ಮೊದಲ ಕರ್ವಾ ಚೌತ್‌ಗೆ ಕಡಿಮೆ ಮೆಹಂದಿ ಸಾಕೆಂದ ಕೃತಿ ಕರಬಂಧ; ಗೂಗ್ಲಿ ನಟಿ ಈಗ ಎಲ್ಲಿದ್ದಾರೆ?
ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ಕರ್ವಾ ಚೌತ್‌ಗೆ ಕಡಿಮೆ ಮೆಹಂದಿ ಸಾಕೆಂದ ಕೃತಿ ಕರಬಂಧ; ಗೂಗ್ಲಿ ನಟಿ ಈಗ ಎಲ್ಲಿದ್ದಾರೆ?

ಮೊದಲ ಕರ್ವಾ ಚೌತ್‌ಗೆ ಕಡಿಮೆ ಮೆಹಂದಿ ಸಾಕೆಂದ ಕೃತಿ ಕರಬಂಧ; ಗೂಗ್ಲಿ ನಟಿ ಈಗ ಎಲ್ಲಿದ್ದಾರೆ?

ಸ್ಯಾಂಡಲ್‌ವುಡ್‌ನಲ್ಲಿ ಗೂಗ್ಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಕೃತಿ ಕರಬಂಧ ಈ ವರ್ಷದ ಮಾರ್ಚ್‌15ರಂದು ಪುಲ್ಕಿತ್‌ ಸಮರ್ಥ್‌ ಜತೆ ವಿವಾಹವಾಗಿದ್ದರು. ಇದು ಇವರ ಈ ವರ್ಷದ ಮೊದಲ ಕರ್ವಾ ಚೌತ್‌. ಈ ಸಮಯದಲ್ಲಿ ಈಕೆ ಸಿಂಪಲ್‌ ಆಗಿ ಮೆಹಂದಿ ಹಚ್ಚಿಕೊಂಡಿದ್ದಾರೆ.

ಕೃತಿ ಕರಬಂಧ ಮೆಹಂದಿ
ಕೃತಿ ಕರಬಂಧ ಮೆಹಂದಿ

ಕನ್ನಡದಲ್ಲಿ ಯಶ್‌ ಜತೆ ಗೂಗ್ಲಿ, ಶಿವರಾಜ್‌ ಕುಮಾರ್‌ ಜತೆ ಬೆಳ್ಳಿ, ದಳಪತಿ ಸಿನಿಮಾದಲ್ಲಿ ಪ್ರೇಮ್‌ ಜತೆ, ತೆಲುಗಿನಲ್ಲಿ ರಾಮ್‌ ಚರಣ್‌ ತೇಜಾ ಜತೆ ಬ್ರೂಸ್ಲಿ ಸಿನಿಮಾದಲ್ಲಿ ನಟಿಸಿರುವ ಕೃತಿ ಕರಬಂಧರಿಗೆ ಈ ವರ್ಷ ವಿವಾಹವಾಗಿತ್ತು. ಪುಲ್ಕಿತ್‌ ಸಮರ್ಥ್‌ ಜತೆ ದೆಹಲಿಯಲ್ಲಿ ಮಾರ್ಚ್‌ 15, 2024ರಂದು ಸಪ್ತಪದಿ ತುಳಿದಿದ್ದರು. ಇದೀಗ ಕರ್ವಾ ಚೌತ್‌ ಹಬ್ಬದ ಸಮಯ. ಈ ಸಮಯದಲ್ಲಿ ನಟಿ ಸರಳವಾಗಿ ಮೆಹಂದಿ ಹಚ್ಚಿಕೊಂಡಿದ್ದಾರೆ.

ನಿನ್ನೆ ಅಂದ್ರೆ ಶನಿವಾರ ಕೃತಿ ಕರಬಂಧ ಅವರು ತನ್ನ ಅತ್ತೆ ಜತೆ ಕರ್ವಾ ಚೌತ್‌ ಹಬ್ಬದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಮೆಹಂದಿಯ ಝಲಕ್‌ ಪ್ರದರ್ಶಿಸಿದ್ದರು. ಕನಿಷ್ಠ ಮೆಹಂದಿ ಹಚ್ಚಿಕೊಂಡಿದ್ದರು. ಗುಲಾಬಿ ವಿನ್ಯಾಸದ ಮೆಹಂದಿ ಹಚ್ಚಿಕೊಂಡಿದ್ದರು.

2024ರ ಮಾರ್ಚ್‌ 15ರಂದು ಕೃತಿ ಕರಬಂಧ ಮತ್ತು ಪುಲ್ಕಿತ್‌ ಸಮರ್ಥ್‌ ವಿವಾಹ ಸಮಾರಂಭ ನಡೆದಿತ್ತು. ಗುರುಗ್ರಾಮದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಪುಲ್ಕಿತ್‌ ಮತ್ತು ಕೃತಿ ಅವರ ಹತ್ತಿರದ ಸಂಬಂಧಿಗಳು, ಆಪ್ತರು ಭಾಗವಹಿಸಿದ್ದರು. ಮಾರ್ಚ್‌ 16ರಂದು ಇವರು ತಮ್ಮ ವಿವಾಹದ ಕುರಿತು ಅಧಿಕೃತವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರಿಗೂ ತಿಳಿಸಿದ್ದರು.

ಕೃತಿ ಕರಬಂಧ ಹೆಸರು ಕೇಳಿದಾಗ ಇವರು ಕನ್ನಡ ನಟಿ ಎಂಬ ಫೀಲ್‌ ಎಲ್ಲರಿಗೂ ಬರುತ್ತದೆ. ಯಾಕೆಂದರೆ, ಇವರು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಮೊದಲ ಬಾರಿಗೆ ತೆಲುಗಿನ ಪ್ರಗತಿ ಸಿನಿಮಾದಲ್ಲಿ ನಟಿಸಿದ್ದರು. 2010ರಲ್ಲಿ ಚಿರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದರು. ದೆಹಲಿ ಮೂಲದ ಇವರು ಅಲ ಮೊದಲಿಂಡಿ, ಟೀನ್‌ ಮಾರ್‌, ಮಿಸ್ಟರ್‌ ನೋಕಯ್ಯ ಚಿತ್ರಗಳಲ್ಲಿ ನಟಿಸಿದ್ದರು. 2012ರಲ್ಲಿ ಪ್ರೇಮ್‌ ಅಡ್ಡಾ, ಗಲಾಟೆ ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರ.

2013ರಲ್ಲಿ ಒಂಗಲೆ ಗೀತಾ, ಓಮ್‌ 3ಡಿ ಎಂಬ ತೆಲುಗು ಚಿತ್ರಗಳಲ್ಲಿ ನಟಿಸಿದ್ದರು ಯಶ್‌ ಜತೆ ಗೂಗ್ಲಿ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ ಬಳಿಕ ಇವರ ಸಕ್ಸಸ್‌ ಇನ್ನೊಂದು ಲೆವೆಲ್‌ಗೆ ಹೋಯ್ತು. ಕೆಜಿಎಫ್‌ ನಟ ಯಶ್‌ ಜತೆಗೆ ಗೂಗ್ಲಿಯಲ್ಲಿ ಡಾಕ್ಟರ್‌ ಸ್ವಾತಿಯಾಗಿ ನಟಿಸಿದ್ದಾರೆ.. ಗೂಗ್ಲಿ ಸಕ್ಸಸ್‌ ಬಳಿಕ ತಿರುಪತಿ ಎಕ್ಸ್‌ಪ್ರೆಸ್‌, ಸೂಪರ್‌ ರಂಗ, ಬೆಳ್ಳಿ, ಮಿಂಚಾಗಿ ನೀ ಬರಲು, ಬ್ರೂಸ್‌ ಲೀ ದಿ ಫೈಟರ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಯಶಸ್ಸು ದೊರಕಿದ ಬಳಿಕ ಇವರಿಗೆ ರಾಜ್‌: ರಿಬೂಟ್‌ ಎಂಬ ಹಿಂದಿ ಸಿನಿಮಾದಲ್ಲಿ ಅವಕಾಶ ದೊರಕಿತ್ತು. ಬ್ರೂಸ್‌ಲಿ ಎಂಬ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಇದಾದ ಬಳಿಕ ಕನ್ನಡದ ಮಾಸ್ತಿ ಗುಡಿ ಸಿನಿಮಾದಲ್ಲಿ ನಟಿಸಿದ್ದರು. . ಗೆಸ್ಟ್‌ ಇನ್‌ ಲಂಡನ್‌, ಶಾದಿ ಮೇನ್‌ ಝರೂರ್‌ ಆನಾ, ಕರ್ವಾನ್‌ ಮುಂತಾದ ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ದಳಪತಿ ಎಂಬ ಕನ್ನಡ ಸಿನಿಮಾದಲ್ಲಿ 2018ರಲ್ಲಿ ಕಾಣಿಸಿಕೊಂಡರು. ಬಳಿಕ ತೈಶ್‌, ಹೌಸ್‌ಫುಲ್‌ 4 ಸೇರಿದಂತೆ ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.