Amy Jackson Baby: ಗಂಡು ಮಗುವಿಗೆ ಜನ್ಮ ನೀಡಿದ ಆಮಿ ಜಾಕ್ಸನ್; ಮದುವೆಯಾದ 7 ತಿಂಗಳಲ್ಲಿ ಆಸ್ಕರ್ ಆಗಮನ
Amy Jackson Baby Boy: ನಟಿ ಆಮಿ ಜಾಕ್ಸನ್ ಮತ್ತು ಗಾಸಿಪ್ ಗರ್ಲ್ ನಟ ಎಡ್ ವೆಸ್ಟ್‌ವಿಕ್ ದಂಪತಿಗೆ ಗಂಡು ಮಗು ಜನಿಸಿದೆ. ಈ ಕುರಿತು ಅಧಿಕೃತವಾಗಿ ಇವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇವರು ಮಗುವಿನ ಫೋಟೋವನ್ನು ಹಂಚಿಕೊಂಡಿದ್ದು, ಮಗುವಿನ ಹೆಸರಿನ ವಿವರವನ್ನೂ ನೀಡಿದ್ದಾರೆ.

Amy Jackson Baby Boy: ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್ ದಂಪತಿಗೆ ಗಂಡು ಮಗು ಜನಿಸಿದೆ. ಭಾರತದ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ಬ್ರಿಟನ್‌ನ ನಟಿ ಆಮಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾರೆ. ಸೋಮವಾರ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನವಜಾತ ಶಿಶುವಿನೊಂದಿಗೆ ತಮ್ಮ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರು ಕೂಡ ಬಹಿರಂಗಪಡಿಸಿದ್ದಾರೆ.
ಸೋಮವಾರ ಸಂಜೆ ಎಡ್ ಮತ್ತು ಆಮಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಮಗನೊಂದಿಗೆ ಇರುವ ಮೂರು ಕಪ್ಪು-ಬಿಳುಪು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ಆಸ್ಕರ್ ಅಲೆಕ್ಸಾಂಡರ್ ವೆಸ್ಟ್‌ವಿಕ್" ಎಂದು ಮಗುವಿಗೆ ಹೆಸರಿಟ್ಟಿದ್ದಾರೆ. "ಜಗತ್ತಿಗೆ ಸ್ವಾಗತ, ಗಂಡು ಮಗು. ಆಸ್ಕರ್ ಅಲೆಕ್ಸಾಂಡರ್ ವೆಸ್ಟ್‌ವಿಕ್" ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಈ ಫೋಟೋಗಳಲ್ಲಿ ಮುದ್ದಾದ ಪುಟ್ಟ ಮಗುವಿದೆ. ಆಮಿ ಮಗುವಿಗೆ ಹೂಮುತ್ತು ನೀಡುವ ಫೋಟೋ ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಎಡ್ ವೆಸ್ಟ್‌ವಿಕ್ ಮಗುವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಮೊನೊಗ್ರಾಮ್ ಕಂಬಳಿಯಲ್ಲಿ ಮಗುವನ್ನು ಸುತ್ತಲಾಗಿದೆ. ಅದರ ಮೇಲೆ ಆಸ್ಕರ್ ಎಂದು ಬರೆಯಲಾಗಿದೆ.
ಈ ಫೋಟೋಗಳಿಗೆ ಅಭಿಮಾನಿಗಳು ಮತ್ತು ಆಪ್ತರು ಶುಭಾಶಯಗಳ ಮಹಾಪುರವನ್ನೇ ಹರಿಸಿದ್ದಾರೆ. "ಅಭಿನಂದನೆಗಳು, ಶುಭವಾಗಲಿ" "ಸುಂದರ ಪುಟ್ಟ ಮಗು" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಆಮಿ ಮತ್ತು ಎಡ್ 2022ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆಗಸ್ಟ್ 2024ರಲ್ಲಿ ಮದುವೆಯಾದರು. ನಟಿ ಆಮಿ ಜಾಕ್ಸನ್ ಈ ಹಿಂದೆ ಹೋಟೆಲ್ ಉದ್ಯಮಿ ಜಾರ್ಜ್ ಪನಯಿಯೊಟೌ ಜತೆ ಸಂಬಂಧವಿತ್ತು. ಇವರಿಬ್ಬರು 2015-21ರವರೆಗೆ ಡೇಟಿಂಗ್ ಮಾಡುತ್ತಿದ್ದರು. ಇವರಿಗೆ 5 ವರ್ಷದ ಮಗನಿದ್ದಾನೆ. ನಟ ಎಡ್ ವೆಸ್ಟ್‌ವಿಕ್‌ಗೆ ಆಸ್ಕರ್ ಅಲೆಕ್ಸಾಂಡರ್ ವೆಸ್ಟ್‌ವಿಕ್ ಮೊದಲ ಮಗು.
ಆಮಿ 2010ರಲ್ಲಿಬಿಡುಗಡೆಯಾದ ತಮಿಳು ಸಿನಿಮಾ ಮದ್ರಾಸಪಟ್ಟಣಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಎರಡು ವರ್ಷಗಳ ನಂತರ ಏಕ್ ದಿವಾನಾ ಥಾ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದರು. ಸಿಂಗ್ ಈಸ್ ಬ್ಲಿಂಗ್, ಫ್ರೀಕಿ ಅಲಿ, 2.0 ಮತ್ತು ಥೇರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಮಿ ಕೊನೆಯದಾಗಿ ವಿದ್ಯುತ್ ಜಮ್ವಾಲ್ ಮತ್ತು ಅರ್ಜುನ್ ರಾಂಪಾಲ್ ಅಭಿನಯದ ಕ್ರ್ಯಾಕ್ ಚಿತ್ರದಲ್ಲಿ ಕಾಣಿಸಿಕೊಂಡರು. ಎಡ್ ವೆಸ್ಟ್ರಿಕ್ ಅವರು 2006ರಲ್ಲಿ ಚಿಲ್ಡ್ರನ್ ಆಫ್ ಮೆನ್ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟರು. ಇವರು ಗಾಸಿಪ್ ಗರ್ಲ್ (2007-12) ನಲ್ಲಿ ಚಕ್ ಬಾಸ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟ ಪಾತ್ರವಾಗಿದೆ.
ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್ ಆಗಸ್ಟ್ ಆಗಸ್ಟ್ 23 ರಂದು ವಿವಾಹವಾದರು. ಮದುವೆಯಾದ ಎರಡು ದಿನಗಳ ನಂತರ ತಮ್ಮ ಅಭಿಮಾನಿಗಳಿಗೆ ಮದುವೆ ಆಲ್ಬಂ ತೋರಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಬಾಲಿವುಡ್ ನಟ ಪ್ರತೀಕ್ ಬಬ್ಬರ್ ಅವರೊಂದಿಗೆ ಐದು ವರ್ಷಗಳ ಕಾಲ ಸಂಬಂಧದಲ್ಲಿದ್ದ ಆಮಿ ಜಾಕ್ಸನ್ 2017ರಲ್ಲಿ ಬೇರ್ಪಟ್ಟರು. ಇವರನ್ನೇ ವಿವಾಹವಾಗಲಿದ್ದಾರೆ ಎಂದು ಎಲ್ಲರೂ ಅಂದುಕೊಳ್ಳುವಾಗಲೇ ಬ್ರೇಕಪ್ ಆಗಿದ್ದರು.
ಆಮಿ ಜಾಕ್ಸನ್ ಅವರು ಜಾರ್ಜ್ ಪನಯೆಟ್ಟು ಎಂಬ ಉದ್ಯಮಿಯೊಂದಿಗೆ ಆರು ವರ್ಷಗಳ ಕಾಲ ಪ್ರೇಮ ಸಂಬಂಧ ಹೊಂದಿದ್ದರು. ಅವರು ನಿಶ್ಚಿತಾರ್ಥ ಮಾಡಿಕೊಂಡರು. ಗಂಡು ಮಗುವಿಗೆ ಜನ್ಮವನ್ನೂ ನೀಡಿದರು. ಆಮಿ ಜಾಕ್ಸನ್ ಮತ್ತು ಪನಯೊಟ್ಟು ಅವರ ಪ್ರೇಮಕಥೆ ಬ್ರೇಕಪ್‌ನಲ್ಲಿ ಕೊನೆಯಾಯ್ತು. ತಮಿಳಿನಲ್ಲಿ ಶಂಕರ್ ನಿರ್ದೇಶನದ ಐ, ರೋಬೋ 2 ಮತ್ತು ತಲಪತಿ ವಿಜಯ್ ತೇರಿ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಅವರು ರಾಮ್ ಚರಣ್ ಅವರೊಂದಿಗೆ 'ಯೆವಡು' ಚಿತ್ರದಲ್ಲಿ ನಟಿಸಿದ್ದಾರೆ.
