ಡಿವೋರ್ಸ್ ಪೋಸ್ಟ್ ಲೈಕ್ ಮಾಡಿದ ಅಭಿಷೇಕ್ ಬಚ್ಚನ್; ಐಶ್ವರ್ಯಾ ರೈ ಜತೆ ವಿವಾಹ ವಿಚ್ಛೇದನ ವದಂತಿಗೆ ಮತ್ತೆ ಬಂತು ರೆಕ್ಕೆಪುಕ್ಕ
Abhishek Aishwarya Rai divorce rumours: ಅಭಿಷೇಕ್ ಬಚ್ಚನ್ ಇನ್ಸ್ಟಾಗ್ರಾಂನಲ್ಲಿ ವಿವಾಹ ವಿಚ್ಚೇದನಕ್ಕೆ ಸಂಬಂಧಪಟ್ಟ ಲೇಖನವೊಂದಕ್ಕೆ ಲೈಕ್ ಬಟನ್ ಒತ್ತಿದ್ದಾರೆ. ಇವರ ಈ ಸಣ್ಣ ನಡೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಚರ್ಚೆಯಾಗುತ್ತಿದೆ.
ಬೆಂಗಳೂರು: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿವಾಹ ವಿಚ್ಚೇದನ ವಿಷಯ ಕಳೆದ ಕೆಲವು ದಿನಗಳಿಂದ ತಣ್ಣಗಾಗಿತ್ತು. ಆದರೆ, ಅಭಿಷೇಕ್ ಬಚ್ಚನ್ ಅವರ ಒಂದು ಸಣ್ಣ ನಡೆಯು ಮತ್ತೆ ಈ ವದಂತಿಗೆ ರೆಕ್ಕೆಪುಕ್ಕ ಬರಿಸಿದೆ. ಅಭಿಷೇಕ್ ಬಚ್ಚನ್ ಅವರು ಇನ್ಸ್ಟಾಗ್ರಾಂನಲ್ಲಿದ್ದ ಡಿವೋರ್ಸ್ ಸಂಬಂಧಪಟ್ಟ ಲೇಖನವೊಂದಕ್ಕೆ ಲೈಕ್ ಬಟನ್ ಒತ್ತಿದ್ದೇ ಇದಕ್ಕೆ ಕಾರಣ. ನಾವೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದಿನ ಏನೇನೋ ಪೋಸ್ಟ್ಗೆ ಲೈಕ್ ಒತ್ತುತ್ತೇವೆ. ಆದರೆ, ಅಭಿಷೇಕ್ ಬಚ್ಚನ್ ಅವರು ಈ ಪೋಸ್ಟ್ಗೆ ಲೈಕ್ ಒತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಇನ್ಮುಂದೆ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಪೋಸ್ಟ್ಗೆ ಲೈಕ್ ಒತ್ತುವ ಮೊದಲು ಹಲವು ಬಾರಿ ಯೋಚಿಸಬೇಕಾಗಬಹುದು.
ಅಭಿಷೇಕ್ ಇಷ್ಟಪಟ್ಟ ಡಿವೋರ್ಸ್ ಲೇಖನ
ಡಿವೋರ್ಸ್ ವಿಷಯದಕ್ಕೆ ಸಂಬಂಧಪಟ್ಟ ಲೇಖನದ ಶೀರ್ಷಿಕೆ ಹೀಗಿತ್ತು. When love stops being easy. ಆ ಲೇಖನದ ಸಾರ ಈ ಮುಂದಿನಂತೆ ಇದೆ. "ವಿಚ್ಛೇದನವು ಯಾರಿಗೂ ಎಂದಿಗೂ ಸುಲಭವಲ್ಲ. ಸಂತೋಷದ ಕನಸು ಎಲ್ಲರಿಗೂ ಇರುತ್ತದೆ. ರಸ್ತೆ ದಾಟುತ್ತಿರುವಾಗ ಕೈಗಳನ್ನು ಹಿಡಿದಿರುವ ವೃದ್ಧ ದಂಪತಿಗಳ ಹೃದಯಸ್ಪರ್ಶಿ ವೀಡಿಯೊಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಕೆಲವೊಮ್ಮೆ ನಾವು ನಿರೀಕ್ಷಿಸಿದಂತೆ ಜೀವನವು ತೆರೆದುಕೊಳ್ಳುವುದಿಲ್ಲ. ದಶಕಗಳ ನಂತರ ಒಟ್ಟಿಗಿದ್ದವರು ಬೇರ್ಪಟ್ಟಗ ತಮ್ಮ ಜೀವನದ ಮಹತ್ವದ ಭಾಗದ ಪರಸ್ಪರ ಅವಲಂಬನೆ..... ಅವರು ಸಂಬಂಧಗಳನ್ನು ಕಡಿದುಕೊಳ್ಳಲು ಏನು ಕಾರಣ. ಅವರು ಯಾವ ಸವಾಲುಗಳನ್ನು ಎದುರಿಸುತ್ತಾರೆ. ಗ್ರೇ ಡಿವೋರ್ಸ್ ಎನ್ನುವುದು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ನಂತರ ವಿವಾಹ ವಿಚ್ಚೇದನ ನೀಡುವುದಕ್ಕೆ ಸಂಬಂಧಪಟ್ಟಿದೆ"
ಈ ಲೇಖನವನ್ನು ಓದಿದ ಅಭಿಷೇಕ್ ಬಚ್ಚನ್ ಅದಕ್ಕೆ ಲೈಕ್ ಒತ್ತಿದ್ದಾರೆ. ಅಭಿಷೇಕ್ ಬಚ್ಚನ್ ಕೂಡ ಡಿವೋರ್ಸ್ ನೋವಿನಲ್ಲಿ ಇರಬಹುದು. ಅವರಿಗೆ ಡಿವೋರ್ಸ್ಗೆ ಸಂಬಂಧಪಟ್ಟ ಈ ಲೇಖನ ಮನಸ್ಸಿಗೆ ತಟ್ಟಿರಬಹುದು. ಹೀಗಾಗಿ ಲೈಕ್ ಒತ್ತಿದ್ದಾರೆ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಕಳೆದ ಹಲವು ತಿಂಗಳುಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿವಾಹ ವಿಚ್ಚೇದನ ವದಂತಿ ಕೇಳಿಸುತ್ತಿದೆ. ಆದರೆ, ಈ ಕುರಿತು ದಂಪತಿ "ಹೌದು" ಅಥವಾ "ಇಲ್ಲ" ಎಂದು ಪ್ರತಿಕ್ರಿಯೆ ನೀಡಿಲ್ಲ.
ಮೊನ್ನೆ ನಡೆದ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ರೈ ಜತೆಯಾಗಿ ಕುಳಿತುಕೊಂಡಿಲ್ಲ ಎನ್ನುವುದೂ ಕೂಡ ಚರ್ಚೆಯಾಗಿತ್ತು. ಅಂಬಾನಿ ಕುಟುಂಬದ ಮದುವೆಗೆ ಇವರಿಬ್ಬರೂ ಪ್ರತ್ಯೇಕವಾಗಿ ಆಗಮಿಸಿದ್ದರು. ಮುಂಬೈನ ಜಿಯೋ ಕನ್ವೆನ್ಷನ್ ಹಾಲ್ನಲ್ಲಿ ಜುಲೈ 12ರಂದು ನಡೆದ ವಿವಾಹ ಕಾರ್ಯಕ್ರಮಕ್ಕೆ ಐಶ್ವರ್ಯಾ ರೈ ತನ್ನ ಮಗಳ ಜತೆ ಆಗಮಿಸಿದ್ದರು.
ಅಭಿಷೇಕ್ ಬಚ್ಚನ್ ತನ್ನ ತಂದೆಯ ಜತೆ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಂದರೆ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬೇರೆಬೇರೆಯಾಗಿಯೇ ಬಂದಿದ್ದರು. ಅಭಿಷೇಕ್ ಜತೆ ಅಮಿತಾಬ್ ಬಚ್ಚನ್, ಜಯ ಬಚ್ಚನ್ ಕೂಡ ಇದ್ದರು. ಇವರೆಲ್ಲರೂ ಶ್ವೇತ ಬಚ್ಚನ್ ಜತೆ ಫೋಟೋಗ್ರಾಫರ್ಗಳಿಗೆ ಪೋಸ್ ನೀಡಿದ್ದರು. ನಿಖಿಲ್ ನಂದ, ನವ್ಯ ನಂದ, ಅಗಸ್ತ್ಯ ನಂದ ಕೂಡ ಪೋಸ್ ನೀಡಿದ್ದರು. ಈ ಸಮಯದಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಬೇರೆಬೇರೆಯಾಗಿ ಆಗಮಿಸಿದ್ದು, ಪ್ರತ್ಯೇಕವಾಗಿ ಕುಳಿತುಕೊಂಡಿರುವುದು ಡಿವೋರ್ಸ್ ವದಂತಿಗೆ ಪುಷ್ಠಿ ನೀಡಿತ್ತು.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರು 2007ರ ಏಪ್ರಿಲ್ 20ರಂದು ವಿವಾಹವಾಗಿದ್ದರು. ನವೆಂಬರ್ 16, 2011ರಂದು ಇವರಿಗೆ ಆರಾಧ್ಯ ಜನಿಸಿದಳು.
ಅಭಿಷೇಕ್ ಬಚ್ಚನ್ ಮುಂದಿನ ಸಿನಿಮಾ ಕಿಂಗ್. ಈ ಸಿನಿಮಾದ ಕುರಿತು ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಡಬೇಕಿದೆ. ಈ ಸಿನಿಮಾದಲ್ಲಿ ಶಾರೂಖ್ ಖಾನ್ ಮಗಳು ಸುಹಾನ ಖಾನ್ ಕೂಡ ನಟಿಸ್ತಾಳೆ ಎಂಬ ಸುದ್ದಿಯಿದೆ. ಈ ಸಿನಿಮಾಕ್ಕೆ ಸುಜೋಯ್ ಘೋಷ್ ನಿರ್ದೇಶನವಿರುವ ಸಾಧ್ಯತೆ ಇದೆ. ಅಭಿಷೇಕ್ ಅವರು ಹೌಸ್ಫುಲ್ 5ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅನಿಲ್ ಕಪೂರ್, ನಾನಾ ಪಾಟೇಕರ್, ರಿತೇಶ್ ದೇಶ್ಮುಖ್ ಮತತು ಚುಂಕಿ ಪಾಂಡೇ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.