Deva OTT release: ಒಟಿಟಿಯತ್ತ ಮುಖ ಮಾಡಿದ ದೇವಾ; ಶಾಹಿದ್ ಕಪೂರ್, ಪೂಜಾ ಹೆಗ್ಡೆ ಸಿನಿಮಾ ನಾಳೆಯಿಂದ ಸ್ಟ್ರೀಮಿಂಗ್
Deva OTT release: ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ದೇವಾ ಸಿನಿಮಾವು ಒಟಿಟಿಯತ್ತ ಮುಖ ಮಾಡಿದೆ. ನಾಳೆ ಅಂದರೆ, ಮಾರ್ಚ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಜನವರಿ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು.

Deva OTT release: ಶಾಹಿದ್ ಕಪೂರ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ದೇವಾ ಸಿನಿಮಾವು ಒಟಿಟಿಯತ್ತ ಮುಖ ಮಾಡಿದೆ. ನಾಳೆ ಅಂದರೆ, ಮಾರ್ಚ್ 28ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಜನವರಿ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಸುಮಾರು ಒಂದು ತಿಂಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡಿದೆ. ಇದೀಗ ಈ ಆಕ್ಷನ್-ಥ್ರಿಲ್ಲರ್ ಮಾರ್ಚ್ 28ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ದೇವಾ ಸಿನಿಮಾ ಬಿಡುಗಡೆಯಾಗುವ ಕುರಿತು ನೆಟ್‌ಫ್ಲಿಕ್ಸ್ ಅಧಿಕೃತವಾಗಿ ಘೋಷಿಸಿದೆ. ಇನ್‌ಸ್ಟಾಗ್ರಾಂನಲ್ಲಿ "ಭಾಸದ್ ಮಚಾ. ಟ್ರಿಗ್ಗರ್ ಚಲಾ. ದೇವಾ ಆ ರಹಾ ಹೈ" ಎಂಬ ಕ್ಯಾಪ್ಷನ್‌ನೊಂದಿಗೆ ಈ ಕುರಿತು ಅಧಿಕೃತವಾಗಿ ನೆಟ್‌ಫ್ಲಿಕ್ಸ್ ಘೋಷಣೆ ಮಾಡಿದೆ.
ದೇವಾ ಸಿನಿಮಾದಲ್ಲಿ ಶಾಹಿದ್ ಕಪೂರ್, ಪೂಜಾ ಹೆಗ್ಡೆ, ಪವೈಲ್ ಗುಲಾಟಿ ಮತ್ತು ಕುಬ್ರಾ ಸೇಠ್ ನಟಿಸಿದ್ದಾರೆ. ಸಿದ್ಧಾರ್ಥ್ ರಾಯ್ ಕಪೂರ್ ಅವರ ರಾಯ್ ಕಪೂರ್ ಫಿಲ್ಮ್ಸ್ ನೆರವಿನೊಂದಿಗೆ ಮಲಯಾಳಂನ ಕ್ರೈಮ್ ಡ್ರಾಮಾ "ಮುಂಬೈ ಪೊಲೀಸ್"ನ ರಿಮೇಕ್ ಆಗಿದೆ. ಇದೀಗ ದೇವಾ ಸಿನಿಮಾ ಡಿಜಿಟಲ್ ಪ್ರೀಮಿಯರ್‌ಗೆ ಸಜ್ಜಾಗಿದೆ. ಈ ಮೂಲಕ ಇದು ಹೆಚ್ಚು ಜನರನ್ನು ತಲುಪುವ ನಿರೀಕ್ಷೆಯಿದೆ.
ದೇವಾ ಸಿನಿಮಾದಲ್ಲಿ ಶಾಹಿದ್ ಕಪೂರ್ ಮುಂಬೈ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಅಧಿಕಾರಿಯಾದ ಎಸಿಪಿ ದೇವ್ ಅಂಬ್ರೆ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಪೂಜಾ ಹೆಗ್ಡೆ ಅವರು ಪತ್ರಕರ್ತೆ ದಿಯಾ ಸಥಾಯೆ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸಿಪಿ ರೋಹನ್ ಡಿ'ಸಿಲ್ವಾ ಅವರ ಆಘಾತಕಾರಿ ಹತ್ಯೆಯೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ದೇವ್‌ಗೆ ಇದರ ತನಿಖೆಯ ಹೊಣೆ ದೊರಕುತ್ತದೆ.
ತನಿಖೆಯನ್ನು ಮುನ್ನಡೆಸಿದ ದೇವ್ ಕೊನೆಗೆ ಡಿಸಿಪಿ ಫರ್ಹಾನ್ ಖಾನ್ ಅವರಿಗೆ ತನಿಖೆಯ ವರದಿ ಮಾಡುತ್ತಾರೆ. ಸತ್ಯವನ್ನು ತಿಳಿಸುವ ಸಮಯದಲ್ಲಿ ಅನಿರೀಕ್ಷಿತ ಅಪಘಾತದಿಂದ ದೇವ್‌ಗೆ ಭಾಗಶಃ ನೆನಪಿನ ಶಕ್ತಿ ಕಳೆದುಹೋಗುತ್ತದೆ. ನಿಜವಾಗಿಯೂ ಏನಾಯಿತು ಎಂದು ಸತ್ಯವನ್ನು ತಿಳಿಯಲು ಪ್ರಯತ್ನಿಸಲಾಗುತ್ತದೆ. ಅನೇಕ ಫ್ಲಾಷ್‌ಬ್ಯಾಕ್‌ಗಳು ಈ ಸಂದರ್ಭದಲ್ಲಿ ಕಾಣಿಸುತ್ತವೆ.
ಈ ಸಿನಿಮಾದಲ್ಲಿ ಶಾಹಿದ್ ಮತ್ತು ಪೂಜಾ ಮಾತ್ರವಲ್ಲದೆ ಇನ್ನೂ ಪ್ರಮುಖ ನಟರು ನಟಿಸಿದ್ದಾರೆ. ಪವೈಲ್ ಗುಲಾಟಿ ಅವರು ಎಸಿಪಿ ರೋಹನ್ ಡಿ’ಸಿಲ್ವಾ ಪಾತ್ರದಲ್ಲಿ ನಟಿಸಿದ್ದಾರೆ. ಪ್ರವೇಶ್ ರಾಣಾ ಡಿಸಿಪಿ ಫರ್ಹಾನ್ ಖಾನ್ ಪಾತ್ರದಲ್ಲಿ ನಟಿಸಿದ್ದಾರೆ. ಮನೀಶ್ ವಾಧ್ವಾ, ಗಿರೀಶ್ ಕುಲಕರ್ಣಿ, ಗೌರವ್ ಮೋರೆ ಮತ್ತು ಪ್ರವೀಣ್ ಪಾಟೀಲ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
'ದೇವಾ' ಸಿನಿಮಾಕ್ಕೆ ರೋಶನ್ ಆಂಡ್ರ್ಯೂಸ್ ಆಕ್ಷನ್ ಕಟ್ ಹೇಳಿದ್ದಾರೆ. ಅಬ್ಬಾಸ್ ದಲಾಲ್, ಬಾಬಿ-ಸಂಜಯ್, ಹುಸೇನ್ ದಲಾಲ್, ಸುಮಿತ್ ಅರೋರಾ ಮತ್ತು ಅರ್ಷದ್ ಸೈಯದ್ ಚಿತ್ರಕಥೆ ಬರೆದಿದ್ದಾರೆ.

ವಿಭಾಗ