Highest Paid Villan: ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ 5 ಮಂದಿ ವಿಲನ್‌ಗಳು
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಐವರು ಖಳನಾಯಕರ ಪೈಕಿ ಇಬ್ಬರು ದಕ್ಷಿಣ ಭಾರತದವರೇ ಅಗ್ರ ಸ್ಥಾನದಲ್ಲಿದ್ದಾರೆ.
ಬೆಂಗಳೂರು: ಭಾರತೀಯ ಸಿನಿಮಾ ರಂಗದಲ್ಲಿ (Indian Cinema) ಅಷ್ಟೇ ಅಲ್ಲದೇ ಹಾಲಿವುಡ್ (Hollywood) ಮಟ್ಟದಲ್ಲಿ ನಾಯಕರ (Hero) ಲೆವೆಲ್‌ಗೆ ಖಳನಾಯಕರನ್ನೂ (Villan) ತೋರಿಸಲಾಗುತ್ತಿದೆ.
ಸಿನಿಮಾದಲ್ಲಿ ವಿಲನ್ ಪಾತ್ರ ಎಷ್ಟು ಪವರ್‌ಫುಲ್ ಆಗಿದ್ದರೆ ನಾಯಕನ ಪಾತ್ರವೂ ಅಷ್ಟು ಚೆನ್ನಾಗಿ ಮೂಡಿಬರುತ್ತದೆ. ಹೀರೋಯಿಸಂ ಅವಕಾಶಗಳು ಕಡಿಮೆ ಇರುವ ಕೆಲವೇ ಕೆಲವು ನಾಯಕರು ಇತ್ತೀಚೆಗೆ ಖಳನಾಯಕರ ಪಾತ್ರಗಳಲ್ಲಿ ಯಶಸ್ಸು ಕಾಣುತ್ತಿದ್ದಾರೆ.
ಕಮರ್ಷಿಯಲ್ ಡೈರೆಕ್ಟರ್‌ಗಳು ಅಂತೂ ಹೆಚ್ಚಾಗಿ ಇಂತಹ ಜನಪ್ರಿಯ ನಟರನ್ನು ವಿಲನ್‌ಗಳ ಪಾತ್ರಗಳಲ್ಲಿ ತೋರಿಸುವ ಟ್ರೆಂಡ್ ಜೋರಾಗಿಯೇ ನಡೆಯುತ್ತಿದ್ದು, ಈ ಸಿನಿಮಾಗಳಲ್ಲಿ ಸಕ್ಸಸ್ ಆಗುತ್ತಿದ್ದಾರೆ.
ತಮ್ಮ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಿಗೆ ನಾಯಕನಷ್ಟೇ ಇಮೇಜ್ ಇರುವ ನಟರನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡು ಬ್ಲಾಕ್ ಬಸ್ಟರ್ ಹಿಟ್ ಪಡೆಯುತ್ತಿದ್ದಾರೆ. ವಿಲನ್ ಪಾತ್ರಗಳಿಗೆ ಬೇಡಿಕೆ ಹೆಚ್ಚಾದಂತೆ ಈ ಹೀರೋಗಳು ಈ ಪಾತ್ರಗಳಿಗೆ ಕೇರಾಫ್ ಅಡ್ರೆಸ್ ಆಗಿದ್ದಾರೆ.
ಭಾರತೀಯ ಚಿತ್ರ ರಂಗದ ಜನಪ್ರಿಯ ಹಾಗೂ ಬಹುಭಾಷಾ ನಟ, ಉಳಗನಾಯಗನ್ ಕಮಲ್ ಹಾಸನ್, ವಿಜಯ್ ಸೇತುಪತಿ, ಸೈಫ್ ಅಲಿ ಖಾನ್, ಸಂಜಯ್ ದತ್, ಪ್ರಕಾಶ್ ರಾಜ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವರು ನೆಗೆಟಿವ್ ಶೇಡ್‌ನಲ್ಲೇ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ವಿಲನ್ ಪಾತ್ರಗಳಿಗೆ ನಾಯಕರಿಗೆ ಸರಿಸಮಾನವಾಗಿ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ.
ಬಹುಭಾಷಾ ನಟ ಕಮಲ್ ಹಾಸನ್ ನಂಬರ್ 1
ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಡಾರ್ಲಿಂಗ್ ಪ್ರಭಾಸ್ ಅವರ ಮುಂದಿನಿ ವೈಜ್ಞಾನಿಕ ಸಿನಿಮಾ ಪ್ರಾಜೆಕ್ಟ್ ಕೆ ನಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಪ್ರಭಾಸ್‌ಗೆ ಜೋಡಿಯಾಗಿದ್ದಾರೆ.
ಹಲವು ವರದಿಗಳ ಪ್ರಕಾರ ಈ ಸಿನಿಮಾದಲ್ಲಿನ ಪಾತ್ರಕ್ಕಾಗಿ ನಟ ಪ್ರಭಾಸ್ 150 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಪ್ರಾಜೆಕ್ಟ್ ಕೆನಲ್ಲಿ ವಿಲನ್ ಪಾತ್ರಕ್ಕಾಗಿ ಕಮಲ್ ಹಾಸನ್ 25 ರಿಂದ 30 ದಿನಗಳ ಚಿತ್ರೀಕರಣಕ್ಕಾಗಿ ಬರೋಬ್ಬರಿ 40 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ ಕಮಲ್ ಹಾಸನ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ.
ವಿಜಯ್ ಸೇತುಪತಿ ನಂಬರ್ 2
ಭಾರತೀಯ ಚಿತ್ರರಂಗದಲ್ಲಿ ವಿಲನ್ ಪಾತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರ ಪೈಕಿ ವಿಜಯ್ ಸೇತುಪತಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದಕ್ಕಾಗಿ ವಿಜಯ್ ಸೇತುಪತಿ ಸುಮಾರು 21 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ವಿಕ್ರಮ್ ಚಿತ್ರಕ್ಕೆ ವಿಜಯ್ ಸೇತುಪತಿ ಸಂಭಾವನೆ 15 ಕೋಟಿಗೂ ಹೆಚ್ಚು ಎಂದು ವರದಿಯಾಗಿದೆ.
ಟಾಪ್ 3, 4, 5 ಇವರೇ
ವಿಜಯ್ ಸೇತುಪತಿ ನಂತರದ ಸ್ಥಾನದಲ್ಲಿ ಸೈಫ್ ಅಲಿ ಖಾನ್ ಇದ್ದಾರೆ. ಆದಿಪರುಷ ಚಿತ್ರದಲ್ಲಿ ರಾವಣಾಸುರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಸುಮಾರು 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ದಕ್ಷಿಣ ಭಾರತದ ಸಿನಿಮಾಗಳ ಪೈಕಿ ದೊಡ್ಡ ಯಶಸ್ಸು ಕಂಡಿದ್ದ ಪುಷ್ಪ 2 ಚಿತ್ರಕ್ಕಾಗಿ ಫಹಾದ್ ಫಾಜಿಲ್ ಖಳನಾಯಕ ಪಾತ್ರಕ್ಕಾಗಿ 6 ರಿಂದ 7 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇಮ್ರಾನ್ ಹಶ್ಮಿ, ಸಂಜಯ್ ದತ್ ಅವರಂತಹ ಸ್ಟಾರ್‌ಗಳು ಕೂಡ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡು 4 ಕೋಟಿ ರೂಪಾಯಿಗಳ ವರಗೆ ಸಂಭಾವನೆ ಪಡೆದಿದ್ದು, ಈ ಮೊತ್ತವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.