Ileana D Cruz: ನಿಮ್ಮ ಪುಟ್ಟ ಕಂದ ಅಳುವಾಗ ನಿಮಗೆ ಆಗುವ ನೋವಿಗಿಂತ ಬೇರೆ ನೋವಿಲ್ಲ; ಇಲಿಯಾನಾ ಡಿ ಕ್ರೂಸ್
Ileana D Cruz: ಆಗಸ್ಟ್ 1 ರಂದು ಗಂಡು ಮಗುವಿಗೆ ಜನ್ಮ ನೀಡಿರುವ ನಟಿ ಇಲಿಯಾನಾ ಮಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ಪುಟ್ಟ ಮಗು ಅಳುವಾಗ ನಿಮಗೆ ಆಗುವ ನೋವಿಗಿಂತ ಬೇರೆ ನೋವು ಇನ್ನಿಲ್ಲ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
Ileana D Cruz: ಬಾಲಿವುಡ್ ನಟಿ ಇಲಿಯಾನಾ ಕ್ರೂಸ್ ತಾಯ್ತನದ ಸಂಭ್ರಮದಲ್ಲಿದ್ದಾರೆ. 2 ತಿಂಗಳ ಹಿಂದೆ ಇಲಿಯಾನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈಗ ಆ ಮಗುವಿಗೆ ನಾಮಕರಣ ಕೂಡ ಮಾಡಿದ್ದಾರೆ. ತಮ್ಮ ಮಗನ ಫೋಟೋಗಳನ್ನು ಇಲಿಯಾನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟಾಲಿವುಡ್ನಿಂದ ಸಿನಿಪಯಣ ಆರಂಭಿಸಿದ ಇಲಿಯಾನಾ
ಇಲಿಯಾನಾ ಮಹಾರಾಷ್ಟ್ರಕ್ಕೆ ಸೇರಿದವರು. ಶಾಲಾ ಕಾಲೇಜು ದಿನಗಳಿಂದಲೇ ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡಿದ್ದ ಈ ಚೆಲುವೆ ಅನೇಕ ಜಾಹೀರಾತುಗಳಲ್ಲಿ ಕೂಡಾ ನಟಿಸಿದ್ದಾರೆ. 2006ರಲ್ಲಿ ತೆಲುಗಿನ 'ದೇವದಾಸು' ಸಿನಿಮಾ ಮೂಲಕ ಇಲಿಯಾನಾ ಚಿತ್ರರಂಗಕ್ಕೆ ಬಂದರು. ಹುಟ್ಟಿ, ಬೆಳೆದದ್ದು ಉತ್ತರ ಭಾರತದಲ್ಲಿ ಆದರೂ ಆಕೆಗೆ ಹೆಸರು ನೀಡಿದ್ದು ತೆಲುಗು ಚಿತ್ರರಂಗ. ಕನ್ನಡದ 'ಹುಡುಗ ಹುಡುಗಿ' ಸಿನಿಮಾದಲ್ಲಿ ಕೂಡಾ ಇಲಿಯಾನಾ ನಟಿಸಿದ್ದಾರೆ.
ಟಾಲಿವುಡ್ನಲ್ಲಿ ಉತ್ತಮ ಅವಕಾಶಗಳಿದ್ದರೂ ಇಲಿಯಾನಾ ಬಾಲಿವುಡ್ ಬೆನ್ನು ಹತ್ತಿದರು. ಆದರೆ ಅಲ್ಲಿ ಅವರಿಗೆ ಹೇಳಿಕೊಳ್ಳುವಂತ ಅವಕಾಶ ದೊರೆಯಲಿಲ್ಲ. ಜೊತೆಗೆ ನಟಿಸಿದ ಸಿನಿಮಾಗಳು ಹಿಟ್ ಆಗಲಿಲ್ಲ. ಕೆಲವು ದಿನಗಳಿಂದ ನಟನೆಯಿಂದ ದೂರ ಇದ್ದ ಇಲಿಯಾನಾ, ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ನಂತರ ಪ್ರೆಗ್ನೆನ್ಸಿ ಅನೌನ್ಸ್ ಮಾಡಿ ಸುದ್ದಿಯಾಗಿದ್ದರು. ಇದೇ ವರ್ಷ ಏಪ್ರಿಲ್ನಲ್ಲಿ ಇಲಿಯಾನಾ ಇನ್ಸ್ಟಾಗ್ರಾಮ್ನಲ್ಲಿ 2 ಫೋಟೋಗಳನ್ನು ಹಂಚಿಕೊಂಡಿದ್ದರು. ಮೊದಲ ಫೋಟೋದಲ್ಲಿ And So the Adventure Begins ಎಂದು ಬರೆಯಲಾದ ಟೀ ಷರ್ಟ್. ಮತ್ತೊಂದು ಫೋಟೋದಲ್ಲಿ ತಾವು ಧರಿಸಿರುವ mama ಎಂಬ ಲಾಕೆಟ್ ಫೋಟೋ ಹಂಚಿಕೊಳ್ಳುವ ಮೂಲಕ ತಾನು ತಾಯಿ ಆಗುತ್ತಿರುವ ಸುದ್ದಿಯನ್ನು ರಿವೀಲ್ ಮಾಡಿದ್ದರು.
ಮಗುವಿನ ಫೋಟೋ ಹಂಚಿಕೊಂಡ ನಟಿ
ಇಲಿಯಾನಾ ಪ್ರೆಗ್ನೆನ್ಸಿ ಎಂದು ತಿಳಿಯುತ್ತಿದ್ದಂತೆ ಫ್ಯಾನ್ಸ್ ಶಾಕ್ ಆಗಿದ್ದರು. ನಿಮ್ಮ ಪತಿಯನ್ನು ಪರಿಚಯಿಸಿ ಎಂದಿದ್ದರು. ನಂತರ ಇಲಿಯಾನಾ ತಮ್ಮ ಬಾಯ್ ಫ್ರೆಂಡ್ ಫೋಟೋ ರೀವೀಲ್ ಮಾಡಿದ್ದರು. ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಆ ಸಿಹಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಮಗುವಿಗೆ ಕೊವಾ ಫೊನೆಕ್ಸ್ ಡೊಲನ್ ಎಂದು ಹೆಸರಿಟ್ಟಿದ್ದರು. ಮಗುವಿಗೆ 2 ತಿಂಗಳು ತುಂಬಿದಾಗಲೂ ತಮ್ಮ ಹೆಗಲಿನ ಮೇಲೆ ಮಲಗಿರುವ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದರು.
ಇತ್ತೀಚೆಗೆ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಮಗನ ಫೋಟೋ ಹಂಚಿಕೊಂಡಿದ್ದ ಇಲಿಯಾನಾ ''ನಿಮ್ಮ ಪುಟ್ಟ ಮಗು ಅಳುವಾಗ ನಿಮಗೆ ಆಗುವ ನೋವಿಗಿಂತ ಬೇರೆ ನೋವು ಇನ್ನಿಲ್ಲ'' ಎಂದು ಬರೆದುಕೊಂಡಿದ್ದರು. ಸೋಮವಾರ ಹಂಚಿಕೊಂಡಿರುವ ಫೋಟೋಗೆ ''ನನ್ನ ಕಂದನ ಮುಖದ ಹೊಳಪನ್ನು ಸದಾ ನೋಡಲು ಬಯಸುತ್ತೇನೆ. ಅವನು ದೊಡ್ಡವನಾದಾಗ ಕೂಡಾ ಇದೇ ಮಂದಹಾಸ ಇರಲಿ'' ಎಂದು ಬರೆದುಕೊಂಡಿದ್ದಾರೆ.