OTT Movie: ಒಟಿಟಿಯಲ್ಲಿ ಬಿಡುಗಡೆಯಾಗಿದೆ ಹೊಸ ಐತಿಹಾಸಿಕ ಪ್ರಣಯ ನಾಟಕ; 80 ಕೋಟಿ ಬಜೆಟ್, ಸ್ಟಾರ್ ಕಿಡ್ಸ್‌ ಇರೋ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Ott Movie: ಒಟಿಟಿಯಲ್ಲಿ ಬಿಡುಗಡೆಯಾಗಿದೆ ಹೊಸ ಐತಿಹಾಸಿಕ ಪ್ರಣಯ ನಾಟಕ; 80 ಕೋಟಿ ಬಜೆಟ್, ಸ್ಟಾರ್ ಕಿಡ್ಸ್‌ ಇರೋ ಸಿನಿಮಾ

OTT Movie: ಒಟಿಟಿಯಲ್ಲಿ ಬಿಡುಗಡೆಯಾಗಿದೆ ಹೊಸ ಐತಿಹಾಸಿಕ ಪ್ರಣಯ ನಾಟಕ; 80 ಕೋಟಿ ಬಜೆಟ್, ಸ್ಟಾರ್ ಕಿಡ್ಸ್‌ ಇರೋ ಸಿನಿಮಾ

Azaad OTT Streaming: ಆಜಾದ್ ಎಂಬ ಸಿನಿಮಾ ಕೆಲವೇ ಗಂಟೆಗಳಲ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸ್ಟಾರ್ ನಾಯಕಿ ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಟಾರ್ ಹೀರೋ ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ಆಜಾದ್ ಚಿತ್ರದ ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದ್ದಾರೆ.

Azaad OTT Streaming: ಸ್ಟಾರ್ ನಾಯಕಿ ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ಆಜಾದ್  ಸಿನಿಮಾದಲ್ಲಿ ನಟಿಸಿದ್ದಾರೆ.
Azaad OTT Streaming: ಸ್ಟಾರ್ ನಾಯಕಿ ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ಆಜಾದ್ ಸಿನಿಮಾದಲ್ಲಿ ನಟಿಸಿದ್ದಾರೆ.

Azaad OTT Release Date: ಆಜಾದ್ ಚಿತ್ರವು ಕೆಲವೇ ಗಂಟೆಗಳಲ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ನಿಟ್ಟಿನಲ್ಲಿ ಒಟಿಟಿ ವೇದಿಕೆಯು ಇತ್ತೀಚೆಗೆ ಅಧಿಕೃತ ಹೇಳಿಕೆ ನೀಡಿದೆ. ಆಜಾದ್ ಚಿತ್ರದಲ್ಲಿ ಅಮನ್ ದೇವಗನ್ ಮತ್ತು ರಾಶಾ ಥಡಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಈ ಚಿತ್ರ ಅವರಿಬ್ಬರಿಗೂ ಮೊದಲ ಚಿತ್ರ. ಈ ಮೂಲಕ ಇವರಿಬ್ಬರು ಬಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ. ಇದು ಒಂದು ಪಿರಿಯಾಡಿಕ್ ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಜಾನರ್‌ನ ಸಿನಿಮಾವಾಗಿದೆ.

ರಾಶಾ ಥಡಾನಿ ಮತ್ತು ಅಮನ್ ದೇವಗನ್ ಆಜಾದ್ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ನೀಡಿದ್ದಾರೆ. ರಾಶಾ ಥಡಾನಿ ಅವರ ತಾಯಿ ರವೀನಾ ಟಂಡನ್ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಅಮನ್ ದೇವಗನ್ ಬಾಲಿವುಡ್ ಸ್ಟಾರ್ ಹೀರೋ ಅಜಯ್ ದೇವಗನ್ ಅವರ ಸೋದರಳಿಯ. ರಾಶಾ ಥಡಾನಿ ಮತ್ತು ಅಮನ್ ದೇವಗನ್ ಎಂಬ ಸ್ಟಾರ್‌ ಕಿಡ್ಸ್‌ ನಟಿಸಿರುವ ಕಾರಣ ಈ ಸಿನಿಮಾ ಸಾಕಷ್ಟು ಹೈಪ್‌ ಕ್ರಿಯೆಟ್‌ ಮಾಡಿತ್ತು.

ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಆಜಾದ್ ಚಿತ್ರದ ಉಯಿ ಅಮ್ಮಾ ಹಾಡಿನಲ್ಲಿ ರಾಶಾ ಥಡಾನಿ ಅವರ ನೃತ್ಯ ಸುಂದರವಾಗಿ ಮೂಡಿ ಬಂದಿದೆ. ಅಮನ್ ದೇವಗನ್ ಕೂಡ ಪರದೆಯ ಮೇಲೆ ಉತ್ತಮವಾಗಿ ಕಾಣಿಸಿದ್ದಾರೆ. ಈ ಒಂದು ಹಾಡು ಅತ್ಯುತ್ತಮವಾಗಿತ್ತು. ಆದರೆ, ಬಾಕ್ಸ್‌ ಆಫೀಸ್‌ನಲ್ಲಿ ದಯನೀಯವಾಗಿ ಸೋಲು ಅನುಭವಿಸಿತ್ತು. ಸುಮಾರು 80 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ 9 ರಿಂದ 10 ಕೋಟಿ ನಡುವೆ ಗಳಿಕೆ ಮಾಡಿತ್ತು.

ಅಜಾದ್‌ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ಅಜಾದ್‌ ಸಿನಿಮಾ ಈಗ ಒಟಿಟಿಯತ್ತ ಮುಖ ಮಾಡಿದೆ. ಈ ಸಿನಿಮಾ ಇನ್ನು ಕೆಲವೇ ಗಂಟೆಗಳಲ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಜನವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆಜಾದ್ ಈಗ ಒಟಿಟಿಗೆ ಬರುತ್ತಿದೆ. ಮಾರ್ಚ್ 14 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಂದರೆ, ಇಂದು ರಾತ್ರಿ ಹನ್ನೆರಡು ಗಂಟೆಯ ಬಳಿಕ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಪ್ರಣಯ ನಾಟಕ

ಆಜಾದ್ ಒಟಿಟಿ ಹಿಂದಿಯಲ್ಲಿ ಮಾತ್ರ ಸ್ಟ್ರೀಮಿಂಗ್ ಆಗಲಿದೆ ಎಂದು ವರದಿಯಾಗಿದೆ. ಆಜಾದ್ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ನಡೆದ ಒಂದು ಅವಧಿಯ ಪ್ರಣಯ ಆಕ್ಷನ್ ನಾಟಕವಾಗಿದೆ. ಆಜಾದ್ ಚಲನಚಿತ್ರವು ಐತಿಹಾಸಿಕ ಹಲ್ದಿಘಾಟ್ ಯುದ್ಧವನ್ನು ಆಧರಿಸಿದೆ.

ಆಜಾದ್ ಚಿತ್ರವನ್ನು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದರು. ಪ್ರಜ್ಞಾ ಯಾದವ್ ಮತ್ತು ರೋನಿ ಸ್ಕ್ರೂವಾಲಾ ನಿರ್ಮಾಪಕರು. ಅಮಿತ್ ತ್ರಿವೇದಿ ಮತ್ತು ಹಿತೇಶ್ ಸೋನಿಕ್ ಸಂಗೀತ ಸಂಯೋಜಿಸಿದ್ದಾರೆ. ರಾಶಾ ಥಡಾನಿ ಮತ್ತು ಅಮನ್ ಅವರಲ್ಲದೆ, ಅಜಯ್ ದೇವಗನ್, ಡಯಾನಾ ಪೆಂಟಿ, ಪಿಯೂಷ್ ಮಿಶ್ರಾ, ಮೋಹಿತ್ ಮಲಿಕ್ ಮತ್ತು ಅಕ್ಷಯ್ ಆನಂದ್ ಆಜಾದ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆಜಾದ್ ಚಿತ್ರದಲ್ಲಿ ರಾಶಾ ಥಡಾನಿ ಮತ್ತು ಅಮನ್ ದೇವಗನ್ ಅವರ ಅಭಿನಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಪಡೆಯಲಿಲ್ಲ.

ಆಜಾದ್ ಸಿನಿಮಾಕ್ಕೆ ಐಎಂಡಿಬಿಯಲ್ಲಿ ಎಷ್ಟು ರೇಟಿಂಗ್‌ ಇದೆ?

ಆಜಾದ್ ಚಿತ್ರವು ಐಎಂಡಿಬಿಯಲ್ಲಿ ಕೇವಲ 4.6 ರೇಟಿಂಗ್ ಅನ್ನು ಪಡೆದುಕೊಂಡಿದೆ. ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾದ ನಂತರ ಆಜಾದ್‌ಗೆ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂದು ಕಾದುನೋಡಬೇಕಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner