ಬದುಕುತ್ತೇನೆ ಎಂದುಕೊಂಡಿರಲಿಲ್ಲ, ದೇವರಿಗೆ ಧನ್ಯವಾದ; ಲಾಸ್‌ ಏಂಜಲೀಸ್‌ ಕಾಡ್ಗಿಚ್ಚು ದುರಂತವನ್ನು ವಿವರಿಸಿದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ
ಕನ್ನಡ ಸುದ್ದಿ  /  ಮನರಂಜನೆ  /  ಬದುಕುತ್ತೇನೆ ಎಂದುಕೊಂಡಿರಲಿಲ್ಲ, ದೇವರಿಗೆ ಧನ್ಯವಾದ; ಲಾಸ್‌ ಏಂಜಲೀಸ್‌ ಕಾಡ್ಗಿಚ್ಚು ದುರಂತವನ್ನು ವಿವರಿಸಿದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ

ಬದುಕುತ್ತೇನೆ ಎಂದುಕೊಂಡಿರಲಿಲ್ಲ, ದೇವರಿಗೆ ಧನ್ಯವಾದ; ಲಾಸ್‌ ಏಂಜಲೀಸ್‌ ಕಾಡ್ಗಿಚ್ಚು ದುರಂತವನ್ನು ವಿವರಿಸಿದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ

Los Angeles Wildfires: ಕಳೆದ ವಾರ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು 12 ಜನರನ್ನು ಬಲಿ ಪಡೆದಿದೆ. ಎಷ್ಟೋ ಜನರು ಮನೆ ಕಳೆದುಕೊಂಡಿದ್ದಾರೆ. ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಕೂಡಾ ಲಾಸ್‌ ಏಂಜಲೀಸ್‌ನಲ್ಲಿದ್ದು ಅಲ್ಲಿನ ಪರಿಸ್ಥಿತಿ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ವಾರ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ನಂದಿಸಲು ಪ್ರಯತ್ನಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ, ಬಲ ಚಿತ್ರದಲ್ಲಿ ನಟಿ ಪ್ರೀತಿ ಜಿಂಟಾ
ಕಳೆದ ವಾರ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ನಂದಿಸಲು ಪ್ರಯತ್ನಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ, ಬಲ ಚಿತ್ರದಲ್ಲಿ ನಟಿ ಪ್ರೀತಿ ಜಿಂಟಾ (PC: @UPSCprepIAS, Preity Zinta Facebook)

ವಿಶ್ವದ ದೊಡ್ಡಣ್ಣ ಎಂದು ಹೆಸರಾದ ಅಮೆರಿಕ ಈಗ ಕಾಡ್ಗಿಚ್ಚಿನಿಂದ ನಲುಗುತ್ತಿದೆ. ಕಳೆದ ವಾರ ಲಾಸ್‌ ಏಂಜಲಿಸ್‌ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಜನರನ್ನು ಬಲಿ ಪಡೆದಿದೆ. ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನಗರದಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಎಷ್ಟೋ ಜನರು ಮನೆ ಕಳೆದುಕೊಂಡಿದ್ದಾರೆ. ಜನ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡಾ ಮನೆ ಕಳೆದುಕೊಂಡಿದ್ದಾರೆ.

ಮನೆ ಕಳೆದುಕೊಂಡ ಸೆಲಬ್ರಿಟಿಗಳು

ವಿದೇಶಗಳಲ್ಲಿ ಮನೆಗಳನ್ನು ಹೆಚ್ಚಾಗಿ ಮರಗಳನ್ನು ಬಳಸಿ ಕಟ್ಟುತ್ತಾರೆ. ಆ ಮನೆಗಳು ಈಗ ಬೆಂಕಿಗೆ ಆಹುತಿಯಾಗಿವೆ. ಅಮೆರಿಕದಲ್ಲಿ ಬಾಲಿವುಡ್‌ ನಟಿ ನೋರಾ ಫತೇಹಿ ಮನೆ ಕೂಡಾ ಹಾನಿಯಾಗಿದೆ. ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಛೋಪ್ರಾ ಕೂಡಾ ಅಮೆರಿಕದಲ್ಲಿದ್ದು ಸದ್ಯ ಅವರು ಸುರಕ್ಷಿತವಾಗಿದ್ದಾರೆ. ಪ್ರಿಯಾಂಕಾ ಹಾಗೂ ನೋರಾ ಇಬ್ಬರೂ ಅಮೆರಿಕದ ಪರಿಸ್ಥಿತಿ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಕೂಡಾ ಅಮೆರಿಕದಲ್ಲಿ ನೆಲೆಸಿದ್ದಾರೆ. 2016 ರಲ್ಲಿ ಜೀನ್ ಗುಡೆನಫ್ ಅವರನ್ನು ಮದುವೆಯಾದಾಗಿನಿಂದ ಅವರು ಪತಿ ಹಾಗೂ ಕುಟುಂಬದೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಪ್ರೀತಿ ಕೂಡಾ ಅಮೆರಿಕದಲ್ಲಿರುವ ವಿಚಾರ ತಿಳಿದ ಅಭಿಮಾನಿಗಳು ಅಲ್ಲಿ ನಿಮ್ಮ ಪರಿಸ್ಥಿತಿ ಹೇಗಿದೆ? ನೀವು ಸುರಕ್ಷಿತವಾಗಿದ್ದೀರಾ? ಎಂದು ಸೋಷಿಯಲ್‌ ಮೀಡಿಯಾ ಮೂಲಕ ಕಾಳಜಿ ತೋರಿದ್ದಾರೆ. ಅಭಿಮಾನಿಗಳ ಪ್ರೀತಿಯ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿರುವ ಪ್ರೀತಿ ಜಿಂಟಾ, ಇಲ್ಲಿ ನಾನು ಮತ್ತು ಕುಟುಂಬ ಸುರಕ್ಷಿತವಾಗಿದ್ದೇವೆ ಎಂದು ಸಂದೇಶ ನೀಡಿದ್ದಾರೆ. ಅಲ್ಲಿನ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಲಾಸ್‌ ಏಂಜಲೀಸ್‌ ಪರಿಸ್ಥಿತಿ ಹಂಚಿಕೊಂಡ ಪ್ರೀತಿ ಜಿಂಟಾ

ಕಾಡ್ಗಿಚ್ಚು 12 ಜನರನ್ನು ಬಲಿ ಪಡೆದಿದೆ. 10 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಧ್ವಂಸವಾಗಿವೆ. ಇಡೀ ಆಕಾಶವು ಹೊಗೆಯಿಂದ ತುಂಬಿದೆ, ಸುತ್ತ ಮುತ್ತ ಬೂದಿಯೇ ಕಾಣುತ್ತಿದೆ. ಲಾಸ್‌ ಏಂಜಲೀಸ್‌ ನಾಗರಿಕರು ಬಹಳ ಹೆದರಿದ್ದಾರೆ. ಆ ದಿನ ನಮ್ಮ ಸುತ್ತಮುತ್ತ ವ್ಯಾಪಿಸಿದ್ದ ಬೆಂಕಿ ನೋಡಿ ಬಹಳ ಭಯವಾಗಿತ್ತು. ನಾವೆಲ್ಲರೂ ಬದುಕುತ್ತೇವೆ ಎಂದು ಊಹಿಸಿರಲಿಲ್ಲ. ಪರಿಸ್ಥಿತಿ ನೆನಪಿಸಿಕೊಂಡು ಬಹಳ ಬೇಸರವಾಗುತ್ತಿದೆ. ನಮ್ಮನ್ನು ಕಾಪಾಡಿದ್ದಕ್ಕೆ ದೇವರಿಗೆ ಧನ್ಯವಾದಗಳು, ನಾವೆಲ್ಲರೂ ಈಗ ಸುರಕ್ಷಿತವಾಗಿದ್ದೇವೆ. ಸ್ಥಳಾಂತರಗೊಂಡ ಜನರು, ಮನೆ ಕಳೆದುಕೊಂಡವರಿಗಾಗಿ ನಾನು ಪ್ರಾರ್ಥಿಸುತ್ತೇನೆ, ಆದಷ್ಟು ಬೇಗ ಬೆಂಕಿ ನಿಯಂತ್ರಣಕ್ಕೆ ಬರಲಿ ಎಂದು ಆಶಿಸುತ್ತೇನೆ. ಜನರ ಜೀವ, ಆಸ್ತಿಯನ್ನು ಉಳಿಸಲು ಹೋರಾಡುತ್ತಿರುವ ಅಗ್ನಿಶಾಮಕ ತಂಡದವರಿಗೆ ಧನ್ಯವಾದಗಳು ಎಂದು ಪ್ರೀತಿ ಜಿಂಟಾ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರೀತಿ ಜಿಂಟಾ 1998 ರಲ್ಲಿ ದಿಲ್‌ ಸೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಶೋಲ್ಜರ್‌, ದಿಲ್ಹಗಿ, ಹರ್‌ ದಿಲ್‌ ಜೋ ಪ್ಯಾರ್‌ ಕರೇಗಾ, ಮಿಷನ್‌ ಕಾಶ್ಮೀರ್‌ ಕೋಯಿ ಮಿಲ್‌ಗಯಾ, ಕ್ರಿಷ್‌ , ಇಶ್ಕ್‌ ಇನ್‌ ಪ್ಯಾರೀಸ್‌ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಲಾಹೋರ್‌ 1947 ಚಿತ್ರದಲ್ಲಿ ಪ್ರೀತಿ ನಟಿಸುತ್ತಿದ್ದಾರೆ.

Whats_app_banner