Kannada News  /  Entertainment  /  Bollywood Actress Rakhi Sawant About Adil Khan Durrani

Rakhi Sawant: ದೇವರು ದೊಡ್ಡವನು, ನಾನು ಫ್ರಿಡ್ಜ್‌ನಲ್ಲಿ ಶವ ಆಗುವುದನ್ನು ತಡೆದ ಎಂದು ಕಣ್ಣೀರಿಟ್ಟ ರಾಖಿ ಸಾವಂತ್‌

ಆದಿಲ್‌ ಖಾನ್‌ ವಿರುದ್ಧ ಬೇಸರ ವ್ಯಕ್ತಪಡಿಸಿದ ರಾಖಿ ಸಾವಂತ್‌
ಆದಿಲ್‌ ಖಾನ್‌ ವಿರುದ್ಧ ಬೇಸರ ವ್ಯಕ್ತಪಡಿಸಿದ ರಾಖಿ ಸಾವಂತ್‌

ಆದಿಲ್‌ ಖಾನ್‌ನನ್ನು ಪ್ರೀತಿಸಿದ್ದಕ್ಕೆ ಈಗ ಪಶ್ಚಾತಾಪ ಆಗುತ್ತಿದೆ. ನನ್ನನ್ನು ಫ್ರಿಡ್ಜ್‌ನಲ್ಲಿ ಹೆಣವನ್ನಾಗಿ ತುಂಬುವುದು ಅವನ ಉದ್ಧೇಶವಾಗಿತ್ತೋ ಏನೋ..? ಆದರೆ ದೇವರು ದೊಡ್ಡವನು, ಹಾಗೆ ಆಗಲು ಬಿಡಲಿಲ್ಲ. ಆದ್ದರಿಂದ ದೇವರಿಗೆ ನಾನು ಥ್ಯಾಂಕ್ಸ್‌ ಹೇಳುತ್ತೇನೆ. ಆದಿಲ್‌ ನನ್ನನ್ನು ನಡುರಸ್ತೆಯಲ್ಲಿ ನಿಲ್ಲಿಸಿಬಿಟ್ಟ ಎಂದು ರಾಖಿ ಅಳಲು ತೋಡಿಕೊಂಡಿದ್ದಾರೆ.

ಮೊದಲ ಪತಿಯಿಂದ ದೂರಾಗಿದ್ದ ಬಾಲಿವುಡ್‌ ನಟಿ ರಾಖಿ ಸಾವಂತ್‌, ಆದಿಲ್‌ ಖಾನ್‌ ದುರಾನಿಯನ್ನು ಮದುವೆ ಆಗಿ ಸಂತೋಷದ ಜೀವನ ನಡೆಸುವ ಕನಸು ಕಂಡಿದ್ದರು. ಆದರೆ ಆ ಕನಸು ಕೂಡಾ ಈಗ ನುಚ್ಚು ನೂರಾಗಿದೆ. ಯಾರಿಗೂ ತಿಳಿಯದಂತೆ ಆದಿಲ್‌ ಮದುವೆ ಆಗಿದ್ದ ರಾಖಿ ವೈವಾಹಿಕ ಜೀವನ 6 ತಿಂಗಳಲ್ಲೇ ಮುರಿದು ಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ಕಳೆದ ಎರಡು ತಿಂಗಳಿಂದ ರಾಖಿ ಸಾವಂತ್‌ ಆದಿಲ್‌ ಖಾನ್‌ ಬಗ್ಗೆ ಆರೋಪ ಮಾಡುತ್ತಿದ್ದರು. ಆದಿಲ್‌ ನನ್ನನ್ನು ಮನಸಾರೆ ಪ್ರೀತಿಸುತ್ತಿದ್ದಾರೆ ಎಂದುಕೊಂಡಿದ್ದೆ, ಆದರೆ ಆತ ಬಾಲಿವುಡ್‌ಗೆ ಬರಲು ನನ್ನನ್ನು ದಾಳವನ್ನಾಗಿ ಬಳಸಿಕೊಂಡ. ಆತನಿಗೆ ಬೇರೆ ಯುವತಿಯರೊಂದಿಗೆ ಅಪೇರ್‌ ಇದೆ. ನನ್ನ ಬಗ್ಗೆ ಸ್ವಲ್ಪವೂ ಪ್ರೀತಿ ಇಲ್ಲ, ಆತ ನನ್ನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದೆಲ್ಲಾ ಆರೋಪ ಮಾಡುತ್ತಿದ್ದರು. ಇದೆಲ್ಲಾ ರಾಖಿ ಬೇಕಂತಲೇ ಮಾಡುತ್ತಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ನಂತರ ದಿನಗಳಲ್ಲಿ ರಾಖಿ, ಆದಿಲ್‌ ಖಾನ್‌ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದು, ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಜೊತೆಗೆ ಮೈಸೂರು ಪೊಲೀಸರು ಕೂಡಾ ಆದಿಲ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಇದೀಗ ರಾಖಿ ಸಾವಂತ್‌, ಕೋರ್ಟ್‌ ಆವರಣದಲ್ಲಿ ಆದಿಲ್‌ ಖಾನ್‌ ಭೇಟಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ''ಆದಿಲ್‌ ಖಾನ್‌ ಎದುರಾದಾಗ ಕೋರ್ಟ್‌ ಆವರಣದಲ್ಲೇ ಆತ ನನಗೆ ಜೀವ ಬೆದರಿಕೆ ಹಾಕಿದ್ದಾನೆ. ಜೈಲಿನಲ್ಲಿ ರೌಡಿಗಳನ್ನು ಭೇಟಿ ಮಾಡಿದ್ದೇನೆ, ನೀವು ಹೇಗೆ ಬದುಕುತ್ತೀಯ ನೋಡುತ್ತೇನೆ ಎಂದಿದ್ದಾನೆ. ಆದಿಲ್‌ ಖಾನ್‌ನನ್ನು ಪ್ರೀತಿಸಿದ್ದಕ್ಕೆ ಈಗ ಪಶ್ಚಾತಾಪ ಆಗುತ್ತಿದೆ. ನನ್ನನ್ನು ಫ್ರಿಡ್ಜ್‌ನಲ್ಲಿ ಹೆಣವನ್ನಾಗಿ ತುಂಬುವುದು ಅವನ ಉದ್ಧೇಶವಾಗಿತ್ತೋ ಏನೋ..? ಆದರೆ ದೇವರು ದೊಡ್ಡವನು, ಹಾಗೆ ಆಗಲು ಬಿಡಲಿಲ್ಲ. ಆದ್ದರಿಂದ ದೇವರಿಗೆ ನಾನು ಥ್ಯಾಂಕ್ಸ್‌ ಹೇಳುತ್ತೇನೆ. ಆದಿಲ್‌ ನನ್ನನ್ನು ನಡುರಸ್ತೆಯಲ್ಲಿ ನಿಲ್ಲಿಸಿಬಿಟ್ಟ, ನನ್ನ ಜೀವನದಲ್ಲೇ ಇದೆಲ್ಲಾ ಏಕೆ ಆಗುತ್ತಿದೆ. ಮೈಸೂರಿನಲ್ಲಿರುವ ಆದಿಲ್‌ ಖಾನ್‌ ತಂದೆ-ತಾಯಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಕೆಲವೊಂದು ವಿಚಾರಗಳನ್ನು ಅವರ ಬಳಿ ಹೇಳಬೇಕಿದೆ. ಆದರೆ ಅವರು ಫೋನ್‌ ರಿಸೀವ್‌ ಮಾಡುತ್ತಿಲ್ಲ'' ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಯುವತಿಗೆ ಮೋಸ ಮಾಡಿದ ಆರೋಪ ಎದುರಿಸುತ್ತಿರುವ ಆದಿಲ್‌ ಖಾನ್‌

ಮೈಸೂರಿನಲ್ಲಿ ಇರಾನಿ ವಿದ್ಯಾರ್ಥಿನಿಯೊಬ್ಬರನ್ನು ಆದಿಲ್‌ ಖಾನ್‌ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದು ಮೈಸೂರು ಪೊಲೀಸರು ಆದಿಲ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಸಂತ್ರಸ್ತೆ ಎನ್ನಲಾದ 30 ವರ್ಷದ ಮಹಿಳೆ ಆದಿಲ್‌ ಖಾನ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ''ಆದಿಲ್‌ ಖಾನ್ ನನಗೆ 2018ರಿಂದ ಪರಿಚಯ. ವಿವಿ ಪುರಂನಲ್ಲಿ ಆದಿಲ್‌ ರೆಸ್ಟೋರೆಂಟ್‌ ನಡೆಸುತ್ತಿದ್ದ ಸಮಯದಲ್ಲಿ ಅವರು ನನಗೆ ಪರಿಚಯವಾಗಿದ್ದರು. ಕೆಲವು ದಿನಗಳ ನಂತರ ಆದಿಲ್‌ ನನಗೆ ಪ್ರಪೋಸ್‌ ಮಾಡಿ ಮದುವೆಯಾಗುವುದಾಗಿ ನಂಬಿಸಿದ್ದರು. ಯಾದವಗಿರಿಯಲ್ಲಿ ಮೂರು ವರ್ಷಗಳ ಕಾಲ ಲಿವಿಂಗ್‌ ರಿಲೇಶನ್‌ನಲ್ಲಿದ್ದೆವು. ಈ ವೇಳೆ ಆದಿಲ್‌ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದರು. ಮದುವೆ ಆಗಲು ಆತನನ್ನು ಮನವಿ ಮಾಡಿದಾಗ ಆತ ನಿರಾಕರಿಸಿದ್ದು, ಅಲ್ಲದೆ ನನಗೆ ಜೀವ ಬೆದರಿಕೆ ಹಾಕಿದ್ದರು'' ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆದಿಲ್‌ ಖಾನ್‌ ಉದ್ಯಮಿಯೇ ಅಲ್ಲ ಎಂದ ರಾಖಿ ಸಾವಂತ್‌

ಆದಿಲ್‌ ಖಾನ್‌ ನನ್ನ ನಗ್ನ ವಿಡಿಯೋ ಮಾಡಿ ಅದನ್ನು ಮಾರಿ ಹಣ ಗಳಿಸಿದ್ದಾನೆ ಎಂದು ರಾಖಿ ಸಾವಂತ್‌ ಕಣ್ಣೀರು ಹಾಕಿದ್ದಾರೆ. ಈ ಕೇಸ್‌ ಸೈಬರ್‌ ಕ್ರೈಮ್‌ ಇಲಾಖೆಯಲ್ಲಿದೆ. ಆದಿಲ್‌ಗೆ ಮೊದಲೇ ಒಂದು ಮದುವೆಯಾಗಿ ಡಿವೋರ್ಸ್‌ ಆಗಿತ್ತು. ನಂತರ ನನ್ನನ್ನು ಎರಡನೇ ಮದುವೆ ಆಗಿದ್ದ. ಈಗ ತನು ಎಂಬ ಹುಡುಗಿಯನ್ನು ಮೂರನೇ ಮದುವೆ ಆಗಲು ಮುಂದಾಗಿದ್ದಾನೆ. ಅಸಲಿಗೆ ಆದಿಲ್‌ ಖಾನ್‌ ಯಾವ ಉದ್ಯಮಿಯೂ ಅಲ್ಲ‌, ತನ್ನನ್ನು ಉದ್ಯಮಿ ಎಂದು ಹೇಳುವಂತೆ ಆತ ನನಗೆ ಬ್ಲಾಕ್‌ ಮೇಲ್‌ ಮಾಡಿದ್ದ. ಆತನಿಗೆ ಬಾಲಿವುಡ್‌ಗೆ ಬರಲು ಒಂದು ಅಸ್ತ್ರ ಬೇಕಿತ್ತು. ಅದಕ್ಕಾಗಿ ಪ್ರೀತಿ ಹೆಸರಿನಲ್ಲಿ ನನ್ನನ್ನು ಬಳಸಿಕೊಂಡ ಎಂದು ರಾಖಿ ಸಾವಂತ್‌ ಆದಿಲ್‌ ಖಾನ್‌ ವಿರುದ್ಧ ಆರೋಪ ಮಾಡಿದ್ದಾರೆ.