Aishwarya Rai: ಅಭಿಷೇಕ್‌ ಬಚ್ಚನ್‌- ಐಶ್ವರ್ಯಾ ರೈ ಮಗಳು ಆರಾಧ್ಯಗೆ 12ನೇ ವರ್ಷದ ಹುಟ್ಟುಹಬ್ಬ; ಅಪ್ಪ ಅಮ್ಮನ ಸಂಭ್ರಮವನ್ನೊಮ್ಮೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Aishwarya Rai: ಅಭಿಷೇಕ್‌ ಬಚ್ಚನ್‌- ಐಶ್ವರ್ಯಾ ರೈ ಮಗಳು ಆರಾಧ್ಯಗೆ 12ನೇ ವರ್ಷದ ಹುಟ್ಟುಹಬ್ಬ; ಅಪ್ಪ ಅಮ್ಮನ ಸಂಭ್ರಮವನ್ನೊಮ್ಮೆ ನೋಡಿ

Aishwarya Rai: ಅಭಿಷೇಕ್‌ ಬಚ್ಚನ್‌- ಐಶ್ವರ್ಯಾ ರೈ ಮಗಳು ಆರಾಧ್ಯಗೆ 12ನೇ ವರ್ಷದ ಹುಟ್ಟುಹಬ್ಬ; ಅಪ್ಪ ಅಮ್ಮನ ಸಂಭ್ರಮವನ್ನೊಮ್ಮೆ ನೋಡಿ

Aaradhya Bachchan turned 12: ಆರಾಧ್ಯ ಬಚ್ಚನ್‌ ಹುಟ್ಟುಹಬ್ಬದ ಪ್ರಯುಕ್ತ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ತಮ್ಮ ಮುದ್ದು ಕುವರಿಗೆ ವಿಶ್‌ ಮಾಡಿ ಅಮೂಲ್ಯ ಸಿಹಿಮಾತುಗಳನ್ನು ಬರೆದಿದ್ದಾರೆ. ಈ ಸೆಲೆಬ್ರಿಟಿ ಕಿಡ್‌ನ ಬರ್ತ್‌ಡೇಗೆ ಸಾಕಷ್ಟು ಜನರು ವಿಶ್‌ ಮಾಡಿ ಸಂಭ್ರಮ ಹೆಚ್ಚಿಸಿದ್ದಾರೆ.

Aishwarya Rai: ಅಭಿಷೇಕ್‌ ಬಚ್ಚನ್‌- ಐಶ್ವರ್ಯಾ ರೈ ಮಗಳು ಆರಾಧ್ಯಗೆ 12ನೇ ವರ್ಷದ ಹುಟ್ಟುಹಬ್ಬ
Aishwarya Rai: ಅಭಿಷೇಕ್‌ ಬಚ್ಚನ್‌- ಐಶ್ವರ್ಯಾ ರೈ ಮಗಳು ಆರಾಧ್ಯಗೆ 12ನೇ ವರ್ಷದ ಹುಟ್ಟುಹಬ್ಬ

ಮಗಳ ಹುಟ್ಟುಹಬ್ಬವೆಂದರೆ ಅಪ್ಪ ಅಮ್ಮನಿಗೆ ಏನೋ ಸಂಭ್ರಮ. ಕರ್ನಾಟಕ ಮೂಲದ ಐಶ್ವರ್ಯಾ ರೈ ಬಾಲಿವುಡ್‌ನಲ್ಲಿ ಜನಪ್ರಿಯ ನಟಿ. ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ನ ಪ್ರೀತಿಯ ಮಗಳು ಆರಾಧ್ಯ ಬಚ್ಚನ್‌ಗೆ ಒಂದು ವರ್ಷ ಹೆಚ್ಚಾಗಿದೆ. ಆಕೆಯ ಹುಟ್ಟುಹಬ್ಬವನ್ನು ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ ಸಂಭ್ರಮದಿಂದ ಆಚರಿಸಿದ್ದಾರೆ. ಈ ಖುಷಿಯ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಐಶ್ವರ್ಯಾ ರೈ ಅವರು ಆರಾಧ್ಯ ಪುಟಾಣಿಯಾಗಿದ್ದಾಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಆರಾಧ್ಯ ಬಚ್ಚನ್‌ಗೆ ಹ್ಯಾಪಿ ಬರ್ತ್‌ಡೇ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಐಶ್ವರ್ಯಾ ರೈ ಅವರು ಕಪ್ಪು ಉಡುಗೆ ತೊಟ್ಟು ಪುಟಾಣಿ ಆರಾಧ್ಯರ ಜತೆ ಪೋಸ್‌ ನೀಡಿದ್ದಾರೆ. ಈ ಸ್ಟಾರ್‌ ಕಿಡ್‌ ಮುದ್ದಾದ ನಗು ಬೀರಿದ್ದಾರೆ. ಈ ಫೋಟೋವನ್ನು ಹಂಚಿಕೊಂಡು ಐಶ್ವರ್ಯಾ ರೈ ಹೀಗೆ ಬರೆದಿದ್ದಾರೆ. "ನಿನ್ನನ್ನು ತುಂಬಾ ಪ್ರೀತಿಸುವೆ. ನಿನ್ನನ್ನು ಅನಂತವಾಗಿ, ಬೇಷರತ್ತಾಗಿ, ಎಂದೆಂದಿಗೂ ಪ್ರೀತಿಸುವೆ. ಓ ನನ್ನ ಪ್ರೀಯ ದೇವತೆ ಆರಾಧ್ಯ, ಐ ಲವ್‌ ಯು. ನೀನು ನನ್ನ ಜೀವನದ ಸಂಪೂರ್ಣ ಪ್ರೀತಿ. ನಿನಗಾಗಿ ನಾನು ಉಸಿರಾಡುವೆ. ನನ್ನ ಆತ್ಮ, ಹ್ಯಾಪಿ ಹ್ಯಾಪಿ ಬರ್ತ್‌ಡೇ ನನ್ನ ಮುದ್ದು ದೇವರು" ಎಂದು ಐಶ್ವರ್ಯಾ ರೈ ತನ್ನ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಅಮ್ಮನ ಸಂಭ್ರಮಕ್ಕೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ, ಆರಾಧ್ಯ ಬಚ್ಚನ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. "ನಿಮ್ಮಿಬ್ಬರ ಕಣ್ಣುಗಳು ಮುದ್ದಾಗಿವೆ." ಒಂದು ವರ್ಷ ವಯಸ್ಸು ಹೆಚ್ಚಾದರೆ ಪರವಾಗಿಲ್ಲ, ಫೈನ್‌ ವೈನ್‌" ಎಂದೆಲ್ಲ ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಅಭಿಷೇಕ್‌ ಬಚ್ಚನ್‌ ಸಂಭ್ರಮ

ಮಗಳ ಹುಟ್ಟುಹಬ್ಬದ ಸಂಭ್ರಮವನ್ನು ಆರಾಧ್ಯ ಬಚ್ಚನ್‌ ತಂದೆ ಅಭಿಷೇಕ್‌ ಬಚ್ಚನ್‌ ಹೀಗೆ ವ್ಯಕ್ತಪಡಿಸಿದ್ದಾರೆ. ತನ್ನ ಮಗಳ ಹಳೆಯ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಮಗುವಿನ ಜತೆಗಿರುವ ಕ್ಯೂಟ್‌ ಫೋಟೋ ಹಂಚಿಕೊಂಡಿದ್ದಾರೆ.

ಆರಾಧ್ಯಾ ಬಚ್ಚನ್‌ಗೆ ಶುಭಾಶಯಗಳ ಮಹಾಪೂರ

"ನನ್ನ ಪುಟ್ಟ ರಾಣಿಗೆ ಹುಟ್ಟುಹಬ್ಬದ ಶುಭಾಶಯ. ನಾನು ನಿನ್ನನ್ನು ಅತಿಯಾಗಿ ಪ್ರೀತಿಸುವೆ" ಎಂದು ಅಭಿಷೇಕ್‌ ಬಚ್ಚನ್‌ ಅವರು ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. "ಹ್ಯಾಪಿ ಬರ್ತ್‌ಡೇ ಆರಾಧ್ಯ, ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ" ಎಂದು ಪ್ರೀತಿ ಝಿಂಟಾ ವಿಶ್‌ ಮಾಡಿದ್ದಾರೆ. "ಕಂಗ್ರಾಜ್ಯುಲೇಷನ್‌" ಎಂದು ಫರ್ದೀನ್‌ ಖಾನ್‌ ವಿಶ್‌ ಮಾಡಿದ್ದಾರೆ. "ವಾಹ್‌, ಹ್ಯಾಪಿ ಬರ್ತ್‌ಡೇ ಪ್ರಿನ್ಸಸ್‌" ಎಂದು ರೋಹಿತ್‌ ಬೋಸ್‌ ರಾಯ್‌ ವಿಶ್‌ ಮಾಡಿದ್ದಾರೆ. ಅಭಿಷೇಕ್‌ ಬಚ್ಚನ್‌ ಸಹೋದರಿಯರಾದ ಶ್ವೇತಾ ಬಚ್ಚನ್‌, ಅಥಿಯಾ ಶೆಟ್ಟಿ, ಕುನಾಲ್‌ ಕಪೂರ್‌, ಸೋನಿ ಸೋದ್‌, ಸುನಿಲ್‌ ಶೆಟ್ಟಿ, ಸಿಖಂದರ್‌ ಖೇರ್‌ ಮೊದಲಾದವರು ವಿಷ್‌ ಮಾಡಿದ್ದಾರೆ.

ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಅವರು ಏಪ್ರಿಲ್‌ 2007ರಲ್ಲಿ ವಿವಾಹವಾದರು. 2011ರಲ್ಲಿ ಆರಾಧ್ಯ ಬಚ್ಚನ್‌ ಜನಿಸಿದಳು. ಈಕೆ ಮಾಧ್ಯಮದ ಮುಂದೆ ಬಂದು ಇತ್ತೀಚೆಗೆ ಮಾತನಾಡಿದಳು. ಐಶ್ವರ್ಯಾ ರೈ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾಧ್ಯಮದ ಮುಂದೆ ಆರಾಧ್ಯ ಮಾತನಾಡಿದ್ದಳು.

Whats_app_banner