Aishwarya Rai: ಅಪ್ಪ ಕೃಷ್ಣರಾಜ್ ರೈ ನೆನಪಿನಲ್ಲಿ ನಟಿ ಐಶ್ವರ್ಯಾ ರೈ; ಅಜ್ಜನ ಭಾವಚಿತ್ರಕ್ಕೆ ಆರಾಧ್ಯ ಬಚ್ಚನ್ ನಮನ; ಪುಣ್ಯತಿಥಿಯ ಫೋಟೋಗಳು
ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ತನ್ನ ತಂದೆ ಕೃಷ್ಣರಾಜ್ ರೈ ಅವರ 8ನೇ ವರ್ಷದ ಪುಣ್ಯತಿಥಿಯ ನೆನಪಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ತಂದೆಯ ಭಾವಚಿತ್ರಕ್ಕೆ ಐಶ್ವರ್ಯಾ ರೈ ನಮನಗಳನ್ನು ಸಲ್ಲಿಸಿದ್ದಾರೆ. ಇದೇ ಸಮಯದಲ್ಲಿ ತನ್ನ ಅಜ್ಜನ ಫೋಟೋಗೆ ಆರಾಧ್ಯ ಬಚ್ಚನ್ ಕೂಡ ನಮಸ್ಕರಿಸಿದ್ದಾರೆ.

ಕರ್ನಾಟಕದ ಕರಾವಳಿ ಮೂಲದ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ತನ್ನ ತಂದೆ ಕೃಷ್ಣರಾಜ್ ರೈ ಅವರ 8ನೇ ವರ್ಷದ ಪುಣ್ಯತಿಥಿಯ ನೆನಪಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ತಂದೆಯ ಭಾವಚಿತ್ರಕ್ಕೆ ಐಶ್ವರ್ಯಾ ರೈ ನಮನಗಳನ್ನು ಸಲ್ಲಿಸಿದ್ದಾರೆ. ಇದೇ ಸಮಯದಲ್ಲಿ ತನ್ನ ಅಜ್ಜನ ಫೋಟೋಗೆ ಆರಾಧ್ಯ ಬಚ್ಚನ್ ಕೂಡ ನಮಸ್ಕರಿಸಿದ್ದಾರೆ. ಐಶ್ವರ್ಯಾ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದಿವಂಗತ ಕೃಷ್ಣರಾಜ್ ರೈ ಅವರ ಫೋಟೋವನ್ನು ನಟಿ ಮೊದಲು ಹಂಚಿಕೊಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಅಜ್ಜನ ಫೋಟೋದ ಮುಂದೆ ಆರಾಧ್ಯ ಬಚ್ಚನ್ ಇದ್ದಾರೆ. ಇನ್ನೊಂದು ಫೋಟೋದಲ್ಲಿ ಐಶ್ವರ್ಯಾ ರೈ ಇದ್ದಾರೆ. ಫೋಟೋಗೆ ತಮ್ಮ ಶಿರವನ್ನು ತಾಗಿಸಿ ಗೌರವ ಸೂಚಿಸಿದ್ದಾರೆ. ಆರಾಧ್ಯ ಬಚ್ಚನ್ ಅವರು ಬಿಳಿ ಉಡುಗೆಯಲ್ಲಿದ್ದಾರೆ.
ಈ ಫೋಟೋಗಳಿಗೆ ಐಶ್ವರ್ಯಾ ರೈ ಹೀಗೆ ಬರೆದಿದ್ದಾರೆ. ತನ್ನ ಫೋಟೋ ಇರುವ ಫೋಟೋಗೆ ಐಶ್ವರ್ಯಾ ರೈ "ನಮಸ್ಕಾರ"ದ ಇಮೋಜಿ ಹಾಕಿದ್ದಾರೆ. ನನ್ನ ಪ್ರೀತಿಯ ಡ್ಯಾಡಿ/ಅಜ್ಜನಿಗೆ ಪ್ರೀತಿ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇದರೊಂದಿಗೆ ಎಲ್ಲರಿಗೂ ಧನ್ಯವಾದ, ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ಸದಾ ಇರಲಿ ಎಂದು ಬರೆದಿದ್ದಾರೆ.
ಐಶ್ವರ್ಯ ರೈ ಕುಟುಂಬ
ಐಶ್ವರ್ಯಾ ರೈ ಅವರ ತಂದೆ ಕೃಷ್ಣರಾಜ್ ರೈ ಅವರು 2017ರಲ್ಲಿ ಮುಂಬೈನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು. ಐಶ್ವರ್ಯಗೆ ತನ್ನ ಅಪ್ಪ ಎಂದರೆ ತುಂಬಾ ಅಚ್ಚುಮೆಚ್ಚು. ಅಪ್ಪನ ಮುದ್ದಿನ ಮಗಳು. ಪ್ರತಿವರ್ಷ ತನ್ನ ಅಪ್ಪನ ಹುಟ್ಟುಹಬ್ಬ ಮತ್ತು ಪುಣ್ಯತಿಥಿಯಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ. ಅಂದಹಾಗೆ, ಐಶ್ವರ್ಯಾ ರೈ ಅವರ ಅಮ್ಮನ ಹೆಸರು ಬೃಂದಾ ರೈ. ನಟಿಗೆ ಆದಿತ್ಯ ರೈ ಸಹೋದರ.
ಐಶ್ವರ್ಯ ಅವರು ಏಪ್ರಿಲ್ 20, 2007 ರಂದು ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಈ ಮೂಲಕ ಕರಾವಳಿಯ ನಟಿ ಬಚ್ಚನ್ ಕುಟುಂಬದ ಸೊಸೆಯಾದರು. ಅಮಿತಾಬ್ ಬಚ್ಚನ್ ಅವರ ಬಂಗಲೆಗಳಲ್ಲಿ ಒಂದಾದ ಪ್ರತೀಕ್ಷಾದಲ್ಲಿ ಇವರ ವಿವಾಹ ಸಮಾರಂಭ ನಡೆದಿತ್ತು. ಈ ಜೋಡಿಗೆ ನವೆಂಬರ್ 16, 2011ರಂದು ಆರಾಧ್ಯ ಜನಿಸಿದಳು.
ಐಶ್ವರ್ಯ ರೈ ಅವರು ಕೊನೆಯದಾಗಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್: ಭಾಗ 2 ರಲ್ಲಿ ಕಾಣಿಸಿಕೊಂಡರು. ಈ ಚಿತ್ರದ ನಟನೆಗಾಗಿ ದುಬೈನಲ್ಲಿ ನಡೆದ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ (ಸೈಮಾ) ಅತ್ಯುತ್ತಮ ನಟಿ (ವಿಮರ್ಶಕರು) ಪ್ರಶಸ್ತಿಯನ್ನು ಪಡೆದರು. ಮಣಿರತ್ನಂ ನಿರ್ದೇಶಿಸಿದ ಈ ಮಹಾಕಾವ್ಯ ಐತಿಹಾಸಿಕ ಆಕ್ಷನ್ ನಾಟಕವು 2023ರಲ್ಲಿ ಬಿಡುಗಡೆಯಾಗಿತ್ತು.
ಈ ಚಿತ್ರದಲ್ಲಿ ವಿಕ್ರಮ್, ರವಿ ಮೋಹನ್, ಕಾರ್ತಿ, ತ್ರಿಶಾ ಕೃಷ್ಣನ್, ಜಯರಾಮ್, ಪ್ರಭು, ಆರ್. ಶರತ್‌ಕುಮಾರ್, ಶೋಭಿತಾ ಧೂಳಿಪಾಲ ಮತ್ತು ಐಶ್ವರ್ಯ ಲಕ್ಷ್ಮಿ ಸೇರಿದಂತೆ ಇತರರು ನಟಿಸಿದ್ದಾರೆ.
