Chhaava on OTT: ಒಟಿಟಿಯಲ್ಲಿ ಛಾವಾ ಬಿಡುಗಡಯಾಯ್ತು, ಅಭಿಮಾನಿಗಳಿಗೆ ಭಾರೀ ನಿರಾಶೆ; ಸಿನಿಮಾ ತಯಾರಕರು ಈ ತಪ್ಪು ಮಾಡಬಾರದಿತ್ತು!
Chhaava on OTT: ಛಾವಾ ಸಿನಿಮಾವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವಾಗ ಯಾವ ತಂತ್ರ ಅನುಸರಿಸಲಾಗಿದೆಯೋ ಅದೇ ತಂತ್ರವನ್ನು ಒಟಿಟಿಯಲ್ಲಿಯೂ ಮುಂದುವರೆಸಲಾಗಿದೆ. ಇದು ಛಾವಾ ಸಿನಿಮಾ ಅಭಿಮಾನಿಗಳ ನಿರಾಶೆಗೆ ಕಾರಣವಾಗಿದೆ.

Chhaava on OTT: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ಮುಗಿಸಿರುವ ಛಾವಾ ಸಿನಿಮಾವು ನಿನ್ನೆ ಮಧ್ಯರಾತ್ರಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹೌದು, ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 11ರಂದು ಬಿಡುಗಡೆಯಾಗಿದೆ. ಆದರೆ, ಈ ಸಿನಿಮಾ ಭಾರತದ ಒಂದಿಷ್ಟು ಜನರಿಗೆ ನಿರಾಶೆ ತಂದಿದೆ. ಚಿತ್ರ ತಯಾರಕರು ಈ ರೀತಿ ಮಾಡಬಾರದಿತ್ತು ಎಂದು ಸಾಕಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಭರ್ಜರಿ ಗಳಿಕೆ ಮಾಡಿರುವ ಈ ಚಿತ್ರ ಹೆಚ್ಚು ಜನರಿಗೆ ತಲುಪುವ ಅವಕಾಶ ಈ ಮೂಲಕ ಮಿಸ್ ಆಗಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಹಾಗಾದರೆ, ಚಿತ್ರತಂಡ ಮಾಡಿರುವ ತಪ್ಪೇನು? ಬನ್ನಿ ತಿಳಿಯೋಣ.
ಬಹುಭಾಷೆಗಳಲ್ಲಿ ಬಿಡುಗಡೆಯಾಗದ ಛಾವಾ
ಹೌದು, ಛಾವಾ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿಲ್ಲ. ವಿಕ್ಕಿ ಕೌಶಲ್- ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಒಟಿಟಿಯಲ್ಲಿ ಹಿಂದಿ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಚಿತ್ರತಂಡವು ಥಿಯೇಟರ್‌ಗಳಲ್ಲಿ ಯಾವ ಭಾಷೆಯಲ್ಲಿ ಬಿಡುಗಡೆ ಮಾಡಿತ್ತೋ ಅದೇ ಭಾಷೆಯಲ್ಲಿ ಒಟಿಟಿಯಲ್ಲಿ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾವೊಂದನ್ನು ರಿಲೀಸ್ ಮಾಡುವಾಗ ಹಲವು ಭಾಷೆಗಳಲ್ಲಿ ರಿಲೀಸ್ ಮಾಡಿ ರೀಚ್ ಹೆಚ್ಚಿಸುವುದು ವಾಡಿಕೆ. ಆದರೆ, ಚಿತ್ರತಂಡ ಈ ಪ್ರಯತ್ನ ಮಾಡಿಲ್ಲ. ಇದು ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಯಲ್ಲಿ ಸಿನಿಮಾ ನೋಡಲು ಬಯಸಿದ್ದ ಪ್ರೇಕ್ಷಕರಿಗೆ ನಿರಾಶೆ ತಂದಿದೆ.
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಛಾವಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಈ ಸಿನಿಮಾದಲ್ಲಿ ಚತ್ರಪತಿ ಸಾಂಬಾಜಿ ಮಹಾರಾಜ್‌ನ ಕಥೆಯಿದೆ. ಬಾಕ್ಸ್ ಆಫೀಸ್‌ನಲ್ಲಿ 804 ಕೋಟಿ ರೂಪಾಯಿ ಬಾಚಿಕೊಂಡ ಈ ಸಿನಿಮಾ ಇದೀಗ ಒಟಿಟಿಯತ್ತ ಮುಖ ಮಾಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 11ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಸಿನಿಮಾಕ್ಕೆ ಲಕ್ಷ್ಮನ್ ಉಟೇಕರ್ ನಿರ್ದೇಶನವಿದೆ. ದಿನೇಶ್ ವಿಜಾನ್ ನಿರ್ಮಾಣ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಛಾವಾ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗಿತ್ತು.
ಒಟಿಟಿಯಲ್ಲಿ ಛಾವಾ ಸಿನಿಮಾ ಬಿಡುಗಡೆ
ವಿಕ್ಕಿ ಕೌಶಲ್ ಜತೆಗೆ ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ, ವಿನೀತ್ ಕುಮಾರ್ ಸಿಂಗ್ ಮತ್ತು ಅಶುತೋಷ್ ರಾಣಾ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಕ್ಕಿ ಕೌಶಲ್ ನಟಿಸಿರುವ ಛಾವಾ ಸಿನಿಮಾವು ಐತಿಹಾಸಿಕ ಕಥೆಯನ್ನು ಹೊಂದಿದೆ. ಇದು ಛತ್ರಪತಿ ಶಿವಾಜಿ ಮಹಾರಾಜ್ ಅವರ ಮಗ ಸಂಭಾಜಿ ಮಹಾರಾಜನ ದಿಟ್ಟತನದ, ಸಾಹಸದ ಕಥೆಯನ್ನು ಹೊಂದಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಸಿನಿಮಾದಲ್ಲಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಯೇಸುಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್ ಖನ್ನಾ, ದಿವ್ಯಾ ದತ್ತ, ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮರಾಠಿ ಲೇಖಕ ಶಿವಾಜಿ ಸಾವಂತ್ ಬರೆದ ಛಾವಾ (ಸಿಂಹದ ಮರಿ) ಹೆಸರಿನ ಕೃತಿಯನ್ನು ಆಧರಿಸಿ ಈ ಸಿನಿಮಾ ತಯಾರಿಸಲಾಗಿದೆ.
ಬಾಕ್ಸ್ ಆಫೀಸ್‌ನಲ್ಲಿ ಛಾವಾ ಭರ್ಜರಿ ಗಳಿಕೆ ಮಾಡಿದೆ. ಶಾರುಖ್ ಖಾನ್ ಅವರ ಜವಾನ್ ಚಿತ್ರವನ್ನು ಹಿಂದಿಕ್ಕಿದ 'ಛಾವಾ' ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಹಿಂದಿ ಚಿತ್ರವೆಂಬ ಖ್ಯಾತಿಗೆ ಪಾತ್ರವಾಗಿದೆ. ನಿರ್ದಿಷ್ಟವಾಗಿ ಕ್ಲೈಮ್ಯಾಕ್ಸ್ ದೃಶ್ಯವು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ. ಮರಾಠಾ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಸಿನಿಮಾ ನೆರವಾಗುತ್ತದೆ. ವಿಶೇಷವಾಗಿ ಛತ್ರಪತಿ ಶಿವಾಜಿ ಮತ್ತು ಸಂಭಾಜಿಯ ಕಥೆಯ ಮೂಲಕ ಮರಾಠರ ಇತಿಹಾಸ ತಿಳಿದುಕೊಳ್ಳಬಹುದು.
