Salman Khan Movies: ಒಟಿಟಿಯಲ್ಲಿ ನೋಡಬಹುದಾದ ಸಲ್ಮಾನ್ ಖಾನ್ ನಟನೆಯ 10 ಸೂಪರ್‌ಹಿಟ್ ಸಿನಿಮಾಗಳು; ಸಿಕಂದರ್‌ಗೆ ಮುನ್ನ ನೋಡಿಬಿಡಿ
Salman Khan Movies on OTT: ಸಿಕಂದರ್ ಸಿನಿಮಾಕ್ಕೆ ಸಲ್ಮಾನ್ ಖಾನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರಬಹುದು. ಈ ಸಿನಿಮಾ ಆಗಮಿಸುವ ಮುನ್ನ ಸಲ್ಮಾನ್ ಖಾನ್ ನಟಿಸಿದ ಇತರೆ ಸಿನಿಮಾಗಳನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ಒಟಿಟಿಯಲ್ಲಿ ನೋಡಬಹುದಾದ ಸಲ್ಮಾನ್ ಖಾನ್ ಟಾಪ್ 10 ಸಿನಿಮಾಗಳ ವಿವರ ಇಲ್ಲಿದೆ.

Salman Khan Movies on OTT: ಸಿಕಂದರ್ ಸಿನಿಮಾಕ್ಕೆ ಸಲ್ಮಾನ್ ಖಾನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರಬಹುದು. ಈ ಸಿನಿಮಾ ಆಗಮಿಸುವ ಮುನ್ನ ಸಲ್ಮಾನ್ ಖಾನ್ ನಟಿಸಿದ ಇತರೆ ಸಿನಿಮಾಗಳನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ಒಟಿಟಿಯಲ್ಲಿ ನೋಡಬಹುದಾದ ಸಲ್ಮಾನ್ ಖಾನ್ ಟಾಪ್ 10 ಸಿನಿಮಾಗಳ ವಿವರ ಇಲ್ಲಿದೆ.
ಸಲ್ಮಾನ್ ಖಾನ್ ಸೂಪರ್‌ಹಿಟ್ ಸಿನಿಮಾಗಳು
ವಾಂಟೆಡ್: ವಾಂಟೆಡ್ 2009ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಸಿನಿಮಾ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾಕ್ಕೆ ಪ್ರಭುದೇವ ಆಕ್ಷನ್ ಕಟ್ ಹೇಳಿದ್ದರು. ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ. ಇದು ತೆಲುಗಿನ ಪೋಕಿರಿ ಸಿನಿಮಾದ ಹಿಂದಿ ರಿಮೇಕ್. ಪ್ರಕಾಶ ರಾಜ್,ಆಯೇಶ ಟಾಕಿಯಾ, ವಿನೋದ್ ಖನ್ನಾ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ನೋಡಬಹುದು.
ದಬಾಂಗ್ (ಅಮೆಜಾನ್ ಪ್ರೈಮ್ ವಿಡಿಯೋ)
ಸಲ್ಮಾನ್ ಖಾನ್ ನಟಿಸಿದ ಈ ಸೂಪರ್‌ಹಿಟ್ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯದಲ್ಲಿ ನೋಡಬಹುದು. ಲವ್ವರ್‌ಬಾಯ್ ಆಗಿದ್ದ ಸಲ್ಮಾನ್ ಖಾನ್‌ರನ್ನು ಪೊಲೀಸ್ ಅಧಿಕಾರಿಯಾಗಿ ಚಿತ್ರಿಸಿದ ಸಿನಿಮಾ ಇದಾಗಿದೆ.
ಏಕ್ ತಾ ಟೈಗರ್ (ಅಮೆಜಾನ್ ಪ್ರೈಮ್ ವಿಡಿಯೋ)
ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಸಲ್ಮಾನ್ ಖಾನ್ ನಟಿಸಿರುವ ಈ ಚಿತ್ರವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪತ್ತೆದಾರಿಯಾಗಿ ನಟಿಸಿದ್ದರು.
ಟೈಗರ್ 3 (ಅಮೆಜಾನ್ ಪ್ರೈಮ್ ವಿಡಿಯೋ)
ಇದು ಕೂಡ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇಲ್ಲೂ ರಾ ಏಜೆಂಟ್ ಆಗಿ ನಟಿಸಿದ್ದಾರೆ. ಯಶ್ ರಾಜ್ ಬ್ಯಾನರ್‌ನಡಿ ಆದಿತ್ಯಾ ಚೋಪ್ರಾ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಹಿರೋಯಿನ್ ಆಗಿ ನಟಿಸಿದ್ದಾರೆ.
ಬಾಡಿಗಾರ್ಡ್ (ಆಪಲ್ ಟಿವಿ)
ಈ ಸಿನಿಮಾವನ್ನು ಆಪಲ್ ಟಿವಿಯಲ್ಲಿ ರೆಂಟ್ ನೀಡಿ ನೋಡಬಹುದು. 2011ರಲ್ಲಿ ಬಿಡುಗಡೆಯಾದ ಈ ರೋಮ್ಯಾಂಟಿಕ್ ಆಕ್ಷನ್ ಸಿನಿಮಾವನ್ನು ಸಿದ್ಧಿಕ್ ನಿರ್ದೇಶನ ಮಾಡಿದ್ದಾರೆ. ಇದು ಮಲಯಾಳಂನ ಬಾಡಿಗಾರ್ಡ್ ಸಿನಿಮಾದ ರಿಮೇಕ್. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜತೆಗೆ ಕರೀನಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.
ಜುಡ್ವಾ (ಪ್ರೈಮ್, ಜಿಯೋಹಾಟ್‌ಸ್ಟಾರ್)
ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಬಹುದು. ಜುಡ್ವಾ ಚಿತ್ರವು ತಪ್ಪು ತಿಳುವಳಿಕೆಗಳಿಂದ ಛಿದ್ರಗೊಂಡ ಕುಟುಂಬ ಮತ್ತು ಅವಳಿ ಸಹೋದರಿಯರ ಕಥೆಯಾಗಿದೆ. ಐನಾ ಆಸಿಫ್ ಈ ಸಿನಿಮಾದಲ್ಲಿ ಸಾರಾ ಮತ್ತು ಜಾರಾ ಎರಡೂ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಿಕ್ (ನೆಟ್‌ಫ್ಲಿಕ್ಸ್)
ಸಲ್ಮಾನ್ ಖಾನ್ ನಟನೆಯ ಈ ಸೂಪರ್‌ಹಿಟ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ. 2014ರ ಈ ಸಿನಿಮಾವನ್ನು ಸಜ್‌ಜಿದ್ ನಾಡಿಯಾವಾಲಾ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ಜತೆಗೆ ಜಾಕ್ವಲಿನ್ ಫೆರ್ನಾಡಿಸ್, ರಣದೀಪ್ ಹೂಡ, ನವಾಝುದ್ದೀನ್ ಸಿದ್ದಿಕ್ಕಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವು ತೆಲುಗು ಸಿನಿಮಾದ ರಿಮೇಕ್.
ಜೈ ಹೋ (ನೆಟ್‌ಫ್ಲಿಕ್ಸ್)
ಜೈ ಹೋ: ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ವೀಕ್ಷಿಸಬಹುದು. ಮಾಜಿ ಯೋಧನಾಗಿ ಈ ಚಿತ್ರದಲ್ಲಿ ಸಲ್ಮಾನ್‌ಖಾನ್ ನಟಿಸಿದ್ದಾರೆ.
ವೀರ್ (ಅಮೆಜಾನ್ ಪ್ರೈಮ್ ವಿಡಿಯೋ)
ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್ ಒಟಿಟಿಗಳಲ್ಲಿ ವೀಕ್ಷಿಸಬಹುದು.
ಕರಣ್ ಅರ್ಜುನ್ (ಜೀ 5)
ಈ ಸಿನಿಮಾವನ್ನು ಜೀ 5 ಒಟಿಟಿಯಲ್ಲಿ ವೀಕ್ಷಿಸಬಹುದು. ಈ ಹಳೆ ಸಿನಿಮಾವನ್ನು (1995) ರಾಕೇಶ್ ರೋಷನ್ ನಿರ್ದೇಶಿಸಿದ್ದಾರೆ. ಸಲ್ಮಾನ್‌ಖಾನ್, ಶಾರೂಖ್‌ಖಾನ್, ರಾಕೀ ಗುಲಜರ್, ಕಾಜೋಲ್ ಮುಂತಾದವರು ನಟಿಸಿದ್ದಾರೆ.
