ಕನ್ನಡ ಸುದ್ದಿ  /  Entertainment  /  Bollywood Actress Sushmita Sen Spotted On Ramp For The First Time After Heart Attack

Sushmita Sen: ಹೃದಯಾಘಾತದಿಂದ ಚೇತರಿಸಿಕೊಂಡು ಫ್ಯಾಷನ್‌ ಶೋದಲ್ಲಿ ರ‍್ಯಾಂಪ್ ವಾಕ್‌ ಮಾಡಿದ ಸುಶ್ಮಿತಾ ಸೇನ್‌ VIDEO

ನಟಿ ಸುಶ್ಮಿತಾ ಸೇನ್‌ ಮುಂಬೈನಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಎಲ್ಲರ ಮುಂದೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ಹೃದಯಾಘಾತದಿಂದ ಚೇತರಿಸಿಕೊಂಡು ಫ್ಯಾಷನ್‌ ಶೋದಲ್ಲಿ ರ‍್ಯಾಂಪ್ ವಾಕ್‌ ಮಾಡಿದ ಸುಶ್ಮಿತಾ ಸೇನ್‌
ಹೃದಯಾಘಾತದಿಂದ ಚೇತರಿಸಿಕೊಂಡು ಫ್ಯಾಷನ್‌ ಶೋದಲ್ಲಿ ರ‍್ಯಾಂಪ್ ವಾಕ್‌ ಮಾಡಿದ ಸುಶ್ಮಿತಾ ಸೇನ್‌

Sushmita Sen: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಇತ್ತೀಚೆಗಷ್ಟೇ ತಮಗೆ ಹೃದಯಾಘಾತವಾದ ಬಗ್ಗೆ ಹೇಳಿಕೊಂಡು ಎಲ್ಲರಿಗೂ ಶಾಕ್‌ ನೀಡಿದ್ದರು. ಈ ಸುದ್ದಿ ತಿಳಿದ ಅವರ ಅಭಿಮಾನಿಗಳೂ ನಟಿಯ ಚೇತರಿಕೆಗೆ ಹಾರೈಸಿದ್ದರು. ಇದೀಗ ಹೃದಯಾಘಾತದಿಂದ ಚೇತರಿಸಿಕೊಂಡ ಒಂದೇ ವಾರಕ್ಕೆ ಮತ್ತೆ ಎಂದಿನಂತೆ ಕೆಲಸಕ್ಕೆ ಮರಳಿದ್ದಾರೆ. ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ರ‍್ಯಾಂಪ್ ವಾಕ್‌ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.

ನಟಿ ಸುಶ್ಮಿತಾ ಸೇನ್‌ ಮುಂಬೈನಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಎಲ್ಲರ ಮುಂದೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ವೇದಿಕೆ ಮೇಲೆ ಹೀಗೆ ಮತ್ತೆ ನಗು ನಗುತ್ತ ರ‍್ಯಾಂಪ್ ವಾಕ್‌ ಮಾಡುವ ವಿಡಿಯೋ ನೋಡಿದ ಅಭಿಮಾನಿಗಳು ನಟಿಗೆ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ ಎಂದು ಹಾರೈಸುತ್ತಿದ್ದಾರೆ. ಇಷ್ಟು ಬೇಗನೇ ನಿಮ್ಮನ್ನು ನೋಡುತ್ತೇನೆ ಎಂದುಕೊಂಡಿರಲಿಲ್ಲ ಎಂದೂ ಕೆಲವರು ಹೇಳಿದ್ದಾರೆ.

ತಮಗೆ ಹಾರ್ಟ್‌ ಅಟ್ಯಾಕ್‌ ಆಗಿತ್ತು ಎಂಬ ವಿಚಾರವನ್ನು ಸ್ವತ: ಸುಷ್ಮಿತಾ ಸೇನ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ತಂದೆ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡ ಸುಷ್ಮಿತಾ ಸೇನ್‌, ತಾವು ಅನಾರೋಗ್ಯಕ್ಕೆ ಒಳಗಾದ ಪರಿಸ್ಥಿತಿಯನ್ನು ವಿವರಿಸಿದ್ದರು. ''ನಿಮ್ಮ ಹೃದಯವನ್ನು ಯಾವಾಗಲೂ ಸಂತೋಷ ಮತ್ತು ಧೈರ್ಯದಿಂದ ಇರಿಸಿಕೊಳ್ಳಿ ಮತ್ತು ನಿಮಗೆ ಅಗತ್ಯವಿದ್ದಾಗ ಅದು ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು. ಕೆಲವು ದಿನಗಳ ಹಿಂದೆ ನನಗೆ ಹೃದಯಾಘಾತವಾಗಿತ್ತು. ಆದರೆ ಸೂಕ್ತ ಸಮಯಕ್ಕೆ ನನಗೆ ವೈದ್ಯಕೀಯ ಚಿಕಿತ್ಸೆ ದೊರೆಯಿತು.''

ಸುಶ್ಮಿತಾ ಸೇನ್‌ ಪೋಸ್ಟ್‌..

''ಆಸ್ಪತ್ರೆಯಲ್ಲಿ ನನಗೆ ಅಂಜಿಯೋಪ್ಲಾಸ್ಟಿ ಮಾಡಲಾಯ್ತು. ನಿಮ್ಮ ಹೃದಯ ಚೆನ್ನಾಗಿದೆ ಎಂದು ಕಾರ್ಡಿಯಾಲಜಿಸ್ಟ್‌ ಕನ್ಫರ್ಮ್‌ ಮಾಡಿದ್ದಾರೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ಮುಂದಿನ ಪೋಸ್ಟ್‌ನಲ್ಲಿ ಧನ್ಯವಾದ ಅರ್ಪಿಸುತ್ತೇನೆ. ನನ್ನ ಪ್ರೀತಿಪಾತ್ರರಿಗೆ ನನ್ನ ಶ್ರೇಯೋಭಿಲಾಷಿಗಳಿಗೆ ಈ ಪೋಸ್ಟ್‌ ಮೂಲಕ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಮುಂದಿನ ಜೀವನಕ್ಕೆ ನಾನು ಸಿದ್ಧಳಾಗಿದ್ದೇನೆ. ಐ ಲವ್‌ ಯೂ'' ಎಂದು ಸುಷ್ಮಿತಾ ಸೇನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ

2023ರ ಆಸ್ಕರ್‌ನ ಕುತೂಹಲಕಾರಿ ಅಂಶಗಳಿವು? ಆಸ್ಕರ್‌ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದೆಯೇ ಆರ್‌ಆರ್‌ಆರ್‌ ಜೋಡಿ?

ಅಕಾಡೆಮಿ ಪ್ರಶಸ್ತಿ ಎಂದರೆ ಕಾತರ, ಕುತೂಹಲ. ಆ ರಾತ್ರಿಯ ಪ್ರಶಸ್ತಿ ಪ್ರದಾನ ಕ್ಷಣಕ್ಕಾಗಿ ಬಹಳಷ್ಟು ಮಂದಿ ಬಹಳಷ್ಟು ದಿನಗಳಿಂದ ಕಾಯುತ್ತಿರುತ್ತಾರೆ, ಇದಕ್ಕೆ 2023ರ ಆಸ್ಕರ್‌ ಕೂಡ ಹೊರತಾಗಿಲ್ಲ. ದಾಖಲೆಗಳನ್ನು ಮುರಿಯುವ ಗೆಲುವುಗಳಿಂದ ಹಿಡಿದು ಅನಿರೀಕ್ಷಿತ ಪ್ರದರ್ಶನಗಳವರೆಗೆ 95ನೇ ಅಕಾಡೆಮಿ ಪ್ರಶಸ್ತಿ ಅವಿಸ್ಮರಣೀಯವಾಗಿ ಉಳಿಯಲಿದೆ. ಹಾಗಾದರೆ ಈ ಬಾರಿಯ ಆಸ್ಕರ್‌ ಷೋನಲ್ಲಿ ನೀವು ನೋಡಬಹುದಾದ 9 ಪ್ರಮುಖ ಅಂಶಗಳು ಇಲ್ಲಿವೆ. ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point