Zeba An Accidental Superhero ಮೂಲಕ ಕಾದಂಬರಿಗಾರ್ತಿಯಾದ ಹ್ಯೂಮಾ ಖುರೇಷಿ; ಮೊದಲ ಕಾದಂಬರಿ ಅನಾವರಣ
ಕನ್ನಡ ಸುದ್ದಿ  /  ಮನರಂಜನೆ  /  Zeba An Accidental Superhero ಮೂಲಕ ಕಾದಂಬರಿಗಾರ್ತಿಯಾದ ಹ್ಯೂಮಾ ಖುರೇಷಿ; ಮೊದಲ ಕಾದಂಬರಿ ಅನಾವರಣ

Zeba An Accidental Superhero ಮೂಲಕ ಕಾದಂಬರಿಗಾರ್ತಿಯಾದ ಹ್ಯೂಮಾ ಖುರೇಷಿ; ಮೊದಲ ಕಾದಂಬರಿ ಅನಾವರಣ

ಬಾಲಿವುಡ್ ನಟಿ ಹುಮಾ ಖುರೇಶಿ ನಟನೆಯ ಜತೆಗೆ ಬರವಣಿಗೆಯತ್ತ ಗಮನ ಹರಿಸಿದ್ದಾರೆ. ಅಂದರೆ, Zeba An Accidental Superhero ಅನ್ನೋ ಕಾದಂಬರಿಯನ್ನು ಬರೆದು ಕಾದಂಬರಿಗಾರ್ತಿಯಾಗಿದ್ದಾರೆ.

Zeba An Accidental Superhero ಮೂಲಕ ಕಾದಂಬರಿಕಾರ್ತಿಯಾದ ಹ್ಯೂಮಾ ಖುರೇಷಿ
Zeba An Accidental Superhero ಮೂಲಕ ಕಾದಂಬರಿಕಾರ್ತಿಯಾದ ಹ್ಯೂಮಾ ಖುರೇಷಿ

Zeba An Accidental Superhero: ಎರಡು ವರ್ಷಗಳಿಂದ ಬಾಲಿವುಡ್‍ ನಟಿ ಹ್ಯೂಮಾ ಖುರೇಷಿ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ‘ಜಾಲಿ LLB 3’ ಚಿತ್ರದಲ್ಲಿ ಅವರು ನಟಿಸಿದ್ದು, ಈ ಚಿತ್ರವು ಇದೇ ಏಪ್ರಿಲ್‍ನಲ್ಲಿ ಬಿಡುಗಡೆಯಾಗುತ್ತಿದೆ. ಈ ಬಿಡುವಿನ ವೇಳೆಯಲ್ಲಿ ಹ್ಯೂಮಾ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, ಹ್ಯೂಮಾ ಸದ್ದಿಲ್ಲದೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಅವರು ಬರೆದಿರುವ ‘Zeba: An Accidental Superhero’ ಎಂಬ ಪುಸ್ತಕ ಭಾನುವಾರ, ಜಯಪುರ ಸಾಹಿತ್ಯ ಉತ್ಸವದಲ್ಲಿ ಬಿಡುಗಡೆಯಾಗಿದೆ.

ಇಷ್ಟಕ್ಕೂ ಹ್ಯೂಮಾಗೆ ಯಾಕೆ ಈ ಕಾದಂಬರಿ ಬರೆಯಬೇಕೆನಿಸಿತು? ಈ ಪ್ರಶ್ನೆಯನ್ನು ಉತ್ಸವದಲ್ಲಿ ಅವರ ಮುಂದಿಟ್ಟಾಗ, ‘ಇದನ್ನು ನಾನು 2019ರಲ್ಲಿ ಬರೆಯುವುದಕ್ಕೆ ಶುರು ಮಾಡಿದೆ. ಹತ್ತಿಪ್ಪತ್ತು ಪುಟಗಳನ್ನು ಬರೆದು, ಒಂದಿಷ್ಟು ಜನರಿಗೆ ತೋರಿಸಿದೆ. ಎಲ್ಲರೂ ಚೆನ್ನಾಗಿದೆ ಎಂದರು. ಆರಂಭದಲ್ಲಿ, ಈ ಕಥೆಯನ್ನು ಸಿನಿಮಾ ಅಥವಾ ಧಾರಾವಾಹಿ ಮಾಡಬೇಕು ಎಂಬ ಯೋಚನೆ ಇತ್ತು. ಹಾಗಾಗಿ, ಆ ನಿಟ್ಟಿನಲ್ಲಿ ಶುರು ಮಾಡಿದೆ.

ಕ್ರಮೇಣ ಕೋವಿಡ್‍ ಬಂತು. ಎಲ್ಲವೂ ಬದಲಾಯಿತು. ಆಗ ಇದನ್ನು ಸ್ಕ್ರಿಪ್ಟ್ ತರಹ ಬರೆಯಲೋ ಅಥವಾ ಒಂದು ಕಾದಂಬರಿಯನ್ನಾಗಿ ಮಾಡಲೋ ಎಂಬ ಯೋಚನೆ ಬಂತು. ಈ ಯೋಚನೆಯಲ್ಲೇ ಸಾಕಷ್ಟು ಸಮಯ ಕಳೆಯಿತು. ಕೊನೆಗೆ ಮುಂದುವರೆಯಲಾಗದೆ, ಕೆಲವರಿಗೆ ಬರೆದು ಕೊಡಿ ಎಂದೂ ಕೇಳಿದೆ. ಆದರೆ, ಅವರೆಲ್ಲರೂ ನಿನ್ನ ಯೋಚನೆಯಾದ್ದರಿಂದ, ಅದನ್ನು ನೀನೇ ಬರೆದರೆ ಚೆಂದ ಎಂದು ಹೇಳಿದರು’ ಎಂದು ನೆನಪಿಸಿಕೊಳ್ಳುತ್ತಾರೆ ಹ್ಯೂಮಾ.

ಎರಡು ವರ್ಷಗಳ ಕಾಲ ಹೀಗೆ ಕಳೆದ ಮೇಲೆ ನಾನೇ ಬರೆಯೋಕೆ ತೀರ್ಮಾನಿಸಿದೆ ಎನ್ನುವ ಹ್ಯೂಮಾ, ‘ನನ್ನ ಕಥೆಯನ್ನು ಮುಂದುವರೆಸುವುದಕ್ಕೆ ಯಾರೂ ಮುಂದೆ ಬರಲಿಲ್ಲವಾದ್ದರಿಂದ, ನಾನೇ ಕಾದಂಬರಿಯನ್ನು ಬರೆಯುವುದಕ್ಕೆ ತೀರ್ಮಾನಿಸಿದೆ. ಈಗ ಕೊನೆಗೂ ಕಾದಂಬರಿ ಬಿಡುಗಡೆಯಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.

ಇದೊಂದು ಶುದ್ಧೀಕರಣ ಪ್ರಕ್ರಿಯೆ ಎನ್ನುವ ಅವರು, ‘ನಮ್ಮನ್ನು ನಾವೇ ಶುದ್ಧೀಕರಣ ಮಾಡಿಕೊಳ್ಳುವ ಪ್ರಕ್ರಿಯೆ ಎಂದರೆ ಅದು ಬರವಣಿಗೆ. ಹಾಗಾಗಿ, ಯಾರಿಗೆ ಯಾವುದೇ ಆತಂಕವಿದ್ದರೂ, ಅದನ್ನು ಬರವಣಿಗೆ ಮೂಲಕ ಹೊರಹಾಕಬಹುದು. ತಮಗೆ ಅನಿಸಿದ್ದನ್ನು ನೇರವಾಗಿ ಪುಟಗಳ ಮೂಲಕ ಹೇಳಿಕೊಳ್ಳಬಹುದು. ಸದ್ಯಕ್ಕೆ ನನ್ನಲ್ಲಿರುವುದನ್ನೆಲ್ಲಾ ಈ ಪುಸ್ತಕದ ಮೂಲಕ ಹೇಳಿಕೊಂಡಿದ್ದೇನೆ. ಮುಂದೆ ಇದನ್ನೇ ಮೂಲವಾಗಿಟ್ಟುಕೊಂಡು ಸಿನಿಮಾ ಮಾಡುವ ಯೋಚನೆ ಇದೆ’ ಎಂದು ಹೇಳಿದ್ದಾರೆ.

Whats_app_banner