ಕನ್ನಡ ಸುದ್ದಿ  /  ಮನರಂಜನೆ  /  Rakhi Thanked Mysore Police: ಆದಿಲ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಮೈಸೂರು ಪೊಲೀಸರು...ಥ್ಯಾಂಕ್ಸ್‌ ಹೇಳಿದ ರಾಖಿ ಸಾವಂತ್‌

Rakhi Thanked Mysore Police: ಆದಿಲ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಮೈಸೂರು ಪೊಲೀಸರು...ಥ್ಯಾಂಕ್ಸ್‌ ಹೇಳಿದ ರಾಖಿ ಸಾವಂತ್‌

ವಿವಿ ಪುರಂನಲ್ಲಿ ಆದಿಲ್‌ ರೆಸ್ಟೋರೆಂಟ್‌ ನಡೆಸುತ್ತಿದ್ದ ಸಮಯದಲ್ಲಿ ಅವರು ನನಗೆ ಪರಿಚಯವಾಗಿದ್ದರು. ಕೆಲವು ದಿನಗಳ ನಂತರ ಆದಿಲ್‌ ನನಗೆ ಪ್ರಪೋಸ್‌ ಮಾಡಿ ಮದುವೆಯಾಗುವುದಾಗಿ ನಂಬಿಸಿದ್ದರು. ಯಾದವಗಿರಿಯಲ್ಲಿ ಮೂರು ವರ್ಷಗಳ ಕಾಲ ಲಿವಿಂಗ್‌ ರಿಲೇಶನ್‌ನಲ್ಲಿದ್ದೆವು. ಈ ವೇಳೆ ಆದಿಲ್‌ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದರು.

ಆದಿಲ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಮೈಸೂರು ಪೊಲೀಸರು
ಆದಿಲ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಮೈಸೂರು ಪೊಲೀಸರು (PC: Adil Khan Durrani)

ಸದಾ ಸುದ್ದಿಯಲ್ಲಿರುವ ಬಾಲಿವುಡ್‌ ಸೆಲೆಬ್ರಿಟಿಗಳಲ್ಲಿ ರಾಖಿ ಸಾವಂತ್‌ ಮೊದಲ ಸಾಲಿಗೆ ನಿಲ್ಲುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಮೊದಲ ಮದುವೆ, ಮುಂಬೈ ಬೀದಿ ಕಸ ಗುಡಿಸುವುದು, ಸಹ ಕಲಾವಿದರರೊಂದಿಗೆ ಜಗಳ, ಬಾಯ್‌ ಫ್ರೆಂಡ್‌, ಎರಡನೇ ಮದುವೆ, ಬ್ರೇಕ್‌ ಅಪ್‌ ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ರಾಖಿ ಸಾವಂತ್‌ ವರ್ಷವಿಡೀ ಸುದ್ದಿಯಲ್ಲಿರುತ್ತಾರೆ. ಈ ನಡುವೆ ಅವರು ಮೈಸೂರು ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

ಕಳೆದ ವರ್ಷ ಯಾರಿಗೂ ತಿಳಿಯದಂತೆ ಆದಿಲ್‌ ಖಾನ್‌ ದುರ್ರಾನಿ ಜೊತೆ ಮದುವೆ ಆಗಿದ್ದ ರಾಖಿ ಸಾವಂತ್‌ ಪತಿ ನನಗೆ ಮೋಸ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದರು. ಮದುವೆ ವಿಚಾರ ತಿಳಿದರೆ ಆದಿಲ್‌ ತಂಗಿಗೆ ಗಂಡು ಸಿಗುವುದಿಲ್ಲ ಎಂಬ ಕಾರಣಕ್ಕೆ ನಾನೂ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ ಆದಿಲ್‌ ನನಗೆ ಮೋಸ ಮಾಡುತ್ತಿದ್ದಾನೆ, ಆತನಿಗೆ ಬೇರೆ ಹುಡುಗಿಯೊಂದಿಗೆ ಅಫೇರ್‌ ಇದೆ. ಅಲ್ಲದೆ ಆತ ಬಾಲಿವುಡ್‌ನಲ್ಲಿ ಹೆಸರು ಮಾಡುವ ಉದ್ದೇಶದಿಂದ ನನ್ನನ್ನು ದಾಳವನ್ನಾಗಿ ಬಳಸಿಕೊಂಡಿದ್ದಾನೆ ಎಂದು ರಾಖಿ ಹೇಳಿಕೊಂಡಿದ್ದರು. ಪತಿಯನ್ನು ಅರೆಸ್ಟ್‌ ಕೂಡಾ ಮಾಡಿಸಿದ್ದರು.

ಮೈಸೂರು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಆದಿಲ್‌ ಖಾನ್‌

ಟ್ರೆಂಡಿಂಗ್​ ಸುದ್ದಿ

ರಾಖಿ ಸಾವಂತ್‌ಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಆದಿಲ್‌ ಖಾನ್‌ ದುರಾನಿ ಅರೆಸ್ಟ್‌ ಆಗಿದ್ದಾರೆ. ಇದೀಗ ಅವರ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ. ಮೈಸೂರಿನಲ್ಲಿ ಇರಾನಿ ವಿದ್ಯಾರ್ಥಿನಿಯೊಬ್ಬರನ್ನು ಆದಿಲ್‌ ಖಾನ್‌ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದು ಮೈಸೂರು ಪೊಲೀಸರು ಆದಿಲ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆ ಎನ್ನಲಾದ 30 ವರ್ಷದ ಮಹಿಳೆ ಆದಿಲ್‌ ಖಾನ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ''ಆದಿಲ್‌ ಖಾನ್ ನನಗೆ 2018ರಿಂದ ಪರಿಚಯ. ವಿವಿ ಪುರಂನಲ್ಲಿ ಆದಿಲ್‌ ರೆಸ್ಟೋರೆಂಟ್‌ ನಡೆಸುತ್ತಿದ್ದ ಸಮಯದಲ್ಲಿ ಅವರು ನನಗೆ ಪರಿಚಯವಾಗಿದ್ದರು. ಕೆಲವು ದಿನಗಳ ನಂತರ ಆದಿಲ್‌ ನನಗೆ ಪ್ರಪೋಸ್‌ ಮಾಡಿ ಮದುವೆಯಾಗುವುದಾಗಿ ನಂಬಿಸಿದ್ದರು. ಯಾದವಗಿರಿಯಲ್ಲಿ ಮೂರು ವರ್ಷಗಳ ಕಾಲ ಲಿವಿಂಗ್‌ ರಿಲೇಶನ್‌ನಲ್ಲಿದ್ದೆವು. ಈ ವೇಳೆ ಆದಿಲ್‌ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದರು. ಮದುವೆ ಆಗಲು ಆತನನ್ನು ಮನವಿ ಮಾಡಿದಾಗ ಆತ ನಿರಾಕರಿಸಿದ್ದು, ಅಲ್ಲದೆ ನನಗೆ ಜೀವ ಬೆದರಿಕೆ ಹಾಕಿದ್ದರು'' ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವಿಚಾರವಾಗಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಖಿ ಸಾವಂತ್ ''ಕೋರ್ಟಿನಲ್ಲಿ ಕೇಸ್‌ ನಡೆಯುತ್ತಿದೆ. ಆದಿಲ್‌ ಖಾನ್‌ಗೆ ಬೇಲ್‌ ಸಿಕ್ಕಿಲ್ಲ. ಆದಿಲ್‌ ಮೊದಲ ಮದುವೆ ವಿಚಾರ ಕೇಳಿ ನನಗೆ ಶಾಕ್‌ ಆಗಿತ್ತು. ಈಗ ಆತನ ಗರ್ಲ್‌ ಫ್ರೆಂಡ್‌ ಗರ್ಭಿಣಿ ಎಂಬ ಸುದ್ದಿ ಕೇಳಿ ಮತ್ತೆ ಶಾಕ್‌ ಆಗಿದೆ. ಅದಕ್ಕಿಂತ, ಆದಿಲ್‌ ಮೈಸೂರು ವಿದ್ಯಾರ್ಥಿನಿಯನ್ನು ರೇಪ್‌ ಮಾಡಿದ್ದಾನೆ ಎಂಬ ವಿಚಾರ ತಿಳಿದು ನನಗೆ ಏನು ಹೇಳಬೇಕು ಎನ್ನುವುದು ತಿಳಿಯುತ್ತಿಲ್ಲ. ಆದಿಲ್‌ ಖಾನ್‌ ಮಾಡಿದ ಅಪರಾಧವನ್ನು ಹೊರಗೆ ತಂದು ನನಗೆ ಸಹಕರಿಸಿದ ಮೈಸೂರು ಪೊಲೀಸರು, ಮುಂಬೈ ಪೊಲೀಸರಿಗೆ ಧನ್ಯವಾದ ಹೇಳಲು ಬಯಸುತ್ತೇನೆ'' ಎಂದು ರಾಖಿ ಸಾವಂತ್‌ ಹೇಳಿದ್ದಾರೆ.

ಕಳೆದ ವಾರ ಪತಿ ಆದಿಲ್‌ ಖಾನ್‌ನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದ ರಾಖಿ ಸಾವಂತ್‌

''ಆದಿಲ್‌ ಖಾನ್‌ ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ನನಗೆ ದೈಹಿಕ ಹಿಂಸೆ ನೀಡಿದ್ದಾನೆ. ನನ್ನ ಹಣ ದೋಚಿದ್ದಾನೆ. ಇದಕ್ಕೆ ನನ್ನ ಬಳಿ ಎಲ್ಲಾ ಸಾಕ್ಷಿ ಇವೆ. ಆದಿಲ್‌ ನನ್ನನ್ನು ಕ್ಷಮೆ ಕೇಳಲು ಬಂದಿದ್ದ. ಆದರೆ ನಾನು ಅವನನ್ನು ಎಂದಿಗೂ ಕ್ಷಮಿಸುವುದಿಲ್ಲ. ನಾನು ಅವನಿಗೆ ಮನೆಯಲ್ಲಿ ಅಡುಗೆ ಮಾಡಿ ತಿನ್ನಿಸುತ್ತಿದ್ದೆ, ಶತ್ರುಗಳು ಮನೆಗೆ ಬಂದಾಗ ಕೂಡಾ ನಾವು ಅವರಿಗೆ ಊಟ ನೀಡಿ ಕಳಿಸುತ್ತೇವೆ. ಇವತ್ತು ಆದಿಲ್‌ಗೆ ಕೊನೆಯ ತುತ್ತು ತಿನ್ನಿಸಿದ್ದೇನೆ. ಆದಿಲ್‌ ನನ್ನ‌ ಪತಿ. ಆತನನ್ನು ಕೊನೆಯವರೆಗೂ ಪ್ರೀತಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಆತನನ್ನು ಕ್ಷಮಿಸುವುದಿಲ್ಲ. ಮಂಗಳವಾರ ಬೆಳಗ್ಗೆ ಆದಿಲ್‌ ನನ್ನ ಮನೆಗೆ ಬಂದು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಅರೆಸ್ಟ್‌ ಮಾಡಿಸಿದ್ದೇನೆ'' ಎಂದು ರಾಖಿ ಸಾವಂತ್‌ ಕಳೆದ ವಾರ ಹೇಳಿದ್ದರು.

ಪತಿ ವಿರುದ್ಧ ಹೊಸ ಆರೋಪ ಮಾಡಿದ್ದ ನಟಿ

ಇದೀಗ ರಾಖಿ ಸಾವಂತ್‌ ಮತ್ತೆ ಹೊಸ ಆರೋಪ ಮಾಡಿದ್ದಾರೆ. ಆದಿಲ್‌ ಖಾನ್‌ ನನ್ನ ನಗ್ನ ವಿಡಿಯೋ ಮಾಡಿ ಅದನ್ನು ಮಾರಿ ಹಣ ಗಳಿಸಿದ್ದಾನೆ ಎಂದು ಗೋಳಾಡಿದ್ದಾರೆ. ಈ ಕೇಸ್‌ ಸೈಬರ್‌ ಕ್ರೈಮ್‌ ಇಲಾಖೆಯಲ್ಲಿದೆ. ಆದಿಲ್‌ಗೆ ಮೊದಲೇ ಒಂದು ಮದುವೆಯಾಗಿ ಡಿವೋರ್ಸ್‌ ಆಗಿತ್ತು. ನಂತರ ನನ್ನನ್ನು ಎರಡನೇ ಮದುವೆ ಆಗಿದ್ದ. ಈಗ ತನು ಎಂಬ ಹುಡುಗಿಯನ್ನು ಮೂರನೇ ಮದುವೆ ಆಗಲು ಮುಂದಾಗಿದ್ದಾನೆ. ಅಸಲಿಗೆ ಆದಿಲ್‌ ಖಾನ್‌ ಯಾವ ಉದ್ಯಮಿಯೂ ಅಲ್ಲ‌, ತನ್ನನ್ನು ಉದ್ಯಮಿ ಎಂದು ಹೇಳುವಂತೆ ಆತ ನನಗೆ ಬ್ಲಾಕ್‌ ಮೇಲ್‌ ಮಾಡಿದ್ದ. ಆತನಿಗೆ ಬಾಲಿವುಡ್‌ಗೆ ಬರಲು ಒಂದು ಅಸ್ತ್ರ ಬೇಕಿತ್ತು. ಅದಕ್ಕಾಗಿ ಪ್ರೀತಿ ಹೆಸರಿನಲ್ಲಿ ನನ್ನನ್ನು ಬಳಸಿಕೊಂಡ ಎಂದು ರಾಖಿ ಸಾವಂತ್‌ ಪತಿಯನ್ನು ಆರೋಪಿಸಿದ್ದಾರೆ.