Chhaava Collection Day 1: ಬಾಕ್ಸ್‌ ಆಫೀಸ್‌ನಲ್ಲಿ ಛಾವಾ ಗರ್ಜನೆ, ಮೊದಲ ದಿನವೇ ದಾಖಲೆಯ ಗಳಿಕೆ ಕಂಡ ವಿಕ್ಕಿ ಕೌಶಲ್‌, ರಶ್ಮಿಕಾ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Chhaava Collection Day 1: ಬಾಕ್ಸ್‌ ಆಫೀಸ್‌ನಲ್ಲಿ ಛಾವಾ ಗರ್ಜನೆ, ಮೊದಲ ದಿನವೇ ದಾಖಲೆಯ ಗಳಿಕೆ ಕಂಡ ವಿಕ್ಕಿ ಕೌಶಲ್‌, ರಶ್ಮಿಕಾ ಸಿನಿಮಾ

Chhaava Collection Day 1: ಬಾಕ್ಸ್‌ ಆಫೀಸ್‌ನಲ್ಲಿ ಛಾವಾ ಗರ್ಜನೆ, ಮೊದಲ ದಿನವೇ ದಾಖಲೆಯ ಗಳಿಕೆ ಕಂಡ ವಿಕ್ಕಿ ಕೌಶಲ್‌, ರಶ್ಮಿಕಾ ಸಿನಿಮಾ

ವಿಕ್ಕಿ ಕೌಶಲ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಫೆ. 14ರಂದು ಬಿಡುಗಡೆ ಆಗಿದೆ. ಬಿಡುಗಡೆ ಆದ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಕಮಾಯಿ ಮುಂದುವರಿಸಿದೆ. ದಾಖಲೆಯ ಕಲೆಕ್ಷನ್‌ ಮಾಡಿ, ಬಾಲಿವುಡ್‌ನಲ್ಲಿ ಈ ವರ್ಷದ ಅತಿ ದೊಡ್ಡ ಓಪನರ್‌ ಎಂಬ ಖ್ಯಾತಿ ಪಡೆದಿದೆ.

Chhaava Collection Day 1: ಬಾಕ್ಸ್‌ ಆಫೀಸ್‌ನಲ್ಲಿ ಛಾವಾ ಗರ್ಜನೆ
Chhaava Collection Day 1: ಬಾಕ್ಸ್‌ ಆಫೀಸ್‌ನಲ್ಲಿ ಛಾವಾ ಗರ್ಜನೆ

Chhaava Collection Day 1: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ 'ಛಾವಾ' ಚಿತ್ರಕ್ಕೆ ದೇಶಾದ್ಯಂತ ಪಾಸಿಟಿವ್‌ ಪ್ರತಿಕ್ರಿಯೆ ಸಂದಾಯವಾಗಿದೆ. ಮೊದಲ ದಿನವೇ ಗಳಿಕೆಯ ಲೆಕ್ಕಾಚಾರದಲ್ಲಿ ಅನೇಕ ದಾಖಲೆಗಳನ್ನು ಮುರಿದಿದೆ ಈ ಸಿನಿಮಾ. ನಿರೀಕ್ಷೆಗೂ ಮಿಗಿಲಾದ ರೆಸ್ಪಾನ್ಸ್‌ ಪಡೆದ ಛಾವಾ ಸಿನಿಮಾ, ಶುಕ್ರವಾರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 31 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿದೆ. ಇದರೊಂದಿಗೆ, ವಿಕ್ಕಿ ಕೌಶಲ್ ಅವರ ಸಿನಿಮಾ ಕೆರಿಯರ್‌ನಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ.

ಛಾವಾ ಮೊದಲ ದಿನದ ಕಲೆಕ್ಷನ್‌ ಎಷ್ಟು?

ಈ ಹಿಂದೆ ವಿಕ್ಕಿ ಕೌಶಾಲ್ ನಟನೆಯ ಬ್ಯಾಡ್ ನ್ಯೂಸ್ 8 ಕೋಟಿ 62 ಲಕ್ಷ ಗಳಿಸಿದ್ದರೆ, ಉರಿ ಸಿನಿಮಾ 8 ಕೋಟಿ 20 ಲಕ್ಷ ಗಳಿಸಿತ್ತು. ಅದಾದ ಮೇಲೆ ಅವರ ಸೋಲೋ ಬಿಡುಗಡೆಯ ಸಿನಿಮಾಗಳು ಈ ಮಟ್ಟದ ಗಳಿಕೆ ಕಂಡಿರಲಿಲ್ಲ. ಈಗ ಛಾವಾ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ sacnilk ವರದಿ ಪ್ರಕಾರ ಮೊದಲ ದಿನವೇ 31 ಕೋಟಿ ಬಿಜಿನೆಸ್‌ ಮಾಡಿದೆ ಈ ಸಿನಿಮಾ. ಈ ವರ್ಷದ ಮೊದಲ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಬಾಲಿವುಡ್‌ ಸಿನಿಮಾ ಎಂಬ ಖ್ಯಾತಿಯನ್ನೂ ಪಡೆದಿದೆ.

ಮೊದಲ ದಿನವೇ ದಾಖಲೆ ಬರೆದ ಛಾವಾ

ಲಕ್ಷ್ಮಣ್ ಉಟೇಕರ್ ನಿರ್ದೇಶನದ 'ಛಾವಾ' ಈ ವರ್ಷದ ಅತಿದೊಡ್ಡ ಓಪನರ್ ಆಗಿ ಹೊರಹೊಮ್ಮಿದೆ. ಇದಕ್ಕೂ ಮೊದಲು ಅಕ್ಷಯ್ ಕುಮಾರ್ ಅವರ ಸ್ಕೈ ಫೋರ್ಸ್ ಚಿತ್ರದ ಹೆಸರಿನಲ್ಲಿ ಈ ದಾಖಲೆ ಇತ್ತು. ಸ್ಕೈ ಫೋರ್ಸ್‌ ಸಿನಿಮಾ ಆರಂಭಿಕ ದಿನದಂದು 15.30 ಕೋಟಿ ರೂ.ಗಳ ಕಲೆಕ್ಷನ್‌ ಮಾಡಿತ್ತು. ಇದೀಗ ಛಾವಾ ಈ ದಾಖಲೆಯನ್ನು ಮುರಿದಿದೆ. ಗಳಿಕೆಯ ಅಂಕಿಅಂಶಗಳನ್ನು ಪರಿಗಣಿಸಿದರೆ, ಈ ಚಿತ್ರವು ಮೊದಲ ವಾರಾಂತ್ಯದಲ್ಲೇ 100 ಕೋಟಿ ಕ್ಲಬ್‌ಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಫೆ 14ರ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆ ಆದ ಛಾವಾ ಸಿನಿಮಾ, ಆರಂಭದಿಂದಲೂ ಹೈಪ್‌ ಗಿಟ್ಟಿಸಿಕೊಂಡಿತ್ತು. ಇದೀಗ ಸಿನಿಮಾ ಬಿಡುಗಡೆ ಬಳಿಕವೂ ಅದು ಮುಂದುವರಿದಿದೆ. ಶಿವಾಜಿ ಮಹಾರಾಜರ ಮಗ ಸಂಭಾಜಿ ಕಥೆ ಎಂದ ಮೇಲೆ ಸಿನಿಮಾ ಪ್ರಿಯರ ಕಿವಿ ನಿಮಿರಿದ್ದವು. ಇತಿಹಾಸದ ಪುಟಗಳಲ್ಲಿ ಹೆಚ್ಚು ನಮೂದಾಗದ ಈ ಮಹಾರಾಜನ ಕಥೆಯನ್ನು ಶೌರ್ಯದ ಪ್ರತೀಕ ಎಂಬಂತೆ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಲಕ್ಷ್ಮಣ್‌ ಉಟೇಕರ್.‌

ತಾರಾಗಣ, ತಾಂತ್ರಿಕ ವರ್ಗ

ಸಂಭಾಜಿಯಾಗಿ ವಿಕ್ಕಿ ಕೌಶಾಲ್‌ ನಟಿಸಿದರೆ, ಆತನ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಖನ್ನಾ, ಅಶುತೋಷ್ ರಾಣಾ, ದಿವ್ಯಾ ದತ್ತ, ಡಯಾನಾ ಪೆಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಛಾವಾ ಚಿತ್ರವು ಶಿವಾಜಿ ಸಾವಂತ್ ಬರೆದ ಅದೇ ಶೀರ್ಷಿಕೆಯ ಮರಾಠಿ ಪುಸ್ತಕವನ್ನು ಆಧರಿಸಿದೆ. ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಛಾವಾ ಸಿನಿಮಾವನ್ನು ನಿರ್ಮಿಸಿದೆ. ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸೌರಭ್ ಗೋಸ್ವಾಮಿ ಛಾಯಾಗ್ರಹಣ ಮತ್ತು ಮನೀಶ್ ಪ್ರಧಾನ್ ಸಂಕಲನ ಈ ಚಿತ್ರಕ್ಕಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner