ಕನ್ನಡ ಸುದ್ದಿ  /  ಮನರಂಜನೆ  /  ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಬಳಿಕ ನಟಿ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್‌ ಮುಂಬೈಗೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಮಗಳು ಆರಾಧ್ಯ ಬಚ್ಚನ್‌ ಅಮ್ಮನ ಜತೆಗೇ ಅಂಟಿಕೊಂಡೇ ಇದ್ದಳು. ಆರಾಧ್ಯಳ ಈ ನಡೆಗೆ "ಗಾಯಗೊಂಡ ಅಮ್ಮನಿಂದ ದೂರವಿರಲು ಮಗಳಿಗೆ ಮನಸ್ಸಿಲ್ಲ, ಮಗಳೆಂದರೆ ಹೀಗಿರಬೇಕು" ಎಂದೆಲ್ಲ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಐಶ್ವರ್ಯಾ ರೈ ಮತ್ತು ಆರಾಧ್ಯ ಬಚ್ಚನ್‌
ಐಶ್ವರ್ಯಾ ರೈ ಮತ್ತು ಆರಾಧ್ಯ ಬಚ್ಚನ್‌

ಬೆಂಗಳೂರು: ಕಾನ್ಸ್‌ 77ನೇ ಚಲನಚಿತ್ರೋತ್ಸವದಲ್ಲಿ ಬ್ಯಾಂಡೇಜ್‌ ಕಟ್ಟಿರುವ ಕೈಯಲ್ಲಿಯೇ ನಟಿ ಐಶ್ವರ್ಯಾ ರೈ ಭಾಗಿಯಾಗಿ ಇದೀಗ ಮುಂಬೈಗೆ ಹಿಂತುರುಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿದ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್‌ರ ಫೋಟೋಗಳು, ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಸದಾ ಅಮ್ಮನ ಜತೆಗೆ ಇರುವ ಆರಾಧ್ಯ ಬಚ್ಚನ್‌ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮುಂಬೈಗೆ ಮರಳಿದ ಐಶ್ವರ್ಯಾ ರೈ

ಚಿತ್ರೋತ್ಸವದಲ್ಲಿ ಭಾಗಿಯಾಗಿ ವಾಪಸ್‌ ಬಂದಿರುವ ತಾಯಿ ಮಗಳ ವಿಡಿಯೋವನ್ನು ಪಾಪರಾಜಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಐಶ್ವರ್ಯಾ ಮತ್ತು ಆರಾಧ್ಯ ಬಚ್ಚನ್ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳನ್ನು ನೋಡಿ ಮುಗುಳ್ನಕ್ಕರು. ಇದೇ ಸಂದರ್ಭದಲ್ಲಿ ಆರಾಧ್ಯ ತನ್ನ ತಾಯಿಯ ಪಕ್ಕದಲ್ಲಿಯೇ ಅಂಟಿಕೊಂಡಿದ್ದಳು. ವಿಮಾನ ನಿಲ್ದಾಣದಿಂದ ಹೊರಡು ಮೊದಲು ಐಶ್ವರ್ಯಾ ರೈ ತಮ್ಮ ಕಾರಿನಿಂದ ಪಾಪರಾಜಿಗಳತ್ತ ಕೈಬೀಸಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ

ಐಶ್ವರ್ಯಾ ಮತ್ತು ಆರಾಧ್ಯರ ವಿಡಿಯೋ ನೋಡಿ ಅಭಿಮಾನಿಗಳು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. "ಐಶ್ವರ್ಯಾ ರೈ ತುಂಬಾ ಸುಂದರವಾಗಿ ಕಾಣಿಸುತ್ತಾರೆ" "ಆರಾಧ್ಯ ತುಂಬಾ ಮುದ್ದಾದ ಮಗು, ಗಾಯಗೊಂಡ ತಾಯಿಯನ್ನು ಬಿಡಲು ನಿರಾಕರಿಸುತ್ತಾಳೆ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಐಶ್ವರ್ಯಾ ರೈ ಕೈಗೆ ಗಾಯ

"ಕಳೆದ ವೀಕೆಂಡ್‌ನಲ್ಲಿ ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರ ಮಣಿಕಟ್ಟಿಗೆ ಗಾಯವಾಯಿತು. ಗಾಯವಿದ್ದರೂ ಪ್ರತಿವರ್ಷದಂತೆ ಈ ವರ್ಷವೂ ಕಾನ್ಸ್‌ ಚಿತ್ರೋತ್ಸವದಲ್ಲಿ ಭಾಗಿಯಾಗಲೇಬೇಕೆಂದು ನಿರ್ಧರಿಸಿ ವೃತಿಪರತೆ ಮೆರೆದಿದ್ದಾರೆ. ತಜ್ಞರು ಮತ್ತು ವೈದ್ಯರ ಜತೆ ಚರ್ಚಿಸಿದ ಬಳಿಕವೇ ಫ್ರಾನ್ಸ್‌ಗೆ ಹೋಗಿದ್ದಾರೆ. ಶೀಘ್ರದಲ್ಲಿ ಇವರ ಕೈಗೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಕಾನ್ಸ್‌ನಿಂದ ಹಿಂತುರುಗಿದ ಬಳಿಕ ಮುಂದಿನ ವಾರದ ನಂತರ ಆಕೆಯ ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ" ಎಂದು ಮೂಲಗಳು ಮಾಹಿತಿ ನೀಡಿವೆ.

ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ಫಾಲ್ಗುಣಿ ಮತ್ತು ಶಾನೆ ಫಿಕಾಕ್‌ ಕ್ರಿಯೇಷನ್ಸ್‌ ವಿನ್ಯಾಸದ ಉಡುಗೆಯನ್ನು ತೊಟ್ಟಿದ್ದರು. ಮೊದಲು ಕಪ್ಪು, ಬಿಳಿ ಮತ್ತು ಚಿನ್ನದ ಬಣ್ಣದ ಗೌನ್‌ ತೊಟ್ಟಿದ್ದರು. ಎರಡನೇ ಉಡುಗೆಯು ಟಾರ್ಕ್ಯೂಸ್‌ ಮತ್ತು ಸಿಲ್ವರ್‌ ಫ್ರಾಂಗಿ ಗೌನ್‌ ಆಗಿತ್ತು. ಈ ಗಾಯದಲ್ಲೂ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುವುದಕ್ಕೆ ಫ್ಯಾನ್ಸ್‌ ಖುಷಿಗೊಂಡಿದ್ದಾರೆ.

ಐಶ್ವರ್ಯ ರೈ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ಪುತ್ರಿ ಆರಾಧ್ಯ ಬಚ್ಚನ್‌ ಅವರು ಭಾರತದ ಜನಪ್ರಿಯ ಸ್ಟಾರ್‌ ಕಿಡ್‌.

ಟಿ20 ವರ್ಲ್ಡ್‌ಕಪ್ 2024