ಡಾಕ್ಟರ್ ಆಗ್ಬೇಕಿತ್ತು ಸಾಯಿ ಪಲ್ಲವಿ, ಮಾನುಷಿ ಚಿಲ್ಲರ್, ಶ್ರೀಲೀಲಾ; ವೈದ್ಯಕೀಯ ಓದಿ ಚಿತ್ರರಂಗಕ್ಕೆ ಬಂದ 10 ತಾರೆಯರು
- ಚಿತ್ರರಂಗದಲ್ಲಿ ಕಲಾವಿದರಾಗಿ ಸಾಧನೆ ಮಾಡಿರುವ ಹಲವು ನಟಿನಟರಲ್ಲಿ ಸಾಕಷ್ಟು ಮಂದಿ ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ. ಸಹಜ ಸುಂದರಿ ಸಾಯಿ ಪಲ್ಲವಿ, ಮಾನುಷಿ ಚಿಲ್ಲರ್ ಸೇರಿದಂತೆ ಹಲವು ತಾರೆಯರು ಎಂಬಿಬಿಎಸ್ ಓದಿದ್ದಾರೆ. ಈ ರೀತಿ ಡಾಕ್ಟರ್ ಆಗಬೇಕೆಂದುಕೊಂಡು, ಬಳಿಕ ಚಿತ್ರರಂಗದತ್ತ ಮುಖ ಮಾಡಿರುವ ಹತ್ತು ತಾರೆಯರ ಪರಿಚಯ ಇಲ್ಲಿದೆ.
- ಚಿತ್ರರಂಗದಲ್ಲಿ ಕಲಾವಿದರಾಗಿ ಸಾಧನೆ ಮಾಡಿರುವ ಹಲವು ನಟಿನಟರಲ್ಲಿ ಸಾಕಷ್ಟು ಮಂದಿ ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ. ಸಹಜ ಸುಂದರಿ ಸಾಯಿ ಪಲ್ಲವಿ, ಮಾನುಷಿ ಚಿಲ್ಲರ್ ಸೇರಿದಂತೆ ಹಲವು ತಾರೆಯರು ಎಂಬಿಬಿಎಸ್ ಓದಿದ್ದಾರೆ. ಈ ರೀತಿ ಡಾಕ್ಟರ್ ಆಗಬೇಕೆಂದುಕೊಂಡು, ಬಳಿಕ ಚಿತ್ರರಂಗದತ್ತ ಮುಖ ಮಾಡಿರುವ ಹತ್ತು ತಾರೆಯರ ಪರಿಚಯ ಇಲ್ಲಿದೆ.
(1 / 11)
ಸಹಜ ಸುಂದರಿ ಸಾಯಿ ಪಲ್ಲವಿ, ಮಾನುಷಿ ಚಿಲ್ಲರ್ ಸೇರಿದಂತೆ ಹಲವು ತಾರೆಯರು ಎಂಬಿಬಿಎಸ್ ಓದಿದ್ದಾರೆ. ಈ ರೀತಿ ಡಾಕ್ಟರ್ ಆಗಬೇಕೆಂದುಕೊಂಡು, ಬಳಿಕ ಚಿತ್ರರಂಗದತ್ತ ಮುಖ ಮಾಡಿರುವ ಹತ್ತು ತಾರೆಯ
(2 / 11)
ಸಾಯಿ ಪಲ್ಲವಿ ಎಂದರೆ ಇಷ್ಟಪಡದೆ ಇರುವವರು ಇರಲಿಕ್ಕಿಲ್ಲ. ಸದಾ ನಗುನಗುತ ಇರುವ ಸಹಜ ಸುಂದರಿ. ಇವರು ಎಂಬಿಬಿಎಸ್ ಓದಿದ್ದಾರೆ. ಡಾಕ್ಟರ್ ಆಗಬೇಕೆಂದುಕೊಂಡವರು ಬಳಿಕ ಚಿತ್ರರಂಗಕ್ಕೆ ಬಂದಿದ್ದಾರೆ. ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಓದಿದ್ದಾರೆ.
(3 / 11)
ನಟಿ ಆದಿತಿ ಗೋವಿತ್ರಕರ್ ಕೂಡ 1997ರಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಆಬ್‌ಬ್‌ಸ್ಟ್ರಿಕ್ಸ್ ಆಂಡ್ ಗೈನೊಕಾಲಜಿಯಲ್ಲಿ ಎಂಎಸ್ ಪದವಿಯನ್ನೂ ಪಡೆದಿದ್ದಾರೆ.
(4 / 11)
ಆಕಾಂಕ್ಷ ಸಿಂಗ್ ಕಿರುತೆರೆ ಮತ್ತು ಸಿನಿಮಾ ನಟಿ. ರನ್‌ವೇ 34, ಬದ್ರಿನಾಥ್ ಕಿ ದುಲ್‌ಹನಿಯಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಮೆಡಿಸಿನ್ ಫೀಲ್ಡ್‌ನಿಂದ ಬಂದವರು. ಅಂದರೆ, ಫಿಸಿಯೋಥೆರಪಿಸ್ಟ್ ಆಗಿದ್ದವರು, ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.
(5 / 11)
ಭರತ್ ರೆಡ್ಡಿ: ಆಂದ್ರ ಪ್ರದೇಶದ ಭರತ್ ರೆಡ್ಡಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಯೆರವನ್ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಮೆಡಿಕಲ್ ಪದವಿ ಪಡೆದಿದ್ದಾರೆ. ಕಾರ್ಡಿಯೊಲಜಿಯಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ.
(6 / 11)
ಆಶಿಶ್ ಘೋಖಲೆ; ಕುಂಕುಮ ಭಾಗ್ಯ, ತಾರಾ ಫ್ರಮ್ ಸತಾರದಂತಹ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಬ್ಬರ್ ಈಸ್ ಬ್ಯಾಕ್, ಲವ್ ಯುವರ್ ಫ್ಯಾಮಿಲಿಯಂತಹ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರು ಮೂಲತಃ ವೈದ್ಯರು. ಕೊರೊನಾ ಸಮಯದಲ್ಲಿ ಇವರು ಮತ್ತೆ ವೈದ್ಯಕೀಯ ವೃತ್ತಿಗೆ ಇಳಿದು ಜನರ ಸೇವೆ ಮಾಡಿದ್ದರು.
(7 / 11)
ಮಾನುಷಿ ಚಿಲ್ಲರ್: ಜನಪ್ರಿಯ ನಟಿ ಮಾನುಷಿ ಚಿಲ್ಲರ್ ಅವರು ಸೋನಿಪತ್‌ನಮ ಭಗಲ್ ಪೋಲ್ ಸಿಂಗ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ.
(8 / 11)
ಮಿಯಾಂಗ್ ಚಾಂಗ್ (meiyang chang) ಅವರು ಬೆಂಗಳೂರಿನ ಒಕ್ಕಲಿಗ ಸಂಘ ಡೆಂಟಲ್ ಕಾಲೇಜ್ ಆಂಡ್ ಹಾಸ್ಪಿಟಲ್‌ನಲ್ಲಿ ಬಿಡಿಎಸ್ ಪದವಿ ಪಡೆದಿದ್ದಾರೆ.
(9 / 11)
ಶ್ರೀಲೀಲಾ: ಕರ್ನಾಟಕ ಮೂಲದ ನಟಿ ಶ್ರೀಲೀಲಾ ಕೂಡ ಎಂಬಿಬಿಎಸ್ ಓದಿದ್ದಾರೆ. ಕೆಲವು ಮೂಲಗಳ ಪ್ರಕಾರ ಸದ್ಯ ಅವರು ವೈದ್ಯಕೀಯ ಶಿಕ್ಷಣವನ್ನು ತನ್ನ ನಟನೆಯ ನಡುವೆ ಮಾಡುತ್ತಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಇವರು ಜನಪ್ರಿಯ ನಟಿ. ಇತ್ತೀಚೆಗೆ ಗುಂಟೂರು ಕಾರಂನಲ್ಲಿ ಕಾಣಿಸಿಕೊಂಡಿದ್ದರು.
(10 / 11)
ಮೋಹನ್ ಆಗಸೆ, ಪಾಲಸ್ ಸೇನ್ ಸೇರಿದಂತೆ ಹಲವು ಕಲಾವಿದರು ಎಂಬಿಬಿಎಸ್ ಇತ್ಯಾದಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ನಟನೆಯ ಮೇಲಿರುವ ಅಪರಿಮಿತ ಮೋಹ ಇವರನ್ನು ಚಿತ್ರರಂಗದತ್ತ ಕರೆತಂದಿದೆ.
ಇತರ ಗ್ಯಾಲರಿಗಳು