ಕನ್ನಡ ಸುದ್ದಿ  /  Entertainment  /  Bollywood Actress Swara Bhaskar Share Her First Night Suhaag Raat Bedroom Pics

Swara Bhaskar Bed room Pic: ಫಸ್ಟ್‌ ನೈಟ್‌ ವೇಳೆ ಮಲಗುವ ಕೋಣೆಯ ಅಲಂಕಾರದ ಫೋಟೋ ಶೇರ್‌ ಮಾಡಿದ ನಟಿ ಸ್ವರಾ ಭಾಸ್ಕರ್!

ಮದುವೆ ಮೂಲಕ ಸದ್ದು ಮಾಡಿದ್ದ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಇದೀಗ ಫಸ್ಟ್‌ ನೈಟ್‌ ದಿನದ ಕೋಣೆಯ ಫೋಟೋ ಹಂಚಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ.

ಫಸ್ಟ್‌ ನೈಟ್‌ ವೇಳೆ ಮಲಗುವ ಕೋಣೆಯ ಅಲಂಕಾರದ ಫೋಟೋ ಶೇರ್‌ ಮಾಡಿದ ನಟಿ ಸ್ವರಾ ಭಾಸ್ಕರ್!
ಫಸ್ಟ್‌ ನೈಟ್‌ ವೇಳೆ ಮಲಗುವ ಕೋಣೆಯ ಅಲಂಕಾರದ ಫೋಟೋ ಶೇರ್‌ ಮಾಡಿದ ನಟಿ ಸ್ವರಾ ಭಾಸ್ಕರ್!

Swara Bhaskar Bed room Photo: ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ಖ್ಯಾತ ನಟಿ ಸ್ವರಾ ಭಾಸ್ಕರ್ ಸಿಂಗಲ್‌ನಿಂದ ಡಬಲ್ ಆಗಿದ್ದಾರೆ. ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಯುವ ಮುಖಂಡ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಈಗ ಸ್ವರಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಫಸ್ಟ್‌ ನೈಟ್‌ ಮತ್ತು ಹನಿಮೂನ್‌ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಹನಿಮೂನ್‌ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವೈಯಕ್ತಿಕ ಮತ್ತು ವೃತ್ತಿಪರ ವಿಚಾರಕ್ಕೆ ಸಂಬಂಧಿಸಿದಂತೆ ಸದಾ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ವಿವಾದಾತ್ಮಕ ಟ್ವೀಟ್‌ಗಳಿಂದಲೂ ಸ್ವರಾ ಸದ್ದು ಮಾಡುತ್ತಿರುತ್ತಾರೆ. ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ವಿವಾಹದಿಂದ ಇಡೀ ಬಾಲಿವುಡ್‌ ಸದ್ದು ಮಾಡುತ್ತಿದ್ದಾಗ, ಇತ್ತ ಸ್ವರಾ ಭಾಸ್ಕರ್ ಫೆಬ್ರವರಿಯಲ್ಲಿ ಸಾಮಾಜಿಕ ಕಾರ್ಯಕರ್ತ ಫಹಾದ್ ಅಹ್ಮದ್ ಖಾನ್ ಅವರನ್ನು ಗಪ್‌ಚುಪ್‌ ವಿವಾಹವಾಗಿ ಮತ್ತೆ ಸುದ್ದಿಯಾದರು. ಈಗ ಫಸ್ಟ್‌ ನೈಟ್‌ ವಿಚಾರವಾಗಿಯೂ ಮುನ್ನೆಲೆಗೆ ಬಂದಿದ್ದಾರೆ.

ಫಸ್ಟ್‌ನೈಟ್‌ ಕೋಣೆ ಫೋಟೋ ವೈರಲ್‌

ಸ್ವರಾ ಭಾಸ್ಕರ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವೊಂದಿಷ್ಟು ಫೋಟೋ ಹಂಚಿಕೊಂಡಿದ್ದರು. ಆ ಪೈಕಿ ಹನಿಮೂನ್‌ ವೇಳೆಯ ಹೂವಿನಿಂದ ಅಲಂಕೃತಗೊಂಡ ಹಾಸಿಗೆಯ ಫೋಟೋವನ್ನು ಶೇರ್‌ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಹಾಸಿಗೆಯನ್ನು ಸ್ವರಾ ಅವರ ತಾಯಿ ಇರಾ ಭಾಸ್ಕರ್‌ ಅಲಂಕಾರ ಮಾಡಿದ್ದರು ಎಂಬುದನ್ನೂ ಹೇಳಿಕೊಂಡಿದ್ದಾರೆ. ಹೀಗೆ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ, ಕೆಲವು ಟೀಕೆಗಳೂ ಈ ನಟಿಯೆಡೆಗೆ ಬಂದಿವೆ. ಹಾಗಾಗಿ ಕೂಡಲೇ ಫೋಟೋ ಡಿಲಿಟ್‌ ಮಾಡಿದ್ದಾರೆ.

ಹೋಮ್ ಡೆಕೋರ್ ಸ್ಟೈಲಿಸ್ಟ್ ಪ್ರಿಯಾಂಕಾ ಯಾದವ್ ಅವರಿಗೆ ಸ್ವರಾ ಅವರ ಮಲಗುವ ಕೋಣೆಯನ್ನು ಅಲಂಕರಿಸುವ ಕೆಲಸವನ್ನು ವಹಿಸಲಾಗಿತ್ತು. ಈ ವೇಳೆ ಇರಾ ಭಾಸ್ಕರ್‌ ಸಹ ಇವರಿಗೆ ಸಾಥ್‌ ನೀಡಿದ್ದಾರೆ. ಈ ಫೋಟೋವನ್ನು ಪ್ರಿಯಾಂಕಾ ಯಾದವ್ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ವರಾ ಅವರ ತಾಯಿ ಇರಾ ಭಾಸ್ಕರ್‌ಗೆ ಈ ಅಲಂಕಾರದ ಕ್ರೆಡಿಟ್‌ ನೀಡಿದ್ದಾರೆ. ಈ ಫೋಟೋಕ್ಕೆ "ಹಹಹಾ ಐ ಲವ್ ಇಟ್!!" ಎಂದು ಸ್ವರಾ ಶೇರ್‌ ಮಾಡಿದ್ದಾರೆ.

ಫೆ. 16ರಂದು ಫಹಾದ್‌ ಜತೆ ವಿವಾಹ

ಫಹಾದ್ ಅಹ್ಮದ್ ಬರೇಲಿಯ ಬಹೇದಿ ಪಟ್ಟಣದ ನಿವಾಸಿ. ಸದ್ಯ ಸಮಾಜವಾದಿ ಯುವಜನ ಸಭಾದ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾಗಿದ್ದಾರೆ. ಫಹಾದ್‌ 1992ರಲ್ಲಿ ಜನಿಸಿದರೆ, ಸ್ವರಾ 1988ರಲ್ಲಿ ದೆಹಲಿಯಲ್ಲಿ ಹುಟ್ಟಿದ್ದಾರೆ. ತನಗಿಂತ 4 ವರ್ಷ ಕಿರಿಯನನ್ನು ಸ್ವರಾ ಮದುವೆಯಾಗಿದ್ದಾರೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಫಹಾದ್‌, ಹಲವು ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸ್ವರಾ ಮತ್ತು ಫಹಾದ್‌ ಇಬ್ಬರ ಮುಖಾಮುಖಿಯಾಗಿದ್ದು 2019ರಲ್ಲಿನ ಪ್ರತಿಭಟನೆಯೊಂದರಲ್ಲಿ. ಅದಾದ ಬಳಿಕ ಇಬ್ಬರ ಸ್ನೇಹ ಮುಂದುವರಿದಿತ್ತು. ಹೀಗಿರುವಾಗಲೇ ಫಹಾದ್ ತನ್ನ ಸಹೋದರಿಯ ಮದುವೆಗೆ ಸ್ವರಾ ಅವರನ್ನು ಆಹ್ವಾನಿಸಿದ್ದರು. ಆದರೆ ಶೂಟಿಂಗ್‌ನಲ್ಲಿ ನಿರತರಾಗಿದ್ದರಿಂದ ಸ್ವರಾ ಈ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. "ನಿಮ್ಮ ಮದುವೆಗೆ ಖಂಡಿತವಾಗಿ ಬರುತ್ತೇನೆ" ಎಂದು ಫಹಾದ್‌ಗೆ ಭರವಸೆ ನೀಡಿದ್ದರು.

IPL_Entry_Point