ಕನ್ನಡ ಸುದ್ದಿ  /  ಮನರಂಜನೆ  /  ಇನ್‌ಸ್ಟಾಗ್ರಾಮ್‌ನಲ್ಲಿ ಆಲಿಯಾ ಭಟ್ ಡೀಪ್ ಫೇಕ್ ವಿಡಿಯೋಗೆ 2 ಕೋಟಿ ವೀಕ್ಷಣೆ; ಎಐ ಕೈಚಳಕ ನಿಜವೆಂದು ನಂಬಿದ ನೆಟ್ಟಿಗರು

ಇನ್‌ಸ್ಟಾಗ್ರಾಮ್‌ನಲ್ಲಿ ಆಲಿಯಾ ಭಟ್ ಡೀಪ್ ಫೇಕ್ ವಿಡಿಯೋಗೆ 2 ಕೋಟಿ ವೀಕ್ಷಣೆ; ಎಐ ಕೈಚಳಕ ನಿಜವೆಂದು ನಂಬಿದ ನೆಟ್ಟಿಗರು

Alia Bhatt: ಆಲಿಯಾ ಭಟ್ ಅವರ ಡೀಪ್ ಫೇಕ್ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡಿಂಗ್‌ ಆಗಿದೆ. ಕೃತಕ ಬುದ್ಧಿಮತ್ತೆಯ ಕೈಚಳಕದ ಬಗ್ಗೆ ನೆಟ್ಟಿಗರಲ್ಲಿ ಕಳವಳ ವ್ಯಕ್ತವಾಗಿದೆ.

ಆಲಿಯಾ ಭಟ್ ಡೀಪ್ ಫೇಕ್ ವಿಡಿಯೋಗೆ 2 ಕೋಟಿ ವೀಕ್ಷಣೆ
ಆಲಿಯಾ ಭಟ್ ಡೀಪ್ ಫೇಕ್ ವಿಡಿಯೋಗೆ 2 ಕೋಟಿ ವೀಕ್ಷಣೆ

ಕೃತಕ ಬುದ್ಧಿಮತ್ತೆ ಪ್ರಪಂಚ ಬೆಳೆದಷ್ಟು ಅಪಾಯ ಕೂಡಾ ಜೊತೆಗೆ ಬರುತ್ತದೆ. ಎಐ ತಂತ್ರಜ್ಞಾನವು ಎಷ್ಟೋ ಕೆಲಸಗಳನ್ನು ಸರಳ ಮಾಡಿದ್ದರೂ, ಜನರ ಕೆಲಸಗಳನ್ನೂ ಕಿತ್ತುಕೊಳ್ಳುತ್ತಿದೆ. ಇದರ ನಡುವೆ ಡೀಫ್‌ಫೇಕ್‌ ಎಂಬ ಟೂಲ್‌ ಹಲವು ಸೆಲೆಬ್ರಿಟಿಗಳಿಗೆ ನಿದ್ದೆಗೆಡಿಸಿದೆ. ಈಗಾಗಲೇ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳ ಡೀಪ್‌ಫೇಕ್‌ ಫೋಟೋ ಹಾಗೂ ವಿಡಿಯೋಗಳು ವೈರಲ್‌ ಆಗಿದ್ದು ನೋಡಿದ್ದೇವೆ. ಇದೀಗ ಆಲಿಯಾ ಭಟ್‌ ಅವರ ಡೀಪ್‌ಫೇಕ್‌ ಜಿಆರ್‌ಡಬ್ಲ್ಯೂಎಂ ವಿಡಿಯೋ ಒಂದು ಭಾರಿ ಟ್ರೆಂಡ್‌ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ವೈರಲ್ ಆಗಿದ್ದು, ಕೋಟ್ಯಾಂತರ ಜನರು ವೀಕ್ಷಿಸಿದ್ದಾರೆ. ಈ ನಡುವೆ ಎಐ ಜನರನ್ನು ಎಷ್ಟು ಬೇಗ ಯಾಮಾರಿಸುತ್ತಿದೆ ಎಂಬ ಆತಂಕ ಹೆಚ್ಚಾಗಿದೆ.

ಸದ್ಯ ನೆಟ್ಟಿಗರ ಗೊಂದಲಕ್ಕೆ ಕಾರಣವಾಗಿರುವ ಈ ವಿಡಿಯೋ ಕ್ಲಿಪ್ “ಗೆಟ್ ರೆಡಿ ವಿತ್ ಮಿ” (GRWM) ವಿಡಿಯೋ ಆಗಿದೆ. ಜಿಆರ್‌ಡಬ್ಲ್ಯೂಎಂ ಎಂದರೆ, ಒಂದು ನಿರ್ದಿಷ್ಟ ಕಾರ್ಯಕ್ರಮಕ್ಕೆ ಹಾಜರಾಗಲು ಒಬ್ಬ ವ್ಯಕ್ತಿಯು ತಯಾರಾಗುತ್ತಿರುವುದನ್ನು ತೋರಿಸುವ ಒಂದು ಪ್ರವೃತ್ತಿಯಾಗಿದೆ. ಇತ್ತೀಚೆಗೆ ಜಿಆರ್‌ಡಬ್ಲ್ಯೂಎಂ ಟ್ರೆಂಡ್‌ ಆಗಿ ಮಾರ್ಪಟ್ಟಿದೆ.

ಈ ವಿಡಿಯೋವನ್ನು ಸಮೀಕ್ಷಾ ಅವತ್ರ್ ಎಂಬ ಬಳಕೆದಾರರೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ 2 ಕೋಟಿಗೂ ಹೆಚ್ಚು ಜನರು ಅದನ್ನು ವೀಕ್ಷಿಸಿದ್ದಾರೆ. ಈ ಡೀಪ್‌ಫೇಕ್ ಪೋಸ್ಟ್ ಮಾಡಿದಾಗಿನಿಂದ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ದುರ್ಬಳಕೆಯ ಬಗ್ಗೆ ನೆಟ್ಟಿಗರಲ್ಲಿ ಕಳವಳವನ್ನು ಹೆಚ್ಚಚಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ವಿಡಿಯೋದಲ್ಲಿ ನಟಿ "ಆಲಿಯಾ ಭಟ್" ಕಪ್ಪು ಬಣ್ಣದ ಕುರ್ತಾ ಧರಿಸಿ ಸಿದ್ಧರಾಗುತ್ತಿರುವುದನ್ನು ನೋಡಬಹುದು. ಬಳಿಕ ಮೇಕಪ್ ಧರಿಸಿ ಕ್ಯಾಮರಾ ಮುಂದೆ ಪೋಸ್ ನೀಡುವುದನ್ನು ವಿಡಿಯೋ ತೋರಿಸುತ್ತದೆ. ಪೋಸ್ಟ್ ಆನ್‌ಲೈನ್‌ನಲ್ಲಿ ಜನರ ಗಮನ ಸೆಳೆದ ಕೂಡಲೇ, ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರ ಕಾಮೆಂಟ್

ಪೋಸ್ಟ್‌ಗೆ ಜನರು ವ್ಯಕ್ತವಾದ ಪ್ರತಿಕ್ರಿಯೆಗಳು ಹೀಗಿದೆ. ವ್ಯಕ್ತಿಯೊಬ್ಬರು "ಎಐ ತುಂಬಾ ಅಪಾಯಕಾರಿ" ಎಂದು ಹೇಳಿದರೆ, "ಇದು ಆಲಿಯಾ ಎಂದು ನಾನು ಮೊದಲು ಭಾವಿಸಿದೆ, ನಂತರ ಎಚ್ಚರಿಕೆಯಿಂದ ನೋಡಿದಾಗ ಅದು ಆಲಿಯಾ ಅಲ್ಲ ಎಂಬುದು ಗೊತ್ತಾಯ್ತು" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

"ಏನದು? ಮಸ್ಕ್ ಹೇಳಿದ್ದು ಸರಿ. ಎಐ ಎಲ್ಲವನ್ನೂ ಗೆಲ್ಲುತ್ತಿದೆ" ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ. "ಇದು ಕಾನೂನುಬದ್ಧವಾಗಿದೆಯೇ?" ಎಂದು ಅವರು ಹೇಳಿದ್ದಾರೆ. ಮತ್ತೊಬ್ಬರು ಎಐ ಎಷ್ಟು "ಅಪಾಯಕಾರಿ" ಎಂದು ಬರೆದಿದ್ದಾರೆ.‌