ಅಮೀರ್ ಖಾನ್‌ಗೆ 59ರ ಹುಟ್ಟುಹಬ್ಬ; ಲಾಪಟಾ ಲೇಡಿಸ್‌ನಂತಹ ಕಥೆಯೊಂದಿಗೆ ವಾಪಸ್ ಬರ್ತಿನಿ ಅಂದ್ರು ಹಮ್ಮೀರ
Aamir Khan Birthday: ಬಾಲಿವುಡ್‌ನ ಜನಪ್ರಿಯ ನಟ ಅಮೀರ್ ಖಾನ್‌ಗೆ ಗುರುವಾರ ಭರ್ತಿ 59 ವರ್ಷ ವಯಸ್ಸಾಗಿದೆ. ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ "ಇನ್ನು ಮುಂದೆಯೂ ಲಾಪಟಾ ಲೇಡಿಸ್‌ನಂತಹ ಸಿನಿಮಾಗಳೊಂದಿಗೆ ಆಗಮಿಸ್ತೀನಿ" ಎಂದು ಹೇಳಿದ್ದಾರೆ.
ಬಾಲಿವುಡ್ ಸ್ಟಾರ್ ಅಮೀರ್ ಖಾನ್‌ಗೆ ಗುರುವಾರ 59ರ ಹುಟ್ಟುಹಬ್ಬದ ಸಂಭ್ರಮ. ಇತ್ತೀಚೆಗೆ ಅಮೀರ್ ಖಾನ್ ಪ್ರೊಡಕ್ಷನ್‌ನಲ್ಲಿ ಲಾಪಟಾ ಲೇಡಿಸ್ ಎಂಬ ಸಿನಿಮಾ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿತ್ತು. ಇನ್ನು ಮುಂದೆಯೂ ಲಾಪಟಾ ಲೇಡಿಸ್‌ನಂತಹ ಒಳ್ಳೆಯ ಕಥೆಯೊಂದಿಗೆ ಬರುತ್ತೇನೆ ಎಂದು ಅಭಿಮಾನಿಗಳಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮೀರ್ ಖಾನ್ ಭರವಸೆ ನೀಡಿದ್ದಾರೆ.
ಲಾಪಟಾ ಲೇಡಿಸ್ ಎನ್ನುವುದು ಕಾಮಿಡಿ ಡ್ರಾಮಾ. ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡಿದ್ದರು. ಮಾರ್ಚ್ 1ರಂದು ಬಿಡುಗಡೆಯಾದ ಲಾಪಟಾ ಲೇಡಿಸ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಇಲ್ಲಿಯವರೆಗೆ ಸುಮಾರು 8 ಕೋಟಿ ರೂಪಾಯಿ ಗಳಿಕೆ ಮಾಡಿದೆ. "ಲಾಪಟಾ ಸಿನಿಮಾಕ್ಕೆ ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದ" ಎಂದು ಅಮೀರ್ ಖಾನ್ ಹೇಳಿದ್ದಾರೆ. "ಭವಿಷ್ಯದಲ್ಲೂ ನಾನು ಇಂತಹ ಸಿನಿಮಾ ಮಾಡುವೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ" ಎಂದು ಹುಟ್ಟುಹಬ್ಬದ ಸಮಯದಲ್ಲಿ ಅಮೀರ್ ಖಾನ್ ಹೇಳಿದ್ದಾರೆ.
"ಲಾಪಟಾ ಲೇಡಿಸ್ ಸಿನಿಮಾಕ್ಕೆ ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಅದ್ಭುತವಾಗಿದೆ. ನನ್ನ ಈ ವಿಶೇಷ ದಿನದಂದು ನನ್ನ ಆಡಿಯನ್ಸ್‌ಗೆ ಮತ್ತು ಮಾಧ್ಯಮಕ್ಕೆ ಧನ್ಯವಾದ ಹೇಳಲು ಬಯಸುವೆ" ಎಂದು ಅವರು ಹೇಳಿದ್ದಾರೆ. "ಇಂತಹ ಸುಂದರ ಸಿನಿಮಾ ಪರಿಚಯಿಸಿದ್ದಕ್ಕೆ ಧನ್ಯವಾದಗಳು" ಎಂದು ತನ್ನ ಮಾಜಿ ಪತ್ನಿ ಕಿರಣ್ ರಾವ್‌ಗೆ ಅಮೀರ್ ಖಾನ್ ಥ್ಯಾಂಕ್ಸ್ ಹೇಳಿದ್ದಾರೆ.
ಇದನ್ನೂ ಓದಿ: ಅಮೀರ್ ಖಾನ್ ಮಗಳ ಕೈಹಿಡಿಯೋ ಗಂಡು ಯಾರು
ನಿರ್ಮಲ್ ಪ್ರದೇಶ ಎಂಬ ಕಾಲ್ಪನಿಕ ರಾಜ್ಯದಲ್ಲಿ ಈ ಲಾಪಟಾ ಲೇಡಿಸ್ ಕಥೆ ನಡೆಯುತ್ತದೆ. ಮದುವೆಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪೋಲ್ ಮತ್ತು ಪುಷ್ಪ ಎಂಬ ಇಬ್ಬರು ಯುವತಿಯರು ರೈಲಿನಲ್ಲಿ ಆಕಸ್ಮಿಕವಾಗಿ ಅದಲು ಬದಲಾಗುತ್ತಾರೆ. ಇಬ್ಬರೂ ಮುಖಕ್ಕೆ ಸೆರಗು ಮುಚ್ಚಿಕೊಂಡಿರುವ ಕಾರಣ ಮದುಮಗ ಬೇರೊಬ್ಬಳನ್ನು ತನ್ನ ಪತ್ನಿಯೆಂದು ತಿಳಿದು ಕರೆದುಕೊಂಡು ಹೋಗುತ್ತಾನೆ. ಈ ಸಿನಿಮಾದಲ್ಲಿ ನಿತಾಂಶಿ ಗೋಯೆಲ್, ಪ್ರತಿಭಾ ರತ್ನಾ ಮತ್ತು ಸ್ಪರ್ಶ್ ಶ್ರೀವಾತ್ಸವ ನಟಿಸಿದ್ದಾರೆ.
"ಮನುಷ್ಯರ ಸ್ವಭಾವ, ಭಾವನೆ, ಕುಟುಂಬದ ಅಂಶಗಳನ್ನು ಹೊಂದಿರುವ ಸುಂದರ ಸಿನಿಮಾ ಇದಾಗಿದೆ. ಈ ಸಿನಿಮಾದ ಕುರಿತು ಎಲ್ಲೆಡೆ ಸಕಾರಾತ್ಮಕ ಮಾತು ಕೇಳಿಬರುತ್ತಿದೆ. ಇಂದು ನನ್ನ ಹುಟ್ಟುಹಬ್ಬ. ಈಗಲೂ ಈ ಸಿನಿಮಾ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ನೀವು ನನಗೆ ಹುಟ್ಟುಹಬ್ಬದ ಗಿಫ್ಟ್ ನೀಡಬೇಕು ಎಂದಾದರೆ ಚಿತ್ರಮಂದಿರಕ್ಕೆ ಹೋಗಿ ಈ ಸಿನಿಮಾದ ಟಿಕೆಟ್ ಖರೀದಿಸಿ. ಇದೇ ನೀವು ನನಗೆ ನೀಡುವ ದೊಡ್ಡ ಗಿಫ್ಟ್" ಎಂದು ಅಮೀರ್ ಖಾನ್ ಹೇಳಿದ್ದಾರೆ.
ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ದೊರಕಿರುವ ಪ್ರೋತ್ಸಾಹಕ್ಕೆ ಕಿರಣ್ ರಾವ್ ಕೂಡ ಖುಷಿಗೊಂಡಿದ್ದಾರೆ. "ಪ್ರೇಕ್ಷಕರು ಈ ಸಿನಿಮಾದ ಕುರಿತು ಒಳ್ಳೊಳ್ಳೆಯ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಈ ಸಿನಿಮಾ ಜನರಿಗೆ ಇಷ್ಟವಾಗಿರುವುದಕ್ಕೆ ಖುಷಿಯಾಗುತ್ತಿದೆ. ಈ ಸಿನಿಮಾ ಯಾರು ನೋಡಿಲ್ಲವೋ ದಯವಿಟ್ಟು ನೋಡಿ" ಎಂದು ಕಿರಣ್ ರಾವ್ ಹೇಳಿದ್ದಾರೆ.
ಅಮೀರ್ ಖಾನ್ ಮುಂದೆ ಹಲವು ಪ್ರಾಜೆಕ್ಟ್‌ಗಳು ಇವೆ. ಸಿತಾರೇ ಜಮೀನ್ ಪರ್ ಎಂಬ ಸಿನಿಮಾದಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ. 1973ರಲ್ಲಿ ಯಾದೋನ್ ಕಿ ಭಾರತ್ ಎಂಬ ಸಿನಿಮಾದ ಮೂಲಕ ಬಾಲ ಕಲಾವಿದರಾಗಿ ಅಮೀರ್ ಖಾನ್ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಇವರು ನಟಿಸಿದ ಮೊದಲ ಫೀಚರ್ ಸಿನಿಮಾ "ಹೋಲಿ. 1988ರ ರೋಮ್ಯಾಂಟಿಕ್ ಡ್ರಾಮಾ "ಕ್ಯಾಮತ್ ಸೇ ಕ್ಯಾಮತ್ ಟಾಕ್" ಸಿನಿಮಾದಲ್ಲಿ ಇವರಿಗೆ ನಾಯಕ ಪಾತ್ರ ದೊರಕಿತ್ತು. ಸರ್‌ಫಾರೋಶ್, ರಂಗೀಲಾ, 3 ಈಡಿಯಟ್ಸ್, ರಂಗ್ ದೇ ಬಸಂತಿ, ದಂಗಲ್‌ನಂತಹ ಸಿನಿಮಾಗಳು ಇವರ ಜನಪ್ರಿಯತೆ ಹೆಚ್ಚಿಸಿದವು.