ಕನ್ನಡ ಸುದ್ದಿ  /  Entertainment  /  Bollywood Actress Helps To Elder Couple In Mumbai To Get Auto

Rakhi Sawant: ಫನ್ನಿ ಮಾತುಗಳಿಂದ ಸುದ್ದಿಯಾದ್ರೂ ಕಷ್ಟದಲ್ಲಿರೋರಿಗೆ ನೆರವಾಗಲು ಮರೆಯುವುದಿಲ್ಲ ರಾಖಿ...ವಿಡಿಯೋ ನೋಡಿ

ವೃದ್ಧ ದಂಪತಿ ರಸ್ತೆ ಬದಿ ನಿಂತಿರುವುದನ್ನು ನೋಡಿದ ರಾಖಿ, ಆಟೋ ಸಿಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ, ನಂತರ ಒಬ್ಬ ಆಟೋ ಚಾಲಕನ್ನು ಕರೆದು, ಇವರನ್ನು ಕರೆದೊಯ್ಯಿರಿ ಎಂದು ಮನವಿ ಮಾಡಿದ್ದಾರೆ. ಫುಟ್ ಪಾತ್​​​ನಿಂದ ರಸ್ತೆಗೆ ಇಳಿಯುತ್ತಿದ್ದ ವೃದ್ಧೆಯ ಕೈ ಹಿಡಿದು ನೆರವಾಗಿದ್ದಾರೆ. ನಿಧಾನಕ್ಕೆ ಹೋಗಿ ಎಂದು ವೃದ್ಧ ದಂಪತಿಗೆ ಹೇಳಿದ್ದಾರೆ. ರಾಖಿಯ ಈ ಗುಣವನ್ನು ಕಂಡು ಆ ದಂಪತಿ ಆಕೆಗೆ ಧನ್ಯವಾದ ಅರ್ಪಿಸಿ ಅಲ್ಲಿಂದ ತೆರಳಿದ್ದಾರೆ.

ವೃದ್ಧ ದಂಪತಿಗೆ ನೆರವಾದ ರಾಖಿ ಸಾವಂತ್​
ವೃದ್ಧ ದಂಪತಿಗೆ ನೆರವಾದ ರಾಖಿ ಸಾವಂತ್​

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಫನ್ನಿ ಮಾತುಗಳಿಗೆ, ಬಾಯ್​ ಫ್ರೆಂಡ್ ಜೊತೆಗಿನ ವಿಡಿಯೋ ಪೋಸ್ಟ್ ಮಾಡುವುದರ ವಿಚಾರವಾಗೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದ್ದದ್ದನ್ನು ಇದ್ದಂತೆ ಹೇಳಿಬಿಡುವ ರಾಖಿ ಎಂದರೆ ಕೆಲವರಿಗೆ ಅಷ್ಟಕಷ್ಟೇ. ಆದರೆ ಬಹಳ ಮಂದಿ ರಾಖಿಯನ್ನು ಇಷ್ಟಪಡುತ್ತಾರೆ. ಇದಕ್ಕೆ ಕಾರಣ ಅವರ ಸಹಾಯದ ಮನೋಭಾವ.

ಏನೇ ಮಾತುಗಳಿರಲಿ, ಏನೇ ವಿವಾದಕ್ಕೆ ಸಿಲುಕಲಿ ರಾಖಿ ಮಾತ್ರ ತಮ್ಮ ದಯಾಗುಣದಿಂದ ಹಲವರ ಮನಗೆದ್ದಿದ್ದಾರೆ. ಒಂದೆರಡು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ ಮಾತ್ರಕ್ಕೆ ತಾವೊಬ್ಬ ಸ್ಟಾರ್​​​ಗಳು ಎಂದು ತಲೆ ಎತ್ತಿಕೊಂಡೇ ತಿರುಗುವವರ ನಡುವೆ ರಾಖಿ ಸಾವಂತ್ ವಿಭಿನ್ನ ಎಂದೇ ಹೇಳಬಹುದು. ವೃದ್ಧ ದಂಪತಿಗಳಿಗೆ ನೆರವಾಗುವ ಮೂಲಕ ರಾಖಿ ಸಾವಂತ್ ಮತ್ತೆ ಸುದ್ದಿಯಾಗಿದ್ದಾರೆ. ರಾಖಿ, ಮನೆಯಿಂದ ಹೊರಗೆ ಬರುತ್ತಿದ್ದಂತೆ ಅವರನ್ನು ಮಾತನಾಡಿಸಲು ಹಲವರು ನೆರೆಯುತ್ತಾರೆ. ಆದರೆ ರಾಖಿ ಮಾತ್ರ ಸ್ವಲ್ಪವೂ ಜಂಭ ಇಲ್ಲದೆ ಎಲ್ಲರನ್ನೂ ಮಾತನಾಡಿಸುತ್ತಾರೆ. ಎಲ್ಲರಿಗೂ ಸೆಲ್ಫಿಗೆ ಪೋಸ್ ನೀಡುತ್ತಾರೆ.

ಸದ್ಯಕ್ಕೆ ದೇಶದೆಲ್ಲೆಡೆ ಮಳೆ ಸುರಿಯುತ್ತಿದೆ. ಹೊರಗೆ ಹೋಗಿ ಮನೆಗೆ ವಾಪಸಾಗುವಷ್ಟರಲ್ಲಿ ದೊಡ್ಡ ಸಾಹಸ ಮಾಡಿದಂತೆ ಆಗುತ್ತದೆ. ಮಳೆ ನಡುವೆ ಬಹುತೇಕ ಎಲ್ಲರೂ ಆಟೋ, ಟ್ಯಾಕ್ಸಿ ಹತ್ತಿ ಮನೆ ಸೇರಿಕೊಳ್ಳುತ್ತಾರೆ. ಹಾಗೆ ಮುಂಬೈ ರಸ್ತೆ ಬದಿ, ಮನೆಗೆ ಹೋಗಲು ಆಟೋ ದೊರೆಯದೆ ಪರದಾಡುತ್ತಿದ್ದ ವೃದ್ಧ ದಂಪತಿಗೆ ರಾಖಿ ಸಾವಂತ್ ನೆರವಾಗಿದ್ದಾರೆ. ವೃದ್ಧ ದಂಪತಿ ರಸ್ತೆ ಬದಿ ನಿಂತಿರುವುದನ್ನು ನೋಡಿದ ರಾಖಿ, ಆಟೋ ಸಿಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ, ನಂತರ ಒಬ್ಬ ಆಟೋ ಚಾಲಕನ್ನು ಕರೆದು, ಇವರನ್ನು ಕರೆದೊಯ್ಯಿರಿ ಎಂದು ಮನವಿ ಮಾಡಿದ್ದಾರೆ. ಫುಟ್ ಪಾತ್​​​ನಿಂದ ರಸ್ತೆಗೆ ಇಳಿಯುತ್ತಿದ್ದ ವೃದ್ಧೆಯ ಕೈ ಹಿಡಿದು ನೆರವಾಗಿದ್ದಾರೆ. ನಿಧಾನಕ್ಕೆ ಹೋಗಿ ಎಂದು ವೃದ್ಧ ದಂಪತಿಗೆ ಹೇಳಿದ್ದಾರೆ. ರಾಖಿಯ ಈ ಗುಣವನ್ನು ಕಂಡು ಆ ದಂಪತಿ ಆಕೆಗೆ ಧನ್ಯವಾದ ಅರ್ಪಿಸಿ ಅಲ್ಲಿಂದ ತೆರಳಿದ್ದಾರೆ.

ಈ ವಿಡಿಯೋವನ್ನು ಬಾಲಿವುಡ್ ಖ್ಯಾತ ಪಾಪರಾಜಿ ವೈರಲ್ ಭಯಾನಿ ತಮ್ಮ ಇನ್​​​ಸ್ಟಾಗ್ರಾಮ್​​​​​ನಲ್ಲಿ ಹಂಚಿಕೊಂಡಿದ್ದಾರೆ. ''ಮಾನ್ಸೂನ್ ಸಮಯದಲ್ಲಿ ಆಟೋಗಳು ದೊರೆಯುವುದು ದೊಡ್ಡ ಸಮಸ್ಯೆಯಾಗಿದೆ. ಕೆಲವೊಮ್ಮೆ ಪೊಲೀಸರು ಹಿರಿಯ ನಾಗರಿಕರಿಗೆ ಸಹಾಯ ಮಾಡುತ್ತಾರೆ. ಅದರಲ್ಲೂ ಕೆಲವು ಚಾಲಕರಿಗೆ ಹಣವನ್ನೇ ನೀಡಬೇಕು, ಡಿಜಿಟಲ್ ಪೇಮೆಂಟ್ ಪಡೆಯಲು ಅವರು ಒಪ್ಪುವುದಿಲ್ಲ. ರಾಖಿ ಸಾವಂತ್, ಆಟೋವವನ್ನು ಕರೆದು ಈ ವೃದ್ಧ ದಂಪತಿ ಮನೆಗೆ ಹೋಗಲು ನೆರವಾಗಿದ್ದಾರೆ'' ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟಿಜನ್​​​​​​ಗಳು ಕೂಡಾ ರಾಖಿಯ ದಯಾ ಗುಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಣ್ಣುಗಳನ್ನು ಖರೀದಿಸಿ ರಸ್ತೆ ಬದಿ ಮಕ್ಕಳಿಗೆ ನೀಡಿದ್ದ ರಾಖಿ

ರಾಖಿ ಸಾವಂತ್ ಹೀಗೆ ಸಹಾಯ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಏಪ್ರಿಲ್​​​​​ನಲ್ಲಿ ರಾಖಿ ಸಾವಂತ್ ಜಿಮ್​​ಗೆ ಹೋಗಿ ಬರುವಾಗ ಮುಂಬೈನ ರಸ್ತೆಯೊಂದರ ಮಧ್ಯೆ ಎಳನೀರು ಕುಡಿಯಲು ತಮ್ಮ ಕಾರಿನಿಂದ ಇಳಿದಿದ್ದಾರೆ. ರಾಖಿ, ಎಳನೀರು ಕುಡಿಯುವಾಗ ಆಕೆಯನ್ನು ಮಾತನಾಡಿಸಲು ಪುಟ್ಟ ಮಕ್ಕಳು ಬಂದಿದ್ದಾರೆ. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿದ ರಾಖಿ ಆ ಮೂವರೂ ಮಕ್ಕಳಿಗೂ ಸೇಬು ಕೊಡಿಸಿದ್ದರು. 'ನೀವು ಭಿಕ್ಷೆ ಬೇಡಬಾರದು. ಶಾಲೆಗೆ ಹೋಗಿ ಓದಬೇಕು. ನಂತರ ಕೆಲಸ ಗಿಟ್ಟಿಸಿಕೊಳ್ಳಬೇಕು. ಆ ಕೆಲಸ ಚಿಕ್ಕದೋ, ದೊಡ್ಡದೋ ಶ್ರದ್ಧೆಯಿಂದ ಮಾಡಬೇಕು. ನೀವು ಎಲ್ಲವನ್ನೂ ತಿಳಿದವರು. ಹೆಚ್ಚು ಮಕ್ಕಳನ್ನು ಹೆರದಂತೆ ನಿಮ್ಮ ತಂದೆ ತಾಯಿಗೆ ಹೇಳಿ. ಈ ರೀತಿ ನಿಮ್ಮನ್ನು ಭಿಕ್ಷೆ ಬೇಡುವಂತೆ ನಿಮ್ಮ ತಂದೆ ತಾಯಿ ರಸ್ತೆಗೆ ಬಿಡುವುದು ತಪ್ಪು' ಎಂದು ಮಕ್ಕಳಿಗೆ ಹಾಗೂ ಹೆತ್ತವರಿಗೆ ಬುದ್ಧಿಮಾತು ಹೇಳಿದ್ದರು. ಈ ವಿಡಿಯೋ ಕೂಡಾ ಆಗ ವೈರಲ್ ಆಗಿತ್ತು.

IPL_Entry_Point