ಸಲ್ಮಾನ್ ಖಾನ್‌ಗೂ ರೊಮೇನಿಯನ್ ಸುಂದರಿ ಯೂಲಿಯಾ ವಂಟೂರ್‌ಗೂ ಸಂಬಂಧ ಇದೆಯಂತೆ! ಯಾರಿವಳು ಸುಂದರಿ? 5 ಫ್ಯಾಕ್ಟ್‌ಗಳು
ಯೂಲಿಯಾ ವಂಟೂರ್ ರೊಮೇನಿಯನ್ ನಟಿ ಮತ್ತು ಗಾಯಕಿ. ಇಂದು ಅಂದ್ರೆ ಜುಲೈ 24 ರಂದು ತಮ್ಮ 44 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರು ನಮ್ಮ ಬಾಲಿವುಡ್‌ನ ಸಲ್ಮಾನ್ ಖಾನ್ ಅವರ ಲವರ್ ಅಂತೆ. ಹೌದ? ಯೂಲಿಯಾ ವಂಟೂರ್ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ.

ಬೆಂಗಳೂರು: ಯೂಲಿಯಾ ವಂಟೂರ್ ಇಂದು (ಜುಲೈ 24) ತನ್ನ 44 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ರೊಮೇನಿಯನ್ ರೂಪದರ್ಶಿ, ಗಾಯಕಿ ಮತ್ತು ನಟಿ ಯೂಲಿಯಾ ಅವರು ನಟ ಸಲ್ಮಾನ್ ಖಾನ್ ಅವರೊಂದಿಗಿನ ನಿಕಟ ಸ್ನೇಹದಿಂದಲೂ ಖ್ಯಾತಿ ಪಡೆದಿದ್ದಾರೆ. ಇವರಿಬ್ಬರು ತಮ್ಮ ಸ್ನೇಹದ ಬಗ್ಗೆ ಹೆಚ್ಚು ಮಾತನಾಡದಿದ್ದರೂ, ಸಲ್ಮಾನ್ ಯೂಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಇದೆ. ಇವರಿಬ್ಬರ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.
ಯೂಲಿಯಾ ವಂಟೂರ್ ಕರಿಯರ್
ಯೂಲಿಯಾ ಜುಲೈ 24, 1980 ರಂದು ರೊಮೇನಿಯಾದ ಇಯಾಸಿಯಲ್ಲಿ ಜನಿಸಿದರು. ರೊಮೇನಿಯನ್ ದೂರದರ್ಶನ ನಿರೂಪಕಿ ಮತ್ತು ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಯೂಲಿಯಾ ತನ್ನ 16ನೇ ವಯಸ್ಸಿನಲ್ಲಿ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಮಾಡೆಲಿಂಗ್ ಶಿಕ್ಷಕಿಯಾದರು. 19ನೇ ವಯಸ್ಸಿನಲ್ಲಿ ಟಿವಿಯಲ್ಲಿ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದರು. ರೂಪದರ್ಶಿ-ನಟ ಸ್ಟೀಫನ್ ಬಿಯಾಂಕಾ ಜೂನಿಯರ್ ಅವರೊಂದಿಗೆ ರೊಮೇನಿಯನ್ ಟಿವಿ ಶೋ ಡ್ಯಾನ್ಸಿಂಗ್ ವಿತ್ ದಿ ಸ್ಟಾರ್ಟ್ಸ್‌ನ ನಿರೂಪಕಿಯಾದರು. ಬುನ್ರಾಕು (2008) ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದರು.
ನನ್ನ ಸಾಧನೆಯ ಕೊಡುಗೆ ಸಲ್ಮಾನ್‌ಗೆ ಅರ್ಪಣೆ
ತನ್ನ ಯಶಸ್ಸಿನ ಕ್ರೆಡಿಟ್ ಸಲ್ಮಾನ್ ಖಾನ್ ಗೆ ಸಲ್ಲುತ್ತದೆ ಎಂದು ಯೂಲಿಯಾ ಹಿಂದೊಮ್ಮೆ ಒಪ್ಪಿಕೊಂಡಿದ್ರು. "ಒಂದು ಹಂತದಲ್ಲಿ ನಿರಾಶೆಗೊಂಡಿದ್ದೆ. ನನ್ನ ಸಾಧನೆಗಳ ಕ್ರೆಡಿಟ್ ಸಲ್ಮಾನ್‌ಗೆ ಸಿಕ್ಕಾಗ ನಿರಾಶೆಗೊಂಡಿದ್ದೆ. ನಾನು ಇಲ್ಲಿಯೇ ಉಳಿಯಲು, ಉತ್ತಮ ಕೆಲಸ ಮಾಡಲು ಬಂದಿದ್ದೇನೆ ಎಂದು ಒಪ್ಪಿಕೊಂಡಿದ್ದೇನೆ. ನಾನು ಹಿಂದಿಯಲ್ಲಿ ಹಾಡುತ್ತೇನೆ, ಭಾರತದಲ್ಲಿ ವಾಸಿಸುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ನನ್ನ ಜೀವನವು ನನ್ನನ್ನು ಇಲ್ಲಿಗೆ ಕರೆತಂದಿತ್ತು. ಇದು ಭಯಾನಕ ಅನುಭವವಾಗಿತ್ತು. ಏಕೆಂದರೆ ಮುಂದೆ ಏನಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಇಡೀ ವೃತ್ತಿಜೀವನವನ್ನು ಉತ್ತುಂಗದಲ್ಲಿದ್ದಾಗ ನಾನು ರೋಮಾನಿಯಾವನ್ನು ಬಿಟ್ಟು ಬಂದೆ. ಆದರೆ, ಇಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಅದರ ಬಗ್ಗೆ ಖುಷಿಯಿದೆ" ಎಂದು ಅವರು ಟೈಮ್ಸ್ ನೌಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.
ಸಲ್ಮಾನ್ ಖಾನ್ ಅವರೊಂದಿಗಿನ ಯೂಲಿಯಾ ವಂಟೂರ್ ಅವರ ಸಹಯೋಗ
ಸಲ್ಮಾನ್ ಅಭಿನಯದ ಆಕ್ಷನ್-ಥ್ರಿಲ್ಲರ್ ಸಿನಿಮಾ "ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್" ಚಿತ್ರದಲ್ಲಿ ಸೀತಿ ಮಾರ್ ಹಾಡಿಗೆ ಧ್ವನಿ ನೀಡಿದ್ದರು.
ಮಾರಿಯಸ್ ಮಾಗೊ ಜತೆ ಯೂಲಿಯಾ ವಂಟೂರ್ ಸಂಬಂಧ
ಈ ಹಿಂದೆ ರೊಮೇನಿಯನ್ ಗಾಯಕ, ಗೀತರಚನೆಕಾರ, ನಿರ್ಮಾಪಕ ಮಾರಿಯಸ್ ಮಾಗೊ ಅವರೊಂದಿಗೆ ಯೂಲಿಯಾ ಸಂಬಂಧದಲ್ಲಿದ್ದರು. ಮಾರಿಯಸ್ ಅವರೊಂದಿಗಿನ ಬ್ರೇಕಪ್ ನಂತರ ಇವರು ಸಲ್ಮಾನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.
ಸಲ್ಮಾನ್ ಖಾನ್ ಅವರ ಸಾಕ್ಷ್ಯಚಿತ್ರ
ಸಲ್ಮಾನ್ ಖಾನ್ ಜೀವನವನ್ನು ಆಧರಿಸಿದ ಸಾಕ್ಷ್ಯಚಿತ್ರವನ್ನು ಯೂಲಿಯಾ ಮಾಡುತ್ತಿದ್ದಾರೆ. ಬಿಯಾಂಡ್ ದಿ ಸ್ಟಾರ್ಸ್ ಎಂಬ ಕಲ್ಪನೆಯ ರೂವಾರಿ ಇದೇ ಯೂಲಿಯಾ. "ಲಾಕ್‌ಡೌನ್ ಸಮಯದಲ್ಲಿ ಜನರ ಉತ್ಸಾಹ ಹೆಚ್ಚಿಸುವಂತಹ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳುವ ಆಲೋಚನೆಯೊಂದಿಗೆ ನಾನು ಬಂದೆ. ಪ್ರಸಿದ್ಧರ ಜೀವನದ ಕಥೆಗಳನ್ನು ತೋರಿಸಲು ಬಯಸಿದೆ. ನಾನು ಸಲ್ಮಾನ್ ಖಾನ್ ಅವರನ್ನು ಆಯ್ಕೆ ಮಾಡಿದೆ. ಅವರ ಜೀವನ ಕಥೆಯು ರೋಲರ್ ಕೋಸ್ಟರ್‌ನಂತೆ ಇದೆ" ಎಂದು ಯೂಲಿಯಾ ವಂಟೂರ್ ಹೇಳಿದ್ದರು.
