದಂತಾಗುತ್ತದೆ.

‘ಟಾಕ್ಸಿಕ್‍’ ಚಿತ್ರವನ್ನು ಕನ್ನಡ ಚಿತ್ರ ಎಂದು ಹೇಳಬಹುದೋ, ಬೇಡವೋ ಎಂಬ ಜಿಜ್ಞಾಸೆ ಎಲ್ಲರಲ್ಲೂ ಇದೆ. ಏಕೆಂದರೆ, ನಿರ್ಮಾಪಕರು ಮತ್ತು ನಾಯಕ ಕನ್ನಡದವರಾದರೂ, ನಿರ್ದೇಶಕಿ ಮಲಯಾಳಂನವರು. ಇನ್ನು, ಕಲಾವಿದರು ಮತ್ತು ತಂತ್ರಜ್ಞರೆಲ್ಲಾ ತಮಿಳು, ಹಿಂದಿ ಸೇರಿದಂತೆ ಬೇರೆ ಭಾಷೆಯವರು. ಹಾಗಾಗಿ, ಇದು ಕನ್ನಡ ಚಿತ್ರವಾ? ಎಂಬ ಪ್ರಶ್ನೆಯೂ ಹಲವರಲ್ಲಿದೆ. ನಿರ್ಮಾಪಕರು ಮತ್ತು ನಾಯಕ ಕನ್ನಡದವರಾದ್ದರಿಂದ ಕನ್ನಡ ಚಿತ್ರವೆನ್ನಬಹುದು.

ಟಾಕ್ಸಿಕ್‌ ಚಿತ್ರದಲ್ಲಿ ಅನಿಲ್‌ ಕಪೂರ್‌

‘ಟಾಕ್ಸಿಕ್‍’ ಚಿತ್ರದ ಚಿತ್ರೀಕರಣ ಇದೀಗ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣಕ್ಕೆ ಅನಿಲ್‍ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಜೊತೆಯಾಗಿ ಪ್ರಯಾಣ ಬೆಳೆಸಿದ್ದರಿಂದ, ಅನಿಲ್‍ ಕಪೂರ್ ಈ ಚಿತ್ರದಲ್ಲಿ ನಟಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಮುಂಬೈನ ವರ್ಸೋವಾದಲ್ಲಿ ಅವರಿಬ್ಬರೂ ಜೆಟ್ಟಿ ಹತ್ತಿ, ಚಿತ್ರೀಕರಣ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ.ಯಶ್‍ ಸಹ ಕೆಲವು ದಿನಗಳಿಂದ ಮುಂಬೈನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದು, ಪ್ರತಿದಿನ ಚಿತ್ರೀಕರಣಕ್ಕೆ ಜೆಟ್ಟಿ (ದೋಣಿ) ಮೂಲಕ ಹೋಗಿ ಬರುತ್ತಿದ್ದಾರೆ.

ಬಹುಭಾಷಾ ಕಲಾವಿದರ ದಂಡು

‘ಟಾಕ್ಸಿಕ್‍’ ಚಿತ್ರದಲ್ಲಿ ಯಶ್‍, ಕಿಯಾರಾ ಅಡ್ವಾಣಿ ಮತ್ತು ಅನಿಲ್‍ ಕಪೂರ್ ಚಿತ್ರಕ್ಕೆ ನಯನತಾರಾ,, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಗೀತೂ ಮೋಹನ್‍ ದಾಸ್‍ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.

ವರದಿ: ಚೇತನ್‌ ನಾಡಿಗೇರ್

Whats_app_banner