ಈ ಕಾರಣಕ್ಕೆ ಕಾಂಡೋಮ್ ಜಾಹೀರಾತಿಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಹೇಳಿ ಮಾಡಿಸಿದ ಆಯ್ಕೆ; ಉದ್ಯಮಿ ರಾಜೀವ್ ಜುನೇಜಾ ಹೇಳಿಕೆ ವೈರಲ್
ಬಾಲಿವುಡ್ ನಟಿ ಜಾನ್ವಿ ಕಪೂರ್ ಮತ್ತು ರಣಬೀರ್ ಕಪೂರ್, ಕಾಂಡೋಮ್ ಜಾಹೀರಾತಿಗೆ ಸೂಕ್ತ ಕಲಾವಿದರು ಎಂದು ಉದ್ಯಮಿ ರಾಜೀವ್ ಜುನೇಜಾ ಸಂದರ್ಶನದಲ್ಲಿ ಹೇಳಿದ್ದಾರೆ.

Janhvi Kapoor: ಬಾಲಿವುಡ್ ಸೆಲೆಬ್ರಿಟಿಗಳು ಸಿನಿಮಾಗಳ ಮೂಲಕ ತಮ್ಮ ವೃತ್ತಿಜೀವನವನ್ನು ಬೆಳಗಿಸಿದರೆ, ಕೆಲವು ಕಂಪನಿಗಳು ಅವರ ಮೂಲಕ ತಮ್ಮ ಬ್ರ್ಯಾಂಡ್‌ಗಳನ್ನು ಜನರೆಡೆಗೆ ಕೊಂಡೊಯ್ಯುತ್ತವೆ. ಈಗಾಗಲೇ ಅನೇಕ ಸಿನಿಮಾ ತಾರೆಯರು ಸಾಕಷ್ಟು ಬ್ರಾಂಡ್‌ಗಳ ರಾಯಭಾರಿಗಳಾಗಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್‌ನಿಂದ ಕರೀನಾ ಕಪೂರ್, ಮಲೈಕಾ ಅರೋರಾ, ಕತ್ರಿನಾ ಕೈಫ್‌ನಿಂದ ಕಾರ್ತಿಕ್ ಆರ್ಯನ್ ವರೆಗೆ ಸಾಲು ಸಾಲು ಹೆಸರುಗಳಿವೆ.
ಹೀಗಿರುವಾಗಲೇ ಮ್ಯಾನ್‌ಫೋರ್ಸ್‌ನ ಕಾಂಡೋಮ್ ಕಂಪನಿ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜುನೇಜಾ ಇತ್ತೀಚೆಗೆ ತಮ್ಮ ಕಂಪನಿಯ ಬ್ರಾಂಡ್ ರಾಯಭಾರಿಗಳ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ, ಅವರು ತಮ್ಮ ಬ್ರಾಂಡ್‌ನ ರಾಯಭಾರಿಯಾಗಲು ಬಯಸಿದ ಕೆಲವು ತಾರೆಯರ ಹೆಸರುಗಳನ್ನು ಸಂದರ್ಶನದ ಮುಂದಿಟ್ಟರು. ಈ ಜಾಹೀರಾತು ಪ್ರಸ್ತಾಪವನ್ನು ಸ್ವೀಕರಿಸಲು ನಿರಾಕರಿಸಿದ ಸೆಲೆಬ್ರಿಟಿಗಳ ಬಗ್ಗೆಯೂ ಹೇಳಿದರು. ಆ ಪೈಕಿ ಜಾನ್ವಿ ಕಪೂರ್ ಅವರನ್ನೂ ಸಂಪರ್ಕಿಸಿದ್ದರ ಬಗ್ಗೆ ರಾಜೀವ್ ಹೇಳಿಕೊಂಡರು.
'ಜಾನ್ವಿ ಕಪೂರ್ ಅತ್ಯುತ್ತಮ ಆಯ್ಕೆ'
ರಾಜೀವ್ ಜುನೇಜಾ ಅವರ ಪ್ರಕಾರ ಕಾಂಡೋಮ್ ಜಾಹೀರಾತಿಗೆ ಯಾರು ಅತ್ಯುತ್ತಮ ಆಯ್ಕೆ ಎಂಬ ಪ್ರಶ್ನೆಗೆ, 'ಕಾಂಡೋಮ್ ಜಾಹೀರಾತಿಗಾಗಿ ಜಾನ್ವಿ ಕಪೂರ್ ಅವರೇ ಅತ್ಯುತ್ತಮ ಆಯ್ಕೆ. ಇದಾದ ನಂತರ, ರಣಬೀರ್ ಕಪೂರ್ ಮತ್ತು ಲಕ್ಷ್ಯ ಲಾಲ್ವಾನಿ ಅವರ ಹೆಸರುಗಳನ್ನು ಸೇರಿಸಿದರು ರಾಜೀವ್. ಜಾನ್ವಿ ಮತ್ತು ರಣಬೀರ್ ಕಾಂಡೋಮ್ ಕಂಪನಿಯ ಬ್ರಾಂಡ್ ರಾಯಭಾರಿಯಾಗಲು ನಿರಾಕರಿಸಿದ್ದಾರೆ ಎಂದೂ ರಾಜೀವ್ ಬಹಿರಂಗಪಡಿಸಿದರು.
ಸನ್ನಿ ಲಿಯೋನ್ ಬದಲಿಗೆ ಕಾರ್ತಿಕ್ ಆರ್ಯನ್
2023 ರಲ್ಲಿ ರಾಜೀವ್ ಜುನೇಜ, ನಟ ಕಾರ್ತಿಕ್ ಆರ್ಯನ್ ಅವರನ್ನು ತಮ್ಮ ಕಂಪನಿಯ ಕಾಂಡೋಮ್ ಬ್ರಾಂಡ್ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡರು. ಆಗ ಸನ್ನಿ ಲಿಯೋನ್ ಬದಲಿಗೆ ಕಾರ್ತಿಕ್ ಬಂದಿದ್ದರು. ಇದರ ಹಿಂದಿನ ಕಾರಣದ ಬಗ್ಗೆ ರಾಜೀವ್ ಮುಕ್ತವಾಗಿ ಮಾತನಾಡಿದರು. ಬರೀ ಮಹಿಳೆಯರನ್ನಷ್ಟೇ ಅಲ್ಲದೆ, ಪುರುಷ ಗ್ರಾಹಕರನ್ನೂ ನಾವು ಸೆಳೆಯಬೇಕು. ಆ ಕಾರಣಕ್ಕೆ ಕಾರ್ತಿಕ್ ಆರ್ಯನ್ ಅವರನ್ನು ಕರೆತರಲಾಯ್ತು ಎಂದರು.
ಪ್ರೆಗಾ ನ್ಯೂಸ್‌ಗೆ ದೀಪಿಕಾ ಉತ್ತಮ ಆಯ್ಕೆ
ಪ್ರೆಗಾ ನ್ಯೂಸ್ ಗರ್ಭಧಾರಣೆಯ ಪರೀಕ್ಷಾ ಕಿಟ್ ಬಗ್ಗೆಯೂ ಮಾತನಾಡಿದ ರಾಜೀವ್ ಜುನೇಜಾ, ಪ್ರಸ್ತುತ ಅದರ ಬ್ರಾಂಡ್ ರಾಯಭಾರಿ ಅನುಷ್ಕಾ ಶರ್ಮಾ. ಅವರು ಸರಿಯಾದ ಆಯ್ಕೆ. ಒಂದು ವೇಳೆ ಅವರನ್ನು ದಾಟಿ, ಮುಂದೆ ಇನ್ನೋರ್ವ ನಟಿಯನ್ನು ಆಯ್ಕೆ ಮಾಡಲೇಬೇಕು ಎಂದಾದರೆ, ದೀಪಿಕಾ ಪಡುಕೋಣೆ ಒಳ್ಳೆಯ ಆಯ್ಕೆ ಎಂದು ರಾಜೀವ್ ಹೇಳಿದ್ದಾರೆ.
ಬ್ರಾಂಡ್‌ಗಳಿಂದಲೇ ಕೋಟಿ ಕೋಟಿ..
ಬಾಲಿವುಡ್ ಸೆಲೆಬ್ರಿಟಿಗಳು ಸಿನಿಮಾ ಮಾತ್ರವಲ್ಲದೆ, ಹತ್ತಾರು ಬ್ರಾಂಡ್‌ಗಳ ಜತೆಗೂ ಕೈ ಜೋಡಿಸಿದ್ದಾರೆ. ಆ ಬ್ರಾಂಡ್‌ಗಳಿಂದಲೂ ಕೋಟಿ ಕೋಟಿ ಸಂಭಾವನೆ ಅವರ ಕೈ ಸೇರುತ್ತೆ. ಈಗಾಗಲೇ ಜಾನ್ವಿ ಕಪೂರ್ ಸಹ ಸಾಕಷ್ಟು ಬ್ರಾಂಡ್‌ಗಳ ರಾಯಭಾರಿಯಾಗಿದ್ದಾರೆ. ಸಿನಿಮಾಗಳಿಗಿಂತ ಬ್ರಾಂಡ್‌ಗಳ ಸಂಭಾವನೆಯೇ ಅಧಿಕ.
