ಮಗು ಜನಿಸುವ ಮುನ್ನ ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮನೆಗೆ ಬಂತು 1.12 ಕೋಟಿಯ ದುಬಾರಿ ವಸ್ತು
ಕನ್ನಡ ಸುದ್ದಿ  /  ಮನರಂಜನೆ  /  ಮಗು ಜನಿಸುವ ಮುನ್ನ ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮನೆಗೆ ಬಂತು 1.12 ಕೋಟಿಯ ದುಬಾರಿ ವಸ್ತು

ಮಗು ಜನಿಸುವ ಮುನ್ನ ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮನೆಗೆ ಬಂತು 1.12 ಕೋಟಿಯ ದುಬಾರಿ ವಸ್ತು

ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಕಿಯಾರ ಅಡ್ವಾಣಿ ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರು ತಮ್ಮ ರೈಡಿಂಗ್‌ ಅಪ್‌ಗ್ರೇಡ್‌ ಮಾಡಿದ್ದಷ್ಟೇ ಅಲ್ಲ, ಕಳೆದ ತಿಂಗಳು ಮುಂಬೈನಲ್ಲಿ ಮನೆ ಹುಡುಕಾಟದ ಸಂದರ್ಭದಲ್ಲಿಯೂ ಸುದ್ದಿಯಾಗಿದ್ದರು.

ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಕಿಯಾರ ಅಡ್ವಾಣಿ ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರು ತಮ್ಮ ರೈಡಿಂಗ್‌ ಅಪ್‌ಗ್ರೇಡ್‌ ಮಾಡಿದ್ದಷ್ಟೇ ಅಲ್ಲ, ಕಳೆದ ತಿಂಗಳು ಮುಂಬೈನಲ್ಲಿ ಮನೆ ಹುಡುಕಾಟದ ಸಂದರ್ಭದಲ್ಲಿಯೂ ಸುದ್ದಿಯಾಗಿದ್ದರು. ಮನೆಗೆ ಹೊಸ ಅತಿಥಿ ಆಗಮಿಸುವ ನಿರೀಕ್ಷೆಯಲ್ಲಿರುವ ಇವರು ಸಂಭ್ರಮದಲ್ಲಿದ್ದಾರೆ. ಇದೇ ಸಮಯದಲ್ಲಿ ಇವರು 1.12 ಕೋಟಿ ರೂಪಾಯಿ ಬೆಲೆಬಾಳುವ ವಸ್ತು ಖರೀದಿಸಿದ್ದಾರೆ. ನಿಮಗೀಗ ಅರ್ಥವಾಗಿರಬಹುದು, ಅದು ಕಾರು ಎಂದು. ಹೌದು, ಅವರ ಮನೆಗೆ ದುಬಾರಿ ವಿಲಾಸಿ ಕಾರಿನ ಆಗಮನವಾಗಿದೆ.

ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ 1.12 ಕೋಟಿ ರೂಪಾಯಿ ದರದ ಟೊಯೊಟಾ ಕಾರು ಖರೀದಿಸಿದ್ದಾರೆ. ಮುಂಬೈ ಮೂಲದ ಫೋಟೋಗ್ರಾಫರ್‌ವೊಬ್ಬರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಕಾರು ಖರೀದಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಕಿಯಾರಗೆ ಪ್ರೀತಿಯಿಂದ ಸಿದ್ಧಾರ್ಥ್ ಮಲ್ಹೋತ್ರಾ ಈ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಇದು ಉಡುಗೊರೆಯೋ ಅಥವಾ ಇವರಿಬ್ಬರು ಜತೆಯಾಗಿ ಖರೀದಿಸಿದ್ದೋ ಖಚಿತವಿಲ್ಲ.

ಟೊಯೊಟಾ ಕಂಪನಿಯ ಪ್ರೀಮಿಯಂ ರೇಂಜ್‌ನ ಕಾರುಗಳಲ್ಲ ಟೊಯೊಟಾ ವೆಲ್‌ಫೈರ್‌ ಕೂಡ ಒಂದಾಗಿದೆ. ಈ ಕಾರನ್ನು ಇತ್ತೀಚೆಗೆ ರಿಷಬ್‌ ಶೆಟ್ಟಿ ಕೂಡ ಖರೀದಿಸಿದ್ದರು. ಟೊಯೊಟಾ ಕಂಪನಿಯಲ್ಲಿ ಕ್ಯಾಮ್ರಿ, ಲ್ಯಾಂಡ್‌ ಕ್ರೂಷರ್‌, ಪ್ರಡೋ ಮುಂತಾದ ದುಬಾರಿ ಕಾರುಗಳಿವೆ. ಟೊಯೊಟಾ ವೆಲ್‌ಫೈರ್‌ ಎನ್ನುವುದು ಮಲ್ಟಿ ಪರ್ಪೋಸ್‌ ವೆಹಿಕಲ್‌. ಅಜಯ್‌ ದೇವಗನ್‌, ಅನಿಲ್‌ ಕಪೂರ್‌, ಐಶ್ವರ್ಯಾ ರೈ, ಕೃತಿ ಸನನ್‌, ಅಕ್ಷಯ್‌ ಕುಮಾರ್‌ ಮತ್ತು ಅಮೀರ್‌ ಖಾನ್‌ ಬಳಿಯೂ ಟೊಯೊಟಾ ವೆಲ್‌ ಫೈರ್‌ ಕಾರಿದೆ.

ಕಳೆದ ತಿಂಗಳು ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಮುಂಬೈನಲ್ಲಿ ಹೊಸ ಮನೆ ಹುಡುಕಾಟ ನಡೆಸುತ್ತಿರುವುದು ಸುದ್ದಿಯಾಗಿತ್ತು. ಮಗು ಆಗಮಿಸುವ ಸಮಯದಲ್ಲಿ ಹೊಸ ಮನೆ, ಹೊಸ ಕಾರಿನ ಮೂಲಕ ಸಂಭ್ರಮ ಹೆಚ್ಚಿಸಿಕೊಳ್ಳಲು ದಂಪತಿ ನಿರ್ಧರಿಸಿರಬಹುದು.

ಫೆಬ್ರವರಿ ತಿಂಗಳಿನಲ್ಲಿ ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು. ಮಗುವಿನ ಶೂ ಹಿಡಿದುಕೊಂಡ ಫೋಟೋ ಹಂಚಿಕೊಂಡಿದ್ದರು. "ನಮ್ಮ ಬದುಕಿನ ಅದ್ಭುತ ಉಡುಗೊರೆ ಶೀಘ್ರದಲ್ಲಿ ಆಗಮಿಸಲಿದೆ" ಎಂದು ಅವರು ಬರೆದಿದ್ದರು. ಇವರಿಬ್ಬರು 2023ರಲ್ಲಿ ರಾಜಸ್ಥಾನದಲ್ಲಿ ವಿವಾಹವಾಗಿದ್ದರು. ಇವರಿಬ್ಬರು 2020ರಿಂದ ಡೇಟಿಂಗ್‌ ಮಾಡುತ್ತಿದ್ದರು. ಇವರಿಬ್ಬರು ಶೇರ್‌ಶಾ ಎಂಬ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು.

ಟೊಯೊಟಾ ಕಂಪನಿಯ ವೆಲ್‌ಫೈರ್‌ ಕಾರಿನ ಇತ್ತೀಚಿನ ಆವೃತ್ತಿಗೆ ನ್ಯೂ ವೆಲ್‌ಫೈರ್‌ ಎನ್ನುತ್ತಾರೆ. ಇದರ ಟಾಪ್‌ ಎಂಡ್‌ ಆವೃತ್ತಿಯ ಎಕ್ಸ್‌ ಶೋರೂಂ ದರ ಕರ್ನಾಟಕದಲ್ಲಿ 1.32 ಕೋಟಿ ರೂಪಾಯಿ ಇದೆ. ಆನ್‌ರೋಡ್‌ ದರ 1.50 ಕೋಟಿ ರೂಪಾಯಿ ದಾಟಬಹುದು. ಮುಂಬೈನಲ್ಲಿ ಈ ಕಾರಿನ ದರದಲ್ಲಿ ಬದಲಾವಣೆ ಇರಬಹುದು. ಕಿಯಾರ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ ಯಾವ ಆವೃತ್ತಿ ಖರೀದಿಸಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in