Workouts: ಆಲಿಯಾ ಭಟ್‌, ಮಲೈಕಾ, ಜಾಹ್ನವಿ, ಕತ್ರಿನಾ, ರಣವೀರ್‌, ಹೃತಿಕ್‌ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳ ವರ್ಕೌಟ್ ದಿನಚರಿ ತಿಳಿಯಿರಿ
ಕನ್ನಡ ಸುದ್ದಿ  /  ಮನರಂಜನೆ  /  Workouts: ಆಲಿಯಾ ಭಟ್‌, ಮಲೈಕಾ, ಜಾಹ್ನವಿ, ಕತ್ರಿನಾ, ರಣವೀರ್‌, ಹೃತಿಕ್‌ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳ ವರ್ಕೌಟ್ ದಿನಚರಿ ತಿಳಿಯಿರಿ

Workouts: ಆಲಿಯಾ ಭಟ್‌, ಮಲೈಕಾ, ಜಾಹ್ನವಿ, ಕತ್ರಿನಾ, ರಣವೀರ್‌, ಹೃತಿಕ್‌ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳ ವರ್ಕೌಟ್ ದಿನಚರಿ ತಿಳಿಯಿರಿ

Bollywood Celebrities workout routine: ಆಲಿಯಾ ಭಟ್ ಮತ್ತು ಹೃತಿಕ್ ರೋಷನ್ ಕಾರ್ಡಿಯೋ ವರ್ಕೌಟ್‌ ಮಾಡುತ್ತಾರೆ. ಮಲೈಕಾ ಅರೋರಾ ಯೋಗ ಮಾಡಲು ಆದ್ಯತೆ ನೀಡುತ್ತಾರೆ. ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳ ಫಿಟ್ನೆಸ್ ದಿನಚರಿಗಳನ್ನು ನೋಡೋಣ.

ಬಾಲಿವುಡ್‌ ಸೆಲೆಬ್ರಿಟಿಗಳ ವರ್ಕೌಟ್ ದಿನಚರಿ
ಬಾಲಿವುಡ್‌ ಸೆಲೆಬ್ರಿಟಿಗಳ ವರ್ಕೌಟ್ ದಿನಚರಿ

ಬೆಂಗಳೂರು: ಸೆಲೆಬ್ರಿಟಿಗಳ ಮೇಲೆ ಸದಾ ಮಾಧ್ಯಮ, ಪಾಪರಾಜಿಗಳ ಕ್ಯಾಮೆರಾ ಕಣ್ಣು ಫೋಕಸ್‌ ಆಗಿರುತ್ತದೆ. ಸೆಲೆಬ್ರಿಟಿಗಳ ದೇಹದಲ್ಲಿ ಏನೇ ಬದಲಾವಣೆ ಕಂಡರೂ ದೊಡ್ಡ ಸುದ್ದಿಯಾಗಿ ಬಿಡುತ್ತದೆ. ಬಾಲಿವುಡ್‌ ಸೆಲೆಬ್ರಿಟಿಗಳು ಸದಾ ಚೆನ್ನಾಗಿ ಕಾಣಿಸುವ ಉದ್ದೇಶದಿಂದ ನಿಯಮಿತ ವ್ಯಾಯಾಮದ ದಿನಚರಿ ಹೊಂದಿರುತ್ತಾರೆ. ಆಲಿಯಾ ಭಟ್‌, ಮಲೈಕಾ, ಜಾಹ್ನವಿ, ಕತ್ರಿನಾ, ರಣವೀರ್‌, ಟೈಗರ್‌ ಶ್ರಾಫ್‌ ಸೇರಿದಂತೆ ವಿವಿಧ ಸೆಲೆಬ್ರಿಟಿಗಳ ವರ್ಕೌಟ್‌ ವಿವರ (Bollywood Celebrities workout routine) ಇಲ್ಲಿ ನೀಡಲಾಗಿದೆ.

ಮಲೈಕಾ ಅರೋರಾ: ಯೋಗ

ಮಲೈಕಾ ಅರೋರಾ ಅಲಿಯಾಸ್ ಮಲ್ಲಾಗೆ ಯೋಗ ಅಂದ್ರೆ ಇಷ್ಟ. ತಮ್ಮ ಫಿಟ್ನೆಸ್‌ ರಹಸ್ಯ ಯೋಗ ಎನ್ನಲು ಇವರು ಹಿಂಜರಿಯವುದಿಲ್ಲ. ಆಗಾಗ ಯೋಗದ ಪ್ರಯೋಜನಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತ ಇರುತ್ತಾರೆ. ಯೋಗವು ಜೀವನದ ಎಲ್ಲಾ ಸವಾಲಿನ ಹಂತಗಳಲ್ಲಿ ಮತ್ತು ಒತ್ತಡವನ್ನು ನಿಭಾಯಿಸುವ ಸಾಧನವಾಗಿ ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ. ಸ್ವತಃ ಯೋಗವನ್ನು ಅನುಸರಿಸುವುದರ ಜೊತೆಗೆ ಅವರು ಮುಂಬೈನ ದಿವಾ ಯೋಗ ಸ್ಟುಡಿಯೋದಲ್ಲಿ ಯೋಗ ತರಗತಿಗಳನ್ನು ಆಯೋಜಿಸುತ್ತಾರೆ.

ಆಲಿಯಾ ಭಟ್: ಕಾರ್ಡಿಯೋ

ಬಾಲಿವುಡ್‌ನ ಜನಪ್ರಿಯ ನಟಿ ಆಲಿಯಾ ಭಟ್‌ನ ಫಿಟ್ನೆಸ್‌ ಗುಟ್ಟು ಕಾರ್ಡಿಯೋ. ತನ್ನ ಚೊಚ್ಚಲ ಚಿತ್ರ ಧರ್ಮ ಪ್ರೊಡಕ್ಷನ್ಸ್ನ ಸ್ಟೂಡೆಂಟ್ ಆಫ್ ದಿ ಇಯರ್‌ನಲ್ಲಿ ನಟಿಸುವ ಮೊದಲು 20 ಕೆಜಿ ತೂಕವನ್ನು ಕಳೆದುಕೊಳ್ಳಲು ಆರು ತಿಂಗಳ ಕಾಲ ಕಠಿಣ ಕಾರ್ಡಿಯೋ ವರ್ಕೌಟ್‌ ಮಾಡಿದ್ದರು. ಕಾರ್ಡಿಯೋ ಮೂಲಕ ತೂಕ ಇಳಿಕೆ ಮಾಡಿಕೊಂಡೆ ಎಂದು ಅವರು ಹೇಳಿದ್ದರು. ಆರೋಗ್ಯಕರ ಆಹಾರ ಮತ್ತು ಇತರ ರೀತಿಯ ವ್ಯಾಯಾಮಗಳ ಜತೆಗೆ ಕಾರ್ಡಿಯೋ ಇವರ ಪ್ರಮುಖ ವರ್ಕೌಟ್‌ ರೂಟಿನ್‌ ಆಗಿದೆ.

ಜಾಹ್ನವಿ ಕಪೂರ್: ಪಿಲೇಟ್ಸ್

ಜಾನ್ವಿ ಕಪೂರ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ತನ್ನ ವ್ಯಾಯಾಮಗಳ ಬಗ್ಗೆ ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ. ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ನಮ್ರತಾ ಪುರೋಹಿತ್ ಅವರೊಂದಿಗೆ ಹೆಚ್ಚಾಗಿ ಇವರು ಪಿಲೇಟ್ಸ್ ವರ್ಕೌಟ್‌ ಮಾಡುತ್ತ ಇರುತ್ತಾರೆ.ದೇಹವನ್ನು ಟೋನ್ ಮಾಡಲು ಮತ್ತು ಸುಧಾರಿಸಲು ಪಿಲೇಟ್ಸ್ ಅತ್ಯಂತ ಪರಿಣಾಮಕಾರಿ ವ್ಯಾಯಾಮಗಳಲ್ಲಿ ಒಂದಾಗಿದೆ ಎಂದು ಜಾಹ್ನವಿ ಕಪೂರ್‌ ಹೇಳಿದ್ದಾರೆ.

ತಾಪ್ಸಿ ಪನ್ನು: ಸ್ಟ್ರೆಂತ್‌ ಟ್ರೇನಿಂಗ್‌/ ವೇಟ್‌ ಟ್ರೇನಿಂಗ್‌

ಮನಸ್ಸು ಮತ್ತು ಸ್ನಾಯುಗಳು ಸಕ್ರಿಯವಾಗಿರಲು ತೂಕಕ್ಕೆ ಸಂಬಂಧಪಟ್ಟ ವ್ಯಾಯಾಮಗಳು (Strength training/weight training) ಬಹಳ ಮುಖ್ಯ ಎನ್ನುವುದು ತಾಪ್ಸಿ ಪನ್ನು ನಂಬಿಕೆ. ವೇಟ್‌ ಟ್ರೇನಿಂಗ್‌ ಜತೆಗೆ ತಮ್ಮ ದಿನಚರಿಯಲ್ಲಿ ಕಾರ್ಡಿಯೋ ಮತ್ತು ಫಂಕ್ಷನಲ್‌ ವ್ಯಾಯಾಮಗಳನ್ನು ಅಳವಡಿಸಿಕೊಂಡಿದ್ದಾರೆ.

ಕತ್ರಿನಾ ಕೈಫ್: ಕ್ರಿಯಾತ್ಮಕ ತರಬೇತಿ (Functional training)

ಪರದೆ ಮೇಲೆ ಕತ್ರಿನಾ ಕೈಫ್‌ ಅಂದವಾಗಿ ಕಾಣಿಸಲು ಅವರ ಫಂಕ್ಷನಲ್‌ ಟ್ರೇನಿಂಗ್‌ ನೆರವಾಗಿದೆ. ಇವರ ದಿನಚರಿಯ ವರ್ಕೌಟ್‌ನಲ್ಲಿ Functional trainingಗೆ ಪ್ರಮುಖ ಆದ್ಯತೆ ನೀಡುತ್ತಾರೆ. ಇದೇ ರೀತಿ ಇವರು ಆರೋಗ್ಯಸ್ನೇಹಿ ಆಹಾರಕ್ರಮ ಅಥವಾ ಪಥ್ಯಕ್ರಮ ಹೊಂದಿದ್ದಾರೆ. ತರಕಾರಿ ಜ್ಯೋಸ್‌, ಆರೋಗ್ಯಕರ ಏಷ್ಯಾನ್‌ ಸಲಾಡ್‌, ಸೂಪ್‌ಗಳು ಇವರ ಡಯೆಟ್‌ ಫುಡ್‌ ಮೆನುವಿನಲ್ಲಿ ಸದಾ ಇರುತ್ತದೆ.

ಹೃತಿಕ್ ರೋಷನ್: ವೇಟ್‌ ಟ್ರೇನಿಂಗ್‌ + ಕಾರ್ಡಿಯೋ

ಹೃತಿಕ್‌ ರೋಷನ್‌ ಜಿಮ್‌ ಪ್ರೀತಿ ಎಲ್ಲರಿಗೂ ಗೊತ್ತು. ತಮ್ಮ ಆಕರ್ಷಕ ಮೈಕಟ್ಟಿಗಾಗಿ ಸದಾ ತಾಲೀಮು ಮಾಡುತ್ತಾರೆ. ಇದಕ್ಕಾಗಿ ಇವರು ವೇಟ್‌ (ತೂಕ) ಟ್ರೇನಿಂಗ್‌ ವರ್ಕೌಟ್‌ಗೆ ಆದ್ಯತೆ ನೀಡುತ್ತಾರೆ. ವಾರದಲ್ಲಿ ಐದು ದಿನಗಳ ಮಸಲ್‌ಗೆ ವರ್ಕೌಟ್‌ ಮಾಡುತ್ತಾರೆ. ಉತ್ತಮ ನಿದ್ರೆ ಮತ್ತು ಆರೋಗ್ಯಕರ ಆಹಾರದ ಮೂಲಕ ದೇಹವನ್ನು ಸುಂದರವಾಗಿ ಇಟ್ಟುಕೊಂಡಿದ್ದಾರೆ. ದೇಹದ ಸ್ನಾಯುಗಳ ಬೆಳವಣಿಗೆಯ ಜತೆಗೆ ಕಾರ್ಡಿಯೋ ವ್ಯಾಯಾಮಗಳನ್ನೂ ಮಾಡುತ್ತಾರೆ. ಇದರೊಂದಿಗೆ ಕೆಲವೊಂದು ಕ್ರೀಡೆಗಳ ಮೂಲಕವೂ ಫಿಟ್ನೆಸ್‌ ಹೆಚ್ಚಿಸಿಕೊಳ್ಳುತ್ತಾರೆ.

ಟೈಗರ್ ಶ್ರಾಫ್: ಮಾರ್ಷಲ್ ಆರ್ಟ್ಸ್

ಬಾಲಿವುಡ್ ನ ಯುವ ಆಕ್ಷನ್ ಹೀರೋ ಟೈಗರ್ ಶ್ರಾಫ್ ಟೇಕ್ವಾಂಡೋದಲ್ಲಿ ಐದು ಡಿಗ್ರಿ ಬ್ಲ್ಯಾಕ್ ಬೆಲ್ಟ್ ಹೊಂದಿರುವ ವೃತ್ತಿಪರ ಮಾರ್ಷಲ್ ಆರ್ಟ್ಸ್ ಫೈಟರ್ ಆಗಿದ್ದಾರೆ. ನಿಯಮಿತ ವೇಟ್‌ ಟ್ರೇನಿಂಗ್‌ ಜತೆಗೆ ಟೈಗರ್ ತನ್ನನ್ನು ಫಿಟ್ನೆಸ್ ಮಟ್ಟವನ್ನು ಕಾಪಾಡಿಕೊಳ್ಳಲು ಮಾರ್ಷಲ್‌ ಆರ್ಟ್ಸ್‌ ಅನ್ನು ತನ್ನ ದಿನಚರಿಯ ಭಾಗವಾಗಿಸಿದ್ದಾರೆ.

ರಣವೀರ್ ಸಿಂಗ್: ಮಿಕ್ಸಡ್‌ ವೇಟ್‌ ಟ್ರೇನಿಂಗ್‌

ಬಾಲಿವುಡ್ ನ ಅತ್ಯಂತ ಪ್ರೀತಿಯ ಹೀರೋ ರಣವೀರ್ ಸಿಂಗ್ ಅವರು ವೈವಿಧ್ಯಮಯ Mixed weight training ಮೂಲಕ ತಮ್ಮ ದೇಹದ ಆರೋಗ್ಯ, ಸೌಂದರ್ಯ ಕಾಪಾಡಿಕೊಳ್ಳುತ್ತಾರೆ. ಸದೃಢ ಮೈಕಟ್ಟು, ಮೊಣಚಾದ ಸ್ನಾಯುಗಳ ಮೂಲಕ ದೇಹದ ಅಂದ ಹೆಚ್ಚಿಸಿಕೊಳ್ಳಲು ವೇಟ್‌ ಟ್ರೇನಿಂಗ್‌ಗೆ ಆದ್ಯತೆ ನೀಡುತ್ತಾರೆ. ಇದರೊಂದಿಗೆ ವಿವಿಧ ಬಗೆಯ ವ್ಯಾಯಾಮಗಳ ದಿನಚರಿಯನ್ನೂ ಹೊಂದಿದ್ದಾರೆ. ದೇಹವನ್ನು ತೆಳ್ಳಗೆ ಇರಿಸಲು ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ ನೀಡುತ್ತಾರೆ.

Whats_app_banner