ಕನ್ನಡ ಸುದ್ದಿ  /  Entertainment  /  Bollywood Actress Manisha Koirala Says Rajinikanth S Baba Movie Finished Her Career In South Films

Manisha koirala on Rajinikanth: ‘ನನ್ನ ಸೌತ್‌ ಸಿನಿಮಾ ಕೆರಿಯರೇ ಹಾಳಾಗಿದ್ದೇ ರಜನಿಕಾಂತ್‌ ಅವರಿಂದ!’; ಏನಿದು ಮನೀಶಾ ಕೊಯಿರಾಲಾ ಕಥೆ?

ರಜನಿಕಾಂತ್‌ ಅವರ ಈ ಸಿನಿಮಾದಿಂದಲೇ ನನ್ನ ಸೌತ್‌ ಸಿನಿಮಾ ಕೆರಿಯರ್‌ ಹಾಳಾಯ್ತು ಎಂದಿದ್ದಾರೆ ಬಾಲಿವುಡ್‌ ನಟಿ ಮನೀಶಾ ಕೊಯಿರಾಲಾ.

‘ನನ್ನ ಸೌತ್‌ ಸಿನಿಮಾ ಕೆರಿಯರೇ ಹಾಳಾಗಿದ್ದೇ ರಜನಿಕಾಂತ್‌ ಅವರಿಂದ!’; ಏನಿದು ಮನೀಶಾ ಕೊಯಿರಾಲಾ ಕಥೆ?
‘ನನ್ನ ಸೌತ್‌ ಸಿನಿಮಾ ಕೆರಿಯರೇ ಹಾಳಾಗಿದ್ದೇ ರಜನಿಕಾಂತ್‌ ಅವರಿಂದ!’; ಏನಿದು ಮನೀಶಾ ಕೊಯಿರಾಲಾ ಕಥೆ?

Manisha koirala on Rajinikanth: 90ರ ದಶಕದ ಪ್ರಭಾವಿ ಮತ್ತು ಬೇಡಿಕೆಯ ನಟಿಯರ ಪಟ್ಟಿಯಲ್ಲಿದ್ದವರ ಪೈಕಿ ಮನೀಶಾ ಕೊಯಿರಾಲಾ ಸಹ ಒಬ್ಬರು. ತಮ್ಮ ಬಣ್ಣದ ಲೋಕದ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್‌ ಸಿನಿಮಾಗಳನ್ನು ಈ ನಟಿ ನೀಡಿದ್ದಾರೆ. ಕೇವಲ ಹಿಂದಿ ಮಾತ್ರವಲ್ಲ ತೆಲುಗು, ತಮಿಳು ಸಿನಿಮಾರಂಗದಲ್ಲಿಯೂ ಮೋಡಿ ಮಾಡಿದ್ದಾರೆ. ‘ಬಾಂಬೆ’, ‘ಇಂಡಿಯನ್’‌, ‘ಮುದಲ್ವನ್’‌ ಸೇರಿ ಅನೇಕ ಬ್ಲಾಕ್‌ ಬಸ್ಟರ್‌ ಹಿಟ್‌ಗಳನ್ನು ನೀಡಿದ್ದಾರೆ. ಹೀಗೆ ಸಾಲು ಸಾಲು ಹಿಟ್‌ ಸಿನಿಮಾ ನೀಡಿದ ಈ ನಟಿಗೆ ಇದೇ ಸೌತ್‌ ಚಿತ್ರರಂಗವೇ ವೃತ್ತಿಜೀವನಕ್ಕೆ ಮುಳುವಾಯಿತಂತೆ!

ಹೌದು, ಹೀಗೊಂದು ಶಾಕಿಂಗ್‌ ಹೇಳಿಕೆಯ ಮೂಲಕ ಇದೀಗ ಮನೀಶಾ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಒಟ್ಟಾರೆಯಾಗಿ ತಮ್ಮ ಸಿನಿಮಾ ಕೆರಿಯರ್‌ ಹಾಳಾಗಿದ್ದೇ ಸೌತ್‌ನ ಸಿನಿಮಾವೊಂದರಿಂದ ಎಂದಿದ್ದಾರೆ. ಹಾಗಾದರೆ ಯಾವುದಾ ಸಿನಿಮಾ? 2002ರಲ್ಲಿ ರಜನಿಕಾಂತ್‌ ಅಭಿನಯದಲ್ಲಿ ‘ಬಾಬಾ’ ಸಿನಿಮಾ ತೆರೆಕಂಡಿತ್ತು. ಸುರೇಶ್‌ ಕೃಷ್ಣ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿತ್ತು. ರಜನಿಕಾಂತ್‌ಗೆ ಜೋಡಿಯಾಗಿ ಮನೀಶಾ ಕೋಯಿರಾಲಾ ನಟಿಸಿದ್ದರು. ಸಿನಿಮಾ ಮಾತ್ರ ಬಾಕ್ಸ್‌ ಆಫೀಸ್‌ನಲ್ಲಿ ಸೋಲನುಭವಿಸಿತು.

ಬಾಬಾ ಪ್ಲಾಪ್‌; ಆಫರ್‌ ಕಟ್...‌

ಒಂದು ಸಿನಿಮಾದ ಸೋಲು ಗೆಲುವು ಅದೆಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಈ ಉದಾಹರಣೆ ಸಾಕ್ಷಿ. ಸಾಲು ಸಾಲು ಹಿಟ್‌ ಕೊಟ್ಟು, ಸೌತ್‌ ಪ್ರೇಕ್ಷಕರ ನೆಚ್ಚಿನ ನಟನಿಯಾಗಿದ್ದ ಮನೀಶಾಗೆ ‘ಬಾಬಾ’ ಸೋಲು ದೊಡ್ಡ ಪೆಟ್ಟು ನೀಡಿತು. ಈ ಬಗ್ಗೆ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. “ತಮಿಳಿನಲ್ಲಿ ದೊಡ್ಡ ಮಟ್ಟದಲ್ಲಿ ತೆರೆಕಂಡ ನನ್ನ ಕೊನೆಯ ದೊಡ್ಡ ಸಿನಿಮಾ ‘ಬಾಬಾ’. ಆ ದಿನಗಳಲ್ಲಿ ಅದು ದಯನೀಯವಾಗಿ ಸೋತಿತು. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಸಿನಿಮಾ ಸೋತಾಗ, ನನಗೆ ಸೌತ್ ಚಿತ್ರಗಳಿಂದ ಆಫರ್‌ಗಳೇ ಇಲ್ಲದಂತಾದವು" ಎಂದು ಹಳೇ ದಿನಗಳನ್ನು ನೆನೆದಿದ್ದಾರೆ ಮನೀಶಾ.

ಮರು ಬಿಡುಗಡೆ ಆದಾಗ ಹಿಟ್‌ ಆಯ್ತು ಬಾಬಾ

ರಜನಿಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಳೆದ ವರ್ಷದ ಡಿಸೆಂಬರ್‌ 12ರಂದು ಈ ಚಿತ್ರ ಮತ್ತೊಮ್ಮೆ ಮರು ಬಿಡುಗಡೆಯಾಯಿತು. ತಾಂತ್ರಿಕವಾಗಿ ಬದಲಾವಣೆ ಮಾಡಿ ಬಿಡುಗಡೆ ಆಗಿದ್ದ ಈ ಚಿತ್ರ ಒಳ್ಳೆಯ ಗಳಿಕೆಯನ್ನೇ ಕಂಡಿತು. ಈ ಬಗ್ಗೆಯೂ ಪ್ರತಿಕ್ರಿಯಿಸಿದ ಮನೀಶಾ, "20 ವರ್ಷಗಳ ನಂತರ ಈ ಚಿತ್ರ ಹಿಟ್ ಆಗಿರುವುದು ಖುಷಿ ತಂದಿದೆ" ಎಂದಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗೆ ಶೆಹಜಾದಾ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಅವರ ತಾಯಿಯಾಗಿ ಮನೀಶಾ ಕಾಣಿಸಿಕೊಂಡಿದ್ದರು. ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

IPL_Entry_Point