ಕನ್ನಡ ಸುದ್ದಿ  /  ಮನರಂಜನೆ  /  ಜಹೀರ್‌ ಇಕ್ಬಾಲ್‌ ಜತೆ ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರ ಆಗ್ತಾರಾ ಸೋನಾಕ್ಷಿ ಸಿನ್ಹಾ? ನಟನ ತಂದೆಯಿಂದ ಸಿಕ್ತು ಸ್ಪಷ್ಟನೆ

ಜಹೀರ್‌ ಇಕ್ಬಾಲ್‌ ಜತೆ ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರ ಆಗ್ತಾರಾ ಸೋನಾಕ್ಷಿ ಸಿನ್ಹಾ? ನಟನ ತಂದೆಯಿಂದ ಸಿಕ್ತು ಸ್ಪಷ್ಟನೆ

ಸೋನಾಕ್ಷಿ ಸಿನ್ಹಾ ಜೊತೆಗಿನ ಮಗನ ಮದುವೆಯ ಬಗ್ಗೆ ಜಹೀರ್ ಇಕ್ಬಾಲ್ ಅವರ ತಂದೆ ಮಾತನಾಡಿದ್ದಾರೆ. ಮತಾಂತರದ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದಾರೆ. 'ಇದರಲ್ಲಿ ಹಿಂದೂ ಅಥವಾ ಮುಸ್ಲಿಂ ಸಂಪ್ರದಾಯಗಳು ಇರುವುದಿಲ್ಲ" ಎಂದಿದ್ದಾರೆ.

ಜಹೀರ್‌ ಇಕ್ಬಾಲ್‌ ಜತೆ ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರ ಆಗ್ತಾರಾ ಸೋನಾಕ್ಷಿ ಸಿನ್ಹಾ? ನಟನ ತಂದೆಯಿಂದ ಸಿಕ್ತು ಸ್ಪಷ್ಟನೆ
ಜಹೀರ್‌ ಇಕ್ಬಾಲ್‌ ಜತೆ ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರ ಆಗ್ತಾರಾ ಸೋನಾಕ್ಷಿ ಸಿನ್ಹಾ? ನಟನ ತಂದೆಯಿಂದ ಸಿಕ್ತು ಸ್ಪಷ್ಟನೆ

Sonakshi sinha Zaheer Khan Marriage: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೋಡಿ ಸರಳವಾಗಿ ಇಂದು (ಜೂನ್ 23) ರಿಜಿಸ್ಟರ್ ಮದುವೆ ಆಗಲಿದೆ. ಈ ಸರಳ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದವರು ಭಾಗವಹಿಸಲಿದ್ದಾರೆ. ಈ ನಡುವೆ ಮದುವೆಯ ಬಳಿಕ ಸೋನಾಕ್ಷಿ ಸಿನ್ಹಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಸೋನಾಕ್ಷಿಯ ಭಾವಿ ಮಾವ ಅಂದರೆ ಜಹೀರ್ ಇಕ್ಬಾಲ್ ತಂದೆ ಇಕ್ಬಾಲ್ ರತನ್ಸಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಮದುವೆಯ ವಿಚಾರ ಕೆಲ ದಿನಗಳಿಂದ ಮುನ್ನೆಲೆಗೆ ಬಂದಿತ್ತು. ಆದರೆ ಕುಟುಂಬದಿಂದ ಮಾತ್ರ ಅಧಿಕೃತಗೊಂಡಿರಲಿಲ್ಲ. ಜತೆಗೆ ಈ ಮದುವೆ ವಿಚಾರದಲ್ಲಿ ಸೋನಾಕ್ಷಿ ಸಿನ್ಹಾ ಮನೆಯವರ ನಡುವೆ ಭಿನ್ನಾಭಿಪ್ರಾಯವಿದೆ ಎಂದೂ ವರದಿಯಾಗಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ, ಆರಂಭದಲ್ಲಿ ಕುಟುಂಬದಲ್ಲಿ ಒಂದಿಷ್ಟು ಟೆನ್ಷನ್ ಇತ್ತು. ಈಗ ಚೆನ್ನಾಗಿದೆ. ಎಲ್ಲರೂ ಮದುವೆಗೆ ಹಾಜರಾಗಲಿದ್ದಾರೆ ಎಂದಿದ್ದರು ಶತ್ರುಘ್ನ ಸಿನ್ಹಾ.

ಟ್ರೆಂಡಿಂಗ್​ ಸುದ್ದಿ

ಮತಾಂತರ ಆಗ್ತಾರಾ ಸೋನಾಕ್ಷಿ ಸಿನ್ಹಾ..

ಸೋನಾಕ್ಷಿ ಸಿನ್ಹಾ ಜೊತೆಗಿನ ಮಗನ ಮದುವೆಯ ಬಗ್ಗೆ ಜಹೀರ್ ಇಕ್ಬಾಲ್ ಅವರ ತಂದೆ ಮಾತನಾಡಿದ್ದಾರೆ. ಮತಾಂತರದ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದಾರೆ. 'ಇದರಲ್ಲಿ ಹಿಂದೂ ಅಥವಾ ಮುಸ್ಲಿಂ ಸಂಪ್ರದಾಯಗಳು ಇರುವುದಿಲ್ಲ. ಇದು ಒಂದು ನಾಗರಿಕ ವಿವಾಹವಾಗಲಿದೆ. ಸೋನಾಕ್ಷಿ ಇಸ್ಲಾಂಗೆ ಮತಾಂತರಗೊಳ್ಳುತ್ತಿಲ್ಲ. ಇದು ಹೃದಯಗಳ ಬಂಧ. ಇದರಲ್ಲಿ ಧರ್ಮವು ಯಾವುದೇ ಪಾತ್ರವನ್ನು ವಹಿಸುತ್ತಿಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ಹಿಂದೂಗಳು ಭಗವಂತನನ್ನು ದೇವರು ಎಂದು ಕರೆಯುತ್ತಾರೆ ಮತ್ತು ಮುಸ್ಲಿಮರು ಅಲ್ಲಾಹುನನ್ನು ದೇವರು ಎಂದು ಕರೆಯುತ್ತಾರೆ. ಆದರೆ ಅಂತಿಮವಾಗಿ, ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ" ಎಂದರು.

ಇಂದು ಸಂಜೆಯೇ ಆರತಕ್ಷತೆ

ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ಇತ್ತೀಚೆಗೆ ಹಲ್ದಿ ಮತ್ತು ಮೆಹೆಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಅದರ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇತ್ತ ಸೋನಾಕ್ಷಿ ಮನೆಗೂ ದೀಪಾಲಂಕಾರ ಮಾಡಲಾಗಿದ್ದು, ಸಂಬಂಧಿಕರು ಕೂಡ ಬರಲಾರಂಭಿಸಿದ್ದಾರೆ. ಶತ್ರುಘ್ನ ಸಿನ್ಹಾ ಅವರ ಸಹೋದರ ಕೂಡ ತಮ್ಮ ಸೋನಾಕ್ಷಿ ಮದುವೆಯಲ್ಲಿ ಪಾಲ್ಗೊಳ್ಳಲು ಅಮೆರಿಕದಿಂದ ಬರುತ್ತಿದ್ದಾರೆ. ರಾಪರ್ ಮತ್ತು ಗಾಯಕ ಯೋ ಯೋ ಹನಿ ಸಿಂಗ್ ಜತೆಗೆ ನಟಿಯರಾದ ಪೂನಂ ಧಿಲ್ಲೋನ್ ಮತ್ತು ಸಲ್ಮಾನ್ ಖಾನ್ ಕೂಡ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಿಜಿಸ್ಟರ್ ಮ್ಯಾರೇಜ್ ನಂತರ ಜೂನ್ 23 ರಂದು ಸಂಜೆ ಶಿಲ್ಪಾ ಶೆಟ್ಟಿಯ ಬಾಸ್ಟಿಯನ್ ರೆಸ್ಟೋರೆಂಟ್ ನಲ್ಲಿ ಮದುವೆಯ ಆರತಕ್ಷತೆ ನಡೆಯಲಿದೆ.