Bhool Bhulaiyaa 3: ಭರ್ಜರಿ ಕಲೆಕ್ಷನ್‌ ಮಾಡಿದ ಭುಲ್ ಭುಲಯ್ಯ 3; ಗಲ್ಲಾಪೆಟ್ಟಿಯಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ
ಕನ್ನಡ ಸುದ್ದಿ  /  ಮನರಂಜನೆ  /  Bhool Bhulaiyaa 3: ಭರ್ಜರಿ ಕಲೆಕ್ಷನ್‌ ಮಾಡಿದ ಭುಲ್ ಭುಲಯ್ಯ 3; ಗಲ್ಲಾಪೆಟ್ಟಿಯಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ

Bhool Bhulaiyaa 3: ಭರ್ಜರಿ ಕಲೆಕ್ಷನ್‌ ಮಾಡಿದ ಭುಲ್ ಭುಲಯ್ಯ 3; ಗಲ್ಲಾಪೆಟ್ಟಿಯಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ

ಭುಲ್ ಭುಲೈಯಾ 3 ಬಾಕ್ಸ್ ಆಫೀಸ್ ಕಲೆಕ್ಷನ್ ಭರ್ಜರಿಯಾಗಿದೆ. ಎರಡೇ ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಭರ್ಜರಿ ಕಲೆಕ್ಷನ್‌ ಮಾಡಿದ ಭುಲ್ ಭುಲಯ್ಯ 3 ಗಲ್ಲಾಪೆಟ್ಟಿಯಲ್ಲಿ 50ಕೋಟಿಗೂಹೆಚ್ಚು ಹಣ ಗಳಿಸಿದೆ.

ಭುಲ್ ಭುಲೈಯಾ 3 ಬಾಕ್ಸ್ ಆಫೀಸ್ ಕಲೆಕ್ಷನ್
ಭುಲ್ ಭುಲೈಯಾ 3 ಬಾಕ್ಸ್ ಆಫೀಸ್ ಕಲೆಕ್ಷನ್

ಭುಲ್‌ ಭುಲ್ಲಯ್ಯಾ 3 ಬಾಕ್ಸ್ ಮೊದಲ ದಿನದ ಬಾಕ್ಸ್‌ ಆಫೀಸ್ ಕಲೆಕ್ಷನ್ ದೊಡ್ಡ ಮಟ್ಟದಲ್ಲಿದೆ. ದೀಪಾವಳಿಯ ಸಂದರ್ಭದಲ್ಲಿ ಬಿಡುಗಡೆಯಾದ, ಹಾರರ್-ಕಾಮಿಡಿ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಟ್ರಿಪ್ಟಿ ಡಿಮ್ರಿ, ವಿದ್ಯಾ ಬಾಲನ್ ಮತ್ತು ಮಾಧುರಿ ದೀಕ್ಷಿತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿಕ್ ಆರ್ಯನ್ ಅವರ ಇದುವರೆಗಿನ ಅತಿದೊಡ್ಡ ಓಪನರ್ ಎಂದರೆ ಭುಲ್‌ ಭುಲ್ಲಯ್ಯಾ 2, ಇದು 2022 ರಲ್ಲಿ ಬಿಡುಗಡೆಯಾಗಿತ್ತು ಇದೀಗ 2024ರಲ್ಲಿ ಭೂಲ್ ಭುಲೈಯಾ 3 ಬಿಡುಗಡೆಯಾಗಿದೆ. ಈ ಹಿಂದೆ ಭೂಲ್ ಭುಲೈಯಾ ಬಿಡುಗಡೆಯಾದ ದಿನ 2 14.11 ಕೋಟಿ ರೂ ಸಂಗ್ರಹಿಸಿತ್ತು.

ಈಗ ಭುಲ್‌ ಭುಲ್ಲಯ್ಯಾ 3 ತನ್ನ ಆರಂಭಿಕ ದಿನದಂದು ದುಪ್ಪಟ್ಟು ಮೊತ್ತವನ್ನು ಸಂಗ್ರಹಿಸಿದೆ ಎಂದು Sacnilk.com ವರದಿ ಮಾಡಿದೆ. ಭುಲ್‌ ಭುಲ್ಲಯ್ಯಾ 3 ಶುಕ್ರವಾರ ರಾತ್ರಿ 10 ಗಂಟೆಗೆ 35.5 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ವರದಿಯಾಗಿದೆ.

ಮುಂಗಡ ಬುಕಿಂಗ್‌ ಮೊತ್ತ ಹೀಗಿತ್ತು

ಭುಲ್‌ ಭುಲ್ಲಯ್ಯಾ 3: ಟ್ರೇಡ್ ವೆಬ್‌ಸೈಟ್ ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ಸಿಂಗಂ ಮತ್ತು ಭುಲ್‌ ಭುಲ್ಲಯ್ಯಾ ಎರಡೂ ಸಿನಿಮಾಗಳು ಮುಂಗಡ ಬುಕಿಂಗ್‌ ವಿಚಾರದಲ್ಲಿಯೇ ಸದ್ದು ಮಾಡಿದ್ದವು. ಆ ಪೈಕಿ ಭುಲ್‌ ಭುಲ್ಲಯ್ಯಾ 3 ಸಿನಿಮಾ, ಭಾರತದಾದ್ಯಂತ 2.23 ಲಕ್ಷ ಮುಂಗಡ ಟಿಕೆಟ್‌ಗಳು ಮಾರಾಟ ಆಗಿದ್ದವು. ಇದರಿಂದಲೇ ಸುಮಾರು 13 ಕೋಟಿ ಬೊಕ್ಕಸಕ್ಕೆ ಇಳಿಸಿಕೊಂಡಿತ್ತು.

ಎರಡನೇ ದಿನದ ಕಲೆಕ್ಷನ್‌ 50 ಕೋಟಿ ದಾಟಿದೆ
ಗಲ್ಲಾಪೆಟ್ಟಿಗೆಯಲ್ಲಿ ಸಿಂಗಂ ಜೊತೆ ನೆಕ್‌ ಟು ನೆಕ್‌ ಫೈಟ್‌ ಕೊಡುತ್ತಿರುವ ಭುಲ್ ಭುಲಯ್ಯಾ 50 ಕೋಟಿ ದಾಟಿದೆ ಎಂದು ವರದಿಯಾಗಿದೆ. ಚಿತ್ರವು ಶುಕ್ರವಾರ, ನವೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕಾರಣ ನಂತರ ವೀಕೆಂಡ್ ಇರುವುದರಿಂದ ಭಾರಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಬಿಡುಗಡೆ ದಿನಾಂಕವೂ ಹಾಗೂ ರಜಾ ದಿನಗಳೂ ಉತ್ತಮವಾಗಿರುವುದರಿಂದ ಸಾಕಷ್ಟು ಜನ ಈ ಚಿತ್ರವನ್ನು ವೀಕ್ಷಣೆ ಮಾಡಲು ಸಾಧ್ಯವಾಗಿದೆ. ಇದು ಈ ಸಿನಿಮಾಗೆ ಒಂದು ರೀತಿ ದೀಪಾವಳಿ ಬೋನಸ್‌ ಸಿಕ್ಕಿದ ಹಾಗಿದೆ. ಇದುವರೆಗಿನ ಒಟ್ಟು ಕಲೆಕ್ಷನ್‌ಗಳು 51.01 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

Whats_app_banner